ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18 ಕೋಟಿಗೆ ಹರಾಜಾಯಿತು ಆತನ ಕಲಾಕೃತಿ!

Date:

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25 ವರ್ಷಗಳ ನಂತರ 18 ಕೋಟಿ ರುಪಾಯಿಗೆ ಹರಾಜಾಗಿರುವ ವಿದ್ಯಮಾನ ಇತ್ತೀಚೆಗೆ ನಡೆದಿದೆ. ಆದರೆ ಈ ಹದಿನೆಂಟು ಕೋಟಿಯ ಒಂದೇ ಒಂದು ಪೈಸೆಯೂ ಕಲಾವಿದನ ಕುಟುಂಬಕ್ಕೆ ಸಿಗುತ್ತಿಲ್ಲ.

- Advertisement -

ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25 ವರ್ಷಗಳ ನಂತರ 18 ಕೋಟಿ ರುಪಾಯಿಗೆ ಹರಾಜಾಗಿರುವ ವಿದ್ಯಮಾನ ಇತ್ತೀಚೆಗೆ ನಡೆದಿದೆ. ಆದರೆ ಈ ಹದಿನೆಂಟು ಕೋಟಿಯ ಒಂದೇ ಒಂದು ಪೈಸೆಯೂ ಕಲಾವಿದನ ಕುಟುಂಬಕ್ಕೆ ಸಿಗುತ್ತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಮಧ್ಯಪ್ರದೇಶದ ಜನಗಢ್ ಸಿಂಗ್ ಶ್ಯಾಮ್ ಅವರ ಈ ವಿರಳ ಕಲಾಕೃತಿ 1985ರಲ್ಲಿ ಆತ ಬದುಕಿದ್ದಾಗ 1,500 ರುಪಾಯಿಗೆ ಮಾರಾಟ ಆಗಿತ್ತು.

ಶ್ಯಾಮ್ ಸಿಂಗ್ ಅವರ ಮಗ ಮಯಂಕ್ ಸಿಂಗ್ ಅವರ ಮಾತುಗಳಲ್ಲೇ ಈ ಕತೆಯನ್ನು ಕೇಳುವುದಾದರೆ- 1980ರ ದಶಕದ ಪ್ರಸಿದ್ಧ ಕಲಾವಿದ ಜೆ.ಸ್ವಾಮಿನಾಥನ್ ಭೋಪಾಲದ ಭಾರತ್ ಭವನದ ಅಂದಿನ ನಿರ್ದೇಶಕರಾಗಿದ್ದರು. ನನ್ನ ತಂದೆಯ ಪ್ರತಿಭೆಯನ್ನು ಗುರುತಿಸಿ ಪಾಟನಗಢದಿಂದ ಭೋಪಾಲಕ್ಕೆ ಕರೆ ತಂದರು. ನನ್ನ ತಂದೆಯ ಕಲಾಕೃತಿಗಳನ್ನು ನೋಡಲು ಮುಂಬಯಿಯ ಪಂಡೋಲ್ ಕುಟುಂಬದ ಸದಸ್ಯರೊಬ್ಬರು 1985ರಲ್ಲಿ ಭೋಪಾಲಕ್ಕೆ ಬಂದರು. ಕಾಗದದ ಮೇಲೆ ಬಿಡಿಸಿದ್ದ ಈ ಕಲಾಕೃತಿಯ ಬೆಲೆಯನ್ನು 1500 ರುಪಾಯಿ ಎಂದು ನನ್ನ ತಂದೆ ಆತನಿಗೆ ತಿಳಿಸಿದರು. ಪಂಡೋಲ್ ಕುಟುಂಬದ ಆ ಸದಸ್ಯನಿಗೆ 1,500 ರುಪಾಯಿ ಬೆಲೆ ದುಬಾರಿ ಎನಿಸಿತು. ಸ್ವಾಮಿನಾಥನ್ ಆತನ ಮೇಲೆ ಸಿಟ್ಟಿಗೆದ್ದರು. ಇದು ಕೇವಲ ಕಾಗದದ ತುಂಡಲ್ಲ. ಕಲಾವಿದನ ಕಲ್ಪನೆ ಮತ್ತು ಸಾಧನೆಯ ಕಿಮ್ಮತ್ತು ಎಂದು ತಿಳಿಯಹೇಳಿದರು. ಕಡೆಗೂ ಪಂಡೋಲ್ ಪರಿವಾರ ಈ ಕಲಾಕೃತಿಯನ್ನು 1,500 ರುಪಾಯಿಗೆ ಖರೀದಿಸಿ ಒಯ್ಯಿತು. ಅದೇ ಕಲಾಕೃತಿ ಈಗ 18 ಕೋಟಿ ರುಪಾಯಿಗೆ ಹರಾಜಾಗಿದೆ. ಇದು ಕೇವಲ ಕಿಮ್ಮತ್ತಿನ ಹೊಸ ದಾಖಲೆ ಅಲ್ಲ, ನನ್ನ ತಂದೆಯ ಕಲೆಗೆ ದೊರೆತಿರುವ ಬಹುದೊಡ್ಡ ಸಮ್ಮಾನ. ಅವರ ಕಲೆಯನ್ನು ಗೊಂಡ್ ಕಲೆ ಅಥವಾ ಪಾರಂಪರಿಕ ಆದಿವಾಸಿ ಕಲೆಯೆಂದು ಸೀಮಿತ ಹಣೆಪಟ್ಟಿ ಕಟ್ಟಬೇಡಿ. ತಂದೆಯವರು ಯಾವುದೇ ಪಾರಂಪರಿಕ ಕಲಾಶೈಲಿಯ ನಕಲು ಮಾಡಿಲ್ಲ. ತಮ್ಮದೇ ದೃಶ್ಯ ಭಾಷೆಯನ್ನು ವಿಕಾಸಗೊಳಿಸಿಕೊಂಡಿದ್ದರು. ಇದು ‘ಜನಗಢ ಕುಂಚ’. ಇದನ್ನು ಗುರುತಿಸುವ ಜರೂರರತ್ತಿದೆ. ಎಂ.ಎಫ್.ಹುಸೇನ್, ಎಸ್ ಎಚ್.ರಜಾ, ಹಾಗೂ ತಯ್ಯಬ್ ಮೆಹ್ತಾ ಅವರ ಕಲಾಭಾಷೆಯಿದ್ದಂತೆ ತಂದೆಯವರೂ ತಮ್ಮದೇ ಒಂದು ವಿಶಿಷ್ಟ ಕಲಾಭಾಷೆಯನ್ನು ನಿರ್ಮಿಸಿಕೊಂಡರು. ಪಾಟನಗಢದಿಂದ ಪಯಣಿಸಿದ ಈ ಕಲೆ ಇಂದು ವಿಶ್ವಮಟ್ಟವನ್ನು ಮುಟ್ಟಿದೆ. 2001ರಲ್ಲಿ ಅವರ ಅಕಾಲಿಕ ಮರಣದ 25 ವರ್ಷಗಳ ತರುವಾಯ ಅವರ ಕಲೆಯನ್ನು ಗುರುತಿಸಲಾಗಿದೆ.

18 ಕೋಟಿ ರುಪಾಯಿ ಬೆಲೆಯ ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಭೂಮಿ ತಾಯಿಯೇ ಜೀವನದ ಆಧಾರ, ಇದರಿಂದಲೇ ಬದುಕು ಅರಳಿ ಬೆಳೆಯುತ್ತದೆ ಎಂದು ಮಯಂಕ್ ವಿವರಿಸಿದ್ದಾರೆ.

ಇದೇ ಹರಾಜಿನಲ್ಲಿ ಜನಗಢ ಸಿಂಗ್ ಶ್ಯಾಮ್ ಅವರ ಮತ್ತೊಂದು ಚಿತ್ರಕಲಾಕೃತಿ 4.55 ಕೋಟಿ ರುಪಾಯಿಗೆ ಬಿಕರಿಯಾಯಿತು. ಐದೇ ದಿನಗಳ ಅಂತರದಲ್ಲಿ ಮೇಲ್ಕಂಡ ಹೆಸರಿಲ್ಲದ ಕಲಾಕೃತಿ 18 ಕೋಟಿ ರುಪಾಯಿಯ ದಾಖಲೆ ಸ್ಥಾಪಿಸಿತು.

91 ಇಂಚು ಉದ್ದ ಮತ್ತು 69 ಇಂಚು ಅಗಲದ ಈ ಅಕ್ರಿಲಿಕ್ ಚಿತ್ರವು ಕ್ಯಾನ್ವಾಸ್ ಮೇಲೆ ರಚಿಸಿರುವ ಕಲಾಕೃತಿ. ಮರದ ಮೇಲೆ ಹಾವುಗಳು ಮತ್ತು ಪಕ್ಷಿಗಳಿಂದ ಸುತ್ತುವರಿದಿರುವ ಆಧ್ಯಾತ್ಮಿಕ ವ್ಯಕ್ತಿಯೊಬ್ಬರ ಚಿತ್ರಣದ ಈ ಕಲಾಕೃತಿಗೆ 4 ರಿಂದ 5 ಕೋಟಿ ಬೆಲೆ ನಿಗದಿ ಮಾಡಲಾಗಿತ್ತು.

ಈ ಕಲಾಕೃತಿಯನ್ನು ಖರೀದಿಸಲು ಇಬ್ಬರು ಆಸಕ್ತ ಖರೀದಿದಾರರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಪ್ರತಿ ಹೊಸ ಬಿಡ್‌ನೊಂದಿಗೆ ಕಲಾಕೃತಿಯ ಬೆಲೆ ಒಂದು ಕೋಟಿ ರೂಪಾಯಿಯಷ್ಟು ಏರುತ್ತಲೇ ಹೋಯಿತು. ಅಂತಿಮವಾಗಿ, 18 ಕೋಟಿ ರೂಪಾಯಿಯ ಬಿಡ್‌ನಲ್ಲಿ ಒಬ್ಬರು ಹಿಂದೆ ಸರಿದಾಗ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿತು.

ಜನಗಢ್ ಸಿಂಗ್ ಶ್ಯಾಮ್  1962ರಲ್ಲಿ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯ ಪಾಟನ್‌ಗಢ್ ಗ್ರಾಮದಲ್ಲಿ ಜನಿಸಿದರು. ತಮ್ಮ ಗ್ರಾಮದ ಮನೆಗಳ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸುವ ಮೂಲಕ ಕಲಾ ಜಗತ್ತಿನಲ್ಲಿ ಅವರ ಪಯಣ ಶುರುವಾಗಿತ್ತು.

ಪ್ರಾಣಿಗಳು, ಮರಗಳು ಮತ್ತು ಪ್ರಕೃತಿಯ ಇತರ ರೂಪಗಳು ಜನಗಢ್ ಅವರ ಕಲಾಕೃತಿಗಳಲ್ಲಿ ಪದೇಪದೇ ಕಾಣಿಸಿಕೊಳ್ಳುತ್ತಿದ್ದವು. ಅವರು ಬಿಡಿಸುತ್ತಿದ್ದ ಚಿತ್ರಗಳಲ್ಲಿ ದಟ್ಟವಾದ ಚುಕ್ಕೆಗಳು ಮತ್ತು ರೇಖೆಗಳನ್ನು ಬಳಸಲಾಗುತ್ತಿತ್ತು. ಕಾಲಕ್ರಮೇಣ ಅವರ ಈ ವಿಶಿಷ್ಟ ಚಿತ್ರಕಲಾ ಶೈಲಿಯು ‘ಜನಗಢ್ ಕಲಂ’ ಎಂದೇ ಪ್ರಸಿದ್ಧಿಯಾಯಿತು.

2001ರಲ್ಲಿ ಕಲಾವಿದರ ವಸತಿ ಕಾರ್ಯಕ್ರಮದ ನಿಮಿತ್ತ ಜಪಾನ್‌ಗೆ ತೆರಳಿದ್ದ ಅವರು ಅಲ್ಲಿಯೇ ನಿಧನರಾದರು.

ಪಂಡೋಲ್ ಗ್ಯಾಲರಿಯಲ್ಲಿ ನಡೆದ ಇದೇ ಹರಾಜಿನಲ್ಲಿ ಜನಗಢ್ ಸಿಂಗ್ ಶ್ಯಾಮ್ ಅವರ ಇತರ ಮೂರು ಕಲಾಕೃತಿಗಳೂ ಅಂದಾಜು ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿವೆ.

ಇದೇ ಹರಾಜಿನಲ್ಲಿ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ಅವರ ‘ರೆಡ್ ಗರ್ಲ್’ ಕಲಾಕೃತಿಯು ಬರೋಬ್ಬರಿ 65 ಕೋಟಿ ರೂಪಾಯಿಗೆ ಮಾರಾಟವಾಯಿತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಮಾನ್ಯರಿಗೆ ಮತ್ತೆ ‘ಇಎಂಐ’ ಬರೆ: ರೆಪೊ ದರ ಶೇ. 0.25ರಷ್ಟು ಹೆಚ್ಚಳಕ್ಕೆ ಆರ್‌ಬಿಐ ಒಲವು

ದೇಶದಲ್ಲಿ ಏರಿಕೆಯಾಗುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)...

ಯುಪಿ ಚುನಾವಣೆ | ಕಾಂಗ್ರೆಸ್‌ಗೆ ಫಲ ನೀಡುವುದೇ ಬ್ರಾಹ್ಮಣ-ಮುಸ್ಲಿಂ ಸಮೀಕರಣ

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೆ...

ಕಗ್ಗತ್ತಲು, ಅಪರಾಧಗಳ ತಾಣವಾಯ್ತಾ ದೆಹಲಿಯ ಪಾರ್ಕ್‌ಗಳು; 736ರ ಪೈಕಿ 16 ಉದ್ಯಾನಗಳಲ್ಲಷ್ಟೇ ಸಿಸಿಟಿವಿ ಕಣ್ಗಾವಲು!

ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ನಿರ್ವಹಿಸುವ ಒಟ್ಟು 736 ಉದ್ಯಾನವನಗಳ ಪೈಕಿ...