ಅಲ್ಲಮನ ಅನನ್ಯ ಪದಪ್ರಯೋಗಗಳು | ಪರುಷ ಪುರುಷ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಪರುಷ ಪುರುಷ
ಪರಿಪರಿಯ ಅವಲೋಹವ
ಪರುಷ ಮುಟ್ಟಲು
ಹೊನ್ನು ಪರಿವರ್ತನಕ್ಕೆ ಬಂದು
ಸಲುತ್ತಿರ್ದುದು ನೋಡಾ.
ಪರುಷವ ಮಾಡುವ ಪುರುಷರೆಲ್ಲರು
ಪರುಷ ಮುಟ್ಟಿದ ಹೊನ್ನಿನಂತಿದ್ದರು ನೋಡಾ. ಪರುಷ ತಾನಾಗಲು, ಹರಿಬ್ರಹ್ಮರಿಗಳವಲ್ಲ. ಸುರರು ಕಿನ್ನರರೆಲ್ಲರು ನಿಮ್ಮ ವರದಲ್ಲಿ ಸಿಲುಕಿದ್ದರು.
ಪರುಷದಂತಿದ್ದರು ನಮ್ಮ
ಗುಹೇಶ್ವರನ ಶರಣರು.

- Advertisement -

ಪದಾರ್ಥ:
ಅವಲೋಹ  = ಇತರೆ ಲೋಹ
ಪರುಷ = ಸ್ಪರ್ಷಮಣಿ
ಪುರುಷ = ವ್ಯಕ್ತಿ, ಶರಣ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ವಚನಾರ್ಥ:
ಕಬ್ಬಿಣವು ಸೇರಿದಂತೆ ವಿವಿಧ ಬಗೆಯ ಲೋಹಗಳಿಗೆ ಪರುಷ ಮಣಿಯನ್ನು ಮುಟ್ಟಿಸಿದರೆ ಆ ಲೋಹಗಳು ಚಿನ್ನವಾಗಿ ಪರಿವರ್ತನೆಗೊಳ್ಳುತ್ತವೆ ಎಂಬುದು ವಚನದಲ್ಲಿ ಅಲ್ಲಮ ಬಳಸಿರುವ ದೃಷ್ಟಾಂತ. ಈ ದೃಷ್ಟಾಂತವನ್ನು ಆಧರಿಸಿ ವಚನ ವಿಸ್ತಾರಗೊಳ್ಳುತ್ತ ಹೋಗುತ್ತದೆ. ಇಲ್ಲಿ ಪರುಷ ಮತ್ತು ಪುರುಷ ಎಂಬ ಪದಗಳ ಚಮತ್ಕಾರಿಕ ಪ್ರಯೋಗವಿದೆ. ಪರುಷ ಅಂದರೆ ಗುರು. ಪುರುಷ ಅಂದರೆ ಶಿಷ್ಯ ಅಥವಾ ಶರಣ. ಸುಜ್ಞಾನವುಳ್ಳ ಗುರು ಮುಟ್ಟಿದ ಶಿಷ್ಯರೆಲ್ಲರೂ ಗುರುವಿನಂತೆಯೇ ಸುಜ್ಞಾನಿಗಳಾದರು. ಪರುಷ ಮುಟ್ಟಿದ ಲೋಹ ಹೊನ್ನಾಗಿ ಪರಿವರ್ತನೆಯಾದಂತೆ. ಆದರೆ ಯಾರಿಂದಲೂ ಮುಟ್ಟಿಸಿಕೊಳ್ಳದೆ ತಾವೇ ಸ್ವಯಂ ಪರುಷವಾಗಬೇಕು ಎಂಬ ಸ್ವಪ್ರತಿಷ್ಠೆಯ ಹಂಬಲದಿಂದ ಸೃಷ್ಟಿಕರ್ತನಲ್ಲಿ ಮೊರೆಹೋಗಿ ಬೇಡಿದ ಹರಿಬ್ರಹ್ಮರು, ಸುರರು, ಕಿನ್ನರರೆಲ್ಲರು ವರವನ್ನು ಬೇಡುವ ಬೇಗುದಿಯಲ್ಲಿ ಬಂಧಿಗಳಾದರೆ ಹೊರತು ಪರುಷವಾಗಲಿಲ್ಲ, ಲಿಂಗದೊಳಗೊಂದಾಗಲಿಲ್ಲ. ಶರಣರು ಎಂಬ ಪುರುಷರು ಗುರುವೆಂಬ ಪರುಷಮಣಿ ಮುಟ್ಟಿದ ಮಾತ್ರದಿಂದಲೇ ಪರುಷವಾದರು. ಲಿಂಗದೊಳಗೊಂದಾದರು.

ಪದ ಪ್ರಯೋಗಾರ್ಥ:
ಪರುಷ ಎಂಬುದು ಸ್ಪರ್ಶಮಣಿ ಅಥವಾ ಸ್ಪರ್ಶವೇದಿಯನ್ನು ಸೂಚಿಸುತ್ತದೆ. ಇದು ಪೌರಾಣಿಕ ರಸವಿದ್ಯೆಯ ಒಂದು ವಸ್ತುವಾಗಿದ್ದು, ಕಬ್ಬಿಣದಂಥ ಕ್ಷುದ್ರಲೋಹಗಳನ್ನು ಚಿನ್ನ ಅಥವಾ ಬೆಳ್ಳಿಯಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಿಕೆಯಿದೆ. ಪರುಷ ಮಣಿಯನ್ನು ಚಿರಯೌವನ, ಅಮರತ್ವ, ಶ್ರೇಷ್ಠತೆ, ಪರಿಪೂರ್ಣತೆ ಎಂದು ಕೂಡಾ ಅರ್ಥೈಸಲಾಗಿದೆ. ಹರಿಶ್ಚಂದ್ರನು ವಿಶ್ವಾಮಿತ್ರನ ಮಾತಿನಂತೆ ತನ್ನ ರಾಜ್ಯವನ್ನು ತೊರೆದು ಪತ್ನಿ ಮತ್ತು ಪುತ್ರನೊಂದಿಗೆ ತೆರಳುವ ಸನ್ನಿವೇಶದಲ್ಲಿ ಪುರಜನರು ವ್ಯಕ್ತಪಡಿಸುವ ಸಂಕಟದ ಪರಿಯನ್ನು ಕವಿ ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದಲ್ಲಿ “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ” ಎಂದು ವರ್ಣಿಸಿದ್ದಾನೆ. ಕವಿ ರಾಘವಾಂಕನಿಗಿಂತ ಕೆಲವೇ ವರ್ಷಗಳು ಹಿರಿಯನಾದ ಅಲ್ಲಮ ಪರುಷ ಪುರುಷ ಎಂಬ ಪದಗಳನ್ನು ವಚನದಲ್ಲಿ ಬಳಸಿದ ರೀತಿಯನ್ನು ಗಮನಿಸಿದರೆ ಅಲ್ಲಮನು ಅನುಭಾವಿ ಮಾತ್ರವಲ್ಲದೆ ಆಗಿನ ಕಾಲದ ಅಪ್ರತಿಮ ಕನ್ನಡ ಕವಿ ಪುಂಗವನೇ ಎನ್ನಬಹುದು. ವಚನದಲ್ಲಿ ಮತ್ತೆ ಮತ್ತೆ ಹೈಲೈಟ್ ಆಗುವ ಪರುಷ ಪುರುಷ ಎಂಬ ಪ್ರಾಸಬದ್ದ ಪದಗಳು ಅತ್ಯಂತ ಪರಿಣಾಮಕಾರಿಯಾದ ಪದ ಪ್ರಯೋಗಗಳು.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...