ಸಂಭ್ರಮದ ತೆರೆ ಕಂಡ ಬೀದರ್ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ: 12 ನಿರ್ಣಯ ಅಂಗೀಕಾರ

Date:

ಬೀದರ್‌ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ನ.21, 22ರಂದು ಎರಡು ದಿನಗಳ ಕಾಲ ಆಯೋಜಿಸಿರುವ ಬೀದರ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಂಭ್ರಮದ ತೆರೆ ಕಂಡಿದೆ. ಸಮ್ಮೇಳನದಲ್ಲಿ 12 ಮಹತ್ವದ ನಿರ್ಣಯಗಳನ್ನು ಅಂಗೀಕರಗೊಂಡವು. ಕಸಾಪ ಪದಾಧಿಕಾರಿಗಳಾದ ಟಿ.ಎಂ.ಮಚ್ಚೆ ಸೂಚಿಸಿದರೆ, ದೇವೇಂದ್ರ ಕರಂಜೆ ಅನುಮೋದಿಸಿದರು.

- Advertisement -

“ಬೀದರ್ ಜಿಲ್ಲೆಯ ಎಲ್ಲ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಹಾಗೂ ಖಾಸಗಿ ಸಂಸ್ಥೆಗಳ ನಾಮಫಲಕ ಮತ್ತು ಪತ್ರವ್ಯವಹಾರಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಗ್ರಾಮಗಳ ಕನ್ನಡ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. 12ನೇ ಶತಮಾನದ ಶರಣರ ಕ್ರಾಂತಿಭೂಮಿಯಾದ ಬಸವಕಲ್ಯಾಣ ಸೇರಿದಂತೆ ಬೀದರ ಜಿಲ್ಲೆಯಲ್ಲಿ ವಚನ ಸಾಹಿತ್ಯ, ಜನಪದ ಮತ್ತು ತತ್ವಪದಗಳ ಆಳವಾದ ಅಧ್ಯಯನಕ್ಕಾಗಿ ಸುಸಜ್ಜಿತ ಸಂಶೋಧನಾ ಕೇಂದ್ರ ಹಾಗೂ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಬೇಕು” ಎಂದು ಒತ್ತಾಯಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ...

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಭಗತ್ ಸಿಂಗ್ ಅವರನ್ನು ಇಂದು ಅದೇ ಸಿದ್ಧಾಂತಗಳ ವಿರುದ್ಧ ನಿಂತಿರುವ ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ನಾಯಕರು ತಮ್ಮ 'ಸ್ವಂತ...

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ;...

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ದಶಕಗಳ ಬೇಡಿಕೆಗೆ ಸಾಕಾರ ರೂಪ ಸಿಕ್ಕಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಗರದ ಬಹುನಿರೀಕ್ಷಿತ...

ಜಿಲ್ಲೆಯ ಶೈಕ್ಷಣಿಕ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿ ಬೀದರ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನಯಾನ ಸೇವೆ ಪುನರಾರಂಭಿಸಬೇಕು. ಬೀದರ-ಬೆಂಗಳೂರು ನಡುವೆ ವಂದೇ ಭಾರತ್ ಮಾದರಿಯ ವೇಗದ ರೈಲು ಸಂಚಾರ ಕಲ್ಪಿಸುವುದು ಸೇರಿದಂತೆ ಪ್ರಮುಖ ನಗರಗಳಿಗೆ ರೈಲು ಸಂಪರ್ಕ ಹೆಚ್ಚಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದರು.

ಜಿಲ್ಲೆಯ ಹಿರಿಯ ಹಾಗೂ ಯುವ ಸಾಹಿತಿಗಳ ಕೃತಿಗಳ ಪ್ರಕಟಣೆಗೆ ಆರ್ಥಿಕ ನೆರವು ನೀಡಬೇಕು. ಸ್ಥಳೀಯ ಜಾನಪದ, ಬಯಲಾಟ, ಗೊಂದಲಿಗರ ಪದ ಹಾಗೂ ತತ್ವಪದಗಳ ಕಲಾವಿದರಿಗೆ ಮಾಸಾಶನ ಮತ್ತು ಸೂಕ್ತ ವೇದಿಕೆ ಕಲ್ಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಯೋಜನೆ ರೂಪಿಸಬೇಕು.

ಕಾರಂಜಾ ಯೋಜನೆಯ ಕಾಲುವೆಗಳ ಆಧುನೀಕರಣ, ಕಾರಂಜಾ ಸಂತ್ರಸ್ತರಿಗೆ ಸೂಕ್ತ ಪರಿಹಾರ, ಕೆರೆಗಳ ಪುನಶ್ಚೇತನ ಹಾಗೂ ತೊಗರಿ, ಜೋಳ, ಸೋಯಾಬೀನ್ ಮತ್ತು ಕಬ್ಬು ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಬೇಕು. 371(ಜೆ) ಕಲಂ ಅಡಿಯಲ್ಲಿ ಜಿಲ್ಲೆಗೆ ಲಭ್ಯವಾಗುವ ಅನುದಾನವನ್ನು ಶಿಕ್ಷಣ, ಆರೋಗ್ಯ, ಕೈಗಾರಿಕೆ ಹಾಗೂ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳ ಅಭಿವೃದ್ಧಿಗೆ ಪಾರದರ್ಶಕವಾಗಿ ಮತ್ತು ಕಾಲಮಿತಿಯೊಳಗೆ ಬಳಸಬೇಕು. ಕಲ್ಯಾಣ ಕರ್ನಾಟಕ ಭಾಗದ ಲೇಖಕರ ಪುಸ್ತಕಗಳ ಖರೀದಿಗೂ ಅನುದಾನ ವಿನಿಯೋಗಿಸಬೇಕು.

WhatsApp Image 2026 11 23 at 8.19.13 AM
ಮಹಿಳಾ ಅಸ್ಮಿತೆ ಗೋಷ್ಠಿಯಲ್ಲಿ ಪಾರ್ವತಿ ವಿ.ಸೋನಾರೆ ಮಾತನಾಡಿದರು.

ಬೀದರ ನಗರದ ಕನ್ನಡ ಭವನವು ಜಿಲ್ಲೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ನಿರಂತರ ಆಯೋಜನೆಗೆ ಅನುಕೂಲವಾಗುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧೀನದಲ್ಲಿಯೇ ಮುಂದುವರಿಯುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು. ವಿಶ್ವವಿಖ್ಯಾತ ಜಿಲ್ಲೆಯ ಪಾರಂಪರಿಕ ಬಿದರಿ ಕಲೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕುಶಲಕರ್ಮಿಗಳಿಗೆ ಕಚ್ಚಾ ವಸ್ತುಗಳ ಸಬ್ಸಿಡಿ, ಆಧುನಿಕ ತರಬೇತಿ ಹಾಗೂ ಜಾಗತಿಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ವಿಶೇಷ ಪ್ಯಾಕೇಜ್ ಘೋಷಿಸಬೇಕು.

‘ಬಸವ ಮಂಟಪ’ ಕೃತಿ ಬರೆದ ರವಿ ಹಂಜಿ ಅವರ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು ಬಂಧಿಸಿರುವ ಸರ್ಕಾರದ ಕ್ರಮವನ್ನು ಸಮ್ಮೇಳನ ಸ್ವಾಗತಿಸಿತು. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಎಲ್ಲ ವೃತ್ತಿಪರ ಮತ್ತು ಉನ್ನತ ಶಿಕ್ಷಣ ಕೋರ್ಸ್‌ಗಳನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಬೋಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

ಗ್ರಾಮೀಣ ಪ್ರದೇಶಗಳಲ್ಲಿನ ಕನ್ನಡ ಶಾಲೆಗಳನ್ನು ಪರೋಕ್ಷವಾಗಿ ಮುಚ್ಚುವ ಆತಂಕಕ್ಕೆ ಕಾರಣವಾಗಿರುವ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಮ್ಯಾಗ್ನೆಟ್, ದ್ವಿಭಾಷಾ ಅಥವಾ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ತಕ್ಷಣ ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಲಾಯಿತು.

ಜನಪರ, ಜೀವಪರ ಕವಿತೆ ಹೊರಬರಲಿ

ಕವಿತೆಗಳು ಜನಪರ, ಜೀವಪರ ಹಾಗೂ ಅಹಿಂಸೆಯ ಸಂದೇಶವನ್ನು ಸಾರುವಂತಿರಬೇಕು ಎಂದು ಕಥೆಗಾರ ಗುರುನಾಥ ಅಕ್ಕಣ್ಣ ಅಭಿಪ್ರಾಯಪಟ್ಟರು.

22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಮೇಳ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, “ಜಾಗತಿಕ ಮಟ್ಟದಲ್ಲಿ ಯುದ್ಧ, ಹಿಂಸೆ, ರಕ್ತಪಾತ, ಕೊಲೆ ಸೇರಿದಂತೆ ಅಮಾನವೀಯ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಕಳೆದ ಒಂದೂವರೆ ದಶಕದಿಂದ ದೇಶದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಆಂತರಿಕ ಸಂಘರ್ಷಗಳು ದಿನೇದಿನೇ ಹೆಚ್ಚುತ್ತಿದ್ದು, ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಗಾಂಧಿ ಮತ್ತು ಯೇಸುವಿನ ಮಾರ್ಗವನ್ನು ಅನುಸರಿಸುವವರು ಕಡಿಮೆಯಾಗುತ್ತಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು.

ದಿನ ಬೆಳಗಾದರೆ ಸಂವಿಧಾನದ ಬದಲಾವಣೆ, ವೋಟ್ ಚೋರಿ, ಚುನಾವಣಾ ವೈಫಲ್ಯದಂತಹ ಸಮಸ್ಯೆಗಳು ಚರ್ಚೆಗೆ ಬರುತ್ತಿವೆ. ಇಂದಿನ ಸಮಸ್ಯೆಗಳು ಹಾಗೂ ಸವಾಲುಗಳ ಕುರಿತು ಕವಿಗಳು ಚಿಂತನೆ ನಡೆಸಿ, ತಮ್ಮ ಕವಿತೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಡಾ.ಹೇಮಲತಾ ವಡ್ಡೆ ಆಶಯ ನುಡಿಗಳನ್ನಾಡಿ, ಕನ್ನಡ ಭಾಷೆಯ ಅಳಿವು-ಉಳಿವು ಹಾಗೂ ಸಾಹಿತ್ಯ ಚರಿತ್ರೆಯ ಕುರಿತು ವಿವರವಾಗಿ ಮಾತನಾಡಿದರು.

ಕವಿಗೋಷ್ಠಿಯಲ್ಲಿ ಎಂ.ಎ. ಪಾಟೀಲ್, ಗೀತಾಂಜಲಿ ಪಾಟೀಲ್, ನೀಲಾಂಬಿಕಾ ಸ್ವಾಮಿ, ನಾಗೇಂದ್ರ ಚಿಟಗೀರೆ, ಉಮಾದೇವಿ ಬಾಪೂರೆ, ವೀರಣ್ಣ ಮಂಠಾಳಕರ್, ವೀರಶೆಟ್ಟಿ ಪಾಟೀಲ್, ಚೆನ್ನಬಸಪ್ಪ ಕೋಹಿನೂರ್, ಪುಷ್ಪಾ ಚಿಕೋರ್ತೆ, ಮಾಧುರಿ ಕುಲಕರ್ಣಿ, ಮಾಣಿಕೇಶ್ವರಿ ಪಾಟೀಲ್, ಚೆನ್ನಮ್ಮ ವಲ್ಲೆಪೂರ್ ಸೇರಿದಂತೆ 40ಕ್ಕೂ ಅಧಿಕ ಕವಿ ಹಾಗೂ ಕವಯಿತ್ರಿಯರು ಭಾಗವಹಿಸಿದ್ದರು.

WhatsApp Image 2026 11 23 at 8.18.58 AM

ಸಾಹಿತಿಗಳಾದ ಓಂಪ್ರಕಾಶ ದಡ್ಡೆ, ಶಿವಾಜಿ ಕಾಂಬಳೆ, ವೀರಶೆಟ್ಟಿ ಚೌಕನಪಳ್ಳಿ, ಬಿ.ಕೆ.ಸುಂದರರಾಜ, ನೀಲಕಂಠರಾವ ಇಸ್ಲಾಂಪುರ, ಅನೀಲಕುಮಾರ ಅಣದೂರೆ, ಜಗದೇವಿ ದುಬಲಗುಂಡೆ, ಮಹಾನಂದಾ ಮಡಕಿ, ಮೇರಿ ಮಾರ್ಗರೇಟ್ ಉಪಸ್ಥಿತರಿದ್ದರು. ಎಂ.ಎಸ್. ಮನೋಹರ ಸ್ವಾಗತಿಸಿದರು. ಪರಮೇಶ್ವರ ಬಿರಾದಾರ ನಿರೂಪಿಸಿದರು. ರೂಪಾ ಪಾಟೀಲ್ ವಂದಿಸಿದರು.

ನಾಡು-ನುಡಿ, ಜಲಕ್ಕಾಗಿ ಶ್ರಮಿಸಿದವರಿಗೆ ವಾರ್ಷಿಕ ಪ್ರಶಸ್ತಿ

ನಾಡು-ನುಡಿ ಹಾಗೂ ಜಲ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಸಾಧಕರನ್ನು ಗುರುತಿಸಿ, ಪ್ರತಿ ವರ್ಷ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಬೇಕು. ಈ ಪ್ರಶಸ್ತಿಗೆ ₹25 ಸಾವಿರ ನಗದು ಹಾಗೂ ಪ್ರಮಾಣಪತ್ರವನ್ನು ತಮ್ಮ ಸಂಸ್ಥೆಯಿಂದ ನೀಡಲಾಗುವುದು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಬಸವರಾಜ ಧನ್ನೂರ ಘೋಷಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, “ಈ ಭಾಗದಲ್ಲಿ ನಾಡು, ನುಡಿ ಹಾಗೂ ಜಲ ಸಂರಕ್ಷಣೆಗಾಗಿ ಅನೇಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅಂತಹ ಸಾಧಕರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಬೇಕು. ಪ್ರಶಸ್ತಿ ನೀಡುವ ಜವಾಬ್ದಾರಿಯನ್ನು ನಮ್ಮ ಸಂಸ್ಥೆ ವಹಿಸಿಕೊಳ್ಳಲಿದೆ” ಎಂದು ತಿಳಿಸಿದರು.

ಕನ್ನಡ ನಮ್ಮ ಅಸ್ಮಿತೆ

ಕನ್ನಡಿಗರ ಅಸ್ಮಿತೆಯೇ ಕನ್ನಡ ಭಾಷೆ. ಆದರೆ, ನಾವು ದಿನನಿತ್ಯ ಮಾತನಾಡುವ ಕನ್ನಡದಲ್ಲಿ ಇಂಗ್ಲಿಷ್ ಪದಗಳ ಬಳಕೆ ಹೆಚ್ಚಾಗುತ್ತಿದೆ. ಭಾಷೆಯ ಮೇಲಿನ ಅಭಿಮಾನ ಮತ್ತು ಬದ್ಧತೆಯನ್ನು ತಮಿಳುನಾಡಿನ ಜನರಿಂದ ಕಲಿಯಬೇಕು. ಎಲ್ಲ ನಾಮಫಲಕಗಳಲ್ಲೂ ಶೇ.100ರಷ್ಟು ಕನ್ನಡ ಬಳಕೆಯಾಗಬೇಕು. ವಿಪರ್ಯಾಸವೆಂದರೆ, ಹೆಚ್ಚು ವಿದ್ಯಾಭ್ಯಾಸ ಮಾಡಿದವರೇ ಕನ್ನಡ ಭಾಷೆಯನ್ನು ಹಾಳು ಮಾಡುತ್ತಿದ್ದರೆ, ಕಡಿಮೆ ಓದಿದವರು ಕನ್ನಡ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.‌

ಇದನ್ನೂ ಓದಿ : ಚಂದ್ರಶೇಖರ ಕಂಬಾರ ಅವರ ಕತೆ | ನಾರ್ಸಿಸಸ್

ನಮ್ಮ ದಿನನಿತ್ಯದ ಎಲ್ಲ ವ್ಯವಹಾರಗಳಲ್ಲೂ ಕನ್ನಡ ಭಾಷೆಯನ್ನೇ ಬಳಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂದಿಗೂ ಬೀದರ್‌ನ ಗಾಂಧಿಗಂಜ್‌ನಲ್ಲಿ ಮೋಡಿ ಭಾಷೆಯ ಬಳಕೆ ಕಂಡುಬರುತ್ತಿದೆ. ಅದರ ಬದಲಾಗಿ ಕನ್ನಡ ಭಾಷೆಯ ಬಳಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ 22ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಬೆಳಿಗ್ಗೆ ಸಂಸ್ಕೃತಿ ಸುದಿನ, ಕವಿಮೇಳ, ಸಮ್ಮೇಳನಾಧ್ಯಕ್ಷರೊಂದಿಗೆ ಮಾತು-ಕತೆ, ಬಹುತ್ವದ ಅರಿವು, ಕೃತಕಬುದ್ಧಮತ್ತೆ (ಎಐ) ಹಾಗೂ ಮಹಿಳಾ ಅಸ್ಮಿತೆ ಗೋಷ್ಠಿಗಳು ನಡೆದವು. ಗೋಷ್ಠಿಗಳಲ್ಲಿ ಗಣ್ಯರು, ಅತಿಥಿಗಳು ಭಾಗವಹಿಸಿ ವಿಷಯ ಮಂಡಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾಲ್ಕಿ | ಅಪಘಾತದಲ್ಲಿ ಮೃತಪಟ್ಟ ಹನುಮಂತ ಕುಟುಂಬಸ್ಥರಿಗೆ ಭೀಮರಾಜ್ ಸೇನೆ ನೆರವು

ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದ ಹನುಮಂತ ತಂದೆ...

ಮಂಡ್ಯ | ಭಾರತಕ್ಕಾಗಿ ಯುವಶಕ್ತಿ ಧ್ಯೇಯದಡಿ ಎನ್ಎಸ್ಎಸ್ ಶಿಬಿರ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ. ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ...

ಕೆರೆ ತುಂಬಿಸಲು ಅಜಿತ್ ಪವಾರ್ ಅವರನ್ನು ಕರೆತರಬೇಕೇ? – ವಿವಾದಕ್ಕೀಡಾದ ಆನಂದರಾಜ್ ಅಂಬೇಡ್ಕರ್ ಹೇಳಿಕೆ

ಮಹಾರಾಷ್ಟ್ರದ ಬರಗಾಲ ಮತ್ತು ಜಲ ಸಂರಕ್ಷಣಾ ನೀತಿಗಳ ಕುರಿತು ಟೀಕಿಸುವ ಭರದಲ್ಲಿ,...

ಬೀದರ್‌ | ಬಿದ್ರಿ ಕಲಾವಿದೆ ಶಾಂತಾಬಾಯಿ ಕಾಂಬಳೆಗೆ ನಿವೇಶನ, ಮನೆ, ಜಮೀನು ಮಂಜೂರಾತಿಗೆ ಒತ್ತಾಯ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಬಿದ್ರಿ ಕಲಾವಿದೆ ಶಾಂತಾಬಾಯಿ ಕಾಂಬಳೆ...