ಅಕ್ರಮ ಕಟ್ಟಡಗಳ ವಿರುದ್ಧ ಬೆಂಗಳೂರು ಉತ್ತರ ಪಾಲಿಕೆ ಕ್ರಮ: ಯಲಹಂಕದಲ್ಲಿ ಕಟ್ಟಡ ತೆರವು

Date:

ಸೆಟ್‌ಬ್ಯಾಕ್ ನಿಯಮಗಳನ್ನು ಉಲ್ಲಂಘಿಸಿ ಮತ್ತು ಪಾಲಿಕೆಯಿಂದ ಯಾವುದೇ ರೀತಿಯ ಪ್ಲಾನ್ ಮಂಜೂರಾತಿ ಪಡೆಯದೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡದ ವಿರುದ್ಧ ಬೆಂಗಳೂರು ಉತ್ತರ ನಗರ ಪಾಲಿಕೆ (ಬಿಎನ್‌ಸಿಸಿ) ತೆರವು ಕಾರ್ಯಾಚರಣೆ ಆರಂಭಿಸಿದೆ. ಯಲಹಂಕದ ಭದ್ರಾಪ್ಪ ಲೇಔಟ್‌ನಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಕಟ್ಟಡಗಳನ್ನು ಉರುಳಿಸುತ್ತಿದೆ.

- Advertisement -

ಕಟ್ಟಡ ಮಾಲೀಕರು ತೆರವು ಕಾರ್ಯಾಚರಣೆಗೆ ತಡೆ ತರಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಪಾಲಿಕೆಯ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ಬೆನ್ನಲ್ಲೇ ಪಾಲಿಕೆ ಕಾರ್ಯಾಚರಣೆ ಆರಂಭಿಸಿದೆ. ಸ್ವತಃ ಮಾಲೀಕರೇ ತಮ್ಮ ಕಟ್ಟಡವನ್ನು ಕೆಡುವುವಂತೆ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗೆಲ್ಲಬಹುದಾಗಿದ್ದ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಲ್ಟಿ ಹೊಡೆದದ್ದು...

ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆದ ನಾಲ್ಕು ಎಮ್ಮೆಲ್ಸಿ ಸ್ಥಾನಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಂದೇ ಒಂದು ಸೀಟನ್ನೂ ಪಡೆಯಲಾಗದೆ ಮುಗ್ಗರಿಸಿರುವುದು ರಾಜಕೀಯ ಪಡಸಾಲೆಯಲ್ಲಿ ನಾನಾ ನಮೂನೆಯ ವ್ಯಾಖ್ಯಾನ-ವಿಶ್ಲೇಷಣೆ ಹುಟ್ಟುಹಾಕಿದೆ....

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ಧನಲಕ್ಷ್ಮಿ ರೆಡ್ಡಿ ಎಂಬುವರಿಗೆ ಸೇರಿದ 30×40 ಅಳತೆಯ ನಿವೇಶನದಲ್ಲಿ ಸ್ಟಿಲ್ಟ್ ಜೊತೆಗೆ ಮೂರು ಮಹಡಿಗಳ ಅಕ್ರಮ ಕಟ್ಟಡವನ್ನು ನಿರ್ಮಿಸಲಾಗಿತ್ತು. ಬಿಬಿಎಂಪಿ ಕಾಯ್ದೆ ಮತ್ತು ಪಾಲಿಕೆಯ ಬೈಲಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ನಿರ್ಮಾಣ ಮಾಡಲಾಗಿತ್ತು. ಈ ಹಿಂದೆ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ಪರಿಶೀಲನೆ ನಡೆಸಿದ್ದ ಪಾಲಿಕೆ ಅಧಿಕಾರಿಗಳು, ಅಕ್ರಮ ನಿರ್ಮಾಣವನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಮಾಲೀಕರಿಗೆ 15 ದಿನಗಳ ಕಾಲಾವಕಾಶ ನೀಡಿದ್ದರು. ತಪ್ಪಿದ್ದಲ್ಲಿ ಪಾಲಿಕೆಯೇ ಕಟ್ಟಡವನ್ನು ಕೆಡವಲು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.

Advertisements

ಇದೇ ಪ್ರಕರಣದಲ್ಲಿ 4 ಮತ್ತು 5ನೇ ಪ್ರತಿವಾದಿಗಳಾಗಿದ್ದ ಬೆಸ್ಕಾಂ ಮತ್ತು ಜಲಮಂಡಳಿಗೆ ಕಟ್ಟಡದ ವಿದ್ಯುತ್ ಮತ್ತು ನೀರು ಸರಬರಾಜು ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸುವಂತೆ ನಿರ್ದೇಶಿಸಲಾಗಿತ್ತು.

ಈ ಬಗ್ಗೆ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ್ದ ದೂರುದಾರರು ಕ್ರಮ ಕೈಗೊಳ್ಳುವಲ್ಲಿಯ ವಿಳಂಬವನ್ನು ಪ್ರಶ್ನಿಸಿದ್ದರು. ನ್ಯಾಯಾಂಗ ನಿಂದನೆಗೆ ಸಮವೆಂದು ವಾದಿಸಿದ್ದರು.

ಪ್ರಕರಣವು ನ್ಯಾಯಾಂಗ ನಿಂದನೆಗೆ ತಿರುಗಿದ ಕಾರಣ ಅಧಿಕಾರಿಗಳು ತ್ವರಿತ ಕ್ರಮಕ್ಕೆ ಮುಂದಾಗಿದ್ದರು. ನ್ಯಾಯಾಲಯದ ಸೂಚನೆಯಂತೆ ಪಾಲಿಕೆಗೆ ಹಣ ಜಮೆ ಮಾಡುವ ಅಥವಾ ತೆರವುಗೊಳಿಸುವ ಆಯ್ಕೆಯನ್ನು ಮಾಲೀಕರಿಗೆ ನೀಡಲಾಗಿತ್ತು. ಅಂತಿಮವಾಗಿ, ಅಕ್ರಮ ಭಾಗವನ್ನು ತೆರವುಗೊಳಿಸಲು ಮಾಲೀಕರಿಗೆ ನಿರ್ದೇಶಿಸಲಾಗಿತ್ತು.

ಇದೀಗ, ಕಳೆದ ಮೂರು ದಿನಗಳಿಂದ ಮಾಲೀಕರೇ ಸ್ವತಃ ಅಕ್ರಮ ನಿರ್ಮಾಣವನ್ನು ತೆರವುಗೊಳಿಸುತ್ತಿದ್ದು, ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕಟ್ಟಡವು ಈಗ ಧರೆಗುರುಳುತ್ತಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ ನಕ್ಷೆಯನ್ನೇ ಬದಲಿಸಿದ ಐತಿಹಾಸಿಕ ದಿನ!

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ...

ನಾಪತ್ತೆಯಾಗಿದ್ದ ದೊಡ್ಡಬಳ್ಳಾಪುರದ ದಲಿತ ಮುಖಂಡ ಸಿ. ಗುರುರಾಜಪ್ಪ ಧರ್ಮಸ್ಥಳದಲ್ಲಿ ಶವವಾಗಿ ಪತ್ತೆ

​ದೊಡ್ಡಬಳ್ಳಾಪುರದ ಕಚೇರಿಪಾಳ್ಯದ ನಿವಾಸಿ, ದಲಿತ ಹಾಗೂ ಪ್ರಗತಿಪರ ಹೋರಾಟಗಾರ ಸಿ. ಗುರುರಾಜಪ್ಪ...

ರಸ್ತೆಯೋ, ಕೆಸರುಗದ್ದೆಯೋ? ಗುಂಡಿ ಬಿದ್ದ ರಸ್ತೆಯಲ್ಲಿ ಕುಚಿಗೇರಿ ಗ್ರಾಮಸ್ಥರ ನಿತ್ಯ ಯಾತನೆ

ಮಲೆನಾಡಿನ ಹಸಿರು ಸೌಂದರ್ಯಕ್ಕೆ ಮನಸೋತು ಪ್ರವಾಸಿಗರು ತಂಡೋಪತಂಡವಾಗಿ ಹರಿದುಬರುತ್ತಿದ್ದರೆ, ಇತ್ತ ಸೌಂದರ್ಯದ...

ಕನ್ನಡಿಗರಿಗೆ ಉದ್ಯೋಗ ತಾರತಮ್ಯ: ಖಾಸಗಿ ಸಂಸ್ಥೆಗಳಿಗೆ ಸಿಎಂ ಎಚ್ಚರಿಕೆ, ಕನ್ನಡಪರ ಸಂಘಟನೆಗಳಿಗೆ ಶಾಂತಿ ಕಾಪಾಡಲು ಮನವಿ

ಐಟಿ-ಬಿಟಿ ಕಂಪನಿಗಳಲ್ಲಿ ನೇಮಕಾತಿ ವೇಳೆ ಸ್ಥಳೀಯ ಕನ್ನಡಿಗರಿಗೆ ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡಲಾಗುತ್ತಿದೆ...