‘ಜೈ ಹಿಂದ್‌’ ಘೋಷಣೆಯ ಹಿಂದಿನ ರೂವಾರಿ ಅಬಿದ್ ಹಸನ್ ಸಫ್ರಾನಿ

Date:

ಬೋಸ್ ಸೈನ್ಯ ಸಜ್ಜುಗೊಳಿಸಲು ಪ್ರಾರಂಭಿಸಿದಾಗ ಒಂದು ಪ್ರಾಯೋಗಿಕ ಸಮಸ್ಯೆ ಎದುರಾಯಿತು. ಹಿಂದೂ, ಮುಸ್ಲಿಂ, ಸಿಖ್ ಯೋಧರಿದ್ದ ಆ ಸೈನ್ಯದಲ್ಲಿ ಪ್ರತಿಯೊಬ್ಬರೂ ಸಹಜವಾಗಿ ತಮ್ಮ ಸಮುದಾಯದ ವಂದನೆಗಳಾದ “ರಾಮ್ ರಾಮ್”, “ಸಲಾಮ್ ಅಲೈಕುಮ್” ಅಥವಾ “ಸತ್ ಶ್ರೀ ಅಕಾಲ್” ಬಳಸುತ್ತಿದ್ದರು. ಎಲ್ಲರನ್ನೂ ಒಗ್ಗೂಡಿಸುವ ಒಂದು ಜಾತ್ಯತೀತ ವಂದನೆಯ ಅಗತ್ಯವಿತ್ತು ಎಂದು ಬೋಸ್ ಗುರುತಿಸಿದರು. 1941ರ ನವೆಂಬರ್‌ನಲ್ಲಿ ಬರ್ಲಿನ್‌ನ ಫ್ರೀ ಇಂಡಿಯಾ ಸೆಂಟರ್‌ನ ಮೊದಲ ಸಭೆಯಲ್ಲಿ ಇಂಥ ಒಂದು ವಂದನೆ ಕೊಡುವಂತೆ ಬೋಸ್ ಹಸನ್ ಅವರನ್ನು ಕೇಳಿದಾಗ, ಚಿಂತನೆಯ ಬಳಿಕ ಹಸನ್ ಸೂಚಿಸಿದ್ದೇ “ಜೈ ಹಿಂದ್”

- Advertisement -

ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲಿನಿಂದ ಮೊಳಗುವ ಪ್ರಧಾನಿಯವರ ಭಾಷಣ ಮುಕ್ತಾಯವಾಗುವುದು “ಜೈ ಹಿಂದ್” ಎಂಬ ಎರಡು ಪದಗಳ ಘೋಷಣೆಯೊಂದಿಗೆ. ಇದು ಭಾರತೀಯ ಸಶಸ್ತ್ರ ಪಡೆಗಳ ಅಧಿಕೃತ ವಂದನೆ, ರಾಷ್ಟ್ರೀಯ ಹೆಮ್ಮೆಯ ಪ್ರತಿದಿನದ ನಾಡಿಮಿಡಿತ. ಆದರೆ ದೇಶಕ್ಕೆ ಈ ಏಕತೆಯ ವಂದನೆಯನ್ನು ನೀಡಿದ ಝೈನುಲ್ ಅಬೀದೀನ್ ಹಸನ್ ಅವರ ಹೆಸರು ನಮ್ಮ ಇತಿಹಾಸದ ಪುಟಗಳಲ್ಲಿ ಬಹುತೇಕ ಮರೆಯಾಗಿದೆ. ಉಜ್ವಲ ಭವಿಷ್ಯವನ್ನು ಬದಿಗೊತ್ತಿ, ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್ಎ) ಸೇರಿದ ಹೈದರಾಬಾದ್‌ನ ಯುವ ಎಂಜಿನಿಯರಿಂಗ್ ವಿದ್ಯಾರ್ಥಿ ಹಸನ್, ಧಾರ್ಮಿಕ ಮತ್ತು ಪ್ರಾದೇಶಿಕ ಗಡಿಗಳನ್ನು ಮೀರಿ ಆಧುನಿಕ ಭಾರತೀಯ ಅಸ್ಮಿತೆಯನ್ನು ರೂಪಿಸುವ ಘೋಷಣೆಯೊಂದನ್ನು ಮುಂಚೂಣಿಗೆ ತಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬ್ರಿಟಿಷ್ ವಿರೋಧಿ ನಿಲುವು ಹೊಂದಿದ್ದ ಶ್ರೀಮಂತ ಕುಟುಂಬವೊಂದರಲ್ಲಿ 1911ರಲ್ಲಿ ಜನಿಸಿದ ಹಸನ್, ಡೆಕ್ಕನ್ ಪ್ರಾಂತ್ಯದ ಸೌಹಾರ್ದಯುತ ಸಂಸ್ಕೃತಿಯಲ್ಲಿ ಬೆಳೆದರು. ಗಾಂಧೀಜಿಯವರ ಸಬರಮತಿ ಆಶ್ರಮದಲ್ಲಿ ಸ್ವಲ್ಪ ಕಾಲ ಕಳೆದ ನಂತರ, ಎಂಜಿನಿಯರಿಂಗ್ ವ್ಯಾಸಂಗಕ್ಕಾಗಿ ಜರ್ಮನಿಯ ಡ್ರೆಸ್ಡನ್‌ಗೆ ತೆರಳಿದರು. ಆದರೆ 1941ರಲ್ಲಿ ಎಲ್ಲವೂ ಬದಲಾಯಿತು. ತಮ್ಮ ‘ಫ್ರೀ ಇಂಡಿಯಾ ಲೀಜನ್’ಗೆ ಭಾರತೀಯ ಯುದ್ಧ ಕೈದಿಗಳು ಮತ್ತು ವಲಸಿಗರನ್ನು ಸೇರಿಸಿಕೊಳ್ಳುವ ಉದ್ದೇಶದಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಬರ್ಲಿನ್‌ನಲ್ಲಿದ್ದರು. ಎಂಜಿನಿಯರಿಂಗ್ ಕೊನೆಯ ವರ್ಷ ಮುಗಿಸಿ ಬಳಿಕ ಸೇರುವುದಾಗಿ ಹಸನ್ ಹೇಳಿದಾಗ, “ಇಂಥ ಸಣ್ಣ ಲೆಕ್ಕಾಚಾರಗಳಲ್ಲಿ ಸಿಲುಕಿದವರಿಗೆ ನನ್ನ ಬಳಿ ಸಮಯವಿಲ್ಲ” ಎಂದು ಬೋಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಆ ಮಾತಿನ ಹಿಂದಿನ ಸತ್ಯವನ್ನು ಅರಿತ ಹಸನ್, ತಮ್ಮ ಓದಿಗೆ ವಿದಾಯ ಹೇಳಿ ಬೋಸ್ ಅವರ ಆಪ್ತ ಕಾರ್ಯದರ್ಶಿ ಮತ್ತು ಭಾಷಾಂತರಕಾರರಾದರು.

1943ರ ಆರಂಭದಲ್ಲಿ, ಅವರಿಬ್ಬರು ಜರ್ಮನಿಯ ಕೀಲ್‌ನಿಂದ ಜಪಾನ್ ವಶದಲ್ಲಿದ್ದ ಸುಮಾತ್ರಾಕ್ಕೆ ಜಲಾಂತರ್ಗಾಮಿ ಮೂಲಕ ಸುಮಾರು ಮೂರು ತಿಂಗಳ ಅತ್ಯಂತ ಅಪಾಯಕಾರಿ ಪ್ರಯಾಣ ಕೈಗೊಂಡರು — ಜರ್ಮನ್ ಜಲಾಂತರ್ಗಾಮಿಯಿಂದ ಸಮುದ್ರದ ನಡುವೆಯೇ ಜಪಾನಿನ ಜಲಾಂತರ್ಗಾಮಿಗೆ ಬದಲಾಯಿಸಿಕೊಂಡು ಸಾಗಿದ ಪ್ರಯಾಣ ಅದು. ಶತ್ರುಪಡೆಗಳ ಕಣ್ಗಾವಲಿದ್ದ, ಕಡಲಗಣಿಗಳಿದ್ದ ಸಮುದ್ರದಲ್ಲಿ, ಜಲಾಂತರ್ಗಾಮಿಯ ಕಿರಿದಾದ ಲೋಹದ ಕೋಣೆಯೊಳಗೆ ವಾರಗಟ್ಟಲೆ ಕಳೆದ ಆ ಏಕಾಂತವನ್ನು ಅವರು ಆಗ್ನೇಯ ಏಷ್ಯಾದಲ್ಲಿ ಮುಂಬರುವ ಐಎನ್ಎ ಕಾರ್ಯಾಚರಣೆಗಳ ರೂಪುರೇಷೆ ಚರ್ಚಿಸಲು ಬಳಸಿಕೊಂಡರು.

ಬೋಸ್ ಸೈನ್ಯ ಸಜ್ಜುಗೊಳಿಸಲು ಪ್ರಾರಂಭಿಸಿದಾಗ ಒಂದು ಪ್ರಾಯೋಗಿಕ ಸಮಸ್ಯೆ ಎದುರಾಯಿತು. ಹಿಂದೂ, ಮುಸ್ಲಿಂ, ಸಿಖ್ ಯೋಧರಿದ್ದ ಆ ಸೈನ್ಯದಲ್ಲಿ ಪ್ರತಿಯೊಬ್ಬರೂ ಸಹಜವಾಗಿ ತಮ್ಮ ಸಮುದಾಯದ ವಂದನೆಗಳಾದ “ರಾಮ್ ರಾಮ್”, “ಸಲಾಮ್ ಅಲೈಕುಮ್” ಅಥವಾ “ಸತ್ ಶ್ರೀ ಅಕಾಲ್” ಬಳಸುತ್ತಿದ್ದರು. ಎಲ್ಲರನ್ನೂ ಒಗ್ಗೂಡಿಸುವ ಒಂದು ಜಾತ್ಯತೀತ ವಂದನೆಯ ಅಗತ್ಯವಿತ್ತು ಎಂದು ಬೋಸ್ ಗುರುತಿಸಿದರು. 1941ರ ನವೆಂಬರ್‌ನಲ್ಲಿ ಬರ್ಲಿನ್‌ನ ಫ್ರೀ ಇಂಡಿಯಾ ಸೆಂಟರ್‌ನ ಮೊದಲ ಸಭೆಯಲ್ಲಿ ಇಂಥ ಒಂದು ವಂದನೆ ಕೊಡುವಂತೆ ಬೋಸ್ ಹಸನ್ ಅವರನ್ನು ಕೇಳಿದಾಗ, ಚಿಂತನೆಯ ಬಳಿಕ ಹಸನ್ ಸೂಚಿಸಿದ್ದೇ “ಜೈ ಹಿಂದ್” — ಚುಟುಕಾದ, ಧಾರ್ಮಿಕ ಲೇಪನಗಳಿಂದ ಮುಕ್ತವಾದ, ಒಗ್ಗಟ್ಟಿನ ರಾಷ್ಟ್ರ ಎಂಬ ಪರಿಕಲ್ಪನೆಯನ್ನು ನೇರವಾಗಿ ಬಿಂಬಿಸುವ ಪದಗುಚ್ಛ. ಈ ಘೋಷಣೆಯನ್ನು ಇದಕ್ಕೂ ಮೂರು ದಶಕಗಳ ಹಿಂದೆಯೇ ಕ್ರಾಂತಿಕಾರಿ ಚೆಂಪಕರಾಮನ್ ಪಿಳ್ಳೈ ಒಂದು ಭಾಷಣದಲ್ಲಿ ಬಳಸಿದ್ದರೂ, ಅದನ್ನು ಐಎನ್ಎಗೆ ಒಂದು ಸಂಪೂರ್ಣ ಸಮಾನತೆಯ ಸ್ಥಾಯಿ ವಂದನೆಯಾಗಿ ಪ್ರತಿಷ್ಠಾಪಿಸಿದ ಕೀರ್ತಿ ಹಸನ್ ಅವರದ್ದು. ಬೋಸ್ ಇದನ್ನು ತಕ್ಷಣವೇ ಒಪ್ಪಿಕೊಂಡರು, ಆಜಾದ್ ಹಿಂದ್ ಫೌಜ್ ಅಂತಿಮವಾಗಿ ತನ್ನದೇ ಆದ ಒಂದು ಸಮಾನ ಧ್ವನಿಯನ್ನು ಪಡೆದುಕೊಂಡಿತು.

ಈ ಒಗ್ಗಟ್ಟಿನ ಬದ್ಧತೆ ಹಸನ್ ಅವರಿಗೆ ಕೇವಲ ರಾಜಕೀಯ ತಂತ್ರವಾಗಿರಲಿಲ್ಲ; ಅದು ವೈಯಕ್ತಿಕವೂ ಆಗಿತ್ತು. ಹಿಂದೂಗಳ ಪವಿತ್ರ ಬಣ್ಣವಾದ ಕೇಸರಿಯನ್ನು ಸೂಚಿಸುವ “ಸಫ್ರಾನಿ” ಎಂಬ ಪದವನ್ನು ಅವರು ಮುಂದೆ ತಮ್ಮ ಹೆಸರಿನೊಂದಿಗೇ ಸೇರಿಸಿಕೊಂಡರು — ಬಹುಧರ್ಮೀಯ ಸೈನ್ಯದ ಒಗ್ಗಟ್ಟಿಗೆ ತಾವು ಕೊಟ್ಟ ಬದುಕಿನ ಬದ್ಧತೆಗೆ ಒಂದು ಶಾಶ್ವತ ಸಂಕೇತದಂತೆ.

ಅವರು ಕೇವಲ ಕಚೇರಿಯ ಅಧಿಕಾರಿಯಾಗಿರಲಿಲ್ಲ. ಬರ್ಮಾ ಕಾಡುಗಳ ಮೂಲಕ ಇಂಫಾಲದ ಕಡೆಗೆ ಸಾಗಿದ ಐಎನ್ಎ ಪಡೆಯೊಂದಿಗೆ ಸಫ್ರಾನಿ ಹೆಜ್ಜೆ ಹಾಕಿದರು. ಮಳೆಗಾಲ, ತೀವ್ರ ಆಹಾರ ಕೊರತೆ ಮತ್ತು ಮಿತ್ರಪಡೆಗಳ ನಿರಂತರ ಬಾಂಬ್ ದಾಳಿಗಳನ್ನು ಎದುರಿಸಿ ಬದುಕುಳಿದರು. ಯುದ್ಧ ಮುಗಿದ ಮೇಲೆ ಬ್ರಿಟಿಷರ ಕೈಗೆ ಸೆರೆಸಿಕ್ಕ ಸಫ್ರಾನಿ, ಸಿಂಗಾಪುರದ ಜೈಲಿನಲ್ಲಿ ವರ್ಷಗಳ ಕಾಲ ಕಳೆದರು; ದೇಶದ್ರೋಹದ ಆರೋಪದಡಿ ಮರಣದಂಡನೆಯ ಅಪಾಯ ಎದುರಾದಾಗ, ಪಂಡಿತ್ ನೆಹರೂ ಮತ್ತು ಗವರ್ನರ್ ಜನರಲ್ ಮೌಂಟ್‌ಬ್ಯಾಟನ್ ಅವರ ಮಧ್ಯಪ್ರವೇಶದಿಂದ ಕೊನೆಯ ಕ್ಷಣದಲ್ಲಿ ಪಾರಾಗಿ 1946ರಲ್ಲಿ ಭಾರತಕ್ಕೆ ಮರಳಿದರು. ಐಎನ್ಎ ಅಧಿಕಾರಿಗಳ ಮೇಲಿನ ಇಂಥ ದೇಶದ್ರೋಹದ ವಿಚಾರಣೆಗಳು, ಐಎನ್ಎಯ ಸ್ಥೈರ್ಯ ಕುಗ್ಗಿಸುವ ಬ್ರಿಟಿಷರ ಉದ್ದೇಶಕ್ಕೆ ವಿರುದ್ಧವಾಗಿ, ದೇಶಾದ್ಯಂತ ಭಾರಿ ಜನಾಂದೋಲನ ಮತ್ತು ನೌಕಾಪಡೆಯ ಬಂಡಾಯಕ್ಕೆ ಕಿಡಿಕಾರಿ ಬ್ರಿಟಿಷರು ಭಾರತ ಬಿಟ್ಟು ತೊಲಗುವುದನ್ನು ಚುರುಕುಗೊಳಿಸಿದವು.

1947ರ ನಂತರ, ಹೊಸ ಭಾರತ ಸರ್ಕಾರಕ್ಕೆ ಸಫ್ರಾನಿ ಅವರ ನೈಜ ಸಾಮರ್ಥ್ಯದ ಅರಿವಾಯಿತು. ಬ್ರಿಟಿಷ್ ಸಾಮ್ರಾಜ್ಯದಿಂದ ದೇಶದ್ರೋಹದ ಆರೋಪ ಎದುರಿಸಿದ್ದ ಅದೇ ವ್ಯಕ್ತಿ, ಪ್ರಧಾನಿ ನೆಹರೂ ಅವರಿಂದಲೇ ಹೊಸದಾಗಿ ರಚನೆಯಾದ ‘ಭಾರತೀಯ ವಿದೇಶಾಂಗ ಸೇವೆ’ಗೆ (ಐಎಫ್ಎಸ್) ಸೇರ್ಪಡೆಗೊಂಡರು. ಈಜಿಪ್ಟ್, ಚೀನಾ, ಸ್ವಿಟ್ಜರ್ಲೆಂಡ್, ಇರಾಕ್, ಸಿರಿಯಾ, ಸೆನೆಗಲ್ ಮತ್ತು ಡೆನ್ಮಾರ್ಕ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಸಫ್ರಾನಿ, “ಜೈ ಹಿಂದ್” ಘೋಷಣೆಯ ಹಿಂದಿದ್ದ ಅದೇ ವಿಶ್ವಮಾನವ ದೃಷ್ಟಿಕೋನ ಬಳಸಿ ಶೀತಲ ಸಮರದ ಕಠಿಣ ದಿನಗಳಲ್ಲಿ ಭಾರತದ ಅಲಿಪ್ತ ನಿಲುವನ್ನು ವಿದೇಶಗಳಲ್ಲಿ ಎತ್ತಿಹಿಡಿದರು.

1969ರಲ್ಲಿ ನಿವೃತ್ತರಾದ ನಂತರ, ಸಫ್ರಾನಿ ಹೈದರಾಬಾದ್‌ಗೆ ಮರಳಿ ಶೈಕ್‌ಪೇಟ್‌ನ ಸಣ್ಣ ಕೃಷಿಭೂಮಿಯಲ್ಲಿ ನೆಮ್ಮದಿಯ ಬದುಕು ಸಾಗಿಸಿದರು. ಯಾವುದೇ ಆತ್ಮಕಥೆ ಬರೆಯಲಿಲ್ಲ, ರಾಜಕೀಯ ಲಾಭಗಳನ್ನೂ ಕೇಳಲಿಲ್ಲ. 1984ರಲ್ಲಿ ಅವರು ನಿಧನರಾದರ. ಹಿಂದೆ ಯಾವುದೇ ಸ್ಮಾರಕ ಬಿಟ್ಟುಹೋಗಲಿಲ್ಲ — ಅದರ ಅಗತ್ಯವೂ ಅವರಿಗಿರಲಿಲ್ಲ. “ಜೈ ಹಿಂದ್” ಎಂಬ ಘೋಷಣೆ ಮೊಳಗಿದಾಗಲೆಲ್ಲಾ, ಭಾರತೀಯರು ತಾವು ಹೇಗೆ ಪ್ರಾರ್ಥಿಸುತ್ತೇವೆ ಎಂಬುದರ ಆಧಾರದ ಮೇಲಲ್ಲ, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬೆಸೆಯಲ್ಪಡಬೇಕು ಎಂಬ ಅಬಿದ್ ಹಸನ್ ಸಫ್ರಾನಿ ಅವರ ಕನಸು ಪ್ರತಿಧ್ವನಿಸುತ್ತಲೇ ಇರುತ್ತದೆ.

WhatsApp Image 2026 01 13 at 7.08.49 PM
ರಿಯಾಝ್‌ ಅಹ್ಮದ್, ಕೊಪ್ಪಳ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...

‘INDIA’ ಮೈತ್ರಿಕೂಟದ ಸಭೆಗಾಗಿ ದೆಹಲಿಗೆ ಮಮತಾ ಪ್ರಯಾಣ: ‘ದಿಮಾಗಿ ನಕ್ಸಲರ’ ಜತೆ ಸಮಾಲೋಚನೆ ಎಂದ ಸುವೇಂದು ಅಧಿಕಾರಿ

ಬುಧವಾರ ನಡೆಯಲಿರುವ 'INDIA' ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ...

ಮೋದಿ ಪ್ರಮಾಣಪತ್ರ ವಿವಾದ: ಕೇಜ್ರಿವಾಲ್ ಮೇಲ್ಮನವಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಪ್ರಮಾಣಪತ್ರವನ್ನು ಬಹಿರಂಗಪಡಿಸುವಂತೆ ಗುಜರಾತ್...