ಬೆಂಗಳೂರಿಗರನ್ನು ಕೈಬೀಸಿ ಕರೆಯುತ್ತಿದೆ ಜಿಕೆವಿಕೆಯ ‘ಕೃಷಿ ಮೇಳ’; ಯಂತ್ರಗಳದೇ ಕಾರುಬಾರು!

Date:

ಕಾಂಟ್ರೀಟ್‌ ಕಾಡಾಗಿರುವ ಬೆಂಗಳೂರಿಗೆ ಹಸಿರಿನ ರಂಗೇರಿದೆ. ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ – ಜಿಕೆವಿಕೆ) ನಡೆಯುತ್ತಿರುವ ನಾಲ್ಕು ದಿನಗಳ ‘ಕೃಷಿ ಮೇಳ’ವು ಬೆಂಗಳೂರಿಗರನ್ನು ಸೆಳೆಯುತ್ತದೆ. ಜಿಕೆವಿಕೆ ಕ್ಯಾಂಪಸ್‌ ಈಗ ಕೃಷಿ ಮಾರುಕಟ್ಟೆಯಂತೆ ಕಂಗೊಳಿಸುತ್ತಿದೆ. ಕೃಷಿ ಉತ್ಪನ್ನಗಳ ಜೊತೆಗೆ, ಕೃಷಿಯ ಅರಿವನ್ನೂ ಹಂಚುತ್ತಿದೆ. ರೈತರ ಬದುಕು, ಬವಣೆಗಳನ್ನು ಅರ್ಥ ಮಾಡಿಸುತ್ತಿದೆ. ನಾನಾ ಬಗೆಯ ಕೃಷಿ ಬೆಳೆ, ಉನ್ನತ್ನಗಳನ್ನು ಪರಿಚಯಿಸುತ್ತಿದೆ. ನವೆಂಬರ್ 13ರಂದೇ ಆರಂಭವಾದ ಕೃಷಿ ಮೇಳದಲ್ಲಿ ಸಹಸ್ರಾರು ಸಂಖ್ಯೆಯ ಜನರು ಭಾಗಿಯಾಗಿದ್ದಾರೆ. ದೂರದ ಜಿಲ್ಲೆಗಳು, ಮೂಲೆಯ ಹಳ್ಳಿಗಳಿಂದ ಜನ ಕುತೂಹಲದಿಂದ ಬರುತ್ತಿದ್ದಾರೆ.

- Advertisement -

ಇದು, ಜಿಕೆವಿಕೆಯಲ್ಲಿ ನಡೆಯುತ್ತಿರುವ 20ನೇ ಕೃಷಿ ಮೇಳ. ಈ ಕೃಷಿ ಹಬ್ಬದಲ್ಲಿ ಕೃಷಿ ಸಂಬಂಧಿತ ಸಲಕರಣೆಗಳು, ಯಂತ್ರೋಪಕರಣಗಳು, ಬಿತ್ತನೆ ಬೀಜಗಳು, ನಾನಾ ಬಗೆಯ ಹೊಸ ತಳಿಗಳು, ಕೀಟನಾಶಕಗಳು, ಸಾವಯವ ಗೊಬ್ಬರಗಳು, ಮೀನುಗಾರಿಕೆ ಹಾಗೂ ಪಶುಸಂಗೋಪನೆಗೆ ಸಂಬಂಧಿಸಿದ ನಾನಾ ಮಳಿಗೆಗಳಲ್ಲಿ ಜನಜಂಗುಳಿ ತುಂಬಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಈ ಬಾರಿಯ ಕೃಷಿ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳೇ ಮೇಲುಗೈ ಸಾಧಿಸಿದಂತೆ ಭಾಸವಾಗುತ್ತಿದೆ. ಹಿಂದಿನ ಕೃಷಿ ಮೇಳಗಳಿಗೆ ಹೋಲಿಸಿದರೆ, ಕೃಷಿ ಯಂತ್ರಗಳ ಮಳಿಗೆಗಳು ಹೆಚ್ಚಾಗಿವೆ. ಉಳುಮೆ, ಕಟಾವು, ಕಳೆ ಕೀಳುವ, ಔಷಧ ಸಿಂಪಡಿಸುವ ಯಂತ್ರಗಳು ರಾರಾಜಿಸುತ್ತಿವೆ. ಅದರಲ್ಲೂ, ಟ್ರ್ಯಾಕ್ಟರ್‌ಗಳನ್ನೇ ಜೆಸಿಬಿಗಳಂತೆ ಮಾರ್ಪಾಟು ಮಾಡಿರುವ ‘ಅಗ್ರಿಬುಲ್’ ಸಂಸ್ಥೆಯ ಟ್ರ್ಯಾಕ್ಟರ್‌ ಜೆಸಿಬಿಗಳು ರೈತರ ಚಿತ್ತ ಸೆಳೆದಿವೆ.

WhatsApp Image 2025 11 15 at 9.08.52 PM

“ಜೆಸಿಬಿಗಳನ್ನು ಖರೀದಿಸಲಾಗದ ರೈತರು ತಮ್ಮಲ್ಲಿರುವ ಟ್ರ್ಯಾಕ್ಟರ್‌ಗಳನ್ನೇ ಅತೀ ಕಡಿಮೆ ಮೌಲ್ಯದಲ್ಲಿ ಜೆಸಿಬಿಗಳಂತೆ ಮಾರ್ಪಡಿಸಿಕೊಳ್ಳಬಹುದು. ಮಾರ್ಪಡಿಸಲಾದ ಟ್ರ್ಯಾಕ್ಟರ್‌ಗಳನ್ನು ಅಗತ್ಯವಿದ್ದಾಗ ಜೆಸಿಬಿಗಳಂತೆಯೂ, ಅಗತ್ಯವಿಲ್ಲದಿದ್ದಾಗ ಜಿಸಿಬಿಗೆ ಸಂಬಂಧಿತ ಮಷಿನ್‌ಗಳನ್ನು ಬಿಚ್ಚಿಟ್ಟು ಸಾಮಾನ್ಯ ಟ್ರ್ಯಾಕ್ಟರ್‌ಗಳಾಗಿಯೂ ಬಳಸಬಹುದು. ಯಂತ್ರಗಳನ್ನು ಜೋಡಿಸಿಕೊಳ್ಳುವುದು ಮತ್ತು ಬಿಚ್ಚಿಡುವುದನ್ನು ರೈತರೇ ಮಾಡಿಕೊಳ್ಳಬಹುದು” ಎನ್ನುತ್ತಾರೆ ಈದಿನ.ಕಾಮ್ ಜೊತೆಗೆ ಮಾತನಾಡಿದ ಅಗ್ರಿಬುಲ್‌ನ ರಾಜಶೇಖರ್.

ಟ್ರ್ಯಾಕ್ಟರ್‌ ಗಳು ಜೆಸಿಬಿಗಳಾಗಿ ಮಾರ್ಪಟ್ಟಿದ್ದರೆ, ಮತ್ತೊಂದೆಡೆ, ಪೆಟ್ರೋಲ್ ಚಾಲಿತ ‘ಮಕ್ಕಳ ಬೈಕ್’ ನೆರೆದಿದ್ದವರನ್ನು ಆಶ್ಚರ್ಯಚಕಿತಗೊಳಿಸುತ್ತಿತ್ತು. ‘ಅಗ್ರಿ ಗೋಲ್ಡ್‌ ಫೀಲ್ಡ್‌’ ಎಂಬ ಕೃಷಿ ಮಾರಾಟ ಸಂಸ್ಥೆಯು ಸ್ವಯಂ ನಿರ್ಮಾಣ ಮಾಡಿರುವ ಈ ಪೆಟ್ರೋಲ್ ಚಾಲಿತ ‘ಮಕ್ಕಳ ಬೈಕ್’ 50 ಕೆ.ಜಿ.ಯಷ್ಟು ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ. ರಸ್ತೆಗಳಲ್ಲಿ ಬಳಸುವಂತಿಲ್ಲದಿದ್ದರೂ, ಹೊಲ-ಮನೆಗೆ ಮಕ್ಕಳು ಬಳಸಲು ಸೂಕ್ತವಾಗಿದೆ. 50 ಸಿ.ಸಿಯ ಈ ಬೈಕ್‌, 1 ಲೀಟರ್‌ ಪೆಟ್ರೋಲ್‌ಗೆ ಕನಿಷ್ಠ 25 ಕಿ.ಮೀ. ಪ್ರಯಾಣಿಸುವಷ್ಟು ಸಾಮರ್ಥ್ಯ ಹೊಂದಿದೆ.

WhatsApp Image 2025 11 15 at 9.08.51 PM 2

ಕೃಷಿ ಉತ್ಪನ್ನಗಳ ಮಳಿಗೆಯಲ್ಲಿ ಹೆಚ್ಚು ಗಮನ ಸೆಳೆದದ್ದು, ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಮಳಿಗೆ. ರಾಗಿ, ಭತ್ತ, ಕಬ್ಬು, ಜೋಳ, ಮೇವು ಹಾಗೂ ಸಿಹಿ ನೀರಿನಲ್ಲಿ ಹವಳ ಬೆಳೆಯುವ ಹೊಸ ತಳಿಗಳನ್ನು ಮಂಡ್ಯ ಕೃಷಿ ವಿಶ್ವವಿದ್ಯಾಲಯ ಪರಿಚಯಿಸಿದೆ.

ಈದಿನ.ಕಾಮ್‌ ಜೊತೆಗೆ ಮಾತನಾಡಿದ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ವೆಂಕಟಪ್ಪ, “ರಾಗಿ ಬೆಳೆಗಳಲ್ಲಿ ಅಲ್ಪಾವಧಿಯಲ್ಲಿ ಬೆಳೆಯುವ ಕೆಎಂಆರ್ 316, ಜೆಪಿಯು-28, ಜೆಪಿಯು 66, ಜೆಪಿಯು 45, ಕೆಎಂಆರ್‌ 204, ಕೆಎಂಆರ್‌ 301, ಕೆಎಂಆರ್ 340 (ಬಿಳಿ ರಾಗಿ), ಕೆಎಂಆರ್‌ 630 ತಳಿಗಳನ್ನು ಬಿತ್ತನೆ ಮಾಡಲು ನಾವು ರೈತರಿಗೆ ಸಲಹೆ ನೀಡುತ್ತೇವೆ. ಈ ತಳಿಗಳು ಮಳೆಯಾಶ್ರಿತ ಮತ್ತು ನೀರಾವರಿ ಎರಡೂ ಭೂಮಿಗಳಲ್ಲಿಯೂ ಬೆಳೆಯಬಹುದು. ಮೂರು ತಿಂಗಳಲ್ಲಿ ಕಟಾವು ಮಾಡಬಹುದು. ಅಂತೆಯೇ, ದೀರ್ಘಾವಧಿಯಲ್ಲಿ ಬೆಳೆಯು ಎಂಆರ್ 1, ಎಂಆರ್‌ 6, ಇಂಡಾಫ್ 7 ಹಾಗೂ ಇಂಡಾಫ್‌ 9 ತಳಿಗಳು ರೈತರಿಗೆ ಹೆಚ್ಚು ಇಳಿವರಿ ಕೊಡುತ್ತವೆ. ಈ ಬೆಳೆಗಳನ್ನೂ ಮಳೆ ಮತ್ತು ನೀರಾವರಿ ಆಧಾರಿತ ಭೂಮಿಗಳನ್ನು ಬೆಳೆಯಬಹುದು.ಈ ತಳಿಗಳ ಇಳುವರಿಯು 4ರಿಂದ 5 ತಿಂಗಳಲ್ಲಿ ಕಟಾವು ಮಾಡಬೇಕು” ಎಂದು ಹೇಳಿದ್ದಾರೆ.

WhatsApp Image 2025 11 15 at 9.08.51 PM 1

“ಕಬ್ಬು ಬೆಳೆಯಲ್ಲಿ ವಿಸಿಎಫ್‌ 0517 ಮತ್ತು ಸಿಓವಿಸಿ 16061 ತಳಿಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸುತ್ತಿದ್ದೇವೆ. ವಿಸಿಎಫ್‌ 0517 ತಳಿಯ ಕಬ್ಬು ಒಂದು ಎಕರೆಗೆ 90 ಟನ್‌ವರೆಗೆ ಇಳುವರಿ ಬರುತ್ತದೆ. ಬೆಳೆಯ ಪೋಷಣೆಯ ಅವಧಿ 10-12 ತಿಂಗಳುಗಳು. ಪ್ರತಿ ಟನ್‌ ಕಬ್ಬಿನಿಂದ ಗರಿಷ್ಠ 111 ಕೆ.ಜಿ.ವೆರೆಗೆ ಬೆಲ್ಲ ಉತ್ಪಾದನೆ ಮಾಡಬಹುದು. ಅಂತೆಯೇ, ಸಿಓವಿಸಿ 16061 ಕಬ್ಬು 10 ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಎಕರೆಗೆ  60 ಟನ್ ಇಳುವರಿ ದೊರೆಯುತ್ತದೆ. ಪ್ರತಿ ಟನ್‌ಗೆ 111 ಕೆ.ಜಿ. ಬೆಲ್ಲ ಉತ್ಪಾದಿಸಬಹುದು. ಅದೇ ರೀತಿ, ಸಿಹಿ ನೀರಿಯಲ್ಲಿ ಹವಳ ಬೆಳೆಯುವ ತರಬೇತಿಯನ್ನೂ ವಿಶ್ವವಿದ್ಯಾಲಯದಲ್ಲಿ ರೈತರಿಗೆ ನೀಡಲಾಗುತ್ತದೆ. ಮೂರು ದಿನಗಳ ತರಬೇತಿಯಲ್ಲಿ ಹವಳದ ಇಳವರಿ ಪಡೆಯವ ಕುರಿತು ಸಂಪೂರ್ಣವಾಗಿ ತಿಳಿಸುತ್ತೇವೆ. 1 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದರೆ, ಗರಿಷ್ಠ 2.5 ಲಕ್ಷ ರೂ. ಆದಾಯ ದೊರೆಯುತ್ತದೆ. ಆಸಕ್ತರು ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಡಬಹುದು” ಎಂದು ಅವರು ತಿಳಿಸಿದ್ದಾರೆ.

ಇನ್ನು, ಧಾರವಾಡ, ರಾಯಚೂರು, ಶಿವಮೊಗ್ಗ, ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯಗಳೂ ಮಳಿಗೆಗಳನ್ನು ತೆರೆದಿದ್ದು, ಸ್ಥಳೀಯ ಬೆಳೆಗಳು ಮತ್ತು ವಿಶಿಷ್ಟ ತಳಿಗಳನ್ನು ಪರಿಚಯಿಸಿವೆ. ರೈತರಿಗೆ ಮಾಹಿತಿ ನೀಡುತ್ತಿವೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಬೃಹತ್ ಮಳಿಗೆಯನ್ನು ತೆರೆದಿದೆ. ಅಲ್ಲಿ, ಸೊಪ್ಪು, ಕಾಳುಗಳು, ಅಣಬೆ, ಭತ್ತ, ರಾಗಿ, ಕಬ್ಬು, ರೇಷ್ಮೆ, ಹೂಗಿಡಗಳು, ವಿವಿಧ ತಳಿಯ ಮರದ ಬೀಜಗಳು, ಸಾವಯವ ರಸಗೊಬ್ಬರ, ಕೀಟನಾಶಕಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದೆ. ಮಾತ್ರವಲ್ಲದೆ, ಅಣಬೆ ಸೇರಿದಂತೆ ಕೆಲವು ಉತ್ಪನ್ನಗಳನ್ನು ಬೆಳೆಯುವ ಕುರಿತು ವಿಶ್ವವಿದ್ಯಾಲಯವು ತರಬೇತಿಯನ್ನೂ ನೀಡಲಿದೆ.

WhatsApp Image 2025 11 15 at 9.08.51 PM

“ಬೆಂಗಳೂರಿನ ಜನರಿಗೆ ಕೃಷಿ ಮೇಳವು ವಿಶಿಷ್ಟವಾಗಿದೆ. ರೈತರು ಬೆಳೆವ ಬೆಳೆಗಳು ಮತ್ತು ಉತ್ಪನ್ನಗಳ ಕುರಿತು ಸಾಕಷ್ಟು ಮಾಹಿತಿ ದೊರೆಯುತ್ತದೆ. ಬೆಂಗಳೂರಿಗರೂ ತಮ್ಮ ಮನೆಗಳಲ್ಲಿಯೇ ಸಣ್ಣ ಪ್ರಮಾಣದಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಬೆಂಗಳೂರಿನ ನಿವಾಸಿಗಳು ತಮ್ಮ ಮನೆಗಳ ಟೆರೆಸ್‌ನಲ್ಲಿ ನೆಡುತೋಪುಗಳನ್ನು ಮಾಡಲು ಉತ್ತಮ ಮಾಹಿತಿ ಸಿಗುತ್ತದೆ” ಎಂದು ಕೃಷಿ ಮೇಳ ವೀಕ್ಷಣೆಗೆ ಬಂದಿದ್ದ ಮಮತಾ ಹೇಳಿದರು.

ಚಾಮರಾಜನಗರ ಜಿಲ್ಲೆಯ ಹಳ್ಳಿಯೊಂದರಿಂದ ಬಂದಿದ್ದ ಶಂಕರ್ ಎಂಬವರು ಮಾತಿಗೆ ಸಿಕ್ಕರು. “ರೈತರು ಸಾವಯವ ಗೊಬ್ಬರ ಬಳಕೆ ಮಾಡುವ ಕುರಿತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಹೆಚ್ಚಾಗಿ ಮಾಹಿತಿ ಕೊಡುತ್ತಿದೆ. ಸಾವಯವ ರಸಗೊಬ್ಬರ ಬಳಸುವುದು ಬಹಳ ಮುಖ್ಯ. ಆದರೆ, ನಮ್ಮ ಭೂಮಿಗಳು ರಸಾಯನಿಕ ಗೊಬ್ಬರದಿಂದ ಫಲವತ್ತತೆ ಕಳೆದುಕೊಂಡಿವೆ. ಈಗ ದಿಢೀರನೆ ಸಾವಯವ ಗೊಬ್ಬರಕ್ಕೆ ಬದಲಾದರೆ, ಇಳುವರಿ ಮೇಲೆ ಪರಿಣಾಮ ಬೀರಬಹುದು. ಹಂತಹಂತವಾಗಿ ಸಾವಯವ ಗೊಬ್ಬರ ಬಳಸಲು ಪ್ರಯತ್ನಿಸುತ್ತೇವೆ” ಎಂದರು.

WhatsApp Image 2025 11 15 at 9.08.50 PM

ಕೃಷಿಕ ವ್ಯಾಪಾರಿಗಳೇ ಇಲ್ಲದ ಕೊರತೆ

ಕೃಷಿ ಮೇಳದಲ್ಲಿ ಎರಡು ಕೊರತೆಗಳು ಎದ್ದು ಕಾಣುತ್ತಿದ್ದವು. ಒಂದು, ಕೃಷಿ ಮೇಳದಲ್ಲಿದ್ದ ಅಷ್ಟೂ ಮಳಿಗೆಗಳಲ್ಲಿ ಎಲ್ಲಿಯೂ ಕೃಷಿಕ ವ್ಯಾಪಾರಿಗಳೇ ಇರಲಿಲ್ಲ. ಎರಡನೆಯದಾಗಿ, ಕೃಷಿಯ ಸಾಂಪ್ರದಾಯಿಕ ಸಲಕರಣೆಗಳು ಎಲ್ಲಿಯೂ ಕಾಣಿಸಲಿಲ್ಲ. ನೇಗಿಲು, ನೊಗ, ಹಲಬೆ ಸೇರಿದಂತೆ ಯಾವೊಂದು ಸಲರಣೆಯೂ ಪ್ರದರ್ಶನದ ಮಳಿಗೆಯಲ್ಲಿಯೂ ಇರಲಿಲ್ಲ.

ಕೃಷಿ ಮೇಳದ ಎಲ್ಲ ಮಳಿಗೆಗಳಲ್ಲಿಯೂ ನಾನಾ ಕಂಪನಿಗಳು, ವಿವಿಧ ವ್ಯಾಪಾರ ಅಂಗಡಿಗಳೇ ತುಂಬಿದ್ದವು. ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಯಾವೊಬ್ಬ ರೈತರು ಮಳಿಗೆಗಳಲ್ಲಿ ಇರಲಿಲ್ಲ. ಇದಕ್ಕೆ ಮುಖ್ಯ ಕಾರಣ, ಮಳಿಗೆಗಳನ್ನು ಬಾಡಿಗೆಗೆ ಪಡೆಯಬೇಕಿತ್ತು. ಹೀಗಾಗಿ, ರೈತರು ಬಾಡಿಗೆ ತೆತ್ತು ದವಸ, ಧಾನ್ಯಗಳನ್ನು ಮಾರಾಟ ಮಾಡಲಾಗದೆ, ಕೃಷಿ ಮೇಳದಿಂದ ಹೊರಗುಳಿದಿದ್ದಾರೆ. ಒಂದಷ್ಟು ಸಂಖ್ಯೆಯ ರೈತರಿಗೆ ಉಚಿತವಾಗಿ ಮಳಿಗೆಗಳನ್ನು ಒದಗಿಸಿ, ಕೃಷಿಕರೂ ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದ್ದಿದ್ದರೆ, ಕೃಷಿ ಮೇಳದ ರಂಗು ಮತ್ತಷ್ಟು ಹೆಚ್ಚುತ್ತಿತ್ತು. ಮೇಳ ನಾಳೆ ಮುಕ್ತಾಯವಾಗಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯಕ್ಕೆ ಬಾಕಿ ಅನುದಾನ: ಶೀಘ್ರದಲ್ಲೇ ‘ಸಿಹಿ ಸುದ್ದಿ’- ಡಿ.ಕೆ. ಶಿವಕುಮಾರ್

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಳೆಯ ಬಾಕಿ ಅನುದಾನದ ಕುರಿತಂತೆ ಶೀಘ್ರದಲ್ಲೇ...

ಸರ್ಕಾರ ಬೀಳಿಸಲು ಬಂದಿಲ್ಲ, ಅಕ್ರಮ ಪ್ರಶ್ನಿಸಲು ಬಂದಿದ್ದೇನೆ: ಖ್ಯಾತ ಯೂಟ್ಯೂಬರ್ ಧೃವ್ ರಾಠಿ

"ನಾನು ಯಾವುದೇ ಸರ್ಕಾರವನ್ನು ಕೆಡವಲು ಅಥವಾ ಬದಲಾಯಿಸಲು ಇಲ್ಲಿಗೆ ಬಂದಿಲ್ಲ. ನನಗೆ...

ಪ್ರಜಾಪ್ರಭುತ್ವದ ಹಕ್ಕು ಕಿತ್ತುಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ, ಜೆನ್-ಝೀಗಳು ಸಹಿಸುವುದಿಲ್ಲ: ಐಶೀ ಘೋಷ್

"ನಾವು ಪ್ರಸ್ತುತ ದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ. ದೇಶದ...

ಮತ ಕಳೆದುಹೋದರೆ ಪ್ರಜಾಪ್ರಭುತ್ವ ಕಳೆದುಹೋಗುತ್ತದೆ: ಅಭಿಜೀತ್ ದೀಪ್ಕೆ

ದೇಶದಲ್ಲಿ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಜನರು ಎಚ್ಚೆತ್ತುಕೊಂಡು...