ಬೀದರ್‌ | ಮಾನವೀಯ ಬದುಕಿಗೆ ಬುದ್ಧನ ಮಾರ್ಗ ಅನುಸರಿಸಿ: ಭಂತೆ ಸಂಘರಕ್ಷಿತ

Date:

ಬೀದರ್‌ನ ಜೈಭೀಮ ನಗರದ ಸಿದ್ಧಾರ್ಥ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಮೂರು ತಿಂಗಳ ವರ್ಷಾವಾಸದ ಸಮಾರೋಪ ಸಮಾರಂಭ ನವೆಂಬರ್ 11ರಂದು ಸಂಜೆ ಸಂಭ್ರಮದಿಂದ ನಡೆಯಿತು.

- Advertisement -

ಆಣದೂರಿನ ವೈಶಾಲಿ ನಗರದ ಭಂತೆ ಸಂಘರಕ್ಷಿತ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತ್ರಿಶರಣ, ಪಂಚಶೀಲ ಹಾಗೂ ಆರ್ಯ ಅಷ್ಟಾಂಗ ಮಾರ್ಗದ ಮಹತ್ವದ ಕುರಿತು ಧಮ್ಮ ಬೋಧನೆ ನೀಡಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಮಂಡೇಲ ನೇತೃತ್ವದಲ್ಲಿ ಗುಲಾಮಗಿರಿ – ವರ್ಣಭೇದ ನೀತಿ ವಿರುದ್ಧ...

ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರು ಕಟ್ಟಿದ್ದ ಈ ಪಕ್ಷ ದಾರಿ ತಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. ಆಡಳಿತಶಾಹಿಯ ಭ್ರಷ್ಟಾಚಾರ, ಮಿತಿಮೀರಿದ ಬಡತನ, ನಿರುದ್ಯೋಗ, ಮತ್ತು...

“ಗೌತಮ ಬುದ್ಧರು ತೋರಿಸಿಕೊಟ್ಟ ವೈಜ್ಞಾನಿಕ ಹಾಗೂ ಮಾನವೀಯ ಬದುಕಿನ ಮಾರ್ಗವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬುದ್ಧರ ವಿಚಾರಧಾರೆಗಳು ಮನುಷ್ಯನ ಬದುಕಿನಲ್ಲಿ ಜ್ಞಾನ, ಸಮಾನತೆ ಮತ್ತು ಪರಿವರ್ತನೆಗೆ ದಾರಿದೀಪವಾಗಿವೆ” ಎಂದು ಭಂತೆ ಸಂಘರಕ್ಷಿತ ತಿಳಿಸಿದರು.

ಬೀದರ್ ಮಹಾನಗರ ಪಾಲಿಕೆ ಸದಸ್ಯ ಸೂರ್ಯಕಾಂತ ಸಾಧುರೆ ಕಾರ್ಯಕ್ರಮ ಉದ್ಘಾಟಿಸಿ, “ಸಮಾಜದ ಪ್ರಗತಿಗೆ ರಾಜಕೀಯ ಅಧಿಕಾರ ಪ್ರಮುಖ ಸಾಧನವಾಗಿದೆ. ರಾಜಕೀಯ ಅಧಿಕಾರದ ಮೂಲಕ ನಮ್ಮ ಹಕ್ಕುಗಳನ್ನು ನಾವೇ ಪಡೆದುಕೊಂಡು ಸಮಾಜದ ಅಭಿವೃದ್ಧಿ ಸಾಧಿಸಲು ಸಾಧ್ಯ” ಎಂದರು.

ದೇವೇಂದ್ರ ಭಾಲ್ಕಿ ವಿಶೇಷ ಉಪನ್ಯಾಸ ನೀಡಿದರು. ಮುಖಂಡ ಪ್ರೇಮಕುಮಾರ್ ಕಾಂಬ್ಳೆ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಬೌದ್ಧ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶೋಭವತಿ ಜಂಜಿರೆ, ತಾಲೂಕು ಅಧ್ಯಕ್ಷ ಶಿವಕುಮಾರ್ ಸದಾಫುಲೆ, ತಾಲೂಕು ಖಜಾಂಚಿ ನರಸಪ್ಪ ಮೇಟಿ, ರಾಜಶೇಖರ ಸಿಂಗಾರೆ, ವೆಂಕಟ ಶಿಂದೆ ಹಾಗೂ ವಿಜಯಕುಮಾರ್ ಗುಮ್ಮೆ ಉಪಸ್ಥಿತರಿದ್ದರು. ಸಾಹಿತಿ ಸುಬ್ಬಣ್ಣ ಕರಕನಳ್ಳಿ ನಿರೂಪಿಸಿದರು.

ವೈಷ್ಣವಿ ಅವರ ನೃತ್ಯ ಪ್ರದರ್ಶನ ಹಾಗೂ ಆಕಾಶ್ ಜ್ಯೋತಿ ಅವರ ಬುದ್ಧಗೀತೆಗಳು ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿದವು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸಚಿನ್ ಸಿಂಪಿಗೆ, ಗೌತಮ್ ಮೀಸೆ, ರಾಜಕುಮಾರ ಹೊಸಮನಿ, ಸಂಜುಕುಮಾರ್ ಪೂಜಾರಿ, ವಿನೋದ ಮಾಳಗೆ, ಪ್ರವೀಣ ಚತುರೇ, ಆಕಾಶ್ ಮೈನಳೆ, ಶ್ರೀಕಾಂತ್ ಇಮೇಲಿಕಾರ, ಪ್ರವೀಣ ಕಾಂಬ್ಳೆ, ಸಂದೀಪ ಸಂಪಿಗೆ, ಮಾರುತಿ ಬಂಡರೆ, ಪ್ರೇಮಸಾಗರ, ಲೋಕೇಶ್ ಮೇತ್ರೆ, ವಿಕ್ರಂ ನೆಲವಡಕರ, ವಿಜಯ್ ಮಾಲೆ ಸೇರಿದಂತೆ ಭಜನಾ ಮಂಡಳಿಯ ಕಲಾವಿದರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬೀದರ್‌ | ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ನ.28ರಂದು

WhatsApp Image 2026 10 10 at 7.46.08 PM 43
eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ ಚುನಾವಣೆಗೆ ಹೊಸ ತಿರುವು: ಓವೈಸಿ- ಚಂದ್ರಶೇಖರ್ ಮೈತ್ರಿ ಘೋಷಣೆ; ಆಜಾದ್ ಸಿಎಂ ಅಭ್ಯರ್ಥಿ

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ರಾಜಕಾರಣದಲ್ಲಿ...

ಬೀದರ್‌ | ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ‌ ಆರಂಭ

ಪ್ರಸಕ್ತ ವರ್ಷದ ಹಂಗಾಮಿನ ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಿ,...

‘ಬುಲ್ಡೋಜರ್’ ಈಗ ಬ್ರ್ಯಾಂಡ್ ಎಂದ ಸಿಎಂ ಯೋಗಿ; ಪರ-ವಿರೋಧದ ಚರ್ಚೆ!

ಬುಲ್ಡೋಜರ್‌ಗಳು ಇಂದು ಉತ್ತರ ಪ್ರದೇಶದೊಂದಿಗೆ ತಳುಕು ಹಾಕಿಕೊಂಡಿರುವ ಒಂದು ಬ್ರ್ಯಾಂಡ್ ಆಗಿ...

2 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದ ಹಣದುಬ್ಬರ: RBI ನಿಗದಿತ 6%ರ ಗಡಿ ದಾಟಿದ ಬೆಲೆ ಏರಿಕೆ ಬಿಸಿ!

ತರಕಾರಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ, ದೇಶದ...