ನಾಗರ ಪಂಚಮಿಯಿಂದ ಗೌರಿ ಗಣೇಶನವರೆಗೆ: ಹಬ್ಬಗಳ ಹಿಂದಿನ ಕೃಷಿ ವಿಜ್ಞಾನ, ಆರ್ಥಿಕ ಚಕ್ರ

Date:

ನಾನು ಸಣ್ಣವನಾಗಿದ್ದಾಗ ಕೇಳಿದ ಕಥೆಗಳು ಈಗ ವೈಚಾರಿಕ ಹಿನ್ನೆಲೆಯ ಲೇಖನಗಳಾಗಿ ಮಾರ್ಪಡುತ್ತಿವೆ. ಪ್ರತಿ ಹಬ್ಬಗಳ ಹಿಂದೆ ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಅಡಗಿದೆ ಎಂಬುದು ತಿಳಿಯುತ್ತಿದೆ..

- Advertisement -
  1. ಹುತ್ತದ ಪೂಜೆ – ಗೆದ್ದಲಿನ ಪಾಲನೆ ಮತ್ತು ಸೊಳ್ಳೆ ನಿವಾರಣೆ

ನಾಗರ ಪಂಚಮಿ ಶ್ರಾವಣ ಮಾಸದಲ್ಲಿ ಬರುತ್ತದೆ. ಆಗ ಮಳೆ ಸುರಿದು ಹುತ್ತಗಳು ತೇವವಾಗಿರುತ್ತವೆ. ರೈತ ತನ್ನ ಹೊಲದಲ್ಲಿ ಹುತ್ತವನ್ನು ಒಡೆಯುವುದಿಲ್ಲ. ಏಕೆಂದರೆ ಹುತ್ತದಲ್ಲಿರುವ ಗೆದ್ದಲು ಮತ್ತು ಇರುವೆಗಳೇ ಭೂಮಿಯ ಅತ್ಯುತ್ತಮ ಇಂಜಿನಿಯರ್ ಗಳು. ಅವು ಭೂಮಿಯಾಳದ ಗಟ್ಟಿ ಮಣ್ಣನ್ನು ಮೇಲೆ ತಂದು, ಮಣ್ಣನ್ನು ಸಡಿಲ ಮಾಡಿ, ನೀರು ಇಂಗುವಂತೆ ಮಾಡುತ್ತವೆ. ಅವುಗಳ ಬಿಲಗಳೇ ಮಳೆ ನೀರು ಭೂಮಿಯಲ್ಲಿ ಇಂಗುವ ನೈಸರ್ಗಿಕ ಕೊಳವೆಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಆ ಗೆದ್ದಲುಗಳಿಗೆ ಮಳೆಗಾಲದಲ್ಲಿ ಆಹಾರ ಸಿಗುವುದಿಲ್ಲ. ಆದ್ದರಿಂದ ರೈತ ಅಕ್ಕಿ ತಂಬಿಟ್ಟು (ಕಾರ್ಬೋಹೈಡ್ರೇಟ್) ಮತ್ತು ಎಳ್ಳು ತಂಬಿಟ್ಟು (ಎಣ್ಣೆ ಮತ್ತು ಪ್ರೋಟೀನ್) ಅನ್ನು ಹುತ್ತದ ಬಳಿ ಇಡುತ್ತಿದ್ದ. ಅದು ನಾಗರನಿಗೆ ಅಲ್ಲ, ಆ ಜೀವಿಗಳಿಗೆ. ಇನ್ನು ಒಣಗಿದ ಕೊಬ್ಬರಿ ಮಟ್ಟೆಯಲ್ಲಿ ಬೆಂಕಿ ಹಾಕಿ, ಅದಕ್ಕೆ ಬೆಣ್ಣೆ ಹಾಕಿ ಬರುವ ದಪ್ಪ ಹೊಗೆಯನ್ನು ಹುತ್ತಕ್ಕೆ ತೋರಿಸುತ್ತಿದ್ದರು. ಕೊಬ್ಬರಿ ಚಿಪ್ಪಿನ ಹೊಗೆ ಹುತ್ತದೊಳಗಿನ ಹಾನಿಕಾರಕ ಶಿಲೀಂಧ್ರವನ್ನು ಕೊಲ್ಲುತ್ತದೆ, ಬೆಣ್ಣೆಯ ಹೊಗೆ ನೈಸರ್ಗಿಕ ಕ್ರಿಮಿನಾಶಕವಾಗಿ ಕೆಲಸ ಮಾಡಿ ಅಲ್ಲಿನ ಸೊಳ್ಳೆ ಮತ್ತು ಕ್ರಿಮಿಗಳನ್ನು ಓಡಿಸುತ್ತದೆ. ಇದೇ ನಮ್ಮ ಹಿರಿಯರ ಪರಿಸರ ವಿಜ್ಞಾನ.

  1. ಗೌರಿ ಹಬ್ಬ – ಮಣ್ಣಿನ ಫಲವತ್ತತೆಯ ಸಂಕೇತ

ಗೌರಿ ಹಬ್ಬವನ್ನು ಶ್ರಾವಣ/ಭಾದ್ರಪದ ಮಾಸದ ಹೊಸ ಮಣ್ಣಿನಲ್ಲಿ ಆಚರಿಸುತ್ತೇವೆ. ಇದು ಸುಗ್ಗಿಯ ಮಣ್ಣಡಿಯ ಸಂಭ್ರಮ. ರೈತರು ಮಂದಿನ ಬಿತ್ತನೆಗೆ ಸಿದ್ಧವಾಗುತ್ತಿರುವಾಗ, ಗೌರಿ ಮತ್ತು ಪರಿಷದಿಯ ತಯಾರಾದ ಮಣ್ಣಿನ ಗೊಂಬೆಗಳು ಹೊಸ ಮಣ್ಣಿನ ಫಲವತ್ತತೆಯ ಸಂಕೇತವಾಗಿ ಮನೆಗೆ ಬರುತ್ತವೆ. ಈ ಹಬ್ಬದಲ್ಲಿ ಬಳಸುವ ವಿವಿಧ ಬಗೆಯ ಸೊಪ್ಪುಗಳು, ಗೆಡ್ಡೆಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಪ್ರಕೃತಿಯೇ ನೀಡಿದ ಗೊಬ್ಬರದಂತಿವೆ.

  1. ಗಣೇಶ – ಇದು ಗಣಗಳ ರಾಜ್ಯೋತ್ಸವ, ಕೃಷಿ ಗಣರಾಜ್ಯೋತ್ಸವ

ನಮ್ಮ ನಾಡಿನ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದೇ ಗೌರಿ ಗಣೇಶ ಹಬ್ಬದ ಹಿಂದಿನ ದೊಡ್ಡ ಉದ್ದೇಶ.

ಮುಂಗಾರು ಮಳೆಯಲ್ಲಿ ಭತ್ತ ಇರುವುದಿಲ್ಲ. ಇರುವುದು ತೊಗರಿ, ಹೆಸರು, ಉದ್ದು, ಹುರಳಿ, ಅಲಸಂದೆ, ಗೋಧಿಯಂತಹ ದ್ವಿದಳ ಧಾನ್ಯಗಳು. ರೈತ ಈ ಎಲ್ಲಾ ಬೆಳೆಗಳನ್ನು ಕೊಯ್ದು, ಒಕ್ಕಿ, ಒಟ್ಟುಗೂಡಿಸುತ್ತಾನೆ. ಈ ಒಟ್ಟುಗೂಡಿದ ರಾಶಿಯೇ ‘ಗಣ’. ಈ ಗಣಗಳ ಒಡೆಯನೇ ‘ಗಣಪತಿ’.

ಈ ಧಾನ್ಯಗಳನ್ನು ತುಂಬಿಡಲು ನಮ್ಮ ಕುಂಬಾರ ಮಾಡುವ ದೊಡ್ಡ ಮಣ್ಣಿನ ಪಾತ್ರೆಯೇ ‘ಕೊಮ್ಮೆ’. ಅದಕ್ಕೆ ಬಿಗಿಯಾದ ಮುಚ್ಚಳ ಮತ್ತು ಮೇಲೊಂದು ಹಿಡಿ ಇರುತ್ತದೆ. ಕೊಮ್ಮೆ ತುಂಬಾ ಹಳೆಯದಾದಾಗ ಅಥವಾ ಇಲಿ ಕೊರೆದಾಗ ಒಡೆದು ಹೋಗುತ್ತದೆ, ಕಾಳುಗಳು ಚೆಲ್ಲುತ್ತವೆ. ಕಾಳು ತಿನ್ನಲು ಇಲಿ ಬರುತ್ತದೆ, ಇಲಿಯನ್ನು ಹುಡುಕಿಕೊಂಡು ಹಾವು ಬರುತ್ತದೆ. ಒಡೆದ ಕೊಮ್ಮೆಯನ್ನು ರೈತ ಹಗ್ಗದಿಂದ ಬಿಗಿದು ಕಟ್ಟಿರುತ್ತಾನೆ.

ಇದನ್ನೇ ನೋಡಿದ ನಮ್ಮನಾಡಕವಿ ಒಂದು ಅದ್ಭುತ ಕಲ್ಪನೆ ಮಾಡಿದ್ದು ಹೀಗೆ: ಧಾನ್ಯ ತುಂಬಿದ ದಪ್ಪ ಕೊಮ್ಮೆಯೇ ಗಣಪತಿಯ ದೊಡ್ಡ ಹೊಟ್ಟೆ, ಮುಚ್ಚಳದ ಹಿಡಿಯೇ ಅವನ ಕಿರೀಟ, ಕಾಳು ತಿನ್ನಲು ಬಂದ ಇಲಿಯೇ ಅವನ ವಾಹನ, ಕೊಮ್ಮೆಗೆ ಬಿಗಿದು ಕಟ್ಟಿದ ಹಗ್ಗವೇ ಅವನ ಕೊರಳಿನ ಹಾವು. ರವಿ ಕಾಣದ್ದನ್ನು ಕವಿ ಕಂಡಿದ್ದು ಹೀಗೆ. ಇದು ದೇವರ ಕಥೆಯಲ್ಲ, ನಮ್ಮ ಕಣಜದ (ಕೊಮ್ಮೆ )ಕಥೆ.

  1. ವಿಸರ್ಜನೆ ಎಂದರೆ ಬೀಜ ವಿಸರ್ಜನೆ, ಜಲಚರಗಳಿಗೆ ದಾನ

9 ದಿನಗಳ ಪೂಜೆ ನಂತರ ಕೊಮ್ಮೆಯಲ್ಲಿ (ಗಣಪತಿಯಲ್ಲಿ) ಕೂಡಿಟ್ಟ ಕಾಳುಗಳು ಮೊಳಕೆ ಬರಲು ಸಿದ್ಧವಾಗಿರುತ್ತವೆ. ಆ ಗಣಪತಿಯನ್ನು ಉತ್ಸವ ರೂಪದಲ್ಲಿ ಊರಿನ ಕೆರೆ-ಕಟ್ಟೆಗಳಿಗೆ ಒಯ್ದು, ನೀರಿನ ಜಲಚರಗಳಿಗೆ ಆಹಾರವಾಗಿ ಆ ಕಾಳುಗಳನ್ನು ಬಿಡುತ್ತಿದ್ದರು. ಇದು ಮೂರ್ತಿ ವಿಸರ್ಜನೆಯಲ್ಲ, ಇದು ಬೀಜ ವಿಸರ್ಜನೆ. ಹಾಗೆಯೇ ಹಬ್ಬಕ್ಕೆ ತವರಿಗೆ ಬಂದ ಹೆಣ್ಣು ಮಗಳನ್ನು (ಗೌರಿ) ಮತ್ತೆ ಗಂಡನ ಊರಿಗೆ ಕಳುಹಿಸಿ ಕೊಡುತ್ತಿದ್ದರು. ಎರಡೂ ಬಿತ್ತನೆಯ ಸಂಕೇತವೇ.

ಒಂದು ಹಬ್ಬದಿಂದ ನೂರಾರು ಜನರಿಗೆ ಕೆಲಸ ಸಿಗುತ್ತದೆ – ಜೇಡಿ ಮಣ್ಣು ತರುವವನಿಗೆ, ಕುಂಬಾರನಿಗೆ, ಬಣ್ಣ ಬಳಿಯುವವನಿಗೆ, ಹೂವು-ಹಣ್ಣು ಮಾರುವವನಿಗೆ, ಭಜನೆ-ನಾಟಕ ಮಾಡುವ ಕಲಾವಿದನಿಗೆ, ಗಾಡಿ ಓಡಿಸುವವನಿಗೆ. ಒಂದು ಹಬ್ಬ ಎಂದರೆ ಒಂದು ಊರಿನ ಮನೋವಿಕಾಸ ಮತ್ತು ಆರ್ಥಿಕ ಚಕ್ರದ ತಿರುಗುವಿಕೆ. ಆದ್ದರಿಂದ ಗೌರಿ ಗಣೇಶ ಹಬ್ಬ ಎಂದರೆ ವಿಗ್ರಹಗಳ ಹಬ್ಬವಲ್ಲ, ಅದು ನಮ್ಮ ರೈತನ ಕೃಷಿ ಬೆಳೆಗಳ ಗಣರಾಜ್ಯೋತ್ಸವ.

WhatsApp Image 2026 09 12 at 8.40.23 AM1
ಎ.ಬಿ. ಶಿವರಾಜ
+ posts

ಪತ್ರಕರ್ತ, ಬಂಧುತ್ವ ಭಾರತ ಟ್ರಸ್ಟ್ ಸಂಸ್ಥಾಪಕ

ಪೋಸ್ಟ್ ಹಂಚಿಕೊಳ್ಳಿ:

ಎ.ಬಿ. ಶಿವರಾಜ
ಎ.ಬಿ. ಶಿವರಾಜ
ಪತ್ರಕರ್ತ, ಬಂಧುತ್ವ ಭಾರತ ಟ್ರಸ್ಟ್ ಸಂಸ್ಥಾಪಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

30 ದಿನ ಕಳೆದರೂ ʼRTIʼಗೆ ಉತ್ತರವಿಲ್ಲ; ECI ಮೇಲೊಂದು ಪ್ರಶ್ನಾರ್ಥಕ ಚಿಹ್ನೆ! 

'ಚುನಾವಣಾ ಆಯೋಗ ಏನು ಮುಚ್ಚಿಡಲು ಪ್ರಯತ್ನಿಸುತ್ತಿದೆ?' ಎಂಬ ಗಂಭೀರ ಅನುಮಾನ ಈಗ...

ನ.1ರಂದು ʼದಿಲ್ಲಿ ಚಲೋʼ | ಪ್ರಜಾಪ್ರಭುತ್ವ ಉಳಿಸಲು ಎಲ್ಲರೂ ಜೊತೆಗೂಡುವಂತೆ ರಾಹುಲ್ ಗಾಂಧಿ ಕರೆ

ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು, ಮತಗಳ್ಳತನವನ್ನು ತಡೆಯಲು ಹಾಗೂ ಸಂವಿಧಾನವನ್ನು ರಕ್ಷಿಸಲು ನವೆಂಬರ್...

SIR ಸಂಚು: 10 ಕೋಟಿ ಜನರಲ್ಲಿ ಸಿಕ್ಕಿದ್ದು ಬರಿ 1,600 ವಿದೇಶಿಯರು!

ದೇಶಾದ್ಯಂತ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ನಡೆಸುತ್ತಿರುವುದು ದೇಶದ...

ಅಪ್ರಾಪ್ತ ಪುತ್ರನಿಂದ ಕಾರು ಅಪಘಾತ: ಕೇರಳದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ

ಕೊಚ್ಚಿಯಲ್ಲಿ 17 ವರ್ಷದ ಅಪ್ರಾಪ್ತ ಮಗ ಚಲಾಯಿಸುತ್ತಿದ್ದ ಮರ್ಸಿಡಿಸ್-ಬೆಂಜ್ ಕಾರು ಡಿಕ್ಕಿ...