2026-27ನೇ ಸಾಲಿನ ಮುಂಗಾರು ಹಂಗಾಮಿಗಾಗಿ ವಿಜಯಪುರ ಜಿಲ್ಲೆಯ ರಾಮಪುರ (ಪ.ಆ) ವೃತ್ತದ ವ್ಯಾಪ್ತಿಯ ಕಾಲುವೆ ಹಾಗೂ ಗುತ್ತಿ ಬಸವಣ್ಣ ಕಾಲುವೆಗಳಿಗೆ 14 ದಿನ ಚಾಲೂ ಹಾಗೂ 10 ದಿನ ಬಂದ್ ನಂತೆ ವಾರಬಂದಿ ಪದ್ಧತಿಯನುಸಾರ 116 ದಿನಗಳವರೆಗೆ ಜು.28ರಿಂದ ನೀರು ಹರಿಸಲಾಗುತ್ತಿದೆ ಎಂದು ಕೃಷ್ಣಾ ಭಾಗ್ಯ ಜಲನಿಗಮದ ಅಧೀಕ್ಷಕ ಅಭಿಯಂತರರಾದ ಶಿವಶಂಕರ ದೇವಾಪುರ ತಿಳಿಸಿದ್ದಾರೆ.
ಮುಂಗಾರು ಹಂಗಾಮಿಗಾಗಿ ನೀರು ಪೋಲಾಗದಂತೆ, ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯದಡಿ ಬರುವ ಕಾಲುವೆಗಳಿಗೆ ನೀರು ಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಲಸಂಪನ್ಮೂಲ ಸಚಿವರು ಸೂಚಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಎರಡು ಜಲಾಶಯಗಳಲ್ಲಿ ನೀರಾವರಿಗಾಗಿ ಕಾಯ್ದಿರಿಸಿರುವ ನೀರಿನ ಪ್ರಮಾಣದಲ್ಲಿ ಮುಂಗಾರು ಹಂಗಾಮಿಗಾಗಿ ನೀರು ಹರಿಸುವ ಅವಧಿಯನ್ನು, ಆಲಮಟ್ಟಿ ಜಲಾಶಯದಲ್ಲಿ ಒಳಹರಿವು ಹೊರಹರಿವು ಪ್ರಮಾಣಕ್ಕೆ ಸಮನಾಗಿರುವವರೆಗೆ ಸತತವಾಗಿ ಕಾಲುವೆ ಚಾಲಕ್ಕೆ ನೀರು ಹರಿಸಲು ಹಾಗೂ ಒಂದು ವೇಳೆ ಆಲಮಟ್ಟಿಗೆ ಒಳಹರಿವು ಕಡಿಮೆಯಾದ ಪಕ್ಷದಲ್ಲಿ ಜಲಾಶಯಗಳಲ್ಲಿನ ಸಂಗ್ರಹ ಆಧರಿಸಿ. ಈ ಹಿಂದೆ ಅನುಸರಿಸಿದ 14 ದಿನ ಚಾಲೂ ಹಾಗೂ 10 ದಿನ ಬಂದ್‌ನಂತೆ ವಾರಬಂದಿ ಪದ್ಧತಿಯನ್ನು ಅನುಸರಿಸಿ 116 ದಿನಗಳವರೆಗೆ ಕಾಲುವೆ ಜಾಲಗಳಿಗೆ ನೀರು ಹರಿಸಲಾಗುವುದು ಎಂದವರು ತಿಳಿಸಿದ್ದಾರೆ.
ಕಾಲುವೆ ಚಾಲೂ ದಿನಾಂಕಗಳು: ಜು. 28 ರಿಂದ ಆ. 10ರವರೆಗೆ, ಆ. 21ಸ ರಿಂದ ಸೆ. 3ರವರೆಗೆ, ಸೆ. 14 ರಿಂದ ಸೆ. 27ರವರೆಗೆ, ಅ. 8 ರಿಂದ ಅ. 21ರವರೆಗೆ ತಲಾ 14 ದಿನಗಳಂತೆ, ನ. 1 ರಿಂದ ನ. 10ರವರೆಗೆ 10 ದಿನಗಳಂತೆ ಒಟ್ಟು 66 ದಿನಗಳ ಕಾಲ ಕಾಲುವೆಗಳಿಗೆ ನೀರು ಚಾಲೂ ಇರುವ ದಿನಗಳನ್ನು ನಿಗದಿಪಡಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಕಾಲುವೆ ಬಂದ್ ದಿನಾಂಕಗಳು: ಆ.11 ರಿಂದ ಆ, 20ರವರೆಗೆ. ಸೆ. 4 ರಿಂದ ಸೆ. 13ರವರೆಗೆ, ಸೆ. 28 ರಿಂದ ಅ. 7ರವರೆಗೆ ಅ. 22 ರಿಂದ ಅ. 31ರವರೆಗೆ ಹಾಗೂ ನ. 11 ರಿಂದ ನ. 20ರವರೆಗೆ ತಲಾ 10 ದಿನಗಳಂತೆ ಒಟ್ಟು 50 ದಿನಗಳ ಕಾಲ ಕಾಲುವೆ ಬಂದ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರೈತರು ನೀರನ್ನು ಮಿತವಾಗಿ ಬಳಸಿ, ಕೃಷ್ಣಾ ಭಾಗ್ಯ ಜಲ ನಿಗಮದ (ಕೆಬಿಜೆಎನ್ ಎಲ್) ಅಧಿಕಾರಿಗಳೊಂದಿಗೆ ಸಹಕರಿಸಿ ಯಶಸ್ವಿ ನೀರು ನಿರ್ವಹಣೆಗೆ ಕೈಜೋಡಿಸಬೇಕಾಗಿ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.




