ಬೆಂಗಳೂರು | ಸಂಚಾರ ಪೊಲೀಸರ ಹೆಸರಲ್ಲಿ ಸೈಬರ್‌ ವಂಚನೆ; ₹2.32 ಲಕ್ಷ ಕಳೆದುಕೊಂಡ ಟೆಕ್ಕಿ

Date:

ಸಂಚಾರ ಪೊಲೀಸರ ಸೋಗಿನಲ್ಲಿ ದಂಡ ಕಟ್ಟಿಸಿಕೊಳ್ಳುವ ನೆಪದಲ್ಲಿ ಟೆಕ್ಕಿಯೊಬ್ಬರಿಂದ ಸುಮಾರು ₹2.32 ಲಕ್ಷ ದೋಚಿರುವ ಘಟನೆ ಬೆಂಗಳೂರು ನಗರದಲ್ಲಿ ವರದಿಯಾಗಿದೆ.

- Advertisement -

ಸಂಚಾರ ಪೊಲೀಸರ ಹೆಸರಲ್ಲಿ ಸೈಬರ್ ವಂಚಕರು ಕಳಿಸಿದ ಸಂದೇಶ ನಂಬಿದ ಟೆಕ್ಕಿಯೊಬ್ಬರು, ಸಂಚಾರ ನಿಯಮ ಉಲ್ಲಂಘನೆಗೆ ಕೇವಲ ₹500 ದಂಡ ಪಾವತಿಸಲು ಹೋಗಿ ಲಕ್ಷಾಂತರ ಹಣ ಕಳೆದುಕೊಂಡಿದ್ದು, ಸದ್ಯ ವೈಟ್‌ಫೀಲ್ಡ್ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ದೂರುದಾರರ ಮೊಬೈಲ್ ಸಂಖ್ಯೆಗೆ ಜ.26ರಂದು ಸಂದೇಶ ಕಳಿಸಿದ್ದ ವಂಚಕರು, ಸಂಚಾರ ದಂಡ ಪಾವತಿಸುವಂತೆ ಸೂಚಿಸಿ ಲಿಂಕ್‌ವೊಂದನ್ನು ಕಳಿಸಿದ್ದಾರೆ. ಅದನ್ನು ನಿಜವೆಂದು ನಂಬಿದ್ದ ದೂರುದಾರರು ತಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆ ಹಾಗೂ ಸಿವಿವಿ ನಂಬರ್ ನಮೂದಿಸಿ ಪಾವತಿಸಿದಾಗ 2.23 ಲಕ್ಷ ರೂಪಾಯಿ ವಂಚಕರ ಖಾತೆಗೆ ವರ್ಗಾವಣೆಯಾಗಿದೆ. ತಕ್ಷಣ ಎಚ್ಚೆತ್ತ ದೂರುದಾರರು ವೈಟ್‌ಫೀಲ್ಡ್ ಸಿಇಎನ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಹಣ ವರ್ಗಾವಣೆಯಾದ ಖಾತೆಯ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರರು ತಿಳಿಸಿದ್ದಾರೆ.

ಹಾಗಾದರೆ ಸೈಬರ್‌ ವಂಚನೆಯಿಂದ ಸೇಫ್‌ ಆಗಿರಲು ಸಾರ್ವಜನಿಕರು ಏನು ಮಾಡಬೇಕು?

  • ಟ್ರಾಫಿಕ್‌ ದಂಡ, ಬ್ಯಾಂಕ್‌, ಕೊರಿಯರ್‌, KYC ಹೆಸರಿನಲ್ಲಿ ಬಂದ ಅನಗತ್ಯ SMS/WhatsApp ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ
  • ಸರ್ಕಾರದ ಇಲಾಖೆ ಎಂದು ಬಂದರೂ ಕೂಡಾ ಅಧಿಕೃತ ವೆಬ್‌ಸೈಟ್ ಅಥವಾ ಆಪ್ ಮೂಲಕವೇ ಪರಿಶೀಲಿಸಿ
  • ʼನಿಮ್ಮ ಖಾತೆ ಬ್ಲಾಕ್ʼ, ʼಇಂದು ಪಾವತಿ ಮಾಡಲೇಬೇಕುʼ ಎನ್ನುವ ಭೀತಿಯ ಭಾಷೆ ಸಾಮಾನ್ಯವಾಗಿ ಮೋಸ
  • OTP, CVV, ಕಾರ್ಡ್‌ ನಂಬರ್, UPI ಪಿನ್ ಯಾರಿಗೂ ಹೇಳಬೇಡಿ
  • Parivahan / Karnataka One / ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕೃತ ವೆಬ್‌ಸೈಟ್ ಅಥವಾ ಆಪ್
  • ಯಾವುದೇ ಬಂದ ಲಿಂಕ್‌ ನಂಬದೇ, ನೀವು ಸ್ವತಃ ಸೈಟ್‌ ತೆರೆಯಿರಿ
  • ಬಲವಾದ ಪಾಸ್‌ವರ್ಡ್‌, 2–Factor Authentication (2FA) ಬಳಸಿ
  • ಒಂದೇ ಪಾಸ್‌ವರ್ಡ್‌ ಅನ್ನು ಎಲ್ಲ ಖಾತೆಗಳಿಗೆ ಬಳಸಬೇಡಿ
  • ಆಪ್‌ಗಳನ್ನು Play Store / App Store ನಿಂದ ಮಾತ್ರ ಡೌನ್‌ಲೋಡ್ ಮಾಡಿ
  • ಅಜ್ಞಾತ APK ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ
  • ಫೋನ್‌, ಲ್ಯಾಪ್‌ಟಾಪ್‌ಗಳನ್ನು ನಿಯಮಿತವಾಗಿ ಅಪ್‌ಡೇಟ್ ಮಾಡಿ
  • ಹಣ ಹೋದರೆ, ತಕ್ಷಣ 1930 ಸೈಬರ್‌ ಕ್ರೈಂ ಹೆಲ್ಪ್‌ಲೈನ್‌ಗೆ ಕರೆ ಮಾಡಿ
  • ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ
  • ವಿಳಂಬವಾದರೆ ಹಣ ವಾಪಸು ಸಿಗುವ ಸಾಧ್ಯತೆ ಕಡಿಮೆ
  • ಕುಟುಂಬದವರು, ಹಿರಿಯ ನಾಗರಿಕರು, ಮಕ್ಕಳು ಎಲ್ಲರಿಗೂ ಈ ಮಾಹಿತಿ ಹಂಚಿ ಎನ್ನುವ ಸಂದೇಶಕ್ಕೆ ತಲೆಕೊಡಬೇಡಿ. ಮೋಸಗಾರರ ಅಸ್ತ್ರ ಅದೇ

ಇದನ್ನೂ ಓದಿ: ಈ ದಿನ ಸಂಪಾದಕೀಯ | ರಾಜ್ಯ ಪೊಲೀಸ್ ವ್ಯವಸ್ಥೆ ಕೆಡಲು ಕಾರಣರಾರು?

ನೆನಪಿಡಿ: ಸರ್ಕಾರ ಅಥವಾ ಬ್ಯಾಂಕ್‌ OTP ಕೇಳುವುದಿಲ್ಲ. ಲಿಂಕ್‌ ಒತ್ತಲು ಒತ್ತಾಯಿಸುವುದಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪರಪ್ಪನ ಅಗ್ರಹಾರದಿಂದ ಬೆಳಗಾವಿ ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ ಎತ್ತಂಗಡಿ

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ...

Form 7 ಅರ್ಜಿ ವಿವಾದ; ತನಿಖೆಗೆ SIT ರಚನೆಗೆ ಸರ್ಕಾರ ಚಿಂತನೆ

ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಬೃಹತ್‌ ಪ್ರಮಾಣದಲ್ಲಿ Form...

ಎಸ್‌ಐಆರ್ ವಿರೋಧಿ ಹೋರಾಟ: ಯುವ ಪೀಳಿಗೆಗೆ ಕರ್ನಾಟಕ ನಾಗರಿಕ ಸಮಾಜ ಬೆಂಬಲ, ಕೇಂದ್ರ ಸರ್ಕಾರಕ್ಕೆ ನೂರ್ ಶ್ರೀಧರ್ ಎಚ್ಚರಿಕೆ

ದೆಹಲಿಯಲ್ಲಿ ನಡೆಯಲಿರುವ ಎಸ್‌ಐಆರ್ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ಯುವ ಹೋರಾಟಗಾರರ ಮೇಲೆ...

ಮೋಶಾ ಜೋಡಿ ಪ್ರಜಾಪ್ರಭುತ್ವದ ಹತ್ಯೆಗೆ ಸಂಚು ರೂಪಿಸಿದೆ; ಅಭಿಜೀತ್ ದೀಪ್ಕೆ

ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಚುನಾವಣಾ ಆಯೋಗವು ಸೇರಿ ದೇಶದಲ್ಲಿ...