ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?

Date:

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ ಮತ ಬಾಚುವ ಕಣ್ಣು ಮುಚ್ಚಿ ತನ್ಮ ಕರ್ತವ್ಯದ ಕಣ್ಣು ತೆರೆದು ನೋಡುವುದು ಅಗತ್ಯ. ಬೈಗಾ ಸಮುದಾಯದಂತಹ ಅಪರೂಪದ ಬುಡಕಟ್ಟು ಸಂತತಿಯನ್ನು ಮತ್ತು ಅವರ ಮುಂದಿನ ಪೀಳಿಗೆಯನ್ನು ರಕ್ಷಿಸುವುದು ಆಡಳಿತದ ಆದ್ಯ ಕರ್ತವ್ಯ.

ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಅರಣ್ಯ ಹಾಗೂ ಬೆಟ್ಟಗುಡ್ಡಗಳ ಮಡಿಲಿನಲ್ಲಿ ವಾಸಿಸುವ ‘ಬೈಗಾ’ (Baiga) ಬುಡಕಟ್ಟು ಸಮುದಾಯದಲ್ಲಿ ಸಂಭವಿಸಿದ ಮಕ್ಕಳ ಸರಣಿ ಸಾವುಗಳು ಇಡೀ ರಾಜ್ಯವನ್ನಷ್ಟೇ ಅಲ್ಲದೆ ದೇಶವನ್ನೇ ಬೆಚ್ಚಿಬೀಳಿಸಿವೆ. ಇತ್ತೀಚಿನ ವಾರಗಳಲ್ಲಿ ಬಾಲಾಘಾಟ್‌ನ ವಿವಿಧ ಗ್ರಾಮಗಳಲ್ಲಿ ಮತ್ತು ಬುಡಕಟ್ಟು ವಸತಿಗಳಲ್ಲಿ ಸುಮಾರು 32ಕ್ಕೂ ಹೆಚ್ಚು ಬೈಗಾ ಮಕ್ಕಳು ಸಾಂಕ್ರಾಮಿಕ ರೋಗಗಳು ಹಾಗೂ ತೀವ್ರ ಅಪೌಷ್ಟಿಕತೆಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯು ಸರ್ಕಾರದ ನಿರ್ಲಕ್ಷ್ಯ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸಿದೆ. ಎಐ ಯುಗಕ್ಕೆ ಕಾಲಿಟ್ಟಿರುವ ಈ ದೇಶದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಮತ್ತು ಕಾಲಕ್ಕೆ ಸರಿಯಾಗಿ ವೈದ್ಯಕೀಯ ನೆರವು ಸಿಗದೆ ಇರುವುದೇ ಈ ಪುಟ್ಟ ಕಂದಮ್ಮಗಳ ಬಲಿಗೆ ಪ್ರಮುಖ ಕಾರಣ ಎಂಬುದು ಆಘಾತಕಾರಿ.

- Advertisement -

ಅಪರೂಪದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಮತ್ತು ಕೇಂದ್ರ ಸರ್ಕಾರದಿಂದ ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ (PVTG) ಎಂದು ಗುರುತಿಸಲ್ಪಟ್ಟಿರುವ ಬೈಗಾ ಸಮುದಾಯ. ಪ್ರಮುಖವಾಗಿ ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ದಟ್ಟವಾದ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಸಮುದಾಯವಿದು. ಈ ಸಮುದಾಯದ ಜನಸಂಖ್ಯೆಯಲ್ಲಿ ಅತ್ಯಂತ ನಿಧಾನಗತಿಯ ಬೆಳವಣಿಗೆ ಕಂಡುಬರುತ್ತಿದೆ. ಹೀಗಿರುವಾಗ ಈ ಮಕ್ಕಳ ಸಾವು ಬೈಗಾ ಸಮುದಾಯಕ್ಕೆ ಆಘಾತ ತಂದೊಡ್ಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18...

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಏನಿದು ಘಟನೆ, ನಡೆದಿರುವುದೇನು?

ಬಾಲಾಘಾಟ್ ಜಿಲ್ಲೆಯ ಬಿಹಾರ್, ಪರಸವಾಡ ಮತ್ತು ಬೈಹಾರ್ ತಾಲೂಕಿನ ಗ್ರಾಮೀಣ ಮತ್ತು ಅರಣ್ಯ ಪ್ರದೇಶಗಳಲ್ಲಿ ಕಳೆದ ಕೆಲವು ವಾರಗಳಿಂದ ಸಾಂಕ್ರಾಮಿಕ ರೋಗದ ತೀವ್ರತೆ ಹೆಚ್ಚಾಗಿತ್ತು. ಮುಖ್ಯವಾಗಿ ಕಲುಷಿತ ನೀರು, ಮಲೇರಿಯಾ, ಡೆಂಗ್ಯೂ, ತೀವ್ರ ಭೇದಿ ಮತ್ತು ನ್ಯುಮೋನಿಯಾದಂತಹ ರೋಗಲಕ್ಷಣಗಳಿಂದ ಮಕ್ಕಳು ಬಳಲುತ್ತಿದ್ದರು.

ಇದನ್ನೂ ಓದಿ: ತಮಿಳುನಾಡು: ನ್ಯಾಯಾಧೀಶೆಯಾದ ಬುಡಕಟ್ಟು ಸಮುದಾಯದ 23 ವರ್ಷದ ಮಹಿಳೆ

ಈ ಬುಡಕಟ್ಟು ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC) ಬಹುದೂರದಲ್ಲಿದೆ. ರಸ್ತೆ ಸಂಪರ್ಕವೂ ಸರಿಯಾಗಿರಲಿಲ್ಲ. ಸ್ಥಳೀಯವಾಗಿ ಲಭ್ಯವಿರುವ ನಾಟಿ ಔಷಧ ಅಥವಾ ತಡವಾದ ಆಸ್ಪತ್ರೆ ದಾಖಲಾತಿಯಿಂದಾಗಿ ಮಕ್ಕಳ ಆರೋಗ್ಯ ಸ್ಥಿತಿ ಕ್ಷಣಕ್ಷಣಕ್ಕೂ ಕ್ಷೀಣಿಸಿ ಸಾವು ಸಂಭವಿಸಿದೆ. ಮೃತಪಟ್ಟ ಬಹುತೇಕ ಮಕ್ಕಳು 5 ವರ್ಷದೊಳಗಿನವರಾಗಿದ್ದು, ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸಿ ಸಣ್ಣಮಟ್ಟದ ಸೋಂಕು ಕೂಡ ಈ ಮಕ್ಕಳ ಜೀವಕ್ಕೆ ಕಂಟಕವಾಗಿದೆ.

ಈ ಸರಣಿ ಸಾವುಗಳ ಸುದ್ದಿ ಹೊರಬೀಳುತ್ತಿದ್ದಂತೆಯೇ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ವಿರೋಧ ಪಕ್ಷದ ಮುಖಂಡರು ಮಧ್ಯಪ್ರದೇಶ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರವು ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದೇವೆ ಎಂದು ಸಾರುತ್ತದೆ. ಆದರೆ ವಾಸ್ತವದಲ್ಲಿ ಕನಿಷ್ಠ ಜೀವರಕ್ಷಕ ಔಷಧಗಳು ಮತ್ತು ಆಂಬುಲೆನ್ಸ್ ಸೌಲಭ್ಯವೂ ಈ ಜನರಿಗೆ ಸಿಗುತ್ತಿಲ್ಲ ಎಂಬುದು ಈ ಸರಣಿ ಸಾವಿನಿಂದ ಸ್ಪಷ್ಟವಾಗಿದೆ ಅಲ್ಲವೇ ಎಂಬ ಪ್ರಶ್ನೆಗಳು ಎತ್ತಲಾಗುತ್ತಿದೆ.

ಇನ್ನೊಂದೆಡೆ ಸಾವುಗಳಿಗೆ ಕೇವಲ ಸಾಂಕ್ರಾಮಿಕ ರೋಗವೊಂದೇ ಕಾರಣವಲ್ಲ, ಬದಲಿಗೆ ಕೆಲ ಮಕ್ಕಳಲ್ಲಿ ಹುಟ್ಟಿನಿಂದಿದ್ದ ತೊಂದರೆಗಳು ಮತ್ತು ಅಪೌಷ್ಟಿಕತೆಯೂ ಕಾರಣವಾಗಿದೆ ಎಂದು ಆಡಳಿತ ಸಮಜಾಯಿಷಿ ನೀಡಲು ಯತ್ನಿಸಿವೆ. ಆದಾಗ್ಯೂ, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ಪ್ರದೇಶದಲ್ಲಿ ವಿಶೇಷ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಇಲಾಖೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಬುಡಕಟ್ಟು ಮಕ್ಕಳು ಸಾಂಕ್ರಾಮಿಕಕ್ಕೆ ತುತ್ತಾಗುವುದೇಕೆ?

ಬಾಲಾಘಾಟ್‌ನ ಬೈಗಾ ಸಮುದಾಯದ ಮಕ್ಕಳು ಪದೇ ಪದೇ ಇಂತಹ ರೋಗಗಳಿಗೆ ತುತ್ತಾಗಲು ಮತ್ತು ಪ್ರಾಣ ಕಳೆದುಕೊಳ್ಳಲು ಹಲವು ದಶಕಗಳಿಂದ ನೆಲೆಸಿರುವ ಸಾಮಾಜಿಕ ಹಾಗೂ ಭೌಗೋಳಿಕ ಕಾರಣಗಳಿವೆ. ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಅಭಾವವಿದೆ. ಮಳೆಗಾಲದಲ್ಲಿ ಹಾಗೂ ನಂತರದ ದಿನಗಳಲ್ಲಿ ತೆರೆದ ಹೊಂಡ, ಹಳ್ಳ ಮತ್ತು ಬಾವಿಗಳ ಕಲುಷಿತ ನೀರನ್ನೇ ಜನ ಬಳಸುತ್ತಾರೆ. ಇದರಿಂದಾಗಿ ನೀರುಜನಿತ ರೋಗಗಳು ಶೀಘ್ರವಾಗಿ ಹರಡುತ್ತವೆ.

ಇದನ್ನೂ ಓದಿ: ಚಾಮರಾಜನಗರ | ಬುಡಕಟ್ಟು ಸಮುದಾಯದವರಿಗೆ ಸೌಲಭ್ಯ ಶಿಬಿರ: ಜನ್ ಭಾಗೀದಾರಿ ಅಭಿಯಾನಕ್ಕೆ ಚಾಲನೆ

ಅದರಲ್ಲೂ ಬೈಗಾ ಸಮುದಾಯದಲ್ಲಿ ಬಡತನದ ಪ್ರಮಾಣ ಹೆಚ್ಚಾಗಿದೆ. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಸೂಕ್ತ ಪೌಷ್ಟಿಕ ಆಹಾರ ಸಿಗದೆ ಹುಟ್ಟುವ ಮಗುವೂ ಅಪೌಷ್ಟಿಕತೆಯಿಂದ ಕೂಡಿರುತ್ತದೆ. ರೋಗನಿರೋಧಕ ಶಕ್ತಿ ಇಲ್ಲದಿರುವುದೇ ಸಾವುಗಳಿಗೆ ಮುಖ್ಯ ಕಾರಣ. ಆಸ್ಪತ್ರೆಗೆ ತಲುಪಲು ರಸ್ತೆಗಳಿಲ್ಲ. ರೋಗಿಗಳನ್ನು ಅಥವಾ ಮಕ್ಕಳನ್ನು ಕಾಲ್ನಡಿಗೆಯಲ್ಲೋ ಅಥವಾ ಮರದ ಜೋಲಿಗಳಲ್ಲೋ ಕಿಲೋಮೀಟರ್‌ಗಟ್ಟಲೆ ಹೊತ್ತು ತರಬೇಕಾದ ಸ್ಥಿತಿ ಇದೆ. ಗ್ರಾಮ ಮಟ್ಟದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಸೇವೆಯ ಕೊರತೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಹಾಗೂ ಜೀವರಕ್ಷಕ ಔಷಧಗಳ ಅಭಾವ ಪ್ರಮುಖ ಸಮಸ್ಯೆಯಾಗಿದೆ.

ಮೂಲಸೌಕರ್ಯ ಒದಗಿಸದ ಸರ್ಕಾರ ಹೊಣೆ ಹೊರಬೇಕಲ್ಲವೇ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಯ – ಅದರಲ್ಲೂ ದುರ್ಬಲ ವರ್ಗದವರ – ಜೀವ ರಕ್ಷಣೆ ಮಾಡುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ. ಪಿವಿಟಿಜಿ ಬುಡಕಟ್ಟುಗಳ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಧಾನ ಮಂತ್ರಿ ಪಿವಿಟಿಜಿ ಅಭಿವೃದ್ಧಿ ಮಿಷನ್‌ನಂತಹ ಬೃಹತ್ ಯೋಜನೆಗಳ ಮೂಲಕ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ, ಈ ಹಣ ಎಲ್ಲಿಗೆ ಹೋಗುತ್ತಿದೆ?

ಈ ಹಣವು ಕೆಳಹಂತದಲ್ಲಿ ಸರಿಯಾಗಿ ಬಳಕೆ ಆಗುತ್ತಿಲ್ಲ ಎಂಬುದಕ್ಕೆ ಬಾಲಾಘಾಟ್‌ನಲ್ಲಿ ನಡೆದ 32 ಮಕ್ಕಳ ಸಾವೇ ಸಾಕ್ಷಿ. ಕನಿಷ್ಠ ಮಟ್ಟದ ಶುದ್ಧ ಕುಡಿಯುವ ನೀರು, ಸುಸಜ್ಜಿತ ರಸ್ತೆ, ತುರ್ತು ಅಂಬುಲೆನ್ಸ್ ಸೇವೆ ಮತ್ತು ತಾಲೂಕು ಮಟ್ಟದಲ್ಲಿ ಮಕ್ಕಳ ತೀವ್ರ ನಿಗಾ ಘಟಕಗಳನ್ನು (SNCU) ಸ್ಥಾಪಿಸದಿರುವುದು ಮಧ್ಯಪ್ರದೇಶದ ಮಧ್ಯಪ್ರದೇಶ ಸರ್ಕಾರದ, ಸ್ಥಳೀಯ ಶಾಸಕರ ನಿರ್ಲಕ್ಷ್ಯವನ್ನೇ ಎತ್ತಿ ತೋರಿಸುತ್ತದೆ. ಅಧಿಕಾರಿಗಳ ಹೊಣೆಗೇಡಿತನ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಈ ಕಂದಮ್ಮಗಳ ಬಲಿಗೆ ನೇರ ಕಾರಣ.

ಅಷ್ಟಕ್ಕೂ ಬಾಲಾಘಾಟ್‌ನಲ್ಲಿ ಸಂಭವಿಸಿದ ಬೈಗಾ ಮಕ್ಕಳ ಸರಣಿ ಸಾವುಗಳು ಕೇವಲ ಒಂದು ಸಾಂಕ್ರಾಮಿಕ ರೋಗದ ದುರಂತವಲ್ಲ, ಬದಲಿಗೆ ನಮ್ಮ ಸಮಾಜ ಮತ್ತು ಆಡಳಿತ ವ್ಯವಸ್ಥೆಯ ಕಣ್ಣು ತೆರೆಸಬೇಕಾದ ದೊಡ್ಡ ಎಚ್ಚರಿಕೆಯ ಗಂಟೆ. ಆಧುನಿಕ ಯುಗದಲ್ಲೂ ಕನಿಷ್ಠ ವೈದ್ಯಕೀಯ ಚಿಕಿತ್ಸೆ ಸಿಗದೇ ಕಂದಮ್ಮಗಳು ಪ್ರಾಣ ಬಿಡುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಷಯ. ಸರ್ಕಾರಗಳು ತಕ್ಷಣವೇ ಎಚ್ಚೆತ್ತುಕೊಂಡು ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ.

ನೆಪ ಮಾತ್ರಕ್ಕೆ ತಾತ್ಕಾಲಿಕ ಪರಿಹಾರ ಹುಡುಕುವ ಬದಲಾಗಿ ಬುಡಕಟ್ಟು ವಸತಿಗಳಲ್ಲಿ ಶಾಶ್ವತ ಶುದ್ಧ ಕುಡಿಯುವ ನೀರಿನ ಘಟಕಗಳು, ಸುಸಜ್ಜಿತ ರಸ್ತೆ ಸಂಪರ್ಕ ಮತ್ತು 24/7 ಕಾರ್ಯನಿರ್ವಹಿಸುವ ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸುವುದು ಇಂದಿನ ತುರ್ತು ಅಗತ್ಯ. ಎಲ್ಲ ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ ಮತ ಬಾಚುವ ಕಣ್ಣು ಮುಚ್ಚಿ ತನ್ಮ ಕರ್ತವ್ಯದ ಕಣ್ಣು ತೆರೆದು ನೋಡುವುದು ಅಗತ್ಯ. ಬೈಗಾ ಸಮುದಾಯದಂತಹ ಅಪರೂಪದ ಬುಡಕಟ್ಟು ಸಂತತಿಯನ್ನು ಮತ್ತು ಅವರ ಮುಂದಿನ ಪೀಳಿಗೆಯನ್ನು ರಕ್ಷಿಸುವುದು ಆಡಳಿತದ ಆದ್ಯ ಕರ್ತವ್ಯ. ಇಲ್ಲವಾದಲ್ಲಿ, ಇಂತಹ ದುರಂತಗಳು ಪುನರಾವರ್ತನೆಯಾಗುತ್ತಲೇ ಇರುತ್ತವೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅನ್ಯಾಯದ ವಿರುದ್ಧ ಹೋರಾಟಕ್ಕೆ ಹೊಸ ರೂಪು: ‘ಸತ್ಯಾಗ್ರಹ’ ಪೋರ್ಟಲ್ ಪರಿಚಯಿಸಿದ ರಾಹುಲ್ ಗಾಂಧಿ

ದೇಶಾದ್ಯಂತ ನಡೆಯುತ್ತಿರುವ ವಿವಿಧ ಜನಪರ ಪ್ರತಿಭಟನೆಗಳು ಹಾಗೂ ಹೋರಾಟಗಳನ್ನು ಒಂದೇ ಸೂರಿನಡಿ...

ಫಾರ್ಮ್‌-6 ಮೂಲಕ ಮರುನೋಂದಣಿ ಸಾಧ್ಯವಿದ್ದರೆ SIR ಏಕೆ? ಚುನಾವಣಾ ಆಯೋಗಕ್ಕೆ ಚಿದಂಬರಂ ಪ್ರಶ್ನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕೈಬಿಡಲಾದ ಮತದಾರರು...

ದೆಹಲಿ ಸಿಜೆಪಿ ಪ್ರತಿಭಟನೆ ಬೆನ್ನಲ್ಲೇ ಹೋರಾಟಗಾರರ ವಿರುದ್ಧ ಮೂರು ಎಫ್‌ಐಆರ್ ದಾಖಲು

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ (SIR) ಅಕ್ರಮ ನಡೆದಿದೆ ಎಂದು ಆರೋಪಿಸಿ,...

ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಬೀದರ್ ತಾಲೂಕು ಅಧ್ಯಕ್ಷರಾಗಿ ವೀರೇಂದ್ರಕುಮಾರ್

ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ (6ರಿಂದ 8ನೇ ತರಗತಿ) ಶಿಕ್ಷಕರ ಸಂಘದ...