ಯುಪಿಗೆ ಚಿರಾಗ್-ನಿತಿನ್ ಎಂಟ್ರಿ; ‘ಮಹಾ ಸಮರ’ಕ್ಕೆ ಸಜ್ಜಾದ ಎನ್‌ಡಿಎ

Date:

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ, ಬಿಹಾರದ ಮಿತ್ರಪಕ್ಷಗಳಾದ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಹಾಗೂ ಜನತಾ ದಳ (ಯುನೈಟೆಡ್) ಉತ್ತರಪ್ರದೇಶದ ಮೇಲೆ ಕಣ್ಣಿಟ್ಟಿವೆ. ಇದು ಎನ್‌ಡಿಎ ಒಕ್ಕೂಟದೊಳಗೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಬಿಹಾರದ ಈ ಪಕ್ಷಗಳು ಉತ್ತರ ಪ್ರದೇಶದ ರಾಜಕೀಯ ಅಖಾಡಕ್ಕೆ ಧುಮುಕಲು ಸಜ್ಜಾಗುತ್ತಿದ್ದಂತೆಯೇ, ರಾಜ್ಯದಲ್ಲಿ ಈಗಾಗಲೇ ಇರುವ ಬಿಜೆಪಿ ಮಿತ್ರಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. 

- Advertisement -

ಕೇಂದ್ರ ಸಚಿವ ಹಾಗೂ ಎಲ್‌ಜೆಪಿ (ಆರ್‌ವಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಗುರುವಾರ ವಾರಾಣಸಿಯಿಂದ ತಮ್ಮ ಪಕ್ಷದ “ನವ ಸಂಕಲ್ಪ ಮಹಾಸಭಾ” ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಇನ್ನೊಂದೆಡೆ, ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ಹಾಗೂ ಬಿಹಾರ ಆರೋಗ್ಯ ಸಚಿವ ನಿಶಾಂತ್ ಕುಮಾರ್ ಕೂಡ ಶೀಘ್ರದಲ್ಲೇ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ಬಿಹಾರದ ಈ ನಾಯಕರ ಹಠಾತ್ ಎಂಟ್ರಿ ಯುಪಿಯ ಎನ್‌ಡಿಎ ಮೈತ್ರಿಕೂಟದಲ್ಲಿ ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಓಂ ಪ್ರಕಾಶ್ ರಾಜ್‌ಭರ್ ನೇತೃತ್ವದ ಸುಹೇಲ್‌ದೇವ್ ಭಾರತೀಯ ಸಮಾಜ ಪಾರ್ಟಿ (SBSP) ಈ ಬಗ್ಗೆ  ಖಾರವಾಗಿ ಪ್ರತಿಕ್ರಿಯಿಸಿದ್ದು, ಬಿಹಾರದ ಪಕ್ಷಗಳ ವಿಸ್ತರಣೆಗೆ ತಡೆಯೊಡ್ಡುವುದಾಗಿ ಎಚ್ಚರಿಸಿದೆ.

“ಬಿಹಾರದಲ್ಲಿ ನಮ್ಮನ್ನು ಎನ್‌ಡಿಎ ಅಂಗವಾಗಿ ಸ್ವೀಕರಿಸಲು ಅವಕಾಶ ನೀಡಲಿಲ್ಲ. ಹಾಗಿರುವಾಗ ಬಿಹಾರದ ಪಕ್ಷಗಳನ್ನು ಉತ್ತರ ಪ್ರದೇಶಕ್ಕೆ ಕಾಲಿಡಲು ನಾವು ಬಿಡುವುದಿಲ್ಲ. ಯಾವುದೇ ಪಕ್ಷ ಬಂದರೂ ನಮ್ಮ ವಿರೋಧ ಖಂಡಿತ. ಒಂದು ವೇಳೆ ಬಿಹಾರ ಪಕ್ಷಗಳಿಗೆ ಮಣೆ ಹಾಕಿದರೆ, ಸುಹೇಲ್‌ದೇವ್ ಪಾರ್ಟಿ ತನ್ನದೇ ಆದ ಪರ್ಯಾಯ ಹಾದಿ ಹುಡುಕಿಕೊಳ್ಳಬೇಕಾಗುತ್ತದೆ,” ಎಂದು ಎಸ್‌ಬಿಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರವಿಂದ್ ರಾಜ್‌ಭರ್ ಖಡಕ್ ಸಂದೇಶ ರವಾನಿಸಿದ್ದಾರೆ.

ಈ ವಾಕ್ಸಮರವು ಚುನಾವಣೆಗೆ ಮುನ್ನವೇ ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆ ಮತ್ತು ರಾಜಕೀಯ ವಲಯದ ಮೇಲಾಟಕ್ಕೆ ಸಾಕ್ಷಿಯಾಗಿದೆ. ಎಸ್‌ಬಿಎಸ್‌ಪಿಗೆ ಇದು ಕೇವಲ ಪಕ್ಷಗಳ ವಿಸ್ತರಣೆಯ ಪ್ರಶ್ನೆಯಲ್ಲ, ಮಿತ್ರಪಕ್ಷಗಳನ್ನು ರಾಜ್ಯದಿಂದ ರಾಜ್ಯಕ್ಕೆ ನಡೆಸಿಕೊಳ್ಳುವ ರೀತಿಯ ಮೇಲಿನ ಅಸಮಾಧಾನ. 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭಾಗವಾಗಿ ಸ್ಪರ್ಧಿಸಲು ಎಸ್‌ಬಿಎಸ್‌ಪಿ ಬಯಸಿತ್ತಾದರೂ ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಬಳಿಕ ಸ್ವತಂತ್ರವಾಗಿ ಕೆಲ ಸ್ಥಾನಗಳಲ್ಲಿ ಸ್ಪರ್ಧಿಸಿ, ಬಿಎಸ್‌ಪಿಗೆ ಬೆಂಬಲ ಸೂಚಿಸಿದರೂ ಚುನಾವಣೆಯಲ್ಲಿ ಸೌಂಡು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಯುಪಿಯಲ್ಲಿ ತನ್ನ ರಾಜಕೀಯ ತೂಕ ಬಳಸಿ ಬಿಹಾರ ಪಕ್ಷಗಳಿಗೆ ತಡೆಹಾಕುವುದು ಎಸ್‌ಬಿಎಸ್‌ಪಿ ತಂತ್ರವಾಗಿದೆ.

ಮಿತ್ರಪಕ್ಷಗಳ ಈ ಮಹತ್ವಾಕಾಂಕ್ಷೆಯ ಕಸರತ್ತು ಒಕ್ಕೂಟಕ್ಕೆ ಧಕ್ಕೆ ತರದಂತೆ ನೋಡಿಕೊಳ್ಳುವುದು ಈಗ ಬಿಜೆಪಿ ನಾಯಕತ್ವಕ್ಕೆ ದೊಡ್ಡ ಸವಾಲಾಗಿದೆ. ಈ ನಡುವೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಗೋರಖ್‌ಪುರಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಮೈತ್ರಿ ಪಕ್ಷಗಳಾದ ಅಪ್ನಾ ದಳ (ಸೋನೆಲಾಲ್) ಮತ್ತು ನಿಷಾದ್ ಪಾರ್ಟಿಯ ಶಾಸಕರನ್ನು ಭೇಟಿಯಾಗಲಿದ್ದಾರೆ. ಶೋಹ್ರತ್‌ಗಢ ಅಪ್ನಾ ದಳ ಶಾಸಕ ವಿನಯ್ ವರ್ಮಾ ಹಾಗೂ ನಿಷಾದ್ ಪಾರ್ಟಿಯ ಹಲವು ಶಾಸಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಎಸ್‌ಬಿಎಸ್‌ಪಿ ನೀಡಿರುವ ಎಚ್ಚರಿಕೆ ಕುರಿತು ಬಿಜೆಪಿ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2023ರಿಂದ ಬಿಜೆಪಿ ಜೊತೆ ಎಸ್‌ಬಿಎಸ್‌ಪಿ ಮೈತ್ರಿಯಲ್ಲಿದ್ದರೂ, ಇವೆರಡರ ಸಂಬಂಧ ಸುಲಭದ್ದೇನಲ್ಲ. ಕಳೆದ ವರ್ಷ ರಾಜ್‌ಭರ್ ಅವರ ಹೇಳಿಕೆಯನ್ನು ವಿರೋಧಿಸಿ ಆರ್‌ಎಸ್‌ಎಸ್ ಅಂಗಸಂಸ್ಥೆ ಎಬಿವಿಪಿ ಕಾರ್ಯಕರ್ತರು ಅವರ ಲಕ್ನೋ ನಿವಾಸದ ಮೇಲೆ ಕಲ್ಲು ತೂರಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

ಉತ್ತರ ಪ್ರದೇಶದಲ್ಲಿ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ಆರ್‌ವಿ) ಪ್ರವೇಶಿಸಿದರೆ, ಸಮಾಜವಾದಿ ಪಾರ್ಟಿಯ (SP) ‘ಪಿಡಿಎ’ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ತಂತ್ರಕ್ಕೆ ಕೌಂಟರ್ ಕೊಡಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಜಾತವ್-ಯೇತರ ದಲಿತ ಮತಗಳನ್ನು ಸೆಳೆಯಲು ಚಿರಾಗ್ ನೆರವಾಗಬಹುದು. ಪೂರ್ವಾಂಚಲ ಮತ್ತು ಮಧ್ಯ ಯುಪಿಯಲ್ಲಿ ಕಳೆದೆರಡು ವರ್ಷಗಳಿಂದ ಸಂಘಟನೆ ಬಲಪಡಿಸುತ್ತಿರುವ ಎಲ್‌ಜೆಪಿ(ಆರ್‌ವಿ), ಪಾಸಿ ಮತ್ತು ಪಾಸ್ವಾನ್ ಸಮುದಾಯಗಳ ಮತಗಳ ಮೇಲೆ ಕಣ್ಣಿಟ್ಟಿದೆ.

2025ರ ಬಿಹಾರ ಚುನಾವಣೆಯಲ್ಲಿ ಎಲ್‌ಜೆಪಿ(ಆರ್‌ವಿ) ದಲಿತ ಮತಗಳನ್ನು ಧ್ರುವೀಕರಿಸಲು ನೆರವಾಗಿದ್ದರೂ, 2024ರ ಲೋಕಸಭಾ ಚುನಾವಣೆಯ ಕಳಪೆ ಪ್ರದರ್ಶನದ ನಂತರ ಯುಪಿಯ ಸ್ಥಳೀಯ ಮಿತ್ರಪಕ್ಷಗಳು ಹಾಗೂ ಬಿಜೆಪಿಯ ನಡುವೆ ಬಿರುಕು ಮೂಡಿತ್ತು. ಸಣ್ಣ ಸಣ್ಣ ಜಾತಿ ಆಧಾರಿತ ಪಕ್ಷಗಳನ್ನು ನಂಬಿಕೊಂಡಿದ್ದ ಬಿಜೆಪಿಗೆ ಲೋಕಸಭೆಯಲ್ಲಿ ಆ ಮತಗಳು ನಿರೀಕ್ಷಿತ ಮಟ್ಟದಲ್ಲಿ ಸಿಗಲಿಲ್ಲ. ಇದು ಮೈತ್ರಿಕೂಟದಲ್ಲಿ ಕಿರಿಕಿರಿಯನ್ನು ಹೆಚ್ಚಿಸಿದ್ದು, ಈಗ ಎಸ್‌ಬಿಎಸ್‌ಪಿ ಹೇಳಿಕೆಯ ಮೂಲಕ ಬಹಿರಂಗವಾಗಿದೆ. ಇನ್ನೊಂದೆಡೆ, ಅಪ್ನಾ ದಳ (ಎಸ್) ಕೂಡ ತನ್ನ ಸಂಘಟನೆಯನ್ನು ಚುರುಕುಗೊಳಿಸುತ್ತಿದ್ದು, ಒಕ್ಕೂಟದಲ್ಲಿ ತನ್ನ ಹಿಡಿತ ಸಡಿಲವಾಗದಂತೆ ಎಚ್ಚರವಹಿಸುತ್ತಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಮನಾಬಾದ್‌ | ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಧರಣಿ

ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮದ ಸಮೀಪ ಸ್ಥಾಪಿಸಿರುವ ತ್ಯಾಜ್ಯ ವಿಲೇವಾರಿ ಘಟಕವನ್ನು...

ಬೀದರ | ಪ್ರಥಮ ದಲಿತ ಬಂಡಾಯ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ

ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗುತ್ತಿರುವ ಜಿಲ್ಲಾ ಪ್ರಥಮ...

2032ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯತ್ತ ನಮ್ಮ ರಾಜ್ಯ ಸಾಗುತ್ತಿದೆ: ಡಿ ಕೆ ಶಿವಕುಮಾರ್

"ಕರ್ನಾಟಕವು 2032ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯತ್ತ ಸಾಗುತ್ತಿದೆ....

ಗೂಗಲ್, ವಿಪ್ರೋ, ಒರಾಕಲ್ ಬಾಗಿಲು ತಟ್ಟಿದ ಕರವೇ: ಕನ್ನಡಿಗರ ಉದ್ಯೋಗ ಪ್ರಾತಿನಿಧ್ಯದ ವಿವರಕ್ಕೆ ಮನವಿ

ಕರ್ನಾಟಕದ ಉದ್ಯಮ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ...