ಮಳೆ ಇಲ್ಲದೆ ಬರದ ವಾತಾವರಣ ಸೃಷ್ಟಿಯಾಗಿರುವ ಸಂದರ್ಭದಲ್ಲಿ ಮಳೆರಾಯನ ಕೃಪೆಗಾಗಿ ಗ್ರಾಮಸ್ಥರೆಲ್ಲರೂ ಸೇರಿ ಕಪ್ಪೆಗಳಿಗೆ ಸಂಪ್ರದಾಯ ಬದ್ಧವಾಗಿ ಮದುವೆ ಮಾಡಿಸಿ, ಊರಲ್ಲಿ ಮೆರವಣಿಗೆ ನಡೆಸಿ ಬಳಿಕ ಭರ್ಜರಿ ಸಾಮೂಹಿಕ ಬಾಡೂಟ ಸವಿದ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿಲೇಗೌಡನ ಕೊಪ್ಪಲು ಗ್ರಾಮದಲ್ಲಿ ಭಾನುವಾರದಂದು ನಡೆದಿದೆ.
ನಿಲೇಗೌಡನ ಗ್ರಾಮದ ಶ್ರೀ ಸೇವಾಲಾಲ್ ಸಮಿತಿಯ ನೇತೃತ್ವದಲ್ಲಿ ನಡೆದ ಈ ವಿಶಿಷ್ಟ ಆಚರಣೆಯಲ್ಲಿ ಒಟ್ಟು ಮೂರು ಕಪ್ಪೆಗಳನ್ನು ಬಳಸಿಕೊಳ್ಳಲಾಗಿತ್ತು. ಗ್ರಾಮದ ಗ್ರಾಮದೇವತೆ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕಪ್ಪೆಗಳನ್ನು ಇರಿಸಿ, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನದ ಆವರಣದಲ್ಲಿ ತಂದಿದ್ದ ಮೂರು ಕಪ್ಪೆಗಳ ಪೈಕಿ ಒಂದನ್ನು ‘ಗಂಡು ಕಪ್ಪೆ’ (ವರ) ಹಾಗೂ ಮತ್ತೊಂದನ್ನು ‘ಹೆಣ್ಣು ಕಪ್ಪೆ’ (ವಧು) ಎಂದು ಪರಿಭಾವಿಸಿ, ಮಂಗಲವಾದ್ಯಗಳೊಂದಿಗೆ ಸಂಪ್ರದಾಯಬದ್ಧವಾಗಿ ವಿವಾಹ ನೆರವೇರಿಸಲಾಯಿತು. ವಿಶೇಷವೆಂದರೆ, ತಂದಿದ್ದ ಮೂರನೇ ಕಪ್ಪೆಯನ್ನು ಸ್ವತಃ ಮಳೆರಾಯನ ರೂಪವೆಂದೇ ಭಾವಿಸಿದ ಗ್ರಾಮಸ್ಥರು, ಅದಕ್ಕೆ ‘ಕೆಂಚರಾಯ’ ಎಂದು ಸಾಂಪ್ರದಾಯಿಕವಾಗಿ ನಾಮಕರಣ ಮಾಡಲಾಗಿದೆ.
ಇದನ್ನ ಓದಿದ್ದೀರಾ?ಚಿಕ್ಕಮಗಳೂರು | ಬೆಳೆ ನಷ್ಟ: ಇಬ್ಬರ ರೈತರ ಸಾವು
ನಂತರ ವಿವಾಹದ ಬಳಿಕ ಕಪ್ಪೆಗಳನ್ನು ಅಲಂಕೃತ ಮಾಡಿ ಇಡೀ ಗ್ರಾಮದ ಬೀದಿಗಳಲ್ಲಿ ಸಡಗರದಿಂದ ಮೆರವಣಿಗೆ ಮೂಲಕ ಆಚರಣೆಯನ್ನು ಆಚರಿಸಲಾಗಿದೆ.





