ಬೆಂಗಳೂರು | 20 ಲಕ್ಷ ಮೌಲ್ಯದ ಚಿನ್ನಾಭರಣ ಕಳುವು; ಕೆಲಸದಾಕೆ ಬಂಧನ

Date:

₹20 ಲಕ್ಷ ಮೌಲ್ಯದ 374 ಗ್ರಾಂ ಚಿನ್ನಾಭರಣ ಕದ್ದಿದ್ದ ಮನೆಗೆಲಸ ಮಾಡುವ ಮಹಿಳೆಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮಮ್ಮ‌ (53) ಬಂಧಿತ ಆರೋಪಿ. ಕಾಮಾಕ್ಷಿಪಾಳ್ಯದ ಮೀನಾಕ್ಷಿನಗರದಲ್ಲಿರುವ ರಂಜಿತಾ ಎಂಬುವವರ ಮನೆಯಲ್ಲಿ ಲಕ್ಷ್ಮಮ್ಮ ಕಳೆದ 9 ತಿಂಗಳಿನಿಂದ ಮನೆಗೆಲಸ ಮಾಡಿಕೊಂಡಿದ್ದರು.

ರಂಜಿತಾ ತಮ್ಮ ಮಾವನಿಗೆ ಚಿನ್ನದ ಸರ್ ಕೊಡುವ ಸಲುವಾಗಿ ಕರ್ಬೋರ್ಡ್‌ ತೆಗೆದು ನೋಡಿದಾಗ ಚಿನ್ನ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಮನೆ ಕೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿ ಮನೆ ಮಾಲಕಿ ರಂಜಿತಾ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಂಜಿತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಕ್ಷಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಲಕ್ಷ್ಮಮ್ಮ ಕಳ್ಳತನ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ.

ಈ ಸುದ್ದಿ ಓದಿದ್ದೀರಾ? ‘ಹೆಚ್‌ಎಸ್‌ಆರ್‌ಪಿ’ ನಂಬರ್ ಪ್ಲೇಟ್ ಅಳವಡಿಕೆಗೆ ಫೆ.17ರವರೆಗೂ ಅವಕಾಶ; ಸಾರಿಗೆ ಇಲಾಖೆ

ಚಿನ್ನ ಕದ್ದ ಕಳ್ಳರ ಬಂಧನ

ರಾತ್ರೋರಾತ್ರಿ ಶ್ರೀಮಂತರಾಗಬೇಕು ಎಂಬ ದುರಾಸೆಯಿಂದ ಚಿನ್ನ ಕಳ್ಳತನಕ್ಕೆ ಹೊಂಚು ಹಾಕಿದ್ದ ಆರೋಪಿಗಳನ್ನು ಬೆಂಗಳೂರಿನ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ಸುಹೇಲ್, ಯೂಸೂಫ್, ಮಹಮ್ಮದ್ ರಿಜ್ವಾನ್ ಹಾಗೂ ಸೈಯ್ಯದ್ ಅಜ್ಮತ್ ಬಂಧಿತ ಆರೋಪಿಗಳು. ವೃತ್ತಿಯಲ್ಲಿ‌ ಸುಹೇಲ್ ಕಾರ್ಪೆಂಟರ್​, ಯೂಸೂಫ್ ವೆಲ್ಡಿಂಗ್, ಮಹಮ್ಮದ್ ರಿಜ್ವಾನ್ ಪೇಂಟರ್, ಸೈಯ್ಯದ್ ಅಜ್ಮತ್ ಕಾರ್ ಸೀಟ್ ಕವರ್ ಹೊಲಿಯುವ ಕೆಲಸ ಮಾಡುತ್ತಿದ್ದರು.

ಇವರಿಗೆ ಹೆಚ್ಚಾಗಿ ಆದಾಯ ಬರುತ್ತಿರಲಿಲ್ಲ. ಹೀಗಾಗಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ನಾಲ್ಕು ಜನ ಸೇರಿ ಚಿನ್ನಾಭರಣ ಅಂಗಡಿಯನ್ನು ಕಳ್ಳತನ ಮಾಡಲು ಹೊಂಚು ಹಾಕಿದ್ದರು. ಅದರಂತೆ ಕದಿರೇನಹಳ್ಳಿ ಪಾರ್ಕ್ ರಸ್ತೆಯಲ್ಲಿರುವ ಸೂಜರ್ ಜ್ಯುವೆಲ್ಲರ್ಸ್​​​ಗೆ ಕಳ್ಳತನ ಮಾಡಲು ತೆರಳಿದ್ದರು. ಈ ವೇಳೆ, ಅಂಗಡಿಯಲ್ಲಿ ಚಿನ್ನ ಬದಲು ಬೆಳ್ಳಿ ಇತ್ತು. ಬಳಿಕ 30 ಕೆಜಿ ಬೆಳ್ಳಿಯನ್ನು ಕಳ್ಳತನ ಮಾಡಿದ್ದರು.

ಕಳ್ಳತನವಾದ ಬಗ್ಗೆ ತಿಳಿದ ಮಾಲೀಕ ಪೊಲೀಸರಿಗೆ ದೂರು ನೀಡಿದ್ದನು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕರ್ನಾಟಕದ ಆಟಗಾರ ಡೇವಿಡ್ ಜಾನ್ಸನ್ ನಿಧನ: ಆತ್ಮಹತ್ಯೆ ಶಂಕೆ?

ಭಾರತ ತಂಡದ ಮಾಜಿ ಕ್ರಿಕೆಟಿಗ, ಕರ್ನಾಟಕದ ರಣಜಿ ಆಟಗಾರ ಡೇವಿಡ್ ಜಾನ್ಸನ್​(52)...

ಕೊಡಗು | ಗೋಣಿಕೊಪ್ಪಲಿನಲ್ಲಿ ದಿಢೀರ್ ಕುಸಿತಗೊಂಡ ಹೋಟೆಲ್ ಕಟ್ಟಡ; ಹಲವರಿಗೆ ಗಾಯ

ಕೊಡಗು ಜಿಲ್ಲೆಯ ಗೋಣಿಕೊಪ್ಪಲ್‌ನಲ್ಲಿ ಹೋಟೆಲ್‌ ಇದ್ದ ಕಟ್ಟಡವೊಂದು ದಿಢೀರನೆ ಕುಸಿತಗೊಂಡ ಘಟನೆ...

ಕನ್ನಡದ ವಿಚಾರದಲ್ಲಿ ರಾಜಿಯಾಗದೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ: ಡಿಸಿಎಂ ಡಿ ಕೆ ಶಿವಕುಮಾರ್

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕನ್ನಡದ...

ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಸಿದ್ದರಾಮಯ್ಯ ಭೂಮಿ ಪೂಜೆ

ಕನ್ನಡ ಭಾಷೆ, ನೆಲ, ಜಲವನ್ನು ಸಂರಕ್ಷಣೆ ಮಾಡಿಕೊಂಡು ಹೋಗುವ ಕೆಲಸ ಪ್ರತಿಯೊಬ್ಬ...