‘ಆರ್‌ಎಸ್‌ಎಸ್‌-ಬಿಜೆಪಿ ನಂಟು, ನ್ಯಾಯ ಸಿಗುವ ನಂಬಿಕೆ ಇಲ್ಲ’: ನ್ಯಾಯಮೂರ್ತಿಗಳ ಬದಲಾವಣೆಗೆ ಕೇಜ್ರಿವಾಲ್ ಪಟ್ಟು

Date:

“ನೀವು ಆರ್‌ಎಸ್‌ಎಸ್ ಮತ್ತು ಬಿಜೆಪಿಯೊಂದಿಗೆ ನೇರ ಸಂಬಂಧ ಹೊಂದಿರುವ ‘ಅಧಿವಕ್ತ ಪರಿಷದ್’ ಕಾರ್ಯಕ್ರಮಗಳಲ್ಲಿ ನಾಲ್ಕು ಬಾರಿ ಭಾಗವಹಿಸಿದ್ದೀರಿ. ಹೀಗಾಗಿ ಈ ನ್ಯಾಯಾಲಯದಲ್ಲಿ ನನಗೆ ಸರಿಯಾದ ನ್ಯಾಯ ಸಿಗುವ ನಂಬಿಕೆ ಇಲ್ಲ” ಎಂದು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಹೈಕೋರ್ಟ್‌ನಲ್ಲಿ ಖುದ್ದು ವಾದಿಸಿದ್ದಾರೆ.ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

- Advertisement -

ಆಬಕಾರಿ ನೀತಿಯಲ್ಲಿ ಭ್ರಷ್ಟಾಚಾರದ ಆಪಾದನೆಗಳಿಂದ ಕೇಜ್ರಿವಾಲ್ ಮತ್ತು ಇತರರ ಖುಲಾಸೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟಿನಲ್ಲಿ ಸಿಬಿಐ ಮೇಲ್ಮನವಿ ಸಲ್ಲಿಸಿದ್ದು, ಈ ಕೇಸಿನ ವಿಚಾರಣೆಯಿಂದ ನ್ಯಾಯಮೂರ್ತಿ ಸ್ವರ್ಣಕಾಂತಾ ಶರ್ಮ ಅವರು ಹಿಂದೆ ಸರಿದು ಪ್ರಕರಣವನ್ನು ಬೇರೆ ನ್ಯಾಯಮೂರ್ತಿಯವರಿಗೆ ವಹಿಸಬೇಕೆಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

“ನ್ಯಾಯಾಲಯವು ನನ್ನನ್ನು ಈಗಾಗಲೇ ಅಪರಾಧಿಯಂತೆ ಬಿಂಬಿಸುತ್ತಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ನಿಷ್ಪಕ್ಷಪಾತ ವಿಚಾರಣೆಯ ಬಗ್ಗೆ ತಮ್ಮ ಮನಸ್ಸಿನಲ್ಲಿರುವ ಆತಂಕವನ್ನು ನ್ಯಾಯಾಲಯದ ಮುಂದಿಟ್ಟರು. ನ್ಯಾಯಮೂರ್ತಿಗಳು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಲು ಕೇಜ್ರಿವಾಲ್ ನೀಡಿದ 10 ಕಾರಣಗಳು ಹೀಗಿವೆ:

ಇದನ್ನು ಓದಿದ್ದೀರಾ? ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್

  1. ವೈಚಾರಿಕ ಸಾಮೀಪ್ಯ: ನ್ಯಾಯಮೂರ್ತಿಗಳು ಆರ್‌ಎಸ್‌ಎಸ್ ಮತ್ತು ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅಧಿವಕ್ತ ಪರಿಷದ್‌ನ ಕಾರ್ಯಕ್ರಮಗಳಲ್ಲಿ ನಾಲ್ಕು ಬಾರಿ ಪಾಲ್ಗೊಂಡಿದ್ದಾರೆ. ನಾವು ಮತ್ತು ನಮ್ಮ ಪಕ್ಷ ಆ ಸಿದ್ಧಾಂತವನ್ನು ತೀವ್ರವಾಗಿ ವಿರೋಧಿಸುತ್ತೇವೆ. ಇದು ಸಹಜವಾಗಿಯೇ ಪಕ್ಷಪಾತದ ಬಗ್ಗೆ ಅನುಮಾನವನ್ನು ಹುಟ್ಟುಹಾಕುತ್ತದೆ ಎಂದು ಕೇಜ್ರಿವಾಲ್ ವಾದಿಸಿದರು.
  2. ಇ.ಡಿ ಮತ್ತು ಸಿಬಿಐ ವಾದಗಳಿಗೆ ಕುರುಡು ಬೆಂಬಲ: ನ್ಯಾಯಾಲಯವು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐ ಮಂಡಿಸುವ ಪ್ರತಿಯೊಂದು ವಾದಕ್ಕೂ ಸಹಮತ ವ್ಯಕ್ತಪಡಿಸುತ್ತಿದೆ ಮತ್ತು ತನಿಖಾ ಸಂಸ್ಥೆಗಳ ಪ್ರತಿಯೊಂದು ಮನವಿಯನ್ನೂ ತೀರ್ಪಾಗಿ ಪರಿವರ್ತಿಸುತ್ತಿದೆ ಎಂಬುದು ಅವರ ಪ್ರಮುಖ ಆರೋಪವಾಗಿದೆ.
  3. ಅಸಾಧಾರಣ ವೇಗದ ವಿಚಾರಣೆ: ಪ್ರಮುಖ ರಾಜಕೀಯ ವಿರೋಧಿಗಳಿಗೆ ಸಂಬಂಧಿಸಿದ ಈ ಪ್ರಕರಣದ ವಿಚಾರಣೆಯನ್ನು ಬೇರೆಲ್ಲಾ ಪ್ರಕರಣಗಳಿಗಿಂತ ಅತಿ ವೇಗವಾಗಿ ನಡೆಸಲಾಗುತ್ತಿದೆ. ಈ ಅಸಾಧಾರಣ ವೇಗವು ತಮಗೆ ಆತಂಕ ತರಿಸಿದೆ ಎಂದರು.
  4. ಮಾರ್ಚ್ 9ರ ಏಕಪಕ್ಷೀಯ ಆದೇಶ: ಎದುರಾಳಿ ಪಕ್ಷದ ಅನುಪಸ್ಥಿತಿಯಲ್ಲಿ (ನೋಟಿಸ್ ನೀಡದೆ) ಮಾರ್ಚ್ 9ರಂದು ಅಧೀನ ನ್ಯಾಯಾಲಯದ ವಿಚಾರಣೆಗೆ ಈ ನ್ಯಾಯಾಲಯ ಏಕಪಕ್ಷೀಯವಾಗಿ ತಡೆಯಾಜ್ಞೆ ನೀಡಿತ್ತು. ಐದು ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಅದೇ ಆದೇಶವನ್ನು ‘ತಪ್ಪು’ ಎಂದು ಇದೇ ನ್ಯಾಯಾಲಯ ಹೇಳಿದ್ದನ್ನು ಅವರು ಉಲ್ಲೇಖಿಸಿದರು.
  5. ಕೇಳಿದ್ದಕ್ಕಿಂತಲೂ ಹೆಚ್ಚಿನ ಪರಿಹಾರ ನೀಡಿಕೆ: ಮಾರ್ಚ್ 9ರ ಆದೇಶವು ಸಿಬಿಐ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ್ದರೂ, ಯಾವುದೇ ಲಿಖಿತ ಮನವಿ ಇಲ್ಲದೆ ಕೇವಲ ಮೌಖಿಕ ವಿನಂತಿಯ ಆಧಾರದ ಮೇಲೆ ಇ.ಡಿ ವಿಚಾರಣೆಗೂ ಪರಿಹಾರವನ್ನು ಒದಗಿಸಲಾಯಿತು ಎಂದು ಅವರು ಆಕ್ಷೇಪಿಸಿದರು.
  6. ತನಿಖಾಧಿಕಾರಿ ವಿಚಾರಣೆಗೆ ತಡೆ: ತನಿಖಾಧಿಕಾರಿ (ಐಒ) ಯಾವುದೇ ಪರಿಹಾರವನ್ನು ಕೋರದೇ ಇದ್ದರೂ, ಅವರ ವಿರುದ್ಧದ ವಿಚಾರಣೆಗೆ ನ್ಯಾಯಾಲಯವೇ ತಡೆ ನೀಡಿರುವುದು ಪ್ರಕರಣದ ಬಗ್ಗೆ ಆಳವಾದ ಅನುಮಾನಗಳನ್ನು ಸೃಷ್ಟಿಸಿದೆ ಎಂದರು.
  7. ಹಿಂದಿನ ನ್ಯಾಯಾಂಗದ ಅವಲೋಕನಗಳು: ಕೇವಲ ಎರಡು ವಿಚಾರಣೆಗಳಲ್ಲಿಯೇ ನ್ಯಾಯಾಲಯವು ತಾವು ಭ್ರಷ್ಟ ಮತ್ತು ಅಪರಾಧಿ ಎಂದು ತೀರ್ಮಾನಿಸಿದಂತೆ ಕಠಿಣ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಇದು ಮುಂದಿನ ತೀರ್ಪಿನ ಮೇಲೆ ಪ್ರಭಾವ ಬೀರಲಿದೆ ಎಂಬುದು ಅವರ ಆತಂಕ.
  8. ಆದೇಶಗಳಲ್ಲಿ ಬಳಸಲಾದ ಭಾಷೆ: ನ್ಯಾಯಾಲಯದ ಆದೇಶಗಳಲ್ಲಿ ಬಳಸಿದ ಪದಗಳು ಹಾಗೂ “ಕಕ್ಷಿದಾರರು ಹಾಜರಾಗಲು ಇಚ್ಛಿಸಿಲ್ಲ” ಎಂಬಂತಹ ಉಲ್ಲೇಖಗಳು ತಮಗೆ ತೀವ್ರ ಬೇಸರ ತರಿಸಿವೆ ಎಂದು ಅವರು ಹೇಳಿದರು.
  9. ಉತ್ತರಿಸಲು ಸಮರ್ಪಕ ಅವಕಾಶ ನಿರಾಕರಣೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಗಳನ್ನು ಸಲ್ಲಿಸಲು ತಮಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿಲ್ಲ. ಇದು ನ್ಯಾಯಸಮ್ಮತ ವಿಚಾರಣೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
  10. ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತತೆಯ ಬಗ್ಗೆ ಅನುಮಾನ: “ಇದು ನ್ಯಾಯಮೂರ್ತಿಗಳ ವೈಯಕ್ತಿಕ ಪ್ರಾಮಾಣಿಕತೆಯ ಪ್ರಶ್ನೆಯಲ್ಲ, ಬದಲಾಗಿ ಕಕ್ಷಿದಾರನ ಮನಸ್ಸಿನಲ್ಲಿ ಮೂಡಿರುವ ನ್ಯಾಯಸಮ್ಮತವಲ್ಲದ ವಿಚಾರಣೆಯ ಆತಂಕವಾಗಿದೆ” ಎಂದ ಕೇಜ್ರಿವಾಲ್, ಸುಪ್ರೀಂಕೋರ್ಟ್ ತೀರ್ಪುಗಳನ್ನು ಹಾಗೂ ಸತ್ಯೇಂದ್ರ ಜೈನ್ ಪ್ರಕರಣದಲ್ಲಿ ವ್ಯಕ್ತವಾದ ಇದೇ ರೀತಿಯ ಆತಂಕದ ಬಳಿಕ ಪ್ರಕರಣವನ್ನು ವರ್ಗಾಯಿಸಿದ್ದನ್ನು ಉದಾಹರಿಸಿದರು.
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...