ಕೆಲ ಖದೀಮರು ನಕಲಿ ದಾಖಲೆಗಳನ್ನು ನೀಡಿ, ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಬೆಂಗಳೂರಿನ ಮೂರು ಬ್ಯಾಂಕ್‌ಗಳ ಮೂವರು ಮ್ಯಾನೇಜರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಕಲಿ ದಾಖಲೆ ನೀಡಿ ಸಾಲ ಪಡೆದುಕೊಂಡು ವಂಚಿಸಿರುವ ಆರೋಪದ ಮೇಲೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ, ಪದೇ ಪ್ರಕರಣದಲ್ಲಿ ಸಾಲ ನೀಡಿದ್ದ ಬೆಂಗಳೂರಿನ ಐಸಿಐಸಿಐ ಬ್ಯಾಂಕ್ ಸೇಲ್ಸ್ ಮ್ಯಾನೇಜರ್ ರಾಕೇಶ್, ಸೆಂಟ್ ಮಾರ್ಕ್ಸ್ ರಸ್ತೆಯ ಎಸ್ಬಿಐ ಬ್ಯಾಂಕ್ನ ಎಜಿಎಂ ಮುರುಳಿಧರ್, ಬೆಂಗಳೂರು ಜಿಲ್ಲಾ ಕೋ ಅಪರೇಟಿವ್ ಬ್ಯಾಂಕ್ನ ಮಲ್ಲಿಕಾರ್ಜುನ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಜಮೀನನ್ನು ಮಾರಲು ಮುಂದಾಗಿದ್ದ ಮಾಲೀಕರು ಬ್ರೋಕರ್‌ಗಳಿಗೆ ತಮ್ಮ ಜಮೀನಿನ ದಾಖಲೆಗಳನ್ನು ನೀಡಿದ್ದರು. ಆ ದಾಖಲೆಗಳನ್ನು ಬಳಸಿಕೊಂಡು, ಬ್ಯಾಂಕ್‌ಗಳಲ್ಲಿ ಖಾತೆ ಸೃಷ್ಟಿಸಿ, ಕೆಲ ಖದೀಮರು ಸಾಲ ಪಡೆದುಕೊಂಡಿದ್ದಾರೆ. ಯಾರದ್ದೋ ದಾಖಲೆಗಳನ್ನು ನೀಡಿದ್ದರೂ, ಅದನ್ನು ಸರಿಯಾಗಿ ಪರಿಶೀಲಿಸದೆ, ಬ್ಯಾಂಕ್ ಮ್ಯಾನೇಜರ್‌ಗಳು ಸಾಲ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ರೀತಿ ನಕಲಿ ದಾಖಲೆಗಳಿವೆ 4.5 ಕೋಟಿ ರೂ. ಸಾಲ ನೀಡಿದ್ದಾರೆ ಎಂದು ತಿಳಿದುಬಂದಿದೆ.