ಪಶ್ಚಿಮ ಬಂಗಾಳ ಚುನಾವಣೆ : ಅಗ್ನಿಪರೀಕ್ಷೆಯಲ್ಲಿ ಪಾಸ್‌ ಆಗುತ್ತಾರಾ ದೀದಿ?

Date:

ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ‘ದೀದಿ’ ಎಂದೇ ಖ್ಯಾತರಾದ ಮಮತಾ ಬ್ಯಾನರ್ಜಿ ಅವರು ಇಂದು ತಮ್ಮ ರಾಜಕೀಯ ಜೀವನದ ಅತ್ಯಂತ ಕಠಿಣ ಹಂತದಲ್ಲಿದ್ದಾರೆ. ಪಶ್ಚಿಮ ಬಂಗಾಳದ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮಮತಾ ಬ್ಯಾನರ್ಜಿ ಅವರು ಎದುರಿಸುತ್ತಿರುವ ಸವಾಲುಗಳು ಈ ಹಿಂದಿಗಿಂತಲೂ ಭಿನ್ನ ಮತ್ತು ಸಂಕೀರ್ಣ. ಇಷ್ಟೆಲ್ಲಾ ಸವಾಲುಗಳಿದ್ದರೂ ಮಮತಾ ಬ್ಯಾನರ್ಜಿ ಅವರಲ್ಲಿರುವ ಅತಿದೊಡ್ಡ ಶಕ್ತಿ ಅವರ ‘ಪರ್ಸನಲ್ ಬ್ರ್ಯಾಂಡ್’ ಮೂಲಕವೇ ಚುಣಾವಣೆಯನ್ನು ಎದುರಿಸುತ್ತಿದಾರೆ.

- Advertisement -

ಮೋಶಾ ಸರ್ಕಾರ ತನ್ನ ಪಾರುಪತ್ಯವನ್ನು ಸಾಧಿಸಲೇಬೇಕು ಎಂದು ಹಠ ಸಾಧಿಸುತ್ತಿರುವ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳವೂ ಒಂದು. 294 ವಿಧಾನಸಭಾ ಕ್ಷೇತ್ರಗಳಿಗೆ ಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಹಾಲಿ ತೃಣಮೂಲ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕು ಎಂದು ಬಿಜೆಪಿ ಯತ್ನಿಸುತ್ತಿದೆ. ಅಧಿಕಾರವನ್ನು ಹಿಡಿಯುವುದಕ್ಕೆ ಬೇಕಾದ ರಾಜಕೀಯ ತಂತ್ರ ಮತ್ತು ಕುತಂತ್ರ ಎಲ್ಲವನ್ನೂ ಮಾಡಿದೆ. ಹಾಗಾಗಿ, ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಈ ಬಾರಿಯ ಚುನಾವಣೆ ಕೇವಲ ಅಧಿಕಾರದ ಉಳಿವಿನ ಪ್ರಶ್ನೆಯಲ್ಲ, ದಶಕಗಳ ರಾಜಕೀಯ ವರ್ಚಸ್ಸಿಗೆ ಎದುರಾಗಿರುವ ಅತಿದೊಡ್ಡ ‘ಅಗ್ನಿಪರೀಕ್ಷೆ’ ಎನ್ನುವುದು ಕೂಡ ಇಲ್ಲಿ ಮುಖ್ಯಾಂಶ. ಒಂದು ಕಾಲದಲ್ಲಿ ರಾಷ್ಟ್ರೀಯ ಪಕ್ಷಗಳು ಮತ್ತು ಎಡರಂಗ ಪಕ್ಷಗಳನ್ನು ಮೀರಿ ಬೆಳೆದಿದ್ದ ತೃಣಮೂಲ ಕಾಂಗ್ರೆಸ್ (TMC) ಇಂದು ಹತ್ತಾರು ಸವಾಲುಗಳ ಸುಳಿಯಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ‘ದೀದಿ’ ಎಂದೇ ಖ್ಯಾತರಾದ ಮಮತಾ ಬ್ಯಾನರ್ಜಿ ಅವರು ಇಂದು ತಮ್ಮ ರಾಜಕೀಯ ಜೀವನದ ಅತ್ಯಂತ ಕಠಿಣ ಹಂತದಲ್ಲಿದ್ದಾರೆ. ಕಳೆದ ವಿಧಾನಸಭಾ  ಚುನಾವಣೆಯಿಂದಲೇ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಧರ್ಮ ರಾಜಕಾರಣ ಮಾಡುತ್ತಿದೆ. ಈ ಬಾರಿ ಮತ್ತಷ್ಟು ಕಠಿಣ ಸವಾಲೊಡ್ಡುತ್ತಿದೆ ಎನ್ನುವುದನ್ನು ತಿರಸ್ಕರಿಸುವಂತಿಲ್ಲ. ಮೂರು ಬಾರಿ ಮುಖ್ಯಮಂತ್ರಿಯಾಗಿ ಪಶ್ಚಿಮ ಬಂಗಾಳ ರಾಜ್ಯವನ್ನು ಆಳಿದ ಮಮತಾ ಅವರಿಗೆ ಈ ಬಾರಿ ಕೇಸರಿ ಪಡೆಯ ರಾಜಕೀಯ ಷಡ್ಯಂತ್ರದ ಭೀತಿ ಒಂದೆಡೆಯಾದರೆ, ಪಕ್ಷದ ಒಳಗಿನ ಭ್ರಷ್ಟಾಚಾರದ ಕಳಂಕ ಮತ್ತೊಂದೆಡೆ ಕಾಡುತ್ತಿದೆ. ಆದಾಗ್ಯೂ, ಬಿಜೆಪಿಯ ಸವಾಲಿಗೆ, ಜವಾಬ್‌ ನೀಡುವುದಾಗಿ ಚುನಾವಣೆಯನ್ನು ಎದುರಿಸುವುದಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ : ನಾರಿ ಶಕ್ತಿ Vs ನೇತಾರ ಶಕ್ತಿ: ಮಹಿಳಾ ಮೀಸಲಾತಿ ಮಸೂದೆ ರಾಜಕೀಯದಾಟ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿರುವುದು ಪಕ್ಷದ ಹಿರಿಯ ನಾಯಕರ ಮೇಲೆ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳು. ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಆಧಾರದ ಮೇಲೆ  ಸಚಿವ ಪಾರ್ಥ ಚಟರ್ಜಿ ಅವರನ್ನು ಬಂಧಿಸಲಾಯಿತು. ಇದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ‌ ರಾಜಕೀಯ ವರ್ಚಸ್ಸಿಗೆ ಭಾರಿ ಪೆಟ್ಟು ನೀಡಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಇನ್ನು, ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ (ED) ಮತ್ತು ಸಿಬಿಐ (CBI) ಟಿಎಂಸಿ ನಾಯಕರ ಮೇಲೆ ನಡೆಸುತ್ತಿರುವ ಸರಣಿ ದಾಳಿಗಳು ಬಿಜೆಪಿಗೆ ರಾಜಕೀಯ ಅಸ್ತ್ರಗಳಾಗಿವೆ. ಇದನ್ನು ಮಮತಾ ಅವರು “ರಾಜಕೀಯ ಸೇಡು” ಎಂದು ಕರೆದರೂ, ಜನಸಾಮಾನ್ಯರಲ್ಲಿ ಇದು ಆಡಳಿತ ವಿರೋಧಿ ಅಲೆಗೆ ಕಾರಣವಾಗುತ್ತಿದೆ. ಟಿಎಂಸಿಗೆ ರಾಜಕೀಯ ಸಲಹೆ ನೀಡುತ್ತಿದ್ದ ಐಪ್ಯಾಕ್‌ ಸಂಸ್ಥೆ ಮೇಲೆ ನಡೆದ ಇಡಿ ದಾಳಿ ಮತ್ತು ಅದರ ಮುಖ್ಯಸ್ಥನ  ಬಂಧನ ಸೇರಿ ಆ ಬೆಳವಣಿಗೆಯ ಸುತ್ತ ನಡೆದ ಎಲ್ಲಾ ರಾಜಕೀಯ ಬೆಳವಣಿಗೆಗಳು ಟಿಎಂಸಿಗೆ ರಾಜಕೀಯವಾಗಿ ಒಂದು ಹಂತದ ಹಿನ್ನೆಡೆಯೂ ಹೌದು.

ಬಿಜೆಪಿಯ ಆಕ್ರಮಣಕಾರಿ ತಂತ್ರ ಮತ್ತು ಮತಧ್ರುವೀಕರಣ

ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಬೇರುಗಳನ್ನು ಬಲಪಡಿಸಿಕೊಂಡಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ದೀದಿ ಅವರ ಅತ್ಯಾಪ್ತರಾಗಿದ್ದ ಸುವೇಂದು ಅಧಿಕಾರಿ ಬಿಜೆಪಿಗೆ ಸೇರ್ಪಡೆಗೊಂಡರು. ಮಮತಾ ಬ್ಯಾನರ್ಜಿ ಅವರಿಗೆ ಸವಾಲೊಡ್ಡಿ ಬಿಜೆಪಿಯ ಪ್ರಬಲ ರಾಜಕೀಯ ಮುಖವಾಗಿ ಕಾಣಿಸಿಕೊಂಡರು. ಬಿಜೆಪಿಗೆ ಬೇಕಾಗುವ ಹಾಗೆ ತನ್ನ ನಡೆ-ನುಡಿಗಳಲ್ಲಿ ಬದಲಾವಣೆ ತಂದುಕೊಂಡರು. ಬಿಜೆಪಿ ಬಯಸುವ ಆಕ್ರಮಣಕಾರಿ ಭಾಷಣ, ಏರು ಧ್ವನಿ ಎಲ್ಲವನ್ನೂ ಸುವೇಂಧು ಅಧಿಕಾರಿ ರೂಢಿಸಿಕೊಂಡರು. ಬಿಜೆಪಿ ತನ್ನ ಹಳೆಯ ಹಿಂದುತ್ವ ಮತ್ತು ಧ್ರುವೀಕರಣ ರಾಜಕಾರಣವನ್ನು ಕಳೆದ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತೀವ್ರವಾಗಿ ಮಾಡಿತ್ತು ಎನ್ನುವುದು ಕೂಡ ಉಲ್ಲೇಖನೀಯ. ಬಿಜೆಪಿಯ ರಾಷ್ಟ್ರೀಯವಾದ ಮತ್ತು ಹಿಂದುತ್ವದ ಆಧಾರದ ಮೇಲೆ ಮತದಾರರನ್ನು ಸೆಳೆಯುತ್ತಿದೆ. ವಿಶೇಷವಾಗಿ ʼಸಂದೇಶ್ ಖಾಲಿʼಯಂತಹ ಘಟನೆಗಳನ್ನು ಮುಂದಿಟ್ಟುಕೊಂಡು ಮಹಿಳಾ ಸುರಕ್ಷತೆಯ ಬಗ್ಗೆ ಬಿಜೆಪಿ ನಡೆಸುತ್ತಿರುವ ರಾಜಕೀಯ ಹೋರಾಟ, ಪ್ರಚಾರ ಮಮತಾ ಅವರ ‘ಮಹಿಳಾ ಮತಬ್ಯಾಂಕ್’ ಅನ್ನು ಸೀಳುವ ಪ್ರಯತ್ನವಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ತನ್ನ ರಾಜಕೀಯದಲ್ಲಿ ವಾಸ್ತವಾಂಶಗಳಿಗಿಂತ ಮಿಗಿಲಾಗಿ ಸಿನಿಕಥೆಯನ್ನು ಸೃಷ್ಟಿಸಿ ಅದನ್ನು ಸಾರ್ವಜನಿಕವಾಗಿ, ರಾಜಕೀವಾಗಿ ಬಳಸಿ, ತನ್ನೆಡೆಗೆ ಲಾಭವಾಗುವ ಹಾಗೆ ರಾಜಕೀಯ ಮಾಡುವ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿಯೂ ಯಶಸ್ವಿಯಾಗಿ ಮಾಡಿದೆ.  

ಇನ್ನು, ಸುದೀರ್ಘ ಹದಿನೈದು ವರ್ಷಗಳ ಆಡಳಿತದ ನಂತರ ಯಾವುದೇ ಸರ್ಕಾರಕ್ಕೆ ಎದುರಾಗುವ ‘ಆಡಳಿತ ವಿರೋಧಿ ಅಲೆ’ (Anti-incumbency) ಈಗ ಮಮತಾ ಅವರಿಗೂ ತಟ್ಟಿದೆ. ಈ ಸಂದರ್ಭವನ್ನು ತನ್ನ ಪರವಾಗಿ ಮಾಡಿಕೊಳ್ಳುವುದಕ್ಕೆ ಬಿಜೆಪಿ ಎಲ್ಲಾ ಪ್ರಯತ್ನವನ್ನು ಮಾಡಿದೆ. ಪಂಚಾಯತ್ ಮಟ್ಟದಲ್ಲಿನ ಭ್ರಷ್ಟಾಚಾರ ಮತ್ತು ಸ್ಥಳೀಯ ಟಿಎಂಸಿ ಕಾರ್ಯಕರ್ತರ ದಬ್ಬಾಳಿಕೆ ಗ್ರಾಮೀಣ ಭಾಗದ ಜನರನ್ನು ಕೆರಳಿಸಿದೆ ಎಂಬ ವಿಚಾರವನ್ನೊಳಗೊಂಡು ಬಂಗಾಳದಲ್ಲಿನ ನಿರುದ್ಯೋಗ ಸಮಸ್ಯೆಗಳು ಬಿಜೆಪಿಗೆ ಸುಲಭದ ರಾಜಕೀಯ ಅಸ್ತ್ರವಾಗಿ ಸಿಕ್ಕಿದೆ.

ಮುಸ್ಲಿಂ ಮತಗಳ ವಿಭಜನೆ ಮತ್ತು ಐಎಸ್ಎಫ್ (ISF) ಪ್ರಭಾವ

ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ತನ್ನ ಪ್ರಬಲ ಮತಬ್ಯಾಂಕ್‌ ಆಗಿ ನಂಬಿರುವುದು ಅಲ್ಪ ಸಂಖ್ಯಾತ ಮತಗಳನ್ನು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಈಗ ಇಂಡಿಯನ್ ಸೆಕ್ಯುಲರ್ ಫ್ರಂಟ್ (ISF) ನಂತಹ ಪಕ್ಷಗಳು ಮುಸ್ಲಿಂ ಮತಗಳನ್ನು ಸೆಳೆಯುತ್ತಿರುವುದು ಟಿಎಂಸಿಗೆ ಆತಂಕ ತಂದಿದೆ. ಐಎಸ್‌ಎಫ್ ಪಕ್ಷ ತೃಣಮೂಲ ಕಾಂಗ್ರೆಸ್‌ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಒಡೆದರೆ ಅದರ ನೇರ ಲಾಭ ಬಿಜೆಪಿಗೆ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಚುನಾವಣಾ ಕಣದಲ್ಲಿ ಈ ಬಾರಿ ಇಷ್ಟೆಲ್ಲಾ ಸವಾಲುಗಳಿದ್ದರೂ ಮಮತಾ ಬ್ಯಾನರ್ಜಿ ಅವರಲ್ಲಿರುವ ಅತಿದೊಡ್ಡ ಶಕ್ತಿ ಅವರ ‘ಪರ್ಸನಲ್ ಬ್ರ್ಯಾಂಡ್’ ಮೂಲಕವೇ ಚುಣಾವಣೆಯನ್ನು ಎದುರಿಸುತ್ತಿದಾರೆ. ತೃಣಮೂಲ ಕಾಂಗ್ರೆಸ್‌ ಸರ್ಕಾರದ ‘ಲಕ್ಷ್ಮೀರ್ ಭಂಡಾರ್’ ನಂತಹ ಮಹಿಳಾ ಕೇಂದ್ರಿತ ಕಲ್ಯಾಣ ಯೋಜನೆಗಳು ಇನ್ನೂ ಅವರಿಗೆ ಶ್ರೀರಕ್ಷೆಯಾಗಿವೆ. ಈ ನಡುವೆ ತಾನು “ಬಂಗಾಳದ ಮಗಳು” ಎಂಬ ಭಾವನಾತ್ಮಕ ಕಾರ್ಡ್ ಅನ್ನು ಬಳಸಿ ಹೊರಗಿನಿಂದ ಬಂದ ಬಿಜೆಪಿ ನಾಯಕರನ್ನು ‘ಬಹಿರಾಗತ’ (ಹೊರಗಿನವರು) ಎಂದು ಬಿಂಬಿಸುವಲ್ಲಿ ದೀದಿ ಗ್ರಾಮೀಣ ಪ್ರದೇಶಗಳಲ್ಲಿ ಯಶಸ್ವಿಯಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಟಿಎಂಸಿ ಮೇಲಿನ ಒಲವು ಕಡಿಮೆಯಾಗಿಲ್ಲ ಎನ್ನುವ ಅಂಶಗಳೂ ಕೂಡ ಟಿಎಂಸಿ ಚುನಾವಣಾ ಗೆಲುವಿಗೆ ಕಾರಣವಾಗಬಹುದು.

ಎಸ್ಐಆರ್ ಮತ್ತು ಬಿಜೆಪಿಯ ಸವಾಲನ್ನು ಮೀರಿ ಗೆಲ್ಲುತ್ತಾರಾ ಮಮತಾ?

ಪಶ್ಚಿಮ ಬಂಗಾಳದ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮಮತಾ ಬ್ಯಾನರ್ಜಿ ಅವರು ಎದುರಿಸುತ್ತಿರುವ ಸವಾಲುಗಳು ಈ ಹಿಂದಿಗಿಂತಲೂ ಭಿನ್ನ ಮತ್ತು ಸಂಕೀರ್ಣ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (SIR) ಈ ಬಾರಿ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಅಕ್ರಮ ವಲಸಿಗರು ಮತ್ತು ನಕಲಿ ಮತದಾರರು ಪಟ್ಟಿಯಲ್ಲಿದ್ದಾರೆ ಎಂದು ಬಿಜೆಪಿ ನಿರಂತರವಾಗಿ ಆರೋಪಿಸುತ್ತಿದೆ. ಎಸ್‌ಐಆರ್ ಮೂಲಕ ಅಂತಹ ಮತಗಳನ್ನು ತೆಗೆದುಹಾಕಿದರೆ, ಅದು ಮಮತಾ ಅವರ ಮತಬ್ಯಾಂಕ್‌ಗೆ ಪೆಟ್ಟು ನೀಡಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಇದೇ ಕಾರಣದಿಂದ ರಾಜಕೀವಾಗಿ ಚುನಾವಣಾ ಆಯೋಗವನ್ನು ಬಿಜೆಪಿ ತನ್ನ ʼಟೂಲ್‌ʼ ಆಗಿ ಬಳಸಿಕೊಂಡಿದೆ ಎಂಬ ರಾಜಕೀಯ ಆರೋಪವನ್ನು ತಳ್ಳಿ ಹಾಕುವಂತಿಲ್ಲ.

ಬಿಜೆಪಿ ಕೇಂದ್ರ ಚುನಾವಣಾ ಆಯೋಗದ ಮೂಲಕ ನಡೆಸಿದ ಎಸ್‌ಐಆರ್‌ ಪ್ರಕ್ರಿಯೆಯನ್ನು  ಮಮತಾ ಅವರು “ಬಂಗಾಳಿ ಅಸ್ಮಿತೆ” ಮತ್ತು “ಬಂಗಾಳಿ ವಿರೋಧಿ ನಡೆ” ಎಂದು ಬಿಂಬಿಸುತ್ತಿದ್ದಾರೆ. ಕಾನೂನುಬದ್ಧ ಮತದಾರರ ಹೆಸರನ್ನು ಕೈಬಿಡಲಾಗುತ್ತಿದೆ ಎಂದು ಆರೋಪಿಸುವ ಮೂಲಕ ಜನರಲ್ಲಿ ಭಾವನಾತ್ಮಕ ಅಲೆ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿ ಕೇವಲ ಹಿಂದುತ್ವದ ಆಧಾರದ ಮೇಲೆ ಮಾತ್ರವಲ್ಲದೆ, ಆಡಳಿತಾತ್ಮಕ ವೈಫಲ್ಯಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ಇನ್ನು, ಕಾಂಗ್ರೆಸ್ ಮತ್ತು ಎಡಪಕ್ಷಗಳು ಬಲಹೀನವಾಗಿದ್ದರೂ, ಈ ಚುನಾವಣೆ ಎಸ್‌ಐಆರ್‌ ಪ್ರಕ್ರಿಯೆಗಳು ಆದ ಬಳಿಕ ಆ ಪಕ್ಷಗಳು ಪಡೆಯುವ ಮತಗಳು ಟಿಎಂಸಿ ಅಥವಾ ಬಿಜೆಪಿಗೆ ಲಾಭವಾಗಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.  

ಜಿದ್ದಾಜಿದ್ದಿನ ಪೈಪೋಟಿ ಈ ಬಾರಿಯ ಚುನಾವಣಾ ಕಣದಲ್ಲಿದೆ ಎನ್ನುವುದು ಸ್ಪಷ್ಟ. ಎಸ್‌ಐಆರ್‌ ಪ್ರಕ್ರಿಯೆಯ ಕಾರಣಕ್ಕೆ ಮುಸ್ಲಿಂ ಮತಗಳು ಒಗ್ಗೂಡಿದರೆ ಮತ್ತು ಮಹಿಳಾ ಮತದಾರರ ಬೆಂಬಲ ಟಿಎಂಸಿಗೆ ಮುಂದುವರಿದರೆ ಮಮತಾ ಬ್ಯಾನರ್ಜಿ ಈ ಚುನಾವಣೆಯ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು.

ಒಟ್ಟಿನಲ್ಲಿ, ಮಮತಾ ಬ್ಯಾನರ್ಜಿ ರಾಜಕೀಯ ಚದುರಂಗದಾಟದಲ್ಲಿ ನಿಸ್ಸೀಮರು ಎಂದೇ ಕರೆಸಿಕೊಳ್ಳುತ್ತಾರೆ. ಆದಾಗ್ಯೂ, ಬಿಜೆಪಿಯ ‘ಸಂಘಟನಾ ಅಸ್ತ್ರ’ ಮತ್ತು ಚುನಾವಣಾ ಆಯೋಗದ ‘ಎಸ್‌ಐಆರ್’ ಪ್ರಕ್ರಿಯೆಯ ನಂತರ ಮತಪಟ್ಟಿಯಲ್ಲಾದ ವ್ಯತ್ಯಾಸಗಳ ಬಳಿಕವೂ ಮಮತಾ ಗೆದ್ದರೆ, ಅವರ ʼಪರ್ಸನಲ್‌ ಇಮೆಜ್‌ʼ ಮುಂದೆ ಬಿಜೆಪಿಯ ಯಾವ ರಾಜಕೀಯ ತಂತ್ರವೂ ಫಲಿಸಲ್ಲ ಎನ್ನುವುದು ಖಾತರಿಯಾಗುವುದರಲ್ಲಿ ಸಂಶಯವಿಲ್ಲ.  

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ವಿದೇಶಿ ಪ್ರವಾಸದ ದಾಖಲೆ ಬಹಿರಂಗಕ್ಕೆ ದೆಹಲಿ ಹೈಕೋರ್ಟ್ ನಕಾರ

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ...

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ...

ಈ ದಿನ ಸಂಪಾದಕೀಯ | ʼಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದ್ಯಾ ಈ ಪ್ರಪಂಚದಲ್ಲಿ?ʼ

ಸೌದಿ ಅರೇಬಿಯಾದ ಮರಣದಂಡನೆ ಪ್ರಕರಣದಿಂದ ಚಿಂತನೆಗೆ ಹಚ್ಚುವ ಸಂಗತಿ ಎಂದರೆ, ಧಾರ್ಮಿಕ...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ...