ಇನ್ಮುಂದೆ ಪ್ರತಿ 13 ನಿಮಿಷಗಳಿಗೊಮ್ಮೆ ಚಲಿಸಲಿವೆ ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲುಗಳು

Date:

ಮಂಗಳವಾರದಿಂದ (ಡಿಸೆಂಬರ್ 23) ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲುಗಳು ಸೋಮವಾರದಿಂದ ಶನಿವಾರದವರೆಗೆ ಜನದಟ್ಟಣೆ ಅಧಿಕವಾಗಿರುವ ಸಮಯದಲ್ಲಿ ಪ್ರತಿ 13 ನಿಮಿಷಗಳಿಗೊಮ್ಮೆ ಚಲಿಸಲಿವೆ. ಆರನೇ ರೈಲು ಈ ಮಾರ್ಗದಲ್ಲಿ ಆರಂಭವಾದ ಕಾರಣದಿಂದಾಗಿ ಪ್ರಯಾಣಿಕರ ಕಾಯುವಿಕೆ ಅವಧಿ ಕಡಿಮೆಯಾಗುತ್ತಿದೆ.

- Advertisement -

ಭಾನುವಾರ ಮಾತ್ರ ಜನದಟ್ಟಣೆ ಅಧಿಕವಾಗಿರುವ ಸಮಯದಲ್ಲಿ 15 ನಿಮಿಷ ರೈಲು ಈ ಮಾರ್ಗದಲ್ಲಿ ಸಾಗಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಪ್ರಕಾರ, ಎರಡೂ ಟರ್ಮಿನಲ್ ನಿಲ್ದಾಣಗಳಿಂದ -ಆರ್‌ವಿ ರೋಡ್ ಮತ್ತು ಬೊಮ್ಮಸಂದ್ರದಿಂದ ಮೊದಲ ಮತ್ತು ಕೊನೆಯ ರೈಲು ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇದನ್ನು ಓದಿದ್ದೀರಾ? ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಇಂದಿನಿಂದ ಆರಂಭ

ತುರ್ತು ಪರಿಸ್ಥಿತಿಗಳಿಗಾಗಿ ಒಂದು ರೈಲನ್ನು ಇರಿಸಲಾಗುತ್ತಿದೆ. ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ಆಗಸ್ಟ್ 11ರ ಬೆಳಿಗ್ಗೆಯಿಂದ ಪ್ರಾರಂಭವಾಗಿದೆ. ಈ ಮಾರ್ಗ ಆರಂಭವಾದ ಬಳಿಕ ದೈನಂದಿನ ಪ್ರಯಾಣಿಕರ ಸಂಖ್ಯೆ ಒಂದು ಮಿಲಿಯನ್‌ಗಿಂತಲೂ ಅಧಿಕವಾಗಿತ್ತು.

ಹಳದಿ ಮಾರ್ಗದಲ್ಲಿ ಕೇವಲ 3 ರೈಲುಗಳಿದ್ದ ಕಾರಣದಿಂದಾಗಿ ಪ್ರತಿ 25-30 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸುತ್ತಿದ್ದವು. ಇದರಿಂದಾಗಿ ಪ್ರಯಾಣಿಕರು ಒಂದು ರೈಲು ತಪ್ಪಿದರೂ ಮತ್ತೆ 30 ನಿಮಿಷ ಕಾಯಬೇಕಾಗಿತ್ತು.

ಇದೀಗ ಹೊಸದಾಗಿ ಆರನೇ ರೈಲು ಆರಂಭವಾಗಲಿರುವ ಕಾರಣ ಕಾಯುವ ಅವಧಿ ಕಡಿಮೆಯಾಗಲಿದೆ. 2026ರ ಜನವರಿ ವೇಳೆಗೆ ಇನ್ನೂ ಎರಡು ರೈಲುಗಳನ್ನು ಸೇರಿಸಲು ಯೋಜಿಸಲಾಗಿದೆ. ವರ್ಷದ ಅಂತ್ಯದ ವೇಳೆಗೆ ಕಾಯುವ ಅವಧಿಯನ್ನು 10 ನಿಮಿಷಕ್ಕೆ ತಗ್ಗಿಸುವ ಗುರಿಯನ್ನು BMRCL ಹೊಂದಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಡದಿ ಟೌನ್‌ಶಿಪ್ ವಿರುದ್ಧ ಹೋರಾಟ: ಉಪವಾಸನಿರತ ಮೂವರು ರೈತರು ತೀವ್ರ ಅಸ್ವಸ್ಥ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ – ಬಿಡದಿ ಟೌನ್‌ಶಿಪ್‌) ಯೋಜನೆ...

ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ: ಸೆ. 23ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ BWSSB ಕಾರ್ಮಿಕರ ಬೃಹತ್ ಹೋರಾಟ

ಬೆಂಗಳೂರು ನಗರದ ಕೋಟ್ಯಂತರ ಜನರಿಗೆ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ...

ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ: ವಾಹನ ಸವಾರರ ಪರದಾಟ

ರಾಜಧಾನಿ ಬೆಂಗಳೂರಿನ ವಿವಿಧೆಡೆ ಸೋಮವಾರ ಸಂಜೆ ಏಕಾಏಕಿ ಹಠಾತ್‌ ಧಾರಾಕಾರ ಮಳೆಯಾಗಿದ್ದು,...

ಹವಾಮಾನ | ಸೆ. 21, 22ರಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದೆ. ಭಾರತೀಯ ಹವಾಮಾನ ಇಲಾಖೆಯ (IMD) ಬೆಂಗಳೂರು...