SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7 ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚನೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಚಿಕ್ಕಮಗಳೂರು ನಗರದಲ್ಲಿ SIR ವಿರೋಧಿ ಕರ್ನಾಟಕ ವತಿಯಿಂದ ಅಝದ್ ಪಾರ್ಕ್ ಬಳಿ ಪ್ರತಿಭಟನೆ ನಡೆಸಲಾಯಿತು.
SIR ವಿರೋಧಿ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸೇರಿದಂತೆ ನೂರಾರು ಸಂಘಟನೆಗಳು, ಜಾತ್ಯಾತೀತ ಪಕ್ಷಗಳು ಒಗ್ಗೂಡಿ, ದೇಶಾದ್ಯಂತ ತೀವ್ರ ತರಹದ ಹೋರಾಟ ಹಾಗೆಯೇ ಎರಡು ಬಾರಿ ಕರ್ನಾಟಕ ರಾಜ್ಯಾದ್ಯಂತ ಜಾಥಾ ನಡೆಸಿ, SIR ವಿರುದ್ಧ ಮೂಡಿಸುವ ಜೊತೆಗೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಲಕ್ಷಾಂತರ ಜನರ ದಾನದ ಹಕ್ಕನ್ನು ಕಿತ್ತುಕೊಳ್ಳುವ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಹುನ್ನಾರವನ್ನು ಬಯಲು ಮಾಡಿದೆ. ಆದರೂ ಈಗ ಫಾರಂ 7ನ್ನು ಅದೇ ಮತ ಪಟ್ಟಿಯಲ್ಲಿ ಬಿ.ಎಲ್.ಎ ಗಳ ಮುಖಾಂತರ ಸುಳ್ಳು ಮಾಹಿತಿ ಅಂದರೆ ತಲ ತಲಾಂತರದಿಂದ ವಾಸ ಮಾಡುತ್ತಿರುವ ಕುಟುಂಬಗಳನ್ನು ಇವರು ವಾಸವಾಗಿಲ್ಲ ಎನ್ನುವ ಸುಳ್ಳು ಮಾಹಿತಿಯ ಫಾರಂ.7 ತುಂಬಿ ಕಳುಹಿಸಿರುವುದು ಎಲ್ಲರ ಗಮನಕ್ಕೆ ಬಂದಿದ್ದರೂ ಕೂಡಾ ಅದರಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಸಂಖ್ಯೆ.153 ಬಣಕಲ್, ಮೂಡಿಗೆರೆ ಇಲ್ಲಿ ಸುಮಾರು ಕುಟುಂಬಗಳ ಹೆಸರುಗಳನ್ನು ಫಾರಂ.7ರಲ್ಲಿ ಸುಳ್ಳು ಮಾಹಿತಿ ತುಂಬಿದ್ದು, ಅದೇ ರೀತಿ ಶೃಂಗೇರಿ, ಕೊಪ್ಪ, ಬೇರೆ ಬೇರೆ ಕಡೆ ಕೂಡಾ ಇಂತಹ ಸುಳ್ಳು ಮಾಹಿತಿಗಳನ್ನು ನೀಡಲಾಗಿದೆ, ಆ ಬಗ್ಗೆ ಸ್ಥಳೀಯ ತಹಶೀಲ್ದಾರ್‌ರವರುಗಳಿಗೆ ದೂರು ನೀಡಿದರೆ ಅವರು ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲವೆಂದು ಪ್ರತಿಭಟನಕಾರಾರು ಪ್ರತಿಭಟಿಸಿದ್ದಾರೆ.
ಈ ಬಗ್ಗೆ ಆರಕ್ಷಕ ಠಾಣೆಗೆ ದೂರು ನೀಡಿದರೆ 1 ಎನ್.ಸಿ ಕೊಟ್ಟು ಈವರೆಗೂ ಎಫ್.ಐ.ಆರ್ ಮಾಡಿರುವುದಿಲ್ಲ.
ಆದ್ದರಿಂದ ಈ ಫಾರಂ.7 ರಲ್ಲಿ ತಪ್ಪು ಮಾಹಿತಿ ನೀಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ಆಯೋಗ ಮತ್ತು ಸರ್ಕಾರಕ್ಕೆ ಈ ಮೂಲಕ ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ಪ್ರತಿಭಟನೆ ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮ ಖಂಡಿಸಿ ಜನಪರ ಒಕ್ಕೂಟ ಪ್ರತಿಭಟನೆ
ಈ ವೇಳೆ ಗೌಸ್ ಮೋಹಿದ್ದಿನ್,ಟಿ. ಎಲ್ ಗಣೇಶ್, SDPI ಮುಖಂಡ ಮುಸ್ತಫಾ,ಸುರೇಶ್, ನಾಗೇಶ್ ಇಂದಾವರ, ಪೂರ್ಣೇಶ್,ಭೀಮಯ್ಯಾ, ಸಂದೀಪ್, ಪ್ರದೀಪ್ ಹಾಗೂ ಇನ್ನಿತರರಿದ್ದರು.




