ನೆಕ್ಕಿದ್ದನ್ನು ಕಕ್ಕಿದ ಕೇಂದ್ರ ಸಚಿವ: ‘ಕೋಟಿ’ ರು ಸೌತೆಕಾಯಿ ಸಬ್ಸಿಡಿ ವಾಪಸ್, ‘ನಾನೂ ರೈತನೇ’ ಎಂದ ಭಂಡತನಕ್ಕೆ ವಿಪಕ್ಷಗಳ ಚಾಟಿ

Date:

ಈ ಹಿಂದೆ ‘ನಾನೂ ರೈತನೇ’ ಅಂತ ಹೇಳಿಕೊಂಡು ಸೌತೆಕಾಯಿ ಬೆಳೆಗೆ ಒಂದಲ್ಲ ಎರಡಲ್ಲ ಬರೋಬ್ಬರಿ ₹99 ಲಕ್ಷ ರೂಪಾಯಿ ಸಬ್ಸಿಡಿ ಪಡೆದುಕೊಂಡಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಭಗೀರಥ ಚೌಧರಿ ಅವರಿಗೆ ವಿಪಕ್ಷಗಳ ಚಾಟಿ ಏಟಿನ ಬಳಿಕ ನೈತಿಕತೆಯ ನೆನಪಾಗಿರುವಂತಿದೆ. ಕೊನೆಗೂ ಕೃಷಿ ಸಚಿವರು ತಮ್ಮದೇ ಸಚಿವಾಲಯದ ಅಡಿಯ ರಾಷ್ಟ್ರೀಯ ತೋಟಗಾರಿಕೆ ಮಂಡಳಿ (NHB) ಮೂಲಕ ತಮ್ಮ ಸ್ವಂತ ಸೌತೆಕಾಯಿ ಫಾರ್ಮ್‌ಗೆ ಪಡೆದಿದ್ದ ₹99 ಲಕ್ಷ ರೂಪಾಯಿ ಸಬ್ಸಿಡಿ ಹಣವನ್ನು ಬ್ಯಾಂಕ್‌ಗೆ ಮರಳಿಸಿದ್ದಾರೆ.

- Advertisement -

ಈ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪ್ರಶ್ನೆಗೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಕೃಷಿ ರಾಜ್ಯ ಸಚಿವ ರಾಮನಾಥ್ ಠಾಕೂರ್, ಭಗೀರಥ ಚೌಧರಿ ಅವರು ಸಬ್ಸಿಡಿ ಹಣವನ್ನು ಸಂಬಂಧಪಟ್ಟ ಬ್ಯಾಂಕ್‌ಗೆ ಜಮೆ ಮಾಡಿದ್ದು, ಆ ಹಣವನ್ನು ತೋಟಗಾರಿಕೆ ಮಂಡಳಿಗೆ ಹಿಂತಿರುಗಿಸುವಂತೆ ಬ್ಯಾಂಕ್‌ಗೆ ನಿರ್ದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಪ್ರಜಾಪ್ರಭುತ್ವದ ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಇದನ್ನೂ ಓದಿ: ‘ರೈತರು ಸಬ್ಸಿಡಿ ಪಡೆಯುತ್ತಾರೆ – ನಾನೂ ಪಡೆದಿದ್ದೇನೆ’: ಸೌತೆಕಾಯಿಗೆ 99 ಲಕ್ಷ ರೂ. ಸಬ್ಸಿಡಿ ಪಡೆದ ಕೇಂದ್ರ ಸಚಿವ ಚೌಧರಿ ಭಂಡತನ

ಯಾತಕ್ಕಾಗಿ ₹99.03 ಲಕ್ಷ ಸಬ್ಸಿಡಿ?

ರಾಜಸ್ಥಾನದ ಅಜ್ಮೇರ್ ಕ್ಷೇತ್ರದ ಲೋಕಸಭಾ ಸಂಸದರೂ ಆಗಿರುವ ಭಗೀರಥ ಚೌಧರಿ ಅವರು, ತಮ್ಮ 16,592 ಚದರ ಮೀಟರ್ ವಿಸ್ತೀರ್ಣದ ತೋಟದಲ್ಲಿದ್ದ ವಾಣಿಜ್ಯಿಕ ಸೌತೆಕಾಯಿ ಬೆಳೆ ಯೋಜನೆಗಾಗಿ ₹99.03 ಲಕ್ಷ ಸಬ್ಸಿಡಿ ಪಡೆದಿದ್ದರು.

‘ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್’ (MIDH) ಯೋಜನೆಯಡಿ ವಾಣಿಜ್ಯಿಕ ತೋಟಗಾರಿಕೆಗೆ ಗರಿಷ್ಠ ಶೇ.50 ರಷ್ಟು (ಅಥವಾ ₹1 ಕೋಟಿವರೆಗೆ) ಸಬ್ಸಿಡಿ ನೀಡಲಾಗುತ್ತದೆ. ಭಗೀರಥ ಚೌಧರಿ ಅವರು ಈ ಯೋಜನೆಯನ್ನು ಮೇಲ್ವಿಚಾರಣೆ ಮಾಡುವ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ (NHB) ಪದನಿಮಿತ್ತ ಉಪಾಧ್ಯಕ್ಷರಾಗಿದ್ದಾರೆ.

ಈ ವರ್ಷದ ಜೂನ್‌ನಲ್ಲಿ ಮಾಧ್ಯಮವೊಂದರ ತನಿಖಾ ವರದಿಯಲ್ಲಿ, ಸಚಿವರು ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ಈ ಸಬ್ಸಿಡಿ ಮಂಜೂರಾಗಿರುವುದು ಬೆಳಕಿಗೆ ಬಂದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ವೇಳೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದ ಸಚಿವ ಭಗೀರಥ ಚೌಧರಿ, ತಾವು ಯಾವುದೇ ತಪ್ಪು ಎಸಗಿಲ್ಲ ಎಂದು ಪ್ರತಿಪಾದಿಸಿದ್ದರು.

ಅಷ್ಟು ಮಾತ್ರವಲ್ಲದೆ, “ನಾನು ಹುಟ್ಟಿನಿಂದಲೂ ರೈತ. ರಾಜಕೀಯಕ್ಕೆ ಬರುವ ಮುನ್ನವೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ. 2018ರಲ್ಲೇ ಈ ಸಬ್ಸಿಡಿಗೆ ಅರ್ಜಿ ಸಲ್ಲಿಸಿದ್ದೆ. ಸಾವಿರಾರು ರೈತರು ಪಾಲಿಹೌಸ್ ನಿರ್ಮಿಸಿ ಸಬ್ಸಿಡಿ ಪಡೆಯುವಂತೆ ನಾನೂ ಪಡೆದಿದ್ದೇನೆ. ನನ್ನ ಫಾರ್ಮ್‌ನಲ್ಲಿ ಆಧುನಿಕ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳ ಬಗ್ಗೆ ಇತರ ರೈತರಿಗೂ ತರಬೇತಿ ನೀಡುತ್ತಿದ್ದೇನೆ” ಎಂದು ಸಮರ್ಥಿಸಿಕೊಂಡಿದ್ದರು. ತಮ್ಮ ಫಾರ್ಮ್‌ನಲ್ಲಿ ಪಡೆದ ಸಾಲ ಮತ್ತು ಸಬ್ಸಿಡಿಯ ಎಲ್ಲಾ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿರುವುದಾಗಿಯೂ ಹೇಳಿಕೊಂಡಿದ್ದರು.

ಆದರೆ ಸಚಿವರೇ ಯೋಜನೆಯ ನಿರ್ಧಾರಕ ಮತ್ತು ಫಲಾನುಭವಿಯೂ ಆಗಿರುವುದು ಕಾರ್ಯಾಂಗದ ನೈತಿಕತೆಗೆ ಧಕ್ಕೆ ತರುತ್ತದೆ. ನಿಯಮಗಳ ಪ್ರಕಾರ ಅರ್ಜಿ ಅನುಮೋದಿಸುವ ಸಮಿತಿಯಲ್ಲಿ ಸಚಿವರಿಲ್ಲದಿದ್ದರೂ, ಅವರ ಅಧಿಕಾರದ ಪ್ರಭಾವವನ್ನು ತಳ್ಳಿಹಾಕಲಾಗುವುದಿಲ್ಲ. ಜನಪ್ರತಿನಿಧಿಗಳು ಅಥವಾ ಸಚಿವರು ತಮ್ಮದೇ ಇಲಾಖೆಯ ಸಬ್ಸಿಡಿ ಪಡೆಯುವುದನ್ನು ತಡೆಯಲು ನಿಯಮಾವಳಿಗಳಲ್ಲಿ ‘ಹಿತಾಸಕ್ತಿ ಸಂಘರ್ಷ’ಕ್ಕೆ ಸಂಬಂಧಿಸಿದ ಸ್ಪಷ್ಟ ನಿಯಮಗಳಿಲ್ಲದಿರುವುದು ಸಂಸತ್ತಿನಲ್ಲಿ ಸಚಿವರ ಉತ್ತರದಿಂದಲೇ ದೃಢಪಟ್ಟಿದೆ.

ವಿಪಕ್ಷಗಳು ಇದನ್ನು “ಅಧಿಕಾರ ದುರ್ಬಳಕೆ” ಹಾಗೂ “ನೈತಿಕತೆಯ ಕೊರತೆ” ಎಂದು ಕಟುವಾಗಿ ಟೀಕಿಸಿದ್ದವು. ಲೋಕಸಭೆಯಲ್ಲಿ ಪ್ರಶ್ನೆ ತೂರಿಬರುತ್ತಿದ್ದಂತೆ ಹಣ ಹಿಂತಿರುಗಿಸಿರುವುದು ರಾಜಕೀಯ ಮುಜುಗರದಿಂದ ಪಾರಾಗುವ ಪ್ರಯತ್ನ ಮಾಡಿದ್ದಾರೆ.

ಪ್ರಸ್ತುತ ಭಗೀರಥ ಚೌಧರಿ ಅವರು ಸಬ್ಸಿಡಿ ಹಣವನ್ನು ಹಿಂತಿರುಗಿಸಿರುವುದರಿಂದ ತಾತ್ಕಾಲಿಕವಾಗಿ ರಾಜಕೀಯ ಸದ್ದು ಶಮನವಾಗಬಹುದಾದರೂ, ಸಾರ್ವಜನಿಕ ಅಧಿಕಾರದಲ್ಲಿರುವವರು ತಮ್ಮ ಅಧಿಕಾರ ವ್ಯಾಪ್ತಿಯ ಯೋಜನೆಗಳಿಂದ ಧನಸಹಾಯ ಪಡೆಯುವುದಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸುವ ಅಗತ್ಯವನ್ನು ಈ ಪ್ರಕರಣ ಎತ್ತಿಹಿಡಿದಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಕರೆಘಂಟೆಯೇ?

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ...

ಬೀದರ್‌ | ನ.1ರಂದು ಸಚಿವ ಈಶ್ವರ ಖಂಡ್ರೆಗೆ ಅಭಿನಂದನಾ ಸಮಾರಂಭ

ಬೀದರ್‌ ತಾಲ್ಲೂಕಿನ ಅತಿವಾಳ ಸಮೀಪ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು...

ಬೀದರ್‌ | ವಾಲ್ಮೀಕಿ ರಾಮಾಯಣ ಮಾನವ ಸಂಬಂಧಗಳ ಮೌಲ್ಯ ಸಾರುತ್ತದೆ: ನಾ.ಗೀತಾಚಾರ್ಯ

ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಮಾನವ ಸಂಬಂಧಗಳ ಮಹತ್ವ, ಕುಟುಂಬದ ಜವಾಬ್ದಾರಿ,...