ರಾಜ್ಯದಲ್ಲಿ ಮತ್ತೆ ಕೃತಕ ಮಳೆ ಕಸರತ್ತು: ಏನಿದು ಮೋಡ ಬಿತ್ತನೆ; ಕರಗುವುದೇ ಬರದ ಬಿಸಿ?

Date:

ರಾಜ್ಯದ ಬರಪೀಡಿತ ಹಾಗೂ ಮಳೆ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಕೃತಕವಾಗಿ ಮಳೆ ತರಿಸಲು ಸರ್ಕಾರ ಯೋಜಿಸಲಾಗಿದೆ. ಸುಮಾರು 200 ಗಂಟೆಗಳ ಕಾಲ ವಿಮಾನಗಳ ಮೂಲಕ ಮೋಡ ಬಿತ್ತನೆ (Cloud Seeding) ಕಾರ್ಯಾಚರಣೆ ನಡೆಸಲು ಸರ್ಕಾರ ಸಜ್ಜಾಗಿದೆ.

- Advertisement -

ಕೃಷಿ ಹಾಗೂ ಕಂದಾಯ ಸಚಿವ ಎನ್. ಚಲುವರಾಯಸ್ವಾಮಿ ಈ ಮಾಹಿತಿಯನ್ನು ನೀಡಿದ್ದಾರೆ. ಸೋಮವಾರ ಆಗಸ್ಟ್ 24ರಿಂದ 60 ದಿನ ಮೋಡ ಬಿತ್ತನೆ ಮಾಡಲಾಗುವುದು. ಈಗಾಗಲೇ ಕೆಲವೆಡೆ ಬಿತ್ತನೆ ಮಾಡಲಾಗಿದೆ. ಆದರೆ ಮಳೆ ಕೊರತೆ ಉಂಟಾಗಿದೆ. ಮಳೆ ಬರದಿದ್ದರೆ ಬೆಳೆ ಸಂಪೂರ್ಣವಾಗಿ ನಾಶವಾಗಲಿದೆ. ಆದ್ದರಿಂದ ಮೋಡ ಬಿತ್ತನೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಇದನ್ನೂ ಓದಿ: ಹೊಸಪೇಟೆಯಲ್ಲೂ ಮೋಡ ಬಿತ್ತನೆ ಕೈಗೊಳ್ಳುವಂತೆ ರೈತ ಸಂಘ ಆಗ್ರಹ

ಮುಂಗಾರು ಕೊರತೆಯಿದೆ. ಈ ವೇಳೆ ಮೋಡ ಬಿತ್ತನೆ ಮಾಡುವುದರಿಂದಾಗಿ ರೈತರಿಗೆ ಮತ್ತು ಕುಡಿಯುವ ನೀರಿಗೆ ಸಹಾಯವಾಗಲಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೋಡ ಬಿತ್ತನೆಗೆ ಅನುಮೋದನೆ ನೀಡಿದ್ದಾರೆ ಎಂದೂ ಸಚಿವರು ಹೇಳಿದ್ದಾರೆ.

ಏನಿದು ಮೋಡ ಬಿತ್ತನೆ?

ಮೋಡ ಬಿತ್ತನೆ ಎಂಬುದು ವಾತಾವರಣದಲ್ಲಿ ಈಗಾಗಲೇ ಇರುವ ಮೋಡಗಳನ್ನು ಪ್ರಚೋದಿಸಿ ಮಳೆ ಬರುವಂತೆ ಮಾಡುವ ಒಂದು ವೈಜ್ಞಾನಿಕ ತಂತ್ರಜ್ಞಾನವಾಗಿದೆ.

ಆಕಾಶದಲ್ಲಿ ಉಂಟಾಗುವ ಮೋಡಗಳಲ್ಲಿ ನೀರಿನ ಹನಿಗಳು ಅತ್ಯಂತ ಸೂಕ್ಷ್ಮ ರೂಪದಲ್ಲಿದ್ದು, ಅವು ಒಂದಕ್ಕೊಂದು ಸೇರಿ ಭಾರವಾಗದ ಹೊರತು ಮಳೆಯಾಗಿ ಕೆಳಗೆ ಬೀಳುವುದಿಲ್ಲ. ಮೋಡ ಬಿತ್ತನೆಯಲ್ಲಿ ಸಿಲ್ವರ್ ಅಯೋಡೈಡ್ (Silver Iodide), ಪೊಟ್ಯಾಸಿಯಮ್ ಅಯೋಡೈಡ್ ಅಥವಾ ಶುಷ್ಕ ಮಂಜುಗಡ್ಡೆ (Dry Ice) ನಂತಹ ರಸಾಯನಿಕ ಕಣಗಳನ್ನು ಮೋಡಗಳ ಒಳಗೆ ಸಿಂಪಡಿಸಲಾಗುತ್ತದೆ. ಈ ರಸಾಯನಿಕಗಳು ‘ಮಂಜಿನ ಹರಳಿನ ಬೀಜಗಳಂತೆ’ (Ice Nuclei) ಕೆಲಸ ಮಾಡಿ, ನೀರಿನ ಹನಿಗಳನ್ನು ತನ್ನತ್ತ ಆಕರ್ಷಿಸಿ ದಪ್ಪಗಾಗಿಸುತ್ತವೆ. ತೂಕ ಹೆಚ್ಚಾದಾಗ ಅವು ಮಳೆಯ ರೂಪದಲ್ಲಿ ಧರೆಗೆ ಇಳಿಯುತ್ತವೆ.

ಕಾರ್ಯಾಚರಣೆ ಹೇಗೆ ನಡೆಯುತ್ತದೆ?

ಮೊದಲು ಡಾಪ್ಲರ್ ರೇಡಾರ್ ಸಹಾಯದಿಂದ ಮಳೆ ನೀಡಬಲ್ಲ ‘ಕಾಂಡೆನ್ಸೇಶನ್’ ಹೊಂದಿರುವ (ತೇವಾಂಶ ಭರಿತ) ಮೋಡಗಳನ್ನು ಗುರುತಿಸಲಾಗುತ್ತದೆ. ಬಳಿಕ ರೇಡಾರ್ ನೀಡುವ ಸೂಚನೆಯಂತೆ ವಿಶೇಷ ವಿಮಾನಗಳು ಅಥವಾ ಹೆಲಿಕಾಪ್ಟರ್‌ಗಳು ಮೋಡದ ತಳಭಾಗಕ್ಕೆ ಅಥವಾ ಮಧ್ಯಭಾಗಕ್ಕೆ ಹಾರುತ್ತವೆ.

ಇದನ್ನೂ ಓದಿ: ಮಾಲಿನ್ಯ ನಿಯಂತ್ರಣಕ್ಕೆ ಮೋಡ ಬಿತ್ತನೆಯ ಮೊರೆ ಹೋದ ದೆಹಲಿ ಸರ್ಕಾರ; ಆದರೂ ಬರಲಿಲ್ಲ ಮಳೆ

ವಿಮಾನದ ರೆಕ್ಕೆಗಳಿಗೆ ಅಳವಡಿಸಲಾದ ಫ್ಲೇರ್‌ಗಳ (Flares) ಮೂಲಕ ಸಿಲ್ವರ್ ಅಯೋಡೈಡ್ ಕಣಗಳನ್ನು ಉರಿಯುವ ಹೊಗೆಯ ರೂಪದಲ್ಲಿ ಮೋಡಕ್ಕೆ ಬಿಡಲಾಗುತ್ತದೆ. ಕಣಗಳು ಮೋಡದ ತೇವಾಂಶವನ್ನು ಹೀರಿಕೊಂಡು 15 ರಿಂದ 45 ನಿಮಿಷಗಳ ಅವಧಿಯಲ್ಲಿ ಮಳೆಯಾಗಿ ಸುರಿಯಲು ಪ್ರಾರಂಭಿಸುತ್ತವೆ.

ಮಳೆ ಬರುವ ಸಾಧ್ಯತೆ ಹಾಗೂ ಯಶಸ್ಸಿನ ಪ್ರಮಾಣ ಎಷ್ಟು?

ಮೋಡ ಬಿತ್ತನೆಯು ಶೇ. 100 ರಷ್ಟು ಮಳೆಯ ಗ್ಯಾರಂಟಿ ನೀಡುವ ತಂತ್ರಜ್ಞಾನವಲ್ಲ. ಇದರ ಯಶಸ್ಸು ಸಂಪೂರ್ಣವಾಗಿ ಸ್ವಾಭಾವಿಕ ವಾತಾವರಣದ ಮೇಲೆ ಅವಲಂಬಿತವಾಗಿರುತ್ತದೆ. ಜಾಗತಿಕ ಅಧ್ಯಯನಗಳು ಮತ್ತು ಭಾರತದ ಹಿಂದಿನ (ಉದಾಹರಣೆಗೆ 2017 ಹಾಗೂ 2019ರ ‘ವರ್ಷಧಾರಿ’ ಯೋಜನೆಯ) ಅನುಭವಗಳ ಪ್ರಕಾರ, ಸೂಕ್ತ ವಾತಾವರಣವಿದ್ದರೆ ಮಳೆಯ ಪ್ರಮಾಣದಲ್ಲಿ 10% ರಿಂದ 25% ರಷ್ಟು ಹೆಚ್ಚಳ ಸಾಧಿಸಬಹುದು. ಸದ್ಯ ರಾಜ್ಯಾದ್ಯಂತ ಜೂನ್ ಅಂತ್ಯಕ್ಕೆ ಶೇ. 42ರಷ್ಟು, ಜುಲೈ ಅಂತ್ಯಕ್ಕೆ ಶೇ 29ರಷ್ಟು ಮಳೆ ಕೊರತೆಯಾಗಿದೆ. ಮೋಡ ಬಿತ್ತನೆ ಸಫಲವಾದರೆ ಮಳೆ ಕೊರತೆ ಪ್ರಮಾಣ ಕಡಿಮೆಯಾಗಲಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು ಸಾಧ್ಯವಲ್ಲವೇ?

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ...

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್‌; ದುಬಾರಿ ಔಷಧಗಳ ಬೆಲೆ ಶೇ.70ರವರೆಗೆ ಇಳಿಕೆ?

ದೇಶದಲ್ಲಿ ದುಬಾರಿಯಾಗಿರುವ ಕೆಲವು ಕ್ಯಾನ್ಸರ್ ಔಷಧಗಳ ಬೆಲೆ ಶೀಘ್ರದಲ್ಲೇ ಭಾರಿ ಪ್ರಮಾಣದಲ್ಲಿ...