ಬೆಂಗಳೂರು | 500 ಮೀ ಪ್ರಯಾಣಕ್ಕೆ ₹100 ಪಡೆದ ಆಟೋ ಚಾಲಕ; ಟ್ವೀಟ್

Date:

  • ಆಟೋ ರೀಕ್ಷಾಗಳು ಮೀಟರ್‌ ಲೆಕ್ಕದಲ್ಲಿ ಸಂಚರಿಸುವ ಏಕೈಕ ಸ್ಥಳ ಮುಂಬೈ
  • ಮುಂಬೈನಲ್ಲಿ ಸುಮಾರು 9 ಕಿ.ಮೀಗಳಿಗೆ ₹100 ಆಟೋ ಮೀಟರ್ ದರ

ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಆಟೋದಲ್ಲಿ ಪ್ರಯಾಣಿಸುವುದು ಬಲು ದುಬಾರಿಯಾಗಿದ್ದು, ಇಲ್ಲೊಬ್ಬ ವ್ಯಕ್ತಿ 500 ಮೀ ಪ್ರಯಾಣಿಸಿದಕ್ಕಾಗಿ ₹100 ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  

- Advertisement -

ಮುಂಬೈ ಮೂಲದ ನ್ಯೂರಲ್‌ಗ್ಯಾರೇಜ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ಆದ ಮಂದಾರ ನಾಟೇಕರ್ ಅವರು ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸಿದ ಅನುಭವವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

“ಈ ಫೋಟೋದಲ್ಲಿ ನೀವು ಬೆಂಗಳೂರಿನ ಅತ್ಯಂತ ಆಲಂಕಾರಿಕ ವಸ್ತುವನ್ನು ನೋಡುತ್ತೀರಿ. ಅದುವೇ ದೊಡ್ಡ ಆಟೋ ಮೀಟರ್. ಎಷ್ಟು ದುಬಾರಿ ಎಂದರೆ ಅದು ಎಂದಿಗೂ ಬಳಕೆಯಾಗುವುದಿಲ್ಲ. ನಾನು ಕೇವಲ 500 ಮೀಟರ್ ರೈಡ್‌ಗೆ ₹100 ಪಾವತಿಸಿದ್ದೇನೆ. ಅಂದಾಜಿನ ಪ್ರಕಾರ ಮುಂಬೈನಲ್ಲಿ ಸುಮಾರು 9 ಕಿ.ಮೀಗಳಿಗೆ ₹100 ಮೀಟರ್ ದರವಾಗಿದೆ” ಎಂದು ಟ್ವೀಟ್‌ ಮಾಡಿದ್ದಾರೆ. ಜತೆಗೆ ಫೋಟೋ ಹಾಕಿ ‘ಪೀಕ್ ಬೆಂಗಳೂರು’ ಎಂದು ಹ್ಯಾಶ್‌ಟ್ಯಾಗ್ ನೀಡಿದ್ದಾರೆ.

ಇದಕ್ಕೆ ಹಲವಾರು ಜನ ಪ್ರತ್ರಿಕ್ರಿಯೆ ನೀಡಿದ್ದು, “ಮುಂಬೈನಲ್ಲಿ ಮೀಟರ್ ಮೂಲಕ ಆಟೋ ಸಿಗುತ್ತದೆ. ಆದರೆ ರಸ್ತೆಗಳು ತುಂಬಾ ಕೆಟ್ಟ ಸ್ಥಿತಿಯಲ್ಲಿವೆ ಮತ್ತು ತುಂಬಾ ಟ್ರಾಫಿಕ್ ಇದೆ. ಪ್ರತಿ ರಸ್ತೆಯಲ್ಲೂ ಗುಂಡಿಗಳು. ನೀವು ದೂರದ ಪ್ರಯಾಣ ಮಾಡಿದರೆ, ನಿಮಗೆ ಬೆನ್ನುಮೂಳೆಯ ಸಮಸ್ಯೆಗಳು ಖಂಡಿತವಾಗಿ ಪ್ರಾರಂಭವಾಗುತ್ತವೆ” ಎಂದು ತ್ರುಶಿತ್ ಶಾ ಎಂಬುವವರು ತಿಳಿಸಿದ್ದಾರೆ.

ಟಿವಿಎಫ್‌ನ ಅಧ್ಯಕ್ಷ ವಿಜಯ್ ಕೋಶಿ, ‘‘ಇದು ಪ್ರಾಯೋಗಿಕವಾಗಿ ಮುಂಬೈನ ಹೊರಗಿನ ಪ್ರತಿಯೊಂದು ನಗರಕ್ಕೂ ಒಂದೇ ಆಗಿರುತ್ತದೆ. ಚೆನ್ನೈ ಆಟೋ ಸವಾರಿಗೆ ಕುಖ್ಯಾತಿ ಪಡೆದಿದೆ’’ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಾಟೇಕರ್, “ಕಡಿಮೆ ಹೇಳುವುದು ಹಾಸ್ಯಾಸ್ಪದ, ಈ ಹೆದ್ದಾರಿ ದರೋಡೆ ಅಸಲಿ ಎಂದು ತೋರುತ್ತದೆ. ಆದರೆ, ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ’’ ಎಂದರು.

ಈ ಸುದ್ದಿ ಓದಿದ್ದೀರಾ? ಮೆಟ್ರೋದಲ್ಲಿ ಕುಸಿದು ಬಿದ್ದು ವೃದ್ಧ ಸಾವು; ಬಿಎಂಆರ್‌ಸಿಎಲ್‌ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

“ಭಾರತದ ಮುಂಬೈನಲ್ಲಿ ಮಾತ್ರ ಆಟೋ ರೀಕ್ಷಾಗಳು ಮೀಟರ್‌ ಲೆಕ್ಕದಲ್ಲಿ ಸಂಚರಿಸುವ ಏಕೈಕ ಸ್ಥಳ. ರಿಕ್ಷಾಗಳು ಮೀಟರ್‌ನಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಭಾರತದ ಉಳಿದ ಭಾಗಗಳು ಲೂಟಿ ಮಾಡುತ್ತವೆ” ಟ್ವಿಟರ್‌ ಬಳಕೆದಾರರೊಬ್ಬರು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...

ಡ್ರೋನ್ ಪ್ರತಾಪ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು:‌ ಹೈಕೋರ್ಟ್ ಹೇಳಿದ್ದೇನು?

ಕೃಷಿ ಹೊಂಡಲ್ಲಿ 100 ಗ್ರಾಂ ಸೋಡಿಯಂ ಬಳಸಿ ವಿಜ್ಞಾನ ಪ್ರಯೋಗ ನಡೆಸಿದ...

ಬೆಂಗಳೂರು | 700 ಕೆ.ಜಿ ಪಿಒಪಿ ಗಣೇಶ ಮೂರ್ತಿ ತ್ಯಾಜ್ಯ ತೆರವುಗೊಳಿಸಿದ ‘ವಿ ಆರ್ ಆರಂಭ್’

ಬೆಂಗಳೂರಿನ ಸರ್ಜಾಪುರ ಸಮೀಪದ ಹಲನಾಯಕನಹಳ್ಳಿ ಕೆರೆಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್...

ಹವಾಮಾನ | ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಬಿರುಗಾಳಿ ಸಹಿತ...