ಚಿಕ್ಕಮಗಳೂರು

ಕಳಸ | ಕಲ್ಲುಗೋಡು ತೂಗು ಸೇತುವೆ ಶಿಥಿಲ; ಪ್ರವಾಸಿಗರ ಸಂಚಾರ ತಡೆದ ಗ್ರಾಮಸ್ಥರು

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಲುಗೋಡು ಗ್ರಾಮದ ತೂಗುಸೇತುವೆ ಶಿಥಿಲವಾಗಿದ್ದು, ಇಲ್ಲಿನ ಅಂಬಾತೀರ್ಥ ರಸ್ತೆಯ ಮೂಲಕ ಹಾದು ಹೋಗುವ ಪ್ರವಾಸಿಗರನ್ನು ಸತತ ಮೂರನೇ ಭಾನುವಾರ ಸ್ಥಳೀಯ ನಿವಾಸಿಗಳು ತಡೆದು ನಿಲ್ಲಿಸಿದರು. 15 ವರ್ಷದಿಂದ ಈ...

ತರೀಕೆರೆ | ಶ್ರೀಗಂಧದ ಮರ ಕಡಿದು, ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಬಂಧನ

ಭದ್ರಾವತಿ ವಿಭಾಗದ ತರೀಕೆರೆ ವಲಯ ವ್ಯಾಪ್ತಿಯ ಹುಣಸಘಟ್ಟ ಸಾವೆಮರಡಿ ಕಾವಲ್‌ ಗ್ರಾಮದ ಸರ್ವೆ ನಂಬರ್‌ 2ರ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಾಟ ಮಾಡಲು ಯತ್ನಿಸಿದ್ದ 6 ಮಂದಿಯನ್ನು ಅರಣ್ಯ...

ಚಿಕ್ಕಮಗಳೂರು | ಇಎಸ್‌ಎ ಕರಡು ಅಧಿಸೂಚನೆ: ಅಧಿವೇಶನಗಳಲ್ಲಿ ದನಿ ಎತ್ತದ ಜನಪ್ರತಿನಿಧಿಗಳಿಗೆ ಘೇರಾವ್ ಎಚ್ಚರಿಕೆ

ಪಶ್ಚಿಮಘಟ್ಟಗಳ ಸಾಲಿನಲ್ಲಿ ಸ್ಯಾಟಲೈಟ್ ಮೂಲಕ ಗುರುತಿಸಿರುವ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‌ಎ) ಕರಡು ಅಧಿಸೂಚನೆ ಕುರಿತು ಚಿಕ್ಕಮಗಳೂರು ಜಿಲ್ಲಾ ನಾಗರಿಕ, ರೈತ ಹೋರಾಟ ಸಮಿತಿ ಹಾಗೂ ಜಿಲ್ಲಾ ಬೆಳೆಗಾರರ ಒಕ್ಕೂಟಗಳಿಂದ "ಸಂಸತ್ ಹಾಗೂ ರಾಜ್ಯದ...

ಚಿಕ್ಕಮಗಳೂರು | ಜನಪ್ರತಿನಿಧಿಗಳಿಗೆ ಘೇರಾವ್, ಮಲೆನಾಡು ಬಂದ್‌ಗೆ ರೈತ ಸಂಘಗಳ ಎಚ್ಚರಿಕೆ

ಮಲೆನಾಡು ಪ್ರದೇಶದ ರೈತರು ಮತ್ತು ನಾಗರಿಕರ ಸಮಸ್ಯೆಗಳನ್ನು ಸದನ ಮತ್ತು ಸಂಸತ್ತಿನಲ್ಲಿ ಪರಿಣಾಮಕಾರಿಯಾಗಿ ಮಂಡಿಸದೇ ನಿರ್ಲಕ್ಷಿಸುತ್ತಿರುವ ಜನಪ್ರತಿನಿಧಿಗಳ ವಿರುದ್ಧ ಘೇರಾವ್ ನಡೆಸುವುದಾಗಿ ಹಾಗೂ ಮಲೆನಾಡು ಬಂದ್‌ಗೆ ಕರೆ ನೀಡುವುದಾಗಿ ಜಿಲ್ಲಾ ನಾಗರಿಕರು, ರೈತ...

ಚಿಕ್ಕಮಗಳೂರು | ಎರಡು ದಿನ ನೀರಿನ ವ್ಯತ್ಯಾಯ

ಚಿಕ್ಕಮಗಳೂರು ನಗರದ ದಂಟರಮಕ್ಕಿ ವ್ಯಾಪ್ತಿಯಲ್ಲಿ 500 ಎಂಎಂ ಸಾಮರ್ಥ್ಯದ ಪ್ರಮುಖ ಕುಡಿಯುವ ನೀರಿನ ಕೊಳವೆ ಮಾರ್ಗ ದಿಢೀರ್ ಒಡೆದು ಹೋಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ತಕ್ಷಣವೇ ತುರ್ತು ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ...

ಚಿಕ್ಕಮಗಳೂರು | ಮಾದರಿಯಾದ ಗೊಂಡೇದಹಳ್ಳಿ; ಸೌಹಾರ್ದ ಪರಂಪರೆ ಎತ್ತಿಡಿದ ಗ್ರಾಮ 

ಹಳ್ಳಿಯಿಂದ ದಿಲ್ಲಿಯವರೆಗೆ ಸೌಹಾರ್ದ ಪರಂಪರೆ, ವಿಶ್ವಾಸ, ಕಲೆ, ಸಾಹಿತ್ಯ, ಸಂಸ್ಕೃತಿ ನಾವು ತಲತಲಾಂತರಗಳಿಂದ ನೋಡುತ್ತಾ ಬಂದಿದ್ದೇವೆ. ಹಾಗೆಯೇ, ಹಿಂದೇ ಹಳ್ಳಿಯ ಸೊಬಗು, ಭಾಷೆ, ಹಳ್ಳಿಯ ಜನರು ಹೊಂದಾಣಿಕೆಯ ಸ್ವಭಾವ ಹಾಗೂ ಬೇರೊಬ್ಬರೂ ತನ್ನ...

ಚಿಕ್ಕಮಗಳೂರು | ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು 

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಗಣಪತಿ ಕಟ್ಟೆ ಬಳಿ ಪ್ರವಾಸಕ್ಕೆಂದು ಬಂದಿದ್ದ ದಂಪತಿಯ ಕಾರು ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿ ಬಿದ್ದಿರುವ ಘಟನೆ ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ಸೋಮಾವತಿ ನದಿ ಸೇತುವೆಗೆ...

ಚಿಕ್ಕಮಗಳೂರು | ಸಚಿವ ನಾಗೇಂದ್ರ; ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ 

ಚಿಕ್ಕಮಗಳೂರು ನಗರದ ತಾಲೂಕು ಕಚೇರಿ ಮುಂಭಾಗ ಸಚಿವ ನಾಗೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷದಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.  ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣವನ್ನು...

ಚಿಕ್ಕಮಗಳೂರು | ವಿದ್ಯಾರ್ಥಿಗಳು ಉತ್ತಮ ಆಹಾರ, ಜೀವನಶೈಲಿ ರೂಢಿಸಿಕೊಳ್ಳಬೇಕು; ಬಸವ ಮರುಳಸಿದ್ದ ಸ್ವಾಮೀಜಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿಕ್ಕಮಗಳೂರು ಜಿಲ್ಲಾ ಘಟಕದಿಂದ, ಸರ್ಕಾರಿ ನೌಕರರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಶನಿವಾರ ನಗರದ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ತಮ...

ಚಿಕ್ಕಮಗಳೂರು | ವಿದ್ಯುತ್ ತಂತಿ ತಗುಲಿ ಜಾನುವಾರುಗಳು ಸಾವು 

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ಎರಡು ಜಾನುವಾರುಗಳು ಮೃತಪಟ್ಟಿವೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ...

ಹವಾಮಾನ | ರಾಜ್ಯದಲ್ಲಿ ಮುಂದಿನ 24 ಗಂಟೆಯೊಳಗೆ ಗಾಳಿ ಸಹಿತ ಮಳೆ ಸೂಚನೆ

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡಿನ ಹಲವೆಡೆ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ ಮತ್ತು...

ಎನ್‌.ಆರ್‌ ಪುರ | ಶಾಲೆಗೆ ಹೊರಟಿದ್ದ ಮಕ್ಕಳ ಬೆನ್ನಟ್ಟಿದ ಕಾಡಾನೆ: ಗ್ರಾಮಸ್ಥರಲ್ಲಿ ಆತಂಕ

ಶಾಲೆಗಾಗಿ ಬಸ್‌ ಕಾಯುತ್ತಿದ್ದ ಮಕ್ಕಳ ಗುಂಪನ್ನು ಕಾಡಾನೆ ಬೆನ್ನಟ್ಟಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌ ಪುರ ತಾಲೂಕಿನ ಗುಬ್ಬಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಸಿದ್ದನಕೊಡಿಗೆ ಕಾಲೊನಿಯ ಮುಖ್ಯ ರಸ್ತೆಯಲ್ಲಿ ಶಾಲೆಗೆ...

ಈ ಹೊತ್ತಿನ ಪ್ರಮುಖ ಸುದ್ದಿ