ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 2026ರ ಏಷ್ಯನ್ ಗೇಮ್ಸ್‌ನ ಮಿಶ್ರ 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದು ನೂತನ ರಾಷ್ಟ್ರೀಯ ದಾಖಲೆ ಬರೆದಿದೆ.
ಏಷ್ಯನ್ ಗೇಮ್ಸ್ ನಲ್ಲಿ ರಿಲೇ ಆಟದಲ್ಲಿ ಕಂಚಿನ ಪದಕ ಗೆದ್ದ ಶೃಂಗೇರಿ ಕ್ಷೇತ್ರದ ಕೊಪ್ಪ ತಾಲೂಕಿನ ಸ್ನೇಹ ಎಸ್ ಎಸ್ ಅವರನ್ನು ಬೆಂಗಳೂರಿನಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ. ಡಿ ರಾಜೇಗೌಡ ಅವರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಅಭಿನಂದಿಸಿ ಮಾತನಾಡಿದ ಟಿ. ಡಿ ರಾಜೇಗೌಡ ಅವರು “ನಿಮ್ಮ ಸಾಧನೆ ನಮ್ಮ ತಾಲೂಕು ಕ್ಷೇತ್ರವಲ್ಲದೇ ಇಡೀ ದೇಶಕ್ಕೆ ಸಂತಸ ತಂದು ದೇಶದ ಕೀರ್ತಿಗೆ ಪಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಸಾಧನೆಯ ಶಿಖರ ಮತ್ತಷ್ಟು ಎತ್ತರಕ್ಕೆ ಏರುವಂತಾಗಲಿ” ಎಂದು ಹಾರೈಸಿದರು.
ಇದನ್ನೂ ಓದಿದ್ದೀರಾ?ಹಾಸನ | ₹426 ಕೋಟಿ; ಹಾಸನ-ಬೇಲೂರು ಚತುಷ್ಪಥ ರಸ್ತೆ ಅಭಿವೃದ್ಧಿ ಯೋಜನೆ; ಸಂಸದ ಶ್ರೇಯಸ್ ಪಟೇಲ್
ಸ್ನೇಹ ಅವರು ಊರಿಗೆ ಮರಳಲಿದ್ದು ತಮ್ಮ ಊರಿನ ಮಾವಿನಕಟ್ಟೆ ಜಟಿಗೇಶ್ವರ ದೇವಸ್ಥಾನದ ಆವರಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲು ಎಲ್ಲಾ ಸಿದ್ಧತೆ ನಡೆಸಲಾಗಿದೆ ವ್ಯವಸ್ಥೆ




