$1,400 ಬೆಲೆಯ ಗುಲಾಮನ ಮರಿಮೊಮ್ಮಗಳು ಈಗ ಗವರ್ನರ್: ಅಮೆರಿಕದಲ್ಲಿ ಇತಿಹಾಸ ಬರೆದ ಕೀಷಾ ಲ್ಯಾನ್ಸ್ ಬಾಟಮ್ಸ್

Date:

ಸುಮಾರು 166 ವರ್ಷಗಳ ಹಿಂದೆ, ಅಂದರೆ ಕ್ರಿ.ಶ. 1860ರಲ್ಲಿ ಜಾರ್ಜಿಯಾ ಪ್ರಾಂತ್ಯದ ಕ್ರಾಫರ್ಡ್‌ವಿಲ್‌ನಲ್ಲಿ ಬಿಳಿಯ ಜಮೀನ್ದಾರ ವಿಲಿಯಂ ಪೀಕ್ ಎಂಬಾತನ ಲೆಕ್ಕದ ಪುಸ್ತಕದಲ್ಲಿದ್ದ ಕಪ್ಪು ವರ್ಣೀಯ ಗುಲಾಮನ ಹೆಸರು ಶೆಪ್ಪರ್ಡ್ ಪೀಕ್. ಆತನಿಗೆ 1,400 ಅಮೆರಿಕನ್ ಡಾಲರ್‌ಗಳ ಬೆಲೆ ಕಟ್ಟಲಾಗಿತ್ತು. ಆತನಿಗೆ ಸ್ವಂತ ಆಸ್ತಿ ಹೊಂದುವಂತಿರಲಿಲ್ಲ, ಮನೆಯ ಮುಖ್ಯ ಬಾಗಿಲಿನಿಂದ ಒಳಪ್ರವೇಶಿಸುವಂತಿರಲಿಲ್ಲ ಮತ್ತು ತನ್ನ ಹೆಸರನ್ನು ಸರಿಯಾಗಿ ಬರೆಯಲಾಗದೆ ಬರಿ ‘X’ ಎಂದು ಸಹಿ ಹಾಕಬೇಕಾದ ಪರಿಸ್ಥಿತಿ ಇತ್ತು.

- Advertisement -

ಆದರೆ, ಕಾಲಚಕ್ರ ಈಗ ಉರುಳಿದೆ. ಅದೇ ಕ್ರಾಫರ್ಡ್‌ವಿಲ್‌ನ ಕೃಷಿ ಭೂಮಿಯಲ್ಲಿ ಗುಲಾಮನಾಗಿ ದಬ್ಬಾಳಿಕೆಗೆ ಒಳಗಾಗಿದ್ದ ಅದೇ ಶೆಪ್ಪರ್ಡ್ ಪೀಕ್‌ನ ಮರಿ ಮರಿ ಮೊಮ್ಮಗಳು ಕೀಷಾ ಲ್ಯಾನ್ಸ್ ಬಾಟಮ್ಸ್ (Keisha Lance Bottoms) ಇಂದು ಇಡೀ ಅಮೆರಿಕವೇ ತಿರುಗಿ ನೋಡುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡವರ ನಿವೇಶನಗಳ ಮೇಲೆ ಕೆಎಐಡಿಬಿ ಕರಿ ನೆರಳು: ಸೂರು...

ಮಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಮೆರುಗನ್ನು ನೀಡಿರುವುದೇ ತಣ್ಣೀರುಬಾವಿ ಸಮುದ್ರ ತೀರ. ಈ ಸಮುದ್ರ ತೀರ ಇತ್ತೀಚಿನ ದಿನಗಳಲ್ಲಿ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ವಿಭಿನ್ನ ಶೈಲಿಯ ಮನರಂಜನೆಗೆ ಹೆಸರುವಾಸಿಯಾಗಿರುವ ತಣ್ಣೀರುಬಾವಿ ಬೀಚ್...

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಅಮೆರಿಕದ ಜಾರ್ಜಿಯಾ ಪ್ರಾಂತ್ಯದ ಗವರ್ನರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೀಷಾ ಲ್ಯಾನ್ಸ್ ಬಾಟಮ್ಸ್, ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿ, ಉದ್ಯಮಿ ರಿಕ್ ಜಾಕ್ಸನ್ ಅವರನ್ನು ಪರಾಭವಗೊಳಿಸಿ 84ನೇ ಗವರ್ನರ್ ಆಗಿ ಅದ್ಭುತ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಅಮೆರಿಕ ಇತಿಹಾಸದಲ್ಲೇ ಪ್ರಥಮ ದಾಖಲೆ

ಕೀಷಾ ಲ್ಯಾನ್ಸ್ ಬಾಟಮ್ಸ್ ಅವರ ಈ ಗೆಲುವು ಕೇವಲ ಜಾರ್ಜಿಯಾ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಅಮೆರಿಕದ 250 ವರ್ಷಗಳ ಇತಿಹಾಸದಲ್ಲೇ ಅಂಗಸಂಸ್ಥೆಯೊಂದರ ಗವರ್ನರ್ ಆಗಿ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮುನ್ನಾ ದಿನ, ಕೀಷಾ ಅವರು ತಮ್ಮ ಪೂರ್ವರೀತಿಯ ನೆನಪಿಗಾಗಿ ಕ್ರಾಫರ್ಡ್‌ವಿಲ್‌ಗೆ ತೆರಳಿ, ತಮ್ಮ ಮುತ್ತಜ್ಜಿ ಬೆಟ್ಸಿ ಪೀಕ್ ಅವರ ಸಮಾಧಿಯ ಮುಂದೆ ಭಾವುಕರಾಗಿ ಪ್ರಾರ್ಥಿಸಿದ್ದರು.

ವಿಜಯೋತ್ಸವದ ಭಾಷಣದಲ್ಲಿ ಮಾತನಾಡಿದ ಅವರು, “ನನ್ನ ಕುಟುಂಬದ ಇತಿಹಾಸವನ್ನು ಐದು ತಲೆಮಾರುಗಳಷ್ಟೇ ಹಿಂದಕ್ಕೆ ಗುರುತಿಸಲು ಸಾಧ್ಯ. ಏಕೆಂದರೆ ಅದು ಕ್ರಾಫರ್ಡ್‌ವಿಲ್‌ನ ತೋಟಗಳಲ್ಲಿ ಗುಲಾಮಗಿರಿಯಿಂದ ಪ್ರಾರಂಭವಾಗುತ್ತದೆ. ನನ್ನ ಮುತ್ತಜ್ಜ ಕೆಳದರ್ಜೆಯ ಪ್ರಜೆಯಾಗಿ ಮನೆಯ ಹಿಂಬಾಗಿಲಿನಿಂದ ಓಡಾಡಬೇಕಿತ್ತು. ಇಂದು ಜಾರ್ಜಿಯಾದ ಜನರು ಅದೇ ವಂಶದ ಮಗಳನ್ನು ರಾಜ್ಯದ ಅತ್ಯುನ್ನತ ಗವರ್ನರ್ ಬಂಗಲೆಯ ಮುಂಭಾಗಿಲಿನಿಂದ ಹೆಮ್ಮೆಯಿಂದ ಕರೆದೊಯ್ಯುತ್ತಿದ್ದಾರೆ,” ಎಂದು ಭಾವುಕರಾಗಿ ನುಡಿದರು.

ಅಟ್ಲಾಂಟಾದ ಮಾಜಿ ಮೇಯರ್ ಆಗಿ (2018–2022) ಮತ್ತು ಈ ಹಿಂದಿನ ಅಧ್ಯಕ್ಷ ಜೋ ಬೈಡನ್ ಅವರ ಹಿರಿಯ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದ ಕೀಷಾ, ಈಗ ತಮ್ಮ ಮುತ್ತಜ್ಜನನ್ನು ಆಸ್ತಿಯಂತೆ ಪರಿಗಣಿಸಿದ್ದ ಜಾರ್ಜಿಯಾ ರಾಜ್ಯಕ್ಕೇ ಗವರ್ನರ್ ಆಗಿ ಆಡಳಿತ ನಡೆಸಲಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾರ್ಜಿಯಾದಲ್ಲಿ ಜ್ಯೋತ್ ಸಿಂಗ್‌ಗೆ ಐತಿಹಾಸಿಕ ಜಯ: ಪ್ರತಿನಿಧಿ ಸಭೆಗೆ ಆಯ್ಕೆಯಾದ ಮೊದಲ ಸಿಖ್

ಅಮೆರಿಕದ ಜಾರ್ಜಿಯಾ ರಾಜ್ಯದ ಪ್ರತಿನಿಧಿ ಸಭೆಗೆ ಭಾರತೀಯ ಮೂಲದ ಜ್ಯೋತ್ ಸಿಂಗ್...

ಸಹ-ಆರೋಪಿಗಳು ಖುಲಾಸೆಯಾದಾಗ ಪ್ರತ್ಯೇಕ ಆರೋಪವಿಲ್ಲದೆ ಕೊಲೆ ಪ್ರಕರಣದಲ್ಲಿ ಶಿಕ್ಷೆ ನೀಡಲಾಗದು: ಸುಪ್ರೀಂ ಕೋರ್ಟ್

ಇತರೆ ಸಹ-ಆರೋಪಿಗಳನ್ನು ದೋಷಮುಕ್ತಗೊಳಿಸಿದ ಸಂದರ್ಭದಲ್ಲಿ, ಯಾವುದೇ ಪ್ರತ್ಯೇಕ ಅಥವಾ ಸ್ವತಂತ್ರ ಆರೋಪವಿಲ್ಲದೆ...

ಕಾಂಕ್ರೀಟ್ ಗೋಡೆ ಮೀರಿದ ನೈಸರ್ಗಿಕ ತಡೆಗೋಡೆ: ಪ್ರವಾಹ ಗೆದ್ದ ಫಿಲಿಪ್ಪೀನ್ಸ್‌ನ ‘ಪಮರವಾನ್’ ಗ್ರಾಮ

ಫಿಲಿಪ್ಪೀನ್ಸ್‌ನ ಮನಿಲಾ ಕೊಲ್ಲಿಯ ಅಂಚಿನಲ್ಲಿರುವ 'ಪಮರವಾನ್' ಎಂಬ ಸಣ್ಣ ಮೀನುಗಾರಿಕಾ ಗ್ರಾಮವು...

ಕಂಬ ಕುಸಿದು ಬಾಲಕಿ ಸಾವು ಪ್ರಕರಣ: ಶಾಲಾ ಆಡಳಿತ ಮಂಡಳಿ ವಿರುದ್ಧದ ಪ್ರಕರಣ ಕೈಬಿಟ್ಟ ಸುಪ್ರೀಂ ಕೋರ್ಟ್

ಶಾಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಂಬ ಕುಸಿದು 12 ವರ್ಷದ ವಿದ್ಯಾರ್ಥಿನಿ ಮೃತಪಟ್ಟ...