‘ನಮ್ಮ ಬರೆಹಗಳನ್ನು ಸಾಬರ ಸಾಹಿತ್ಯ ಎಂದೆಲ್ಲ ಗೇಲಿ ಮಾಡುತ್ತಿದ್ದರು’: ಬಾನು ಮುಷ್ತಾಕ್

Date:

ʼಯುದ್ಧ ಎಂದರೆ ನಮಗೆ ಗ್ಯಾಸ್ ಮಾತ್ರವಲ್ಲ, ಐದು ವರ್ಷದ ಮಗುವಿಗೆ ಗುಂಡುಹೊಡೆದ ಘೋರಕೃತ್ಯ ಹುಟ್ಟುಹಾಕುವ ಯಾತನೆ, ನಮ್ಮ ಹೃದಯ ಕಲ್ಲು ಮಾಡಿಕೊಂಡರೂ ಅದು ದ್ರವಿಸುತ್ತದೆʼ ಎಂದು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಮಮ್ಮಲ ಮರುಗಿದರು.

- Advertisement -

ಕನ್ನಡ ಸಾಹಿತ್ಯ ಲೋಕದ ಹೆಮ್ಮೆಯ ಧ್ವನಿ, ಇತ್ತೀಚೆಗಷ್ಟೇ ವಿಶ್ವಮಾನ್ಯ ‘ಬೂಕರ್ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕನ್ನಡದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೇರಿಸಿದ ಲೇಖಕಿ ಬಾನು ಮುಷ್ತಾಕ್ ಅವರೊಂದಿಗೆ ʼನಾವೆದ್ದು ನಿಲ್ಲದಿದ್ದರೆ-ಕರ್ನಾಟಕʼ ಮತ್ತು ಕರ್ನಾಟಕ ಲೇಖಕಿಯರ ಸಂಘದಿಂದ ಬೆಂಗಳೂರಿನ ಸುಬ್ಬಯ್ಯ ವೃತ್ತದ ಬಳಿಯಿರುವ ಸೌಹಾರ್ದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ʼಅಕ್ಷರ ಮತ್ತು ಆಶಯಗಳ ಪ್ರತಿಬಿಂಬ ಲೇಖಕಿ ಬಾನು ಮುಷ್ತಾಕ್ ಅವರೊಂದಿಗೆ ಆಪ್ತ ಸಂವಾದʼ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಸಂವಾದವನ್ನು ನಡೆಸಿಕೊಟ್ಟ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಆರ್ ಸುನಂದಮ್ಮ ಮತ್ತು ನಾವೆದ್ದು ನಿಲ್ಲದಿದ್ದರೆ ವೇದಿಕೆಯ ಪ್ರತಿನಿಧಿ, ಚಿಂತಕಿ ಅನಿತಾ ಚೆರಿಯಾರವರು ಬಾನು ಮುಷ್ತಾಕ್ ಅವರ ಕಥೆಗಳಿಂದ ಆಯ್ದ ಸಾಂದರ್ಭಿಕ ಪ್ರಶ್ನೆಗಳನ್ನು ಮತ್ತು ಸಭೆಯಲ್ಲಿ ಪಾಲ್ಗೊಂಡಿದ್ದವರಿಂದ ಹೊರಹೊಮ್ಮಿದ ಪ್ರಶ್ನೆಗಳನ್ನು ಇಟ್ಟುಕೊಂಡು ಲೇಖಕಿ ಬಾನು ಅವರೊಂದಿಗೆ ಸಂವಾದ ನಡೆಸಿದರು.

ಡಾ.ಆರ್ ಸುನಂದಮ್ಮ ಅವರು “ಸಹೋದರಿತ್ವದ ಕುರಿತಾಗಿ ನಿಮ್ಮ ಕಥೆಗಳು ವಿಶಿಷ್ಟವಾದ ಮಾದರಿಗಳನ್ನು ಕಟ್ಟಿಕೊಡುತ್ತವೆ, ಈ ಬಗ್ಗೆ ಏನು ಹೇಳುತ್ತೀರಿ?” ಎಂದು ಕೇಳಿದರು.

ಬಾನುಮುಷ್ತಾಕ್‌ : “ಸಹೋದರಿತ್ವ ನನಗೆ ಅತ್ಯಂತ ಪ್ರೀತಿಯ ಪರಿಕಲ್ಪನೆ, ಅದು ನಮ್ಮೊಳಗೆ ಸಹಜವಾಗಿರುತ್ತದೆ. ಆದರೆ ಜಗತ್ತಿನ ಬೇರೆಬೇರೆ ಒತ್ತಡಗಳ ನಡುವೆ ಮಸುಕಾಗಿರುತ್ತದೆ. ಆದರೂ ಕೂಡ ಸಂದರ್ಭ ಬಂದಾಗ ಅದು ಪುಟಿದೇಳುತ್ತದೆಂಬುದನ್ನು ನಾನು ಕಥೆಗಳ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ. ಕರಿನಾಗರಗಳು ಕಥೆಯಲ್ಲಿ ಪ್ರಧಾನ ಪಾತ್ರವಾದ ಮಹಿಳೆ ಕೇವಲ ಹೆಣ್ಣುಮಕ್ಕಳನ್ನೇ ಹಡೆದಳೆಂಬ ಕಾರಣಕ್ಕೆ ಆಕೆಯ ಗಂಡ ಮತ್ತು ಪಿತೃಪ್ರಧಾನವಾದ ಇಡೀ ಸಮಾಜದಿಂದ ತಿರಸ್ಕೃತಳಾಗಿರುತ್ತಾಳೆ. ಅದೆಲ್ಲವನ್ನೂ ಹೇಗೋ ಸಹಿಸಿಕೊಳ್ಳುವ ಅವಳು ಸಿಡಿದೇಳುವುದು ಯಾವ ಮಗಳಿಗಾಗಿ ತಾನು ಹೊಡೆದಾಡುತ್ತಿರುತ್ತಾಳೋ ಆ ಮಗು ಸತ್ತುಹೋದಾಗ. ಆಕೆಯ ನೋವಿನಲ್ಲಿ ಇಡೀ ಕೇರಿಯ ಹೆಣ್ಣುಮಕ್ಕಳು ಭಾಗಿಗಳಾಗುತ್ತಾರೆ, ಪುರುಷಪ್ರಧಾನ ಮನಸ್ಥಿತಿನ್ನೇ ಪ್ರತಿಪಾದಿಸುವಂಥವರಾಗಿದ್ದ ಮುತವಲ್ಲಿಯ ಆಜ್ಞೆಯನ್ನೂ ಮೀರಿ, ಆತನದ್ದೇ ಹೆಂಡತಿ ಸಾವಿಗೆ ಬೆರೆದಿದ್ದವರಿಗೆ ಊಟ ಬಡಿಸುತ್ತಾಳೆ. ಹೀಗೆ ಸಣ್ಣಸಣ್ಣ ಮಟ್ಟದಲ್ಲಿ ಬೆಸೆದುಕೊಳ್ಳುವ ಸಾಮಾನ್ಯ ಮಹಿಳೆಯರ ನಡುವಿನ ಸಹೋದರಿತ್ವ ಅತ್ಯಂತ ಸುಂದರವಾದುದು” ಎಂದರು.

ಬರಹಗಾರ್ತಿ, ಲೇಖಕಿ ಅನಿತಾ ಚೆರಿಯಾ : ನೀವು ಆವರೆಗೆ ಕನ್ನಡದ ಸಾಹಿತ್ಯ ಲೋಕದಲ್ಲಿ ಹೆಚ್ಚಾಗಿ ಕಂಡುಬರದಿದ್ದ ಸಾಮಾನ್ಯ ಮಹಿಳೆಯರನ್ನು, ದುಡಿಯುವ ವರ್ಗದ ಪಾತ್ರಗಳನ್ನು, ಮುಸ್ಲಿಂ ಸಮುದಾಯದ ಕಥನಗಳನ್ನು ಕಟ್ಟಿದಾಗ, ಸಾಕಷ್ಟು ವಿರೋಧವೂ ಇದ್ದಿರಬಹುದು. ಆದರೂ ನಿಮಗೆ ಬಂಡಾಯ ಸಾಹಿತ್ಯ ಸಂಘಟನೆ, ಅನೇಕ ಚಳವಳಿಗಳು ಮೊದಲಾಗಿ ಬೆಂಬಲವೂ ಇತ್ತು. ಇಂದಿನ ಸಂದರ್ಭ ಅದಕ್ಕಿಂತ ಭಿನ್ನ, ಈಗಿನ ಸನ್ನಿವೇಶದಲ್ಲಿ ಇಂತಹ ಪಾತ್ರಗಳ ಸೃಷ್ಟಿಯ ಬಗ್ಗೆ ನಾವು ಏನು ಹೇಳಬಹುದು?

ಸಂವಾದ ಕಾರ್ಯಕ್ರಮ 1

ಬಾನು ಮುಷ್ತಾಕ್‌ : “ನಾನು ಬರೆದ ಸಂದರ್ಭದಲ್ಲಿದ್ದ ಚಳವಳಿಗಳ ರಭಸ; ಇಂದು ಇಲ್ಲ ಎಂಬುದು ನಿಜ. ಮುಂದೆ ಅಂತಹ ವಾತಾವರಣ ಮತ್ತೆ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಇಂದು ಸವಾಲುಗಳೂ ಹೆಚ್ಚು. ಆದರೆ ಅಂದು ಸವಾಲುಗಳು ಇರಲಿಲ್ಲ ಎಂಬಲ್ಲ, ನಮ್ಮ ಬರಹಗಳನ್ನು ʼಅಡಿಗೆ ಮನೆ ಸಾಹಿತ್ಯ, ಸಾಬರ ಸಾಹಿತ್ಯʼ ಎಂಬೆಲ್ಲ ಮಾತುಗಳನ್ನು ಬಳಸಿ ಲೇವಡಿ ಮಾಡಿದ ಘಟನೆಗಳು ಸಾಹಿತ್ಯ ಸಮ್ಮೇಳನಗಳಲ್ಲೂ ನಡೆದಿದ್ದವು. ಮಹಿಳೆಯರ ಬರಹಗಳನ್ನು ಗಂಭೀರವಾಗಿ ವಿಮರ್ಷೆ ಮಾಡುವ ಪ್ರಯತ್ನವೂ ನಡೆಯುತ್ತಿರಲಿಲ್ಲ. ಅದಲ್ಲದೆ ನಮಗೂ ಗೊಂದಲ, ನಾನು ʼಕಮಲ-ಬಸವʼರ ಬಗ್ಗೆ ಬರೆಯಬೇಕೋ, ʼರಜಿಯಾ-ಅಬ್ದುಲ್ಲʼರ ಬಗ್ಗೆ ಬರೆಯಬೇಕೋ ಎನ್ನುವಂತಹ ಸಂದರ್ಭದಲ್ಲಿ ನನಗೆ ಒತ್ತಾಸೆ ನೀಡಿದ್ದು ಬಂಡಾಯ ಸಾಹಿತ್ಯದ ಹಿರಿಯರು ಮತ್ತು ಚಳವಳಿಗಳು. ಇಂದಿಗೂ ನೀವುಗಳೆಲ್ಲ ಮಾಡಿಕೊಂಡಿರುವ ʼನಾವೆದ್ದು ನಿಲ್ಲದಿದ್ದರೆʼ ಅಂತಹ ವೇದಿಕೆಗಳಿವೆ. ಆದರೆ, ನಾವುಗಳು ಹೇಗೆ ನಿಲ್ಲಬೇಕು, ಕೈಕೈ ಹಿಡಿದುಕೊಳ್ಳುವುದು ಹೇಗೆ? ಎಂಬುದನ್ನೆಲ್ಲ ನಾವುಗಳು ಆಲೋಚಿಸಿ ಕಲಿಯಬೇಕು” ಎಂದು ಸಲಹೆ ನೀಡಿದರು.

ಡಾ.ಸುನಂದಮ್ಮ : “ಪತ್ರಕರ್ತ, ಲೇಖಕ ಲಂಕೇಶ್‌ ಅವರು, ನಿಮ್ಮ ಬರಹಗಳ ಬಗ್ಗೆ ʼಅಗ್ರಹಾರಗಳ ಕಾಫಿ, ದುಂಡುಮಲ್ಲಿಗೆ ವಾಸನೆಯ ಕಥಾಲೋಕದೊಳಕ್ಕೆ ಬೆಳ್ಳುಳ್ಳಿ ಶುಂಠಿಯ ಮಸಾಲೆ ಪರಿಮಳವನ್ನು ಗಾಢವಾಗಿ ಹೊತ್ತು ತಂದವರು ಬಾನುʼ ಎಂದಿದ್ದರು ಎಂಬುದನ್ನು ನೆನಪಿಸಿ, ಈಗಿನ ವಾತಾವರಣ ಒಂದು ಸಮುದಾಯವನ್ನು ಅಪರಾಧೀಕರಣ ಮಾಡುತ್ತಿರುವ ಸಂದರ್ಭದಲ್ಲಿ ನಮ್ಮ ಪ್ರತಿಕ್ರಿಯೆ ಏನಿರಬೇಕು? ಎಂಬಂತೆ ಪ್ರೇಕ್ಷಕರಿಂದಲೂ ಬಂದ ಪ್ರಶ್ನೆ “ಇಂದಿನ ಯುವ ಸಮುದಾಯ ದ್ವೇಷದ ಕಡೆಗೆ ಹೆಚ್ಚು ಆಕರ್ಷಿತವಾಗುತ್ತಿದೆ, ಇದಕ್ಕೇನು ಪರಿಹಾರ?

ಬಾನು ಮುಷ್ತಾಕ್ : ಇದು ಕೇವಲ ದ್ವೇಷದ ಕಡೆಗಿನ ಆಕರ್ಷಣೆಯಲ್ಲ, ಸರ್ಕಾರಿ ಕೃಪಾಪೋಷಿತ ದ್ವೇಷವನ್ನು ಉದ್ದೇಶಪೂರ್ವಕವಾಗಿ ಯುವಜನರ ಎದೆಗಳೊಳಕ್ಕೆ ತುಂಬುತ್ತಿರುವ ಕೆಲಸ. ಇದು ಕೇವಲ ಸರ್ಕಾರದಿಂದ ನಡೆಯುತ್ತಿರುವುದಷ್ಟೇ ಅಲ್ಲ, ಪ್ರತಿಯೊಂದು ಧರ್ಮ, ಪ್ರತಿ ಸಮುದಾಯದ ಮುಂದಾಳುಗಳೂ ತಮ್ಮ ತಮ್ಮ ಧರ್ಮಗಳ ಹಿರಿಯರು ಪ್ರತಿಪಾದಿಸಿದ್ದ ಜೀವಪರ ವಿಷಯಗಳನ್ನು ಬಿಟ್ಟು, ಕೇವಲ ಕಟ್ಟುಪಾಡುಗಳನ್ನು ಹೇರುವ ಕೆಲಸದಲ್ಲಿ ಮುಳುಗಿದ್ದಾರೆ. ನಮ್ಮಂತಹವರೂ ಕೂಡಾ ಪಕ್ಕದಲ್ಲಿ ಮುಸ್ಲಿಮರು ಧರಿಸಿದಂತೆ ಉಡುಪು ತೊಟ್ಟು, ಗಡ್ಡ ಬಿಟ್ಟು, ಪಗಡಿ ಧರಿಸಿದ ಗಂಡಸೊಬ್ಬ ಪಕ್ಕದಲ್ಲಿ ಕೂತರೆ ಅವರನ್ನು ಅನುಮಾನದಿಂದ ನೋಡುವಷ್ಟರ ಮಟ್ಟಿಗೆ ಪೂರ್ವಾಗ್ರಹ ಪೀಡಿತರಾಗಿದ್ದೇವೆ ಎಂಬುದು ಆತಂಕ ಮೂಡಿಸುತ್ತದೆ” ಎಂದು ಕಳವಳಪಟ್ಟರು.

ಮಹಿಳಾ ಚಳವಳಿಯೊಳಗೆ ಐಕ್ಯತೆ ಮತ್ತು ವೈಚಾರಿಕತೆ ಬಗ್ಗೆ ಲೇಖಕಿ ಚಂಪಾವತಿ ಕೇಳಿದ ಪ್ರಶ್ನೆಗೆ, “ಮೊದಲಿನಿಂದಲೂ ಕೇವಲ ಗುಲಾಬಿ ಹೂಗಳ ಬಗ್ಗೆ ಬರೆಯುವವರೂ ಇದ್ದಾರೆ, ಅವುಗಳ ಬಗ್ಗೆಯೂ ಬರೆಯುತ್ತ ಜನರ ನೋವಿಗೆ ಸ್ಪಂದಿಸುವ ಕಾವ್ಯವನ್ನು ಬರೆಯುವವರೂ ಇದ್ದಾರೆ. ಅದನ್ನು ನಾವು ನಿರ್ದೇಶಿಸಲು ಸಾಧ್ಯವಿಲ್ಲ. ನಾನು ಬಹಿಷ್ಕಾರಕ್ಕೆ ಗುರಿಯಾಗಿದ್ದಾಗ ಸಮಾಜದ ಟೀಕೆಗೆ ಬೆದರದೆ ನನ್ನ ಮಗಳು ʼಸೃಜನಶೀಳ ವ್ಯಕ್ತಿಗಳೆಲ್ಲರೂ ಹುಚ್ಚರಾಗಿರುತ್ತಾರೆ. ಹಾಗಿದ್ದರೆ ಮಾತ್ರ ಅವರು ಪರಿಣಾಮಕಾರಿಯಾಗಿ ಬರೆಯಲು ಸಾಧ್ಯʼ ಎಂದಿದ್ದಳು. ಹೀಗೆ ಸೃಜನಶೀಲತೆಯೂ ಸಮಾಜದ ರೂಢಿಗತ ಚೌಕಟ್ಟಿನೊಳಗೂ, ಬಂಡವಾಳಶಾಹಿಯ ನಿಯಂತ್ರಣಕ್ಕೂ ಒಳಪಟ್ಟಿರುವಂಥದ್ದೇ. ಅದರ ನಡುವೆಯೂ ಮಾನವೀಯತೆಯ ಹುಡುಕಾಟ ನಿಲ್ಲುವಂಥದ್ದಲ್ಲ“ ಎಂದರು.

ಮಹಿಳೆಯರ ಒಳಗಡೆಯೇ ಇರುವ ಪಿತೃಪ್ರಧಾನತೆಯ ಬಗ್ಗೆ ಮಾತನಾಡುತ್ತ, “ಜೈಲಿನಲ್ಲಿ ಜೀವಾವಧಿ ಕೈದಿಗಳಾಗಿರುವವರನ್ನು ಉಳಿದವರ ಉಸ್ತುವಾರಿಗೆ ನೇಮಿಸಿರುತ್ತಾರೆ. ಅವರು ಜೈಲಿನೊಳಗಿನ ನ್ಯಾಯ-ಅನ್ಯಾಯಗಳನ್ನು ಇತರ ಕೈದಿಗಳ ಮೇಲೆ ಹೇರುತ್ತಾರೆ. ಹಾಗೆಯೇ ಈ ಪಿತೃಪ್ರಧಾನ ವ್ಯವಸ್ಥೆ ಮಹಿಳೆಯರನ್ನೇ ಪಿತೃಪ್ರಧಾನ ವ್ಯವಸ್ಥೆಯ ಕಾವಲಿಗೆ ನಿಲ್ಲಿಸಿದೆ. ಇಂತಹ ಸವಾಲುಗಳನ್ನೂ ನಾವುಗಳು ಮೀರಬೇಕು. ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದು ಸತ್ಯವಲ್ಲ. ಆ ಮೌಲ್ಯಗಳು ನಮ್ಮೆಲ್ಲರ ಶತ್ರು” ಎಂದು ಹೇಳಿದರು.

ಹೋರಾಟಗಾರ್ತಿ ಮಧುಭೂಷಣ್‌ : “ಮುಸ್ಲಿಮ್ ಪುರುಷರನ್ನು ಒಳ್ಳೆಯವರು ಅಥವಾ ಕಡುಕ್ರೂರಿಗಳು ಎಂಬ ಕಪ್ಪು ಬಿಳುಪಿನ ಚಿತ್ರಣಕ್ಕೆ ಗುರಿಯಾದಂತೆಯೇ, ಮುಸ್ಲಿಂ ಮಹಿಳೆಯರೂ ಇಂತಹ ನರೇಟಿವ್ನ ಬಲಿಪಶುಗಳಾಗಿದ್ದಾರೆ. ಈಗ ನಡೆಯುತ್ತಿರುವ ಯುದ್ಧದಲ್ಲಿ ಇರಾನ್ ಮಹಿಳೆಯರು ಅನುಭವಿಸುತ್ತಿದ್ದ ದಬ್ಬಾಳಿಕೆಯನ್ನು ಮುಂದಿಟ್ಟು ಒಂದಿಡೀ ದೇಶವನ್ನು ನಾಶ ಮಾಡುತ್ತಿದ್ದಾರೆ, ಜಗತ್ತಿಗೇ ಬೆದರಿಕೆ ಒಡ್ಡಿದ್ದಾರೆ. ಇದರಲ್ಲಿ ಮಹಿಳೆಯರು ಎರಡೂ ದಿಕ್ಕಿನಿಂದ ಬಲಿಪಶುಗಳು ಇದಕ್ಕೆ ಏನು ಮಾಡುವುದು?

ಇದನ್ನೂ ಓದಿದ್ದೀರಾ? ಬಾಗಲಕೋಟೆ ಉಪಚುನಾವಣೆ: ಮರು ವಶಕ್ಕೆ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ

ಬಾನು ಮುಷ್ತಾಕ್ :‌ “ಈ ಪಿತೃಪ್ರಧಾನ ಜಗತ್ತು, ಆರಂಭದಲ್ಲಿ ತಮ್ಮ ಅನುಭವದಿಂದ ಗಳಿಸಿದ ಜ್ಞಾನದಿಂದ ವೈದ್ಯಕೀಯ ನೆರವನ್ನು ಮಹಿಳೆಯರು ಇತರರಿಗೆ ನೀಡುತ್ತಿದ್ದುದನ್ನು ತಡೆದು, ಅದು ಲಾಭದಾಯಕ ಎಂದು ಕಂಡಕೂಡಲೇ ಅದನ್ನು ಕಬ್ಜಾ ಮಾಡಿಕೊಂಡು, ವೈದ್ಯಕೀಯ ಜ್ಞಾನವನ್ನು ಪರಿಚಯಿಸಿದ ಮಹಿಳೆಯರನ್ನೇ ಮಾಟಗಾತಿಯರೆಂದು ಕಟ್ಟಿ ಸುಟ್ಟು ಕೊಂದ ಕಥೆಗಳನ್ನು ಮಧ್ಯಕಾಲೀನ ಯುಗದಲ್ಲಿ ಕಾಣುತ್ತವೆ. ಹೀಗೆ ಅವರ ಬಳಿ ಮಹಿಳೆಯರ ಕರ್ತೃತ್ವ ಶಕ್ತಿಯನ್ನು ನಿಯಂತ್ರಿಸುವ ತಂತ್ರಗಳಿವೆ. ಇದನ್ನೆಲ್ಲ ಎದುರಿಸಿ ನಮ್ಮ ಸಾಧ್ಯತೆಯನ್ನು ಶಕ್ತಿಯನ್ನು ರಿಕ್ಲೇಮ್ ಮಾಡಬೇಕು. ಯುದ್ಧವನ್ನೂ, ಯುದ್ಧದ ಹೆಸರಿನಲ್ಲಿ ಬಳಕೆಯಾಗುವುದನ್ನೂ ನಿಲ್ಲಿಸಬೇಕು. ಇಂದು ಕೌಟುಂಬಿಕ ಹಿಂಸೆಯ ವಿರುದ್ಧ ಮಹಿಳಾಪರ ಕಾನೂನು ಬಂದ ವಾತಾವರಣ ತಿರುವು ಮುರುವಾಗಿ, ಒಬ್ಬ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಕೋರ್ಟುಗಳು ಕೂಡಾ ʼಗಂಡನೆಂದರೆ ಎಟಿಎಂ ಅಲ್ಲʼ ಎಂದು ಹೇಳುವಂತಾಗಿರುವಾಗ, ನಮ್ಮ ಮುಂದಿನ ಕೆಲಸ ಇನ್ನಷ್ಟು ಹೆಚ್ಚಿದೆ” ಎಂದು ಹೇಳುತ್ತ “ಉತ್ತರದಾಯಿತ್ವ ಎಂದರೆ ತುಕ್ಕು ತಪ್ಪಿಸುವುದು, ಕಾಲವನ್ನು ಸ್ವಲ್ಪ ತಡೆಹಿಡಿಯುವುದು….” ಎಂಬ ಆಶಯದ, ʼಸೂಜಿಯ ಕಣ್ಣುʼ ಕವಿತೆಯನ್ನೂ ಓದಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...