ಸುಪ್ರೀಂ ಕೋರ್ಟ್’ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕಾರಾಗೃಹ ಡಿಐಜಿ ಸೋಮಶೇಖರ್ ಬಂಧನ

Date:

ನಕಲಿ ಸುಪ್ರೀಂ ಕೋರ್ಟ್ ಆದೇಶವನ್ನು ಬಳಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬನನ್ನು ಅಕ್ರಮವಾಗಿ ಬಿಡುಗಡೆ ಮಾಡಿದ ಹಾಗೂ ಆತನ ಪತ್ನಿಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ ಗಂಭೀರ ಆರೋಪದ ಮೇರೆಗೆ, ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಐಜಿ ಎಂ. ಸೋಮಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

​ಪ್ರಸ್ತುತ ಕಲಬುರಗಿ ವಲಯದ ಜೈಲುಗಳ ಡಿಐಜಿ ಆಗಿರುವ ಸೋಮಶೇಖರ್, 2018ರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿದ್ದಾಗ ಈ ಬೃಹತ್ ಹಗರಣ ನಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

​ಹಣಕ್ಕಾಗಿ ಅಪಹರಣ – ಅಕ್ರಮ ಬಿಡುಗಡೆ:

2004ರ ‘ಹಣಕ್ಕಾಗಿ ಅಪಹರಣ’ ಪ್ರಕರಣವೊಂದರಲ್ಲಿ ಶಂಕರ್.ಎ ಎಂಬಾತನಿಗೆ ತ್ವರಿತಗತಿ ನ್ಯಾಯಾಲಯವು (ಫಾಸ್ಟ್ ಟ್ರ್ಯಾಕ್ ಕೋರ್ಟ್) ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿತ್ತು. ಈ ತೀರ್ಪನ್ನು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದ್ದವು. ಆದರೆ, ಈತನನ್ನು ಜೈಲಿನಿಂದ ಬಿಡಿಸುವ ಉದ್ದೇಶದಿಂದ ನವೆಂಬರ್ 2, 2018ರ ದಿನಾಂಕವನ್ನು ನಮೂದಿಸಿ ಸುಪ್ರೀಂ ಕೋರ್ಟ್‌ನ ನಕಲಿ ಆದೇಶವೊಂದನ್ನು ಜೈಲಿನೊಳಗೇ ಸೃಷ್ಟಿಸಲಾಗಿತ್ತು. ಈ ನಕಲಿ ದಾಖಲೆಯ ಆಧಾರದ ಮೇಲೆ ಅದೇ ವರ್ಷ ನವೆಂಬರ್ 13ರಂದು ಸೋಮಶೇಖರ್ ಅವರು ಕೈದಿಯ ಬಿಡುಗಡೆಗೆ ಅಧಿಕೃತ ಸಹಿ ಹಾಕಿದ್ದರು.

​ಜೈಲಿನಲ್ಲಿ ಅಂದು ದ್ವಿತೀಯ ದರ್ಜೆ ಸಹಾಯಕರಾಗಿದ್ದ (SDA) ಶ್ರೀಕಾಂತ್.ಎಸ್ ಎಂಬಾತ ಈ ನಕಲಿ ಆದೇಶವನ್ನು ಸೃಷ್ಟಿಸಿದ್ದನು (ಈತ ಪ್ರಸ್ತುತ ಅದೇ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾನೆ) ಎಂಬುದು ತನಿಖೆಯಿಂದ ಬಯಲಾಗಿದೆ.

​ಪತ್ನಿಯ ಮೇಲೆ ಲೈಂಗಿಕ ಶೋಷಣೆ ಆರೋಪ:

ಕೈದಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡುವುದು, ನಕಲಿ ದಾಖಲೆ ಸೃಷ್ಟಿಸಿ ಬಿಡುಗಡೆ ಮಾಡುವುದು ಸೇರಿದಂತೆ ಹಲವು ಕಾನೂನುಬಾಹಿರ ಸೌಲಭ್ಯಗಳನ್ನು ಒದಗಿಸಲು ಅಂದಿನ ಮುಖ್ಯ ಅಧೀಕ್ಷಕ ಸೋಮಶೇಖರ್ ಅವರು ಕೈದಿಯ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಆಕೆಯೂ ಈ ಬಗ್ಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.

​ಪೆರೋಲ್ ನಿಯಮಗಳ ಉಲ್ಲಂಘನೆ:

ಈ ಹಿಂದೆ ಪೆರೋಲ್ ಮೇಲೆ ತೆರಳಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಕೈದಿ ಶಂಕರ್‌ನ ಕಡತದಲ್ಲಿ ಜೈಲು ಸಿಬ್ಬಂದಿ ‘ಪ್ರತಿಕೂಲ ಷರಾ’ (Adverse remarks) ಬರೆದಿದ್ದರು. ನಿಯಮಗಳ ಪ್ರಕಾರ ಆತನಿಗೆ ಮತ್ತೆ ಪೆರೋಲ್ ನೀಡುವಂತಿರಲಿಲ್ಲ. ಆದರೂ ನಿಯಮಗಳನ್ನು ಗಾಳಿಗೆ ತೂರಿ 2018ರಲ್ಲಿ ಮೂರು ಬಾರಿ ತಲಾ 15 ದಿನಗಳ ಪೆರೋಲ್ ಮಂಜೂರು ಮಾಡಲಾಗಿತ್ತು. ಇದಕ್ಕಾಗಿ ಚಂದ್ರಾಲೇಔಟ್ ಪೊಲೀಸ್ ಠಾಣೆಯ ಲ್ಯಾಂಡ್‌ಲೈನ್ ಸಂಖ್ಯೆ ಎಂದು ಬೇರೊಂದು ನಕಲಿ ದೂರವಾಣಿ ಸಂಖ್ಯೆಯನ್ನು ನೀಡಿ ಪೊಲೀಸ್ ಪರಿಶೀಲನಾ ಪ್ರಕ್ರಿಯೆಯಲ್ಲೂ ವಂಚನೆ ಎಸಗಲಾಗಿತ್ತು.

​ಪೊಲೀಸ್ ವಶಕ್ಕೆ ಡಿಐಜಿ:

ಈ ಹಗರಣದ ಕುರಿತು 2026ರ ಮೇ 20ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಜೈಲು ಉಸ್ತುವಾರಿ ಅಧೀಕ್ಷಕರು ಅಧಿಕೃತ ದೂರು ದಾಖಲಿಸಿದ್ದರು. ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ ಅವರ ನೇತೃತ್ವದ ವಿಶೇಷ ಪೊಲೀಸ್ ತಂಡವು ಈ ಬಗ್ಗೆ ತನಿಖೆ ಕೈಗೊಂಡಿತ್ತು. ತನಿಖೆಗೆ ಅಸಹಕಾರ ತೋರಿದ ಹಾಗೂ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ ಹಿನ್ನೆಲೆಯಲ್ಲಿ ಅಕ್ಟೋಬರ್ 4ರಂದು ಸೋಮಶೇಖರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 9ರವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

​ಈ ಹಗರಣದಲ್ಲಿ ಭಾಗಿಯಾಗಿದ್ದ ಕೈದಿ ಶಂಕರ್ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಸಿಬ್ಬಂದಿ ಶ್ರೀಕಾಂತ್‌ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಕಾನೂನು ರಕ್ಷಿಸಬೇಕಾದ ಉನ್ನತ ಅಧಿಕಾರಿಯೇ ಸುಪ್ರೀಂ ಕೋರ್ಟ್ ಆದೇಶವನ್ನು ನಕಲಿ ಮಾಡಿರುವುದು ವ್ಯವಸ್ಥೆಯ ಬಹುದೊಡ್ಡ ಲೋಪವನ್ನು ಎತ್ತಿತೋರಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ; NSUIನಿಂದ ವಿನೂತನ ‘ಜೀವಂತ ಶವ’ ಪ್ರತಿಭಟನೆ

ಮತದಾರರ ಹಕ್ಕುಗಳು ಮತ್ತು ಚುನಾವಣಾ ಪ್ರಕ್ರಿಯೆಯ ಮೇಲಿನ ಬೆದರಿಕೆಗಳನ್ನು ಖಂಡಿಸಿ, ಮುಖ್ಯ...

ಸಾಗರ | ತಾಲೂಕು ಮಟ್ಟದ ಪ್ರಜಾಸೇವೆ ಸಭೆ; 500ಕ್ಕೂ ಹೆಚ್ಚು ಅರ್ಜಿಗಳ ಸ್ವೀಕಾರ

ಸಾಗರ ತಾಲೂಕಿನಲ್ಲಿ ಮನೆ ಬಾಗಿಲಿಗೆ ಬಂತು ಸರ್ಕಾರ–ಸೇವೆಗೆ ಇರಲಿದೆ ಸಹಕಾರ ಎಂಬ...

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ‘ಬ್ಯಾರಿ ಭಾಷಾ ದಿನ’ ಆಚರಣೆ

ಜಗತ್ತಿನ ಯಾವುದೇ ಭಾಷೆಯನ್ನು ಬ್ಯಾರಿ ಸಮುದಾಯದ ಮಕ್ಕಳು ಕಲಿಯಲಿ. ಆದರೆ, ಮನೆಯಲ್ಲಿ...

₹50 ಸಾವಿರ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ; ಕೈಗಾರಿಕಾ ವಲಯಕ್ಕೆ ಸರ್ಕಾರದ ಬಿಗ್ ಪ್ಲಾನ್

ರೈತರಿಗೆ ತಂತ್ರಜ್ಞಾನ ಆಧಾರಿತ ಸೇವೆ ಒದಗಿಸುವುದರಿಂದ ಹಿಡಿದು ಹೂಡಿಕೆ ಮತ್ತು ಉದ್ಯೋಗ...