ರೈತರು

ನೆಕ್ಕಿದ್ದನ್ನು ಕಕ್ಕಿದ ಕೇಂದ್ರ ಸಚಿವ: ‘ಕೋಟಿ’ ರು ಸೌತೆಕಾಯಿ ಸಬ್ಸಿಡಿ ವಾಪಸ್, ‘ನಾನೂ ರೈತನೇ’ ಎಂದ ಭಂಡತನಕ್ಕೆ ವಿಪಕ್ಷಗಳ ಚಾಟಿ

ಈ ಹಿಂದೆ 'ನಾನೂ ರೈತನೇ' ಅಂತ ಹೇಳಿಕೊಂಡು ಸೌತೆಕಾಯಿ ಬೆಳೆಗೆ ಒಂದಲ್ಲ ಎರಡಲ್ಲ ಬರೋಬ್ಬರಿ ₹99 ಲಕ್ಷ ರೂಪಾಯಿ ಸಬ್ಸಿಡಿ ಪಡೆದುಕೊಂಡಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ...

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿಯಾದ ಮುನಿಯಪ್ಪ: ₹4,232 ಕೋಟಿ MSP ಬಾಕಿ ಬಿಡುಗಡೆಗೆ ಮನವಿ

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಇಂದು ನವದೆಹಲಿಯಲ್ಲಿ ಭೇಟಿ...

ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣದಿಂದ ರೈತರಿಗೆ ಲಾಭವಿದೆಯೇ?

ದೇಶದಲ್ಲಿ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡುವ (E20) ಯೋಜನೆಯು ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಇಂಧನ ಆಮದು ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಮುಖ್ಯ. ಇದರಿಂದ ರೈತರಿಗೆ ಲಾಭವಿದೆ ಎಂಬುದು ಸರ್ಕಾರದ ವಾದ. ಆದರೆ...

ಅದಾನಿಗಾಗಿ ಫಲವತ್ತಾದ ಭೂಸ್ವಾಧೀನ: ರೈತರ ಬೇಡಿಕೆಗೆ ಗುಜರಾತ್ ಬಿಜೆಪಿ ಸರ್ಕಾರ ಅಸ್ತು, ಮುಂದೇನು?

ಗುಜರಾತ್‌ನ ಮೋರ್ಬಿ ಜಿಲ್ಲೆಯ ಜೆತ್ಪರ್ ಗ್ರಾಮದಲ್ಲಿ ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಕಂಪನಿಯು ಕೈಗೆತ್ತಿಕೊಂಡಿರುವ ಬೃಹತ್ ವಿದ್ಯುತ್ ಪ್ರಸರಣ ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದಂತೆ ರೈತರು ನಡೆಸುತ್ತಿದ್ದ ಸುದೀರ್ಘ ಪ್ರತಿಭಟನೆಗೆ ಕೊನೆಗೂ ಗುಜರಾತ್...

ದಾವಣಗೆರೆ | ಜಗಳೂರು ರೈತರ ಕುಂದುಕೊರತೆ ಸಭೆ; ನಿಗದಿತ ದರದಲ್ಲಿ ಬೀಜ ಗೊಬ್ಬರ ಮಾರಾಟಕ್ಕೆ ಸೂಚನೆ

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜಗಳೂರು ಶಾಸಕ ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ರೈತರ ಕುಂದುಕೊರತೆ ಸಭೆ ಮಾಡಲಾಯಿತು. ಸಭೆಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳ...

ದಾವಣಗೆರೆ | ಬೀಜ ರಸಗೊಬ್ಬರ ಪೂರೈಕೆಗೆ ರೈತಸಂಘ ಆಗ್ರಹ

ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕೊರತೆ ಎದುರಾಗಿದ್ದು, ಕೂಡಲೇ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ವಾಸುದೇವ ಮೇಟಿ...

ಶಿವಮೊಗ್ಗ | ಭೂಮಾಪಕರ, ರಸಗೊಬ್ಬರ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ: ಹೆಚ್ ಆರ್ ಬಸವರಾಜಪ್ಪ

"ರಾಜ್ಯಾದ್ಯಂತ ಪರವಾನಿಗೆ ಭೂಮಾಪಕರ ಅನಿರ್ಧಿಷ್ಟಾವಧಿ ಮುಷ್ಕರದಿಂದ ಭೂಮಾಪನ ಸ್ಥಗಿತ ಹಾಗೂ ವಿಳಂಬದಿಂದಾಗಿ ರೈತರು ಹಾಗೂ ಸಾರ್ವಜನಿಕರಿಗೆ ಭಾರೀ ತೊಂದರೆ ಉಂಟಾಗಿದ್ದು, ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕಚ್ಚಾವಸ್ತುಗಳು ಸಿಗದೇ ಯೂರಿಯಾ ರಸಗೊಬ್ಬರ ಉತ್ಪಾದನೆ ಕುಂಠಿತಗೊಂಡು ಕೊರತೆ...

ಕೊಲ್ಹಾರ | ಮಳೆಗೆ ನೆಲಕಚ್ಚಿದ ಬಾಳೆ: ಪರಿಹಾರಕ್ಕೆ ರೈತರ ಆಗ್ರಹ

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಬಿರುಸಿನ ಮಳೆ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ತಂಪೆರೆದು ಮುದ ನೀಡಿದರೆ ಇತ್ತ ಬಾಳೆ ಬೆಳೆದ ರೈತರಿಗೆ ಸಂಕಷ್ಟ ತಂದೊಡ್ಡಿದೆ. ವರ್ಷಪೂರ್ತಿ ಕಷ್ಟಪಟ್ಟು...

ದಾವಣಗೆರೆ | ದಾಖಲೆಯಿಲ್ಲದ ಅರಣ್ಯ ಭೂಮಿ ಹಿಂಪಡೆಯಲು ಕಂದಾಯ ಇಲಾಖೆಗೆ ರೈತಸಂಘ ಆಗ್ರಹ

"ಪಹಣಿಯಲ್ಲಿ ಮಾತ್ರ ಅರಣ್ಯ ಎಂದು ದಾಖಲಾಗಿದ್ದು, ಕಂದಾಯ ದಾಖಲೆಗಳಲ್ಲಿ ಅರಣ್ಯ ಎಂದು ನಮೂದಾಗದಿರುವ ದಾವಣಗೆರೆ ತಾಲೂಕಿನ ಹುಚ್ಚವನಹಳ್ಳಿ ಗ್ರಾಮದ 644 ಎಕರೆ ಭೂಮಿಯನ್ನು ತಕ್ಷಣವೇ ಕಂದಾಯ ಇಲಾಖೆಗೆ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು" ಎಂದು...

ವಿಜಯಪುರ | ಮೇ 16ರಂದು ತೊಗರಿ ಬೆಳೆಗಾರರಿಗೆ ತಾಂತ್ರಿಕ ಕಾರ್ಯಗಾರ

ವೈಜ್ಞಾನಿಕ ಕ್ರಮಗಳ ಮೂಲಕ ತೊಗರಿ ಇಳುವರಿ ಹೆಚ್ಚಿಸುವ ಉದ್ದೇಶದಿಂದ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಭಾಗಿತ್ವದಲ್ಲಿ ಮೇ 16ರಂದು ಒಂದು ದಿನದ ತಾಂತ್ರಿಕ ಕಾರ್ಯಗಾರ ನಡೆಯಲಿದೆ. ವಿಜಯಪುರ ನಗರದ ಕೃಷಿ ಮಹಾವಿದ್ಯಾಲಯದ...

ದಾವಣಗೆರೆ | ಮಳೆಯ ಸಿಂಚನಕ್ಕೆ ರೈತರ ಹರ್ಷ; ಬಿರುಗಾಳಿಗೆ ಬಾಳೆ ಅಡಿಕೆ ಹಾನಿ

ಜಿಲ್ಲೆಯಲ್ಲಿ ಹಲವೆಡೆ ಮಳೆಯ ಸಿಂಚನವಾಗಿದ್ದು ಬಿರು ಬಿಸಿಲಿನಿಂದ ಕಂಗಟ್ಟಿದ್ದ ದಾವಣಗೆರೆ ಜಿಲ್ಲೆಯ ಜನರಿಗೆ ಹಾಗೂ ರೈತರಿಗೆ ಸ್ವಲ್ಪ ಸಮಾಧಾನ ಹಾಗೂ ಹರ್ಷ ಮೂಡಿಸಿದೆ. ಈ ಮಧ್ಯೆ ಸೋಮವಾರ ಮತ್ತು ಮಂಗಳವಾರ ಸುರಿದಿರುವ ಬಿರುಗಾಳಿ...

ದಾವಣಗೆರೆ | ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಸೂಚನೆ

"ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಪ್ರಸ್ತುತ ಕೇವಲ 4 ರಿಂದ 5 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸಿ ರೈತರಿಗೆ ನಿರಂತರವಾಗಿ 7 ಗಂಟೆಗಳ ಕಾಲ  ವಿದ್ಯುತ್ ಸರಬರಾಜು ಮಾಡಲು ಕ್ರಮವಹಿಸಬೇಕು" ಎಂದು ಕಾಂಗ್ರೆಸ್ ಮುಖಂಡ, ದಾವಣಗೆರೆ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ  ಅಧ್ಯಕ್ಷರಾದ ಶಾಮನೂರು ಬಸವರಾಜಪ್ಪ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ದಾವಣಗೆರೆಯ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ  'ಪಂಚ ಗ್ಯಾರಂಟಿ' ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ "ರೈತರಿಗೆ ಸರದಿ ಸಾಲು ಪದ್ದತಿಯಡಿ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದ್ದು, ಕೃಷಿ  ಚಟುವಟಿಕೆಗಳಿಗೆ  ತೊಂದರೆಯಾಗದಂತೆ ನಿಗದಿತ ಅವಧಿಯವರೆಗೆ...

ಈ ಹೊತ್ತಿನ ಪ್ರಮುಖ ಸುದ್ದಿ