ಚಿಕ್ಕಮಗಳೂರು | ಭಾರತದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ; ಮಾವಳ್ಳಿ ಶಂಕರ್

Date:

ಚಿಕ್ಕಮಗಳೂರಿನ ಮಹಾರಾಜ ಗ್ರ್ಯಾಂಡ್ ಹೋಟೆಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ರಾಜ್ಯ ಮಹಿಳಾ ಸರ್ವ ಸಧಸ್ಯರ ಸಭೆ ಮತ್ತು ಮಹಿಳಾ ಮಹಾಸಭೆಯನ್ನು ಅಂಬೇಡ್ಕರ್ ವಾಡ ರಾಜ್ಯ ಅಧ್ಯಕ್ಷರಾದ ಮಾವಳ್ಳಿ ಶಂಕರ್ ಅವರು ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ, “ಇಡೀ ಭಾರತ ದೇಶದಲ್ಲಿ ಎಲ್ಲಾ ಕಡೆಗಳಲ್ಲೂ ಮಹಿಳೆಯರ ಮೇಲೆ ಶೋಷಣೆ , ಅತ್ಯಾಚಾರ, ಧೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ನಮ್ಮ ಕರ್ನಾಟದಲ್ಲೂ ಮಹಿಳೆಯರನ್ನು ಶೋಷಿಸುತ್ತಲೇ ಬರಲಾಗುತ್ತಿದೆ. ಇದೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ಲಾಟಂರುಗಳು ಮಹಿಳೆಯರನ್ನು ಜೀತದಾಳುಗಳನ್ನಾಗಿ ಮಾಡಿ  ಶೋಷಿಸುತ್ತಲೇ ಬಂದಿದ್ದಾರೆ. ಚಿಕ್ಕಮಗಳೂರಿನಲ್ಲಿ ಶೋಷಣೆಯ ವಿರುದ್ಧ ಹೋರಾಟ ಮಾಡಿದವರಲ್ಲಿ  ಎಮ್. ಡಿ. ಗಂಗಯ್ಯ , ರಾಧಾಕ್ರಷ್ಣಾ , ಸುಂದರೇಶ್  ಪ್ರಮುಖರಿದ್ದರು ಎಂದು ತಿಳಿಸಿದರು.

- Advertisement -
Screenshot 2026 10 10 20 51 27 15 7352322957d4404136654ef4adb64504

ಈ ಮಹಿಳೆಯರ  ಶೋಷಣೆಯ ವಿರುದ್ಧ  ಹೋರಾಟವನ್ನು ಫ್ರೋಫೆಸರ್ ಕ್ರಷ್ಣಪ್ಪನವರು ಆರಂಭಿಸಿದರು. ದಲಿತ ಸಂಘರ್ಷ ಸಮಿತಿ ಎಂಬ ಸಂಘಟನೆ ಕಟ್ಟಿ ಶೋಷಿತರ ಪರ ಧ್ವನಿಯಾದರು. ಮಹಿಳೆಯರ ಶೋಷಣೆಗಳಾದ ದೇವದಾಸಿ ಪದ್ದತಿ, ಚಂದ್ರಗುತ್ತಿಯ ಬೆತ್ತಲೆ ಸೇವೆಯಂತಹ ಅನಿಷ್ಟ ಪದ್ದತಿಯ ವಿರುದ್ಧ ಹೋರಾಟ ನಡೆಸಿದ ದಲಿತ ಸಂಘರ್ಷ ಸಮಿತಿ ಅದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಯಿತು. ಅಲ್ಲಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿದ್ದು, ಇದರ ವಿರುದ್ಧ ಸಾಮಾಜವನ್ನು ಜಾಗ್ರತಗೊಳಿಸುವ ಕಾರ್ಯ ಮಾಡಬೇಕಾಗಿದೆ ಎಂದರು.          

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೂಡಿಗೆರೆ ಮಾಜಿ ಶಾಸಕ ಬಿ. ಬಿ ನಿಂಗಯ್ಯ ಅವರು ಮಾತನಾಡಿ,ಫ್ರೋಫೇಸರ್ ಬಿ. ಕ್ರಷ್ಣಪ್ಪನವರು ಹುಟ್ಟು ಹಾಕಿದ ದಲಿತ ಸಂಘರ್ಷ ಸಮಿತಿಯು ಒಂದುಕಾಲದಲ್ಲಿ ಇಡೀ ವಿಧಾನಸೌಧವನ್ನೇ ಅಲುಗಾಡಿಸುವಷ್ಟು ಬಲ ಹೊಂದಿತ್ತು. ಬೆತ್ತಲೆ ಸೇವೆಯಂತಹ ಅನಿಷ್ಟ ಪಧ್ಧತಿಯ ವಿರುದ್ಧ ಬಪವಲಿಂಗಪ್ಪನವರು ರಾಮಕೃಷ್ಣ ಹೆಗಡೆಯವರಿಗೆ ಮನವರಿಗೆ ಮಾಡಿ ವಿರೋಧಿಸಿದ ರೀತಿ ಇವತ್ತಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅಂದಿನ ಕಾಲದಲ್ಲಿ ಸರಕಾರದ ನನ್ನ ನಿವಾಸವೇ ದಲಿತ ಸಂಘರ್ಷ ಸಮಿತಿಯ ಕಾರ್ಯಾಲಯವೇ ಆಗಿ ಬಿಟ್ಟಿತ್ತು. ಇಂದಿಗೂ ದಲಿತ ಸಂಘರ್ಷ ಸಮಿತಿ ತನ್ನ ಚಳುವಳಿಯ ರೂಪವನ್ನು ಉಳಿಸಿಕೊಂಡು  ಬಂದಿದೆ,  ಬಿಡಿ ಬಿಡಿಯಾಗಿರುವ ದಲಿತ ಸಂಘರ್ಷ ಸಮಿತಿಗಳೆಲ್ಲಾ ಒಂದಾಗಿ ಮತ್ತೆ 80ರ ದಶಕದ ತನ್ನ ಬಲವನ್ನು ಪಡೆದುಕೊಂಡು ಒಟ್ಟಾಗಿ ಹೋರಾಟ ನಡೆಸುವಂತಾಗಬೇಕೆಂಬುದೇ ನನ್ನ ಆಶಯ. ಅಂದು ನಾವು ದಲಿತ ಸಂಘರ್ಷ ಸಮಿತಿ ಕಟ್ಟಲು ಹಳ್ಳಿ ಹಳ್ಳಿಗೂ ಭೇಟಿನೀಡಿದ ಸಂಧರ್ಭ ಇಂದೂ ನನ್ನ ಮನಸ್ಸಲ್ಲಿ ಹಸಿರಾಗುಳಿದಿದೆ ಎಂದು ತಿಳಿಸಿದರು.

ಇದನ್ನೂ ಓದಿದ್ದೀರಾ?ಹಾಸನ | SIR ರದ್ದು;,ಗ್ಯಾನೇಶ್ ಕುಮಾರ್ ವಜಾಕ್ಕೆ DYFI, SFI, AIDSO ಆಗ್ರಹ

ಈ ವೇಳೆ ಇಂದಿರಾ ಕ್ರಷ್ಣಪ್ಪ , ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ರಮೇಶ ಡಾಕುಳಕಿ, ಮರ್ಲೆ ಅಣ್ಣಯ್ಯ, ಸಿಧ್ಧರಾಜು, ಕಾರ್ಯಕ್ರಮದಲ್ಲಿ ವಸಂತಿ ಶಿವಾನಂದ, ಕುಸುಮಕ್ಕ ಗುಜ್ಜರಬೆಟ್ಟು, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ , ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು , ಉಡುಪಿ ಜಿಲ್ಲಾ ಮಹಿಳಾ ಓಕ್ಕೂಟದ ಸಂಚಾಲಕಿ ಸುಂದರಿ ಪುತ್ತೂರು,  ಗೀತಾ ಸುರೇಶ್, ಚೈತ್ರ ಬೈಂದೂರು, ಇಂದಿರಾ ಬೈಂದೂರು, ಸರೋಜ ಗುಜ್ಜರಬೆಟ್ಟು , ಸುನೀತಾ ಕಾಪು, ಕಾವ್ಯಾ, ಅಸ್ಮಿತಾ, ನಾಗಮ್ಮ ಬೈಂದೂರು, ಗುಲಾಬಿ ಕೆಮ್ಮಣ್ಣು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ ಬಿದ್ದ ಸಮುದಾಯ ಭವನ

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ಮುದ್ದೇಬಿಹಾಳ | ದೆಹಲಿ ಸಭೆಗೂ ಮುನ್ನ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹ

ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹8,500 ಕನಿಷ್ಠ ಬೆಲೆ ಹಾಗೂ ಹೆಚ್ಚುವರಿಯಾಗಿ...

ಕೃಷ್ಣೆಯ ನೀರು ಕೇಳಲು ತೆಲಂಗಾಣಕ್ಕೆ ನೈತಿಕ ಹಕ್ಕಿಲ್ಲ: ಅಖಂಡ ಕರ್ನಾಟಕ ರೈತ ಸಂಘ

ರಾಜ್ಯದ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ತೆಲಂಗಾಣಕ್ಕೆ ಕೃಷ್ಣೆಯ ನೀರು ಹರಿಸುವುದನ್ನು...