ಹಾರ್ಮುಜ್‌ನಲ್ಲಿ ಟ್ರಂಪ್ ‘ದಾದಾಗಿರಿ’: ಅಮೆರಿಕದ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ಯನ್ನು ಇರಾನ್ ವಶಕ್ಕೆ ಪಡೆದರೆ ಹೇಗಿರುತ್ತದೆ?

Date:

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಜಗತ್ತಿನ ಪ್ರಸಿದ್ಧ ಸ್ಮಾರಕ. ಅದು ಅಮೆರಿಕದ ಭೂಪ್ರದೇಶದಲ್ಲಿದೆ. ಅದರ ಆಡಳಿತ ಮತ್ತು ಭದ್ರತೆಯ ಹೊಣೆ ಅಮೆರಿಕದ್ದು. ಈಗ ಇರಾನ್ ತನ್ನ ಯುದ್ಧನೌಕೆಗಳನ್ನು ನ್ಯೂಯಾರ್ಕ್ ಕರಾವಳಿಗೆ ಕಳುಹಿಸಿ, “ಸ್ಟ್ಯಾಚ್ಯೂ ಆಫ್ ಲಿಬರ್ಟಿಯ ಭದ್ರತೆಯನ್ನು ಅಮೆರಿಕ ಸರಿಯಾಗಿ ನಿರ್ವಹಿಸುತ್ತಿಲ್ಲ. ಇನ್ನು ಮುಂದೆ ನಾವು ಅದರ ಕಾವಲುಗಾರರು. ಸ್ಮಾರಕವನ್ನು ನೋಡಲು ಬರುವ ಪ್ರತಿಯೊಬ್ಬ ಪ್ರವಾಸಿಗನೂ ನಮಗೆ ಪ್ರವೇಶ ಶುಲ್ಕ ಪಾವತಿಸಬೇಕು. ಆ ಶುಲ್ಕವನ್ನು ಯಾವುದೇ ದೇಶದ ಕರೆನ್ಸಿಯಲ್ಲಿ ಕೊಟ್ಟರೂ ಸ್ವೀಕರಿಸುತ್ತೇವೆ” ಎಂದು ಘೋಷಿಸಿದರೆ ಅಮೆರಿಕ ಅದನ್ನು ಒಪ್ಪಿಕೊಳ್ಳುತ್ತದೆಯೇ?

ವಿಶ್ವದ ಅತ್ಯಂತ ಮಹತ್ವದ ಜಲಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯು ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಕೇಂದ್ರವಾಗಿದೆ. ಮಾತ್ರವಲ್ಲದೆ, ಸಾರ್ವಭೌಮತೆ, ಅಂತಾರಾಷ್ಟ್ರೀಯ ಕಾನೂನು, ಜಾಗತಿಕ ವ್ಯಾಪಾರ ಹಾಗೂ ಬಲಿಷ್ಠ ರಾಷ್ಟ್ರಗಳ ದ್ವಂದ್ವ ನೀತಿಗಳ ಕುರಿತ ಗಂಭೀರ ಪ್ರಶ್ನೆಯಾಗಿಯೂ ಮಾರ್ಪಟ್ಟಿದೆ.

- Advertisement -

ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ನಿಯಂತ್ರಣಕ್ಕೆ ತೆಗೆದುಕೊಂಡು, ಅದರ ಮೂಲಕ ಸಾಗುವ ಸರಕುಗಳ ಮೇಲೆ 20%ರಷ್ಟು ಶುಲ್ಕ ವಿಧಿಸಲು ಟ್ರಂಪ್ ಹವಣಿಸುತ್ತಿದ್ದಾರೆ. ಜಲಸಂಧಿಯನ್ನು ಮುಕ್ತವಾಗಿಡಲು ಅಮೆರಿಕ ವೆಚ್ಚ ಮಾಡುತ್ತಿರುವುದರಿಂದ ಆ ಹಣವನ್ನು ಹಡಗುಗಳಿಂದ ವಸೂಲಿ ಮಾಡಬೇಕು ಎಂಬುದು ಟ್ರಂಪ್ ವಾದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಆದರೆ, ಅಮೆರಿಕದ ಭೂಭಾಗದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ, ಇರಾನ್ ಮತ್ತು ಒಮಾನ್ ನಡುವಿನ ಜಲಮಾರ್ಗವನ್ನು ಅಮೆರಿಕ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಘೋಷಿಸುವುದು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವೆಂಬ ಅಭಿಪ್ರಾಯಗಳಿವೆ. ಜಾಗತಿಕ ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸುವುದು ಬೇರೆ; ಆ ಹೆಸರಿನಲ್ಲಿ ಒಂದು ಪ್ರದೇಶದ ಮೇಲೆ ಮಿಲಿಟರಿ ಹಿಡಿತ ಸಾಧಿಸಿ, ಅದರ ಮೂಲಕ ಸಾಗುವ ಹಡಗುಗಳಿಂದ ಹಣ ವಸೂಲಿ ಮಾಡುವುದು ಸಂಪೂರ್ಣವಾಗಿ ಸಾರ್ವಭೌಮ ರಾಷ್ಟ್ರವೊಂದರ ಮೇಲಿನ ದಾಳಿ ಎಂದೇ ಬಣ್ಣಿಸಲಾಗಿದೆ.

ಹಾರ್ಮುಜ್ ಜಲಸಂಧಿ ಮತ್ತು ಹಕ್ಕು

ಜಗತ್ತಿನ ಇಂಧನ ನರನಾಡಿಯಾರಿಗುವ ಹಾರ್ಮುಜ್ ಜಲಸಂಧಿ ಪರ್ಷಿಯನ್ ಕೊಲ್ಲಿಯನ್ನು ಒಮಾನ್ ಕೊಲ್ಲಿ ಮತ್ತು ಅರಬ್ಬಿ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ. ಅದರ ಉತ್ತರ ಭಾಗದಲ್ಲಿ ಇರಾನ್ ಇದ್ದರೆ, ದಕ್ಷಿಣ ಭಾಗದಲ್ಲಿ ಒಮಾನ್ ಇದೆ. ಜಲಸಂಧಿ ಅತ್ಯಂತ ಕಿರಿದಾಗಿರುವುದರಿಂದ ಅದರ ಮೂಲಕ ಸಾಗುವ ಹಡಗುಗಳು ಇರಾನ್ ಅಥವಾ ಒಮಾನ್‌ನ ಪ್ರಾದೇಶಿಕ ಜಲವ್ಯಾಪ್ತಿಯನ್ನು ಬಳಸಬೇಕಾಗುತ್ತದೆ.

ಸಮುದ್ರ ಕಾನೂನಿನ ಕುರಿತ ವಿಶ್ವಸಂಸ್ಥೆಯ ಒಪ್ಪಂದವಾದ ಯುಎನ್‌ಸಿಎಲ್‌ಒಎಸ್ ಪ್ರಕಾರ, ಅಂತಾರಾಷ್ಟ್ರೀಯ ನೌಕಾಯಾನಕ್ಕೆ ಬಳಸುವ ಜಲಸಂಧಿಗಳಲ್ಲಿ ಹಡಗುಗಳ ಸಂಚಾರಕ್ಕೆ ವಿಶೇಷ ಕಾನೂನಾತ್ಮಕ ರಕ್ಷಣೆ ಇದೆ. ಆದರೆ ಹಾರ್ಮುಜ್‌ಗೆ ಅನ್ವಯವಾಗುವ ಕಾನೂನಿನ ಸ್ವರೂಪದ ಕುರಿತು ಇರಾನ್ ಮತ್ತು ಅಮೆರಿಕದ ನಡುವೆ ದೀರ್ಘಕಾಲದ ಭಿನ್ನಾಭಿಪ್ರಾಯವೂ ಇದೆ. ಅಮೆರಿಕವು ಮುಕ್ತ ಸಂಚಾರದ ವಿಶಾಲ ಹಕ್ಕನ್ನು ಪ್ರತಿಪಾದಿಸಿದರೆ, ಇರಾನ್ ತನ್ನ ಪ್ರಾದೇಶಿಕ ಜಲವ್ಯಾಪ್ತಿಯ ಮೇಲಿನ ಅಧಿಕಾರಕ್ಕೆ ಹೆಚ್ಚಿನ ಒತ್ತು ನೀಡುತ್ತದೆ.

ಆದಾಗ್ಯೂ, ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಆರಂಭಿಸಿದ ಬಳಿಕ, ಹಾರ್ಮುಜ್ ಜಲಸಂಧಿಯನ್ನು ಇರಾನ್ ತನ್ನ ಅಸ್ತ್ರವಾಗಿ ಬಳಸಲಾರಂಭಿಸಿತು. ಆರಂಭದಲ್ಲಿ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದ ಇರಾನ್, ಆನಂತರ, ಈ ಜಲಸಂಧಿ ಮೂಲಕ ಚೀನಾ ಹೊರತುಪಡಿಸಿ ಉಳಿದ ಯಾವುದೇ ಹಡಗು ಸಾಗಬೇಕೆಂದರೂ ಸುಂಕ ಪಾವತಿಸಬೇಕು ಎಂಬ ನೀತಿ ಜಾರಿಗೊಳಿಸಿತು.

ಈಗ ನಡೆಯುತ್ತಿರುವ ಶಾಂತಿ ಒಪ್ಪಂದದಲ್ಲಿಯೂ ಹಾರ್ಮುಜ್ ಜಲಸಂಧಿಯು ತನ್ನ ಸಾರ್ವಭೌಮತ್ವದ ಭಾಗವಾಗಿದೆ. ಅಲ್ಲಿ, ಸುಂಕ ವಿಧಿಸುವುದನ್ನು ಮುಂದುವರೆಸುತ್ತೇವೆಂದು ಇರಾನ್ ಪ್ರಸ್ತಾಪ ಇಟ್ಟಿತು. ಈ ಪ್ರಸ್ತಾಪವನ್ನು ಕಳೆದ ವಾರವಷ್ಟೇ ಅಮೆರಿಕ ವಿರೋಧಿಸಿತ್ತು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ‘ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಇರಾನ್‌ಗೆ ಸುಂಕ ವಿಧಿಸಲು ಅವಕಾಶ ನೀಡಲಾಗುವುದಿಲ್ಲ’ ಎಂದು ಹೇಳಿದ್ದರು.

ಈ ಲೇಖನ ಓದಿದ್ದೀರಾ?: ಕ್ಷೇತ್ರ ಮರುವಿಂಗಡಣೆ | ಇತಿಹಾಸ ಹಾಗೂ ದಕ್ಷಿಣ ಭಾರತದ ಹಕ್ಕು ಕಸಿಯಲು ಮುಂದಾಗಿದ್ದ ಮೋದಿ…

ಆದರೆ ಈಗ ಅಮೆರಿಕವೇ ಹಾರ್ಮುಜ್‌ನ ‘ಕಾವಲುಗಾರ’ ಎಂದು ಘೋಷಿಸಿಕೊಂಡು, ಸರಕು ಸಾಗಣೆಯ ಮೇಲೆ 20%ರಷ್ಟು ಶುಲ್ಕ ವಸೂಲಿ ಮಾಡುವ ಮಾತನ್ನಾಡುತ್ತಿದೆ. ಇದು, ಇರಾನ್ ಹಣ ವಸೂಲಿ ಮಾಡಿದರೆ ಅದು ಅಕ್ರಮ; ಅಮೆರಿಕ ಹಣ ವಸೂಲಿ ಮಾಡಿದರೆ ಅದು ಭದ್ರತಾ ವೆಚ್ಚವೇ? ಇರಾನ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಿದರೆ ಅದು ನೌಕಾಯಾನದ ಸ್ವಾತಂತ್ರ್ಯಕ್ಕೆ ಬೆದರಿಕೆ; ಅಮೆರಿಕ ಮಿಲಿಟರಿ ನಿಯಂತ್ರಣ ಸಾಧಿಸಿದರೆ ಅದು ಜಾಗತಿಕ ವ್ಯಾಪಾರದ ರಕ್ಷಣೆಯೇ? ಎಂಬ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ.

‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ಯನ್ನು ಇರಾನ್ ವಶಪಡಿಸಿಕೊಂಡರೆ?

ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ ಎನ್ನುತ್ತಿರುವ ಟ್ರಂಪ್ ಅವರ ವಾದ ಮತ್ತು ಅಸಂಗತತೆಯನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಒಂದು ಕಾಲ್ಪನಿಕ ಉದಾಹರಣೆಯನ್ನು ನೋಡೋಣ.

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಜಗತ್ತಿನ ಪ್ರಸಿದ್ಧ ಸ್ಮಾರಕ. ಅದು ಅಮೆರಿಕದ ಭೂಪ್ರದೇಶದಲ್ಲಿದೆ. ಅದರ ಆಡಳಿತ ಮತ್ತು ಭದ್ರತೆಯ ಹೊಣೆ ಅಮೆರಿಕದ್ದು. ಈಗ ಇರಾನ್ ತನ್ನ ಯುದ್ಧನೌಕೆಗಳನ್ನು ನ್ಯೂಯಾರ್ಕ್ ಕರಾವಳಿಗೆ ಕಳುಹಿಸಿ, “ಸ್ಟ್ಯಾಚ್ಯೂ ಆಫ್ ಲಿಬರ್ಟಿಯ ಭದ್ರತೆಯನ್ನು ಅಮೆರಿಕ ಸರಿಯಾಗಿ ನಿರ್ವಹಿಸುತ್ತಿಲ್ಲ. ಇನ್ನು ಮುಂದೆ ನಾವು ಅದರ ಕಾವಲುಗಾರರು. ಸ್ಮಾರಕವನ್ನು ನೋಡಲು ಬರುವ ಪ್ರತಿಯೊಬ್ಬ ಪ್ರವಾಸಿಗನೂ ನಮಗೆ ಪ್ರವೇಶ ಶುಲ್ಕ ಪಾವತಿಸಬೇಕು. ಆ ಶುಲ್ಕವನ್ನು ಯಾವುದೇ ದೇಶದ ಕರೆನ್ಸಿಯಲ್ಲಿ ಕೊಟ್ಟರೂ ಸ್ವೀಕರಿಸುತ್ತೇವೆ” ಎಂದು ಘೋಷಿಸಿದರೆ ಅಮೆರಿಕ ಅದನ್ನು ಒಪ್ಪಿಕೊಳ್ಳುತ್ತದೆಯೇ?

ಅಂತಹ ಕ್ರಮವನ್ನು ಅಮೆರಿಕ ತನ್ನ ಸಾರ್ವಭೌಮತೆಯ ಮೇಲಿನ ದಾಳಿ, ವಿದೇಶಿ ಆಕ್ರಮಣ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಕರೆಯುವುದಿಲ್ಲವೇ?

ಹಾಗಿದ್ದರೆ, ಇರಾನ್‌ನ ಕರಾವಳಿಗೆ ಹೊಂದಿಕೊಂಡಿರುವ ಹಾರ್ಮುಜ್ ಜಲಸಂಧಿಗೆ ಅಮೆರಿಕ ತನ್ನನ್ನು ತಾನೇ ‘ಕಾವಲುಗಾರ’ ಎಂದು ಘೋಷಿಸಿಕೊಂಡು, ಹಡಗುಗಳಿಂದ ಹಣ ವಸೂಲಿ ಮಾಡುವುದನ್ನು ಸಹಜ ಕ್ರಮವೆಂದು ಪರಿಗಣಿಸಲು ಹೇಗೆ ಸಾಧ್ಯ?

ಸ್ಟ್ಯಾಚ್ಯೂ ಆಫ್ ಲಿಬರ್ಟಿ ಮತ್ತು ಹಾರ್ಮುಜ್ ಜಲಸಂಧಿ ಕಾನೂನಾತ್ಮಕವಾಗಿ ಒಂದೇ ಸ್ವರೂಪದ ಪ್ರದೇಶಗಳಲ್ಲ. ಒಂದು ರಾಷ್ಟ್ರೀಯ ಸ್ಮಾರಕ; ಮತ್ತೊಂದು ಅಂತಾರಾಷ್ಟ್ರೀಯ ನೌಕಾಯಾನಕ್ಕೆ ಬಳಕೆಯಾಗುವ ಜಲಸಂಧಿ. ಆದರೂ, ಸಾರ್ವಭೌಮತೆಯ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಈ ಹೋಲಿಕೆ ಅಗತ್ಯ. ತನ್ನ ಭೂಭಾಗ ಅಥವಾ ಸಂಪನ್ಮೂಲಗಳ ಮೇಲೆ ವಿದೇಶಿ ನಿಯಂತ್ರಣವನ್ನು ಅಮೆರಿಕ ಎಂದಿಗೂ ಒಪ್ಪುವುದಿಲ್ಲ. ಆದರೆ ಇತರ ರಾಷ್ಟ್ರಗಳ ಭೌಗೋಳಿಕ ವ್ಯಾಪ್ತಿಯಲ್ಲಿ ತನ್ನ ಸೇನಾ ಪ್ರಾಬಲ್ಯವನ್ನು ಸ್ಥಾಪಿಸುವುದನ್ನು ಮಾತ್ರ ‘ಜಾಗತಿಕ ಭದ್ರತೆ’ ಎಂದು ಸಮರ್ಥಿಸಿಕೊಳ್ಳುತ್ತದೆ.

ಇದೇ ಅಮೆರಿಕದ ವಿದೇಶಾಂಗ ನೀತಿಯ ಬಹುದೊಡ್ಡ ವಿಪರ್ಯಾಸ.

ಕಾನೂನಿನ ಬದಲು ಶಕ್ತಿಯೇ ನ್ಯಾಯವಾದರೆ…

ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಒಂದು ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತಿದೆ. ಬಲಿಷ್ಠ ರಾಷ್ಟ್ರಗಳು ತಮ್ಮ ಸೇನಾ ಸಾಮರ್ಥ್ಯವನ್ನು ಕಾನೂನಾತ್ಮಕ ಅಧಿಕಾರವೆಂದು ಭಾವಿಸುತ್ತಿವೆ. ಯುದ್ಧನೌಕೆಗಳನ್ನು ಕಳುಹಿಸಬಲ್ಲ ಸಾಮರ್ಥ್ಯವಿದೆ ಎಂಬ ಕಾರಣಕ್ಕೆ ಯಾವುದೇ ರಾಷ್ಟ್ರದ ಮೇಲೆ ಆಡಳಿತ ಹಕ್ಕು ಸಾಧಿಸಬಹುದು ಎಂದು ಬೊಬ್ಬಿರಿಯುತ್ತಿವೆ.

ಅಮೆರಿಕ ಇಂದು ಹಾರ್ಮುಜ್ ಜಲಸಂಧಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಶುಲ್ಕ ವಿಧಿಸಬಹುದಾದರೆ, ನಾಳೆ ಮತ್ತೊಂದು ಬಲಿಷ್ಠ ರಾಷ್ಟ್ರ ಮಲಕ್ಕಾ ಜಲಸಂಧಿ, ಬಾಬ್ ಅಲ್-ಮಂದಬ್ ಅಥವಾ ಬೇರೆ ಯಾವುದೇ ಮಹತ್ವದ ಜಲಮಾರ್ಗದ ಮೇಲೆ ಇದೇ ರೀತಿಯ ಹಕ್ಕು ಪ್ರತಿಪಾದಿಸಬಹುದು.

“ನಾವು ಭದ್ರತೆ ಒದಗಿಸುತ್ತಿದ್ದೇವೆ; ಆದ್ದರಿಂದ ನಮಗೆ ಹಣ ಕೊಡಿ” ಎಂಬ ವಾದವನ್ನು ಜಾಗತಿಕ ನಿಯಮವನ್ನಾಗಿ ಮಾಡಿದರೆ, ಅಂತಾರಾಷ್ಟ್ರೀಯ ಜಲಮಾರ್ಗಗಳು ಮುಕ್ತ ಸಂಚಾರದ ಪ್ರದೇಶಗಳಾಗಿ ಉಳಿಯುವುದಿಲ್ಲ. ಅವು ಮಹಾಶಕ್ತಿಗಳ ಮಿಲಿಟರಿ ಟೋಲ್‌ಗೇಟ್‌ಗಳಾಗಿ ಬದಲಾಗುತ್ತವೆ. ಆಗ ಅಂತಾರಾಷ್ಟ್ರೀಯ ಕಾನೂನಿಗಿಂತ ಯಾರ ಬಳಿ ಹೆಚ್ಚು ಯುದ್ಧ ನೌಕೆಗಳಿವೆ ಎಂಬುದೇ ಮುಖ್ಯವಾಗುತ್ತದೆ.

ಆದ್ದರಿಂದ, ಇರಾನ್‌ನ ಸಾರ್ವಭೌಮತೆಯನ್ನು ಗೌರವಿಸಬೇಕು. ಅದರ ಕರಾವಳಿಯ ಪಕ್ಕದಲ್ಲಿರುವ ಜಲಮಾರ್ಗದ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಇರಾನ್‌ಗೆ ನ್ಯಾಯಸಮ್ಮತ ಪಾತ್ರವಿದೆ. ಅಮೆರಿಕವು ಏಕಪಕ್ಷೀಯವಾಗಿ ತನ್ನನ್ನು ಹಾರ್ಮುಜ್‌ನ ಮಾಲೀಕ ಅಥವಾ ಕಾವಲುಗಾರ ಎಂದು ಘೋಷಿಸಿಕೊಳ್ಳಲು ಸಾಧ್ಯವಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...