ಪ್ರಗತಿಪರ ಹೈನುಗಾರ ಮಹಿಳೆಯರ ಸಮಾವೇಶ: ಮಹಿಳೆಯರು ಹೇಳಿದ್ದಿಷ್ಟು!

Date:

ಗ್ರಾಮೀಣ ಭಾರತದ ಹಳ್ಳಿಗಳಲ್ಲಿ, ಸೂರ್ಯೋದಯದ ಮೊದಲೇ ಎದ್ದು ಹಸುಗಳ ಬಳಿ ಹೋಗುವ ಮಹಿಳೆಯರ ಕೈಗಳು ಕೇವಲ ಹಾಲು ಕರೆಯುವ ಕೈಗಳಲ್ಲ. ಅವುಗಳು ಕುಟುಂಬದ ಆರ್ಥಿಕತೆಯನ್ನು ಹೊತ್ತುಕೊಂಡು, ಸಮಾಜದ ಬೆನ್ನೆಲುಬಾಗಿ ನಿಂತಿರುವ ಶಕ್ತಿಯ ಸಂಕೇತಗಳು. ಗ್ರಾಮೀಣ ಭಾರತದ ನಿಜವಾದ ಬೆನ್ನೆಲುಬು ಇವರೇ. ಇಂದು ಕ್ಷೀರ ಸಂಜೀವಿನಿ ಯೋಜನೆಯ ದಶಮಾನೋತ್ಸವದ ಅಂಗವಾಗಿ ನಡೆದ ಪ್ರಗತಿಪರ ಹೈನುಗಾರ ಮಹಿಳೆಯರ ಸಮಾವೇಶದಲ್ಲಿ ಕಾಣಿಸಿಕೊಂಡದ್ದು ಹಾಲಿನ ವಾಸನೆ ಮಾತ್ರವಲ್ಲ, ಹೋರಾಟದ ಕಥೆಗಳು, ಸಾಧನೆಯ ಹೆಜ್ಜೆಗಳು, ಸ್ವಾಭಿಮಾನದ ಜೀವನ.

- Advertisement -
1 59
ನರಸಮ್ಮ – ಶ್ರೀರಾಮನಹಳ್ಳಿ

ಹಸು, ಹಾಲು ಮತ್ತು ಪರಿಶ್ರಮ  ಈ ಮೂರೇ ಇವರ ಬದುಕಿನ ಮಂತ್ರ. ಒಂದು ಕಾಲದಲ್ಲಿ ಮನೆಯ ಒಳಗೇ ಸೀಮಿತವಾಗಿದ್ದ ಮಹಿಳೆಯರು, ಇಂದು ಹೈನುಗಾರಿಕೆಯ ಮೂಲಕ ಸ್ವಾವಲಂಬನೆಯ ದಾರಿಯಲ್ಲಿ ನಿಂತಿದ್ದಾರೆ.  ಒಂದು ಕಾಲದಲ್ಲಿ ಮನೆಯ ಒಳಗೇ ಸೀಮಿತವಾಗಿದ್ದ ಮಹಿಳೆಯರು ಇಂದು ಹೈನುಗಾರಿಕೆಯ ಮೂಲಕ ಸ್ವಾವಲಂಬನೆಯ ದಾರಿಯಲ್ಲಿ ನಿಂತಿದ್ದಾರೆ. ಬೆಳಿಗ್ಗೆ ಹಸುವಿನ ಆರೈಕೆಯಿಂದ ಶುರುವಾಗುವ ಅವರ ದಿನ, ಸಂಜೆ ಕುಟುಂಬದ ಖರ್ಚುಗಳನ್ನು ತಾವೇ ನಿರ್ವಹಿಸುವ ಮಟ್ಟಿಗೆ ಬೆಳದಿದೆ. ಹೈನುಗಾರಿಕೆ ಅವರಿಗೆ ಕೇವಲ ಆದಾಯದ ಮೂಲವಲ್ಲ, ಅದು ಆತ್ಮವಿಶ್ವಾಸ ಮತ್ತು ಗುರುತನ್ನು ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ...

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕಲೆ ಮತ್ತೊಮ್ಮೆ ಅತ್ಯಂತ ಸುಂದರವಾಗಿ ಸಾಬೀತುಪಡಿಸಿದೆ. ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು 'ಮಹಿಷಾಸುರ...

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ...

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ ಮತದಾನ ಅಕ್ಟೋಬರ್ 23ರಂದು ನಡೆಯಲಿದೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆರಿಸಲು ಪ್ರಾಶಸ್ತ್ಯ ಮತದಾನ ಪದ್ಧತಿಯನ್ನು ಅನುಸರಿಸಬೇಕು. ಈ ಸಂದರ್ಭದಲ್ಲಿ...

ಬೆಂಗಳೂರು ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ ಕಟ್ಟಿಕೊಂಡಿರುವ ‘ಶಿಕ್ಷಕರ ಕೋಟೆ’...

ವಿಧಾನ ಪರಿಷತ್‌ನ 4 ಸ್ಥಾನಗಳಲ್ಲಿಅಕ್ಟೋಬರ್ 23ರ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು- ‘ಬೆಂಗಳೂರು ಶಿಕ್ಷಕರ ಕ್ಷೇತ್ರ'. ಇಲ್ಲಿ ಕಾಂಗ್ರೆಸ್‌ನಿಂದ ಸ್ಫರ್ಧಿಸಿರುವ ಪುಟ್ಟಣ್ಣ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿರುವ...
6 20
ಪಾರ್ವತಮ್ಮ – ಬದಾಮಿ

ಏನಿದು ಕ್ಷೀರ ಸಂಜೀವಿನಿ ಯೋಜನೆ?

ಕ್ಷೀರ ಸಂಜೀವಿನಿ ಯೋಜನೆಯು ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಹಾಲು ಒಕ್ಕೂಟದ ಯೋಜನೆಯಾಗಿದ್ದು, ಮಹಿಳಾ ಹೈನು ಸಹಕಾರಿ ಸಂಘಗಳನ್ನು ಉತ್ತೇಜಿಸುವ ಮೂಲಕ ಹಾಗೂ ಹೈನುಗಾರಿಕೆಯ ಮೂಲಕ ಬಡ ಗ್ರಾಮೀಣ ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಸಹಯೋಗದೊಂದಿಗೆ ಪ್ರಾರಂಭಿಸಲಾದ ಈ ಉಪಕ್ರಮವು ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ತರಬೇತಿ, ಆರ್ಥಿಕ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ. ಈ ಮೂಲಕ ಅವರ ಆದಾಯ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ. ಮೊದಲ ಹಂತದ ಯೋಜನೆ 2014ರ ಏಪ್ರಿಲ್‌ನಲ್ಲಿ ಪ್ರಾರಂಭವಾಯಿತು.  

ಇದರ ಸದುಪಯೋಗ ಪಡೆದುಕೊಂಡ ಮಹಿಳೆಯೊಬ್ಬರು ಈದಿನ.ಕಾಮ್‌ ಜೊತೆ ಮಾತನಾಡಿ “ಸರ್ಕಾರದ ಯೋಜನೆಯಿಂದಲೇ ಇಂದು ನಾವು ಇಲ್ಲಿ ಬಂದು ನಿಂತಿದ್ದೇವೆ. ನಮ್ಮ ಬದುಕು ಬದಲಾಗಿದೆ. ಇದಕ್ಕೆ ನಾವು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ” ಎಂದು ತಮ್ಮ ಖುಷಿಯನ್ನ ಹಂಚಿಕೊಂಡರು.

4 30
ಶಾಂತಮ್ಮ – ಶ್ರೀರಾಮನಹಳ್ಳಿ

ಕ್ಷೀರ ಸಂಜೀವಿನಿ ಯೋಜನೆ ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರ ಬದುಕಿಗೆ ಹೊಸ ದಾರಿ ತೋರಿಸಿದೆ. ಹೈನುಗಾರಿಕೆ ಇನ್ನು ಬರೀ ಉದ್ಯೋಗವಲ್ಲ ,  ಇದು ಮಹಿಳೆಯರ ಶಕ್ತಿ, ಆತ್ಮವಿಶ್ವಾಸ ಮತ್ತು ಸ್ವತಂತ್ರತೆಯ ಸಂಕೇತವಾಗಿ ಬದಲಾಗಿದೆ. ಸಮಾವೇಶದಲ್ಲಿ ಹಲವಾರು ಪ್ರಗತಿಪರ ಮಹಿಳಾ ಹೈನುಗಾರರಿಗೆ ಸನ್ಮಾನವೂ ಮಾಡಲಾಯಿತು. ಆ ಸನ್ಮಾನಗಳು ವೇದಿಕೆಯಲ್ಲಿ ಕೊಟ್ಟ ಹೂವಿನ ಹಾರಗಳಷ್ಟೇ ಅಲ್ಲ , ವರ್ಷಗಳ ಕಾಲ ಬೆವರು ಸುರಿಸಿದ ಶ್ರಮಕ್ಕೆ ಸಿಕ್ಕ ಹೆಗ್ಗುರುತು.

ಯೋಜನೆಯ ಉದ್ದೇಶ ಮತ್ತು ಗುರಿಗಳು :

ಕ್ಷೀರ ಸಂಜೀವಿನಿ ಯೋಜನೆಯ ಪ್ರಮುಖ ಗುರಿ ಸಮಾಜದ ಹಿಂದುಳಿದ ವರ್ಗದ ಮಹಿಳೆಯರಿಗೆ, ಅಂದರೆ ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು, ಬಿಪಿಎಲ್ ಕುಟುಂಬಗಳು ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಆದಾಯದ ಮೂಲವನ್ನು ಒದಗಿಸುವುದು. ಕ್ಷೀರ ಸಂಜೀವಿನಿ ಯೋಜನೆಯನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದ್ದು, ಬೇಡಿಕೆಗೆ ತಕ್ಕಂತೆ ಯೋಜನೆಯ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. 

“ನಮ್ಮ ಜೀವನದಲ್ಲೇ ನಾವು ಇಂತಹ ದೊಡ್ಡ ಕಾರ್ಯಕ್ರಮಕ್ಕೆ ಬರ್ತೀವಿ ಅಂತ ಅಂದುಕೊಂಡಿರಲಿಲ್ಲ. ಹೈನುಗಾರಿಕೆ ಅದನ್ನ ಸಾಧ್ಯ ಮಾಡಿದೆ” ಎಂದು ಒಬ್ಬ ಮಹಿಳೆ ಹೇಳುವಾಗ, ಆ ಮಾತುಗಳಲ್ಲಿ ಸಾಧನೆಯ ಹೆಮ್ಮೆ ಮತ್ತು ಖುಷಿ ಎರಡೂ ಮಿಂಚುತ್ತಿತ್ತು.

3 37
ರಾಧಾ – ರಾಯಚೂರು

ಆದರೆ ಈ ಖುಷಿಯ ಜೊತೆಗೆ ಕಳಕಳಿಯೂ ಕೇಳಿಬಂತು. “ರೈತರು ಮತ್ತು ಮಹಿಳೆಯರು ಹೈನುಗಾರಿಕೆಯಿಂದ ಹಿಮ್ಮುಖ ಆಗದಂತೆ ಸರ್ಕಾರವೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಸಬ್ಸಿಡಿ ಹೆಚ್ಚಿಸಬೇಕು, ಬಡ್ಡಿರಹಿತ ಸಾಲ ಕೊಡಬೇಕು, ಹೈನುಗಾರಿಕೆಯನ್ನು ಉಳಿಸಬೇಕು” ಎಂದು ಮಹಿಳೆಯರು ತಮ್ಮ ಬೇಡಿಕೆಗಳನ್ನು ಸ್ಪಷ್ಟವಾಗಿ ಹೇಳಿದರು. ಈ ಯೋಜನೆಯ ಯಶಸ್ಸು ಕೇವಲ ಹತ್ತು ವರ್ಷಗಳದ್ದಲ್ಲ ಅದು ಮುಂದಿನ ಪೀಳಿಗೆಗಳಿಗೂ ಮುಂದುವರಿಯಬೇಕು. ಹೈನುಗಾರಿಕೆ ಉಳಿದರೆ ಮಾತ್ರ ಗ್ರಾಮೀಣ ಆರ್ಥಿಕತೆಯೂ ಉಳಿಯುತ್ತದೆ ಎಂಬುದು ಅವರ ಮಾತು. 

2 46
ಸುವರ್ಣ – ಶ್ರೀನಿವಾಸಪುರ

ಕ್ಷೀರ ಸಂಜೀವಿನಿ ಯೋಜನೆ ಮಹಿಳೆಯರ ಬದುಕಿಗೆ ಬೆಳಕು ತಂದಿದೆ. ಆ ಬೆಳಕು ನಂದಬಾರದು. ಹಸು, ಹಾಲು ಮತ್ತು ಪರಿಶ್ರಮದಿಂದ ನಿರ್ಮಾಣವಾದ ಈ ಶಕ್ತಿ ಗ್ರಾಮೀಣ ಭಾರತದ ಭವಿಷ್ಯ. ಇವರು ಕೇವಲ ಹೈನುಗಾರ ಮಹಿಳೆಯರಲ್ಲ. ಇವರು ದೇಶದ ಆರ್ಥಿಕತೆಯ ಮೌನವಾಗಿ ಕೊಡುಗೆ ಕೊಡುತ್ತಿರುವವರು.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಣರಣ ಬಿಸಿಲಿಗೆ ಬೆಂಗಳೂರು ತತ್ತರ; 35.2 ಡಿಗ್ರಿ ಸೆಲ್ಸಿಯಸ್ ತಾಪಮಾನ

ಸಿಲಿಕಾನ್ ಸಿಟಿ ಬೆಂಗಳೂರು ಏಪ್ರಿಲ್ ಆರಂಭದಲ್ಲೇ ತೀವ್ರ ಬಿಸಿಲಿನ ತಾಪಕ್ಕೆ ತತ್ತರಿಸಿದ್ದು,...

ಮಧ್ಯಪ್ರಾಚ್ಯದ ಬಿಕ್ಕಟ್ಟು | ಮಸಾಲೆ-ದಿನಸಿ ವ್ಯಾಪಾರಕ್ಕೂ ಭಾರಿ ಆಘಾತ  

ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಪರಿಣಾಮ ಈಗ ರಾಜಧಾನಿ ಬೆಂಗಳೂರಿನಲ್ಲಿ ಮಸಾಲೆ ಹಾಗೂ ದಿನಸಿ...

ಕೋಗಿಲು ಪ್ರಕರಣ | ಬೂಟಾಟಿಕೆ ಬಿಟ್ಟು ಮಾನವ ಧರ್ಮ ಪಾಲಿಸಿ : ಬಿ ಟಿ ಲಲಿತಾ ನಾಯಕ್ ಆಗ್ರಹ

“ಬೂಟಾಟಿಕೆ ಬಿಟ್ಟು ಮಾನವ ಧರ್ಮ ಪಾಲಿಸಿ. ಭಾಷೆ ಮತ್ತು ಧರ್ಮ ನೋಡಬೇಡಿ....

ಕೋಗಿಲು ಗೆ ‘ಸರ್ಕಾರಿ ಬೇಲಿ’ : ನಿವಾಸಿಗಳೊಡನೆ ಮಾತಿನ ಚಕಮಕಿ

ಬೆಂಗಳೂರು ನಗರದ ಯಲಹಂಕ ಸಮೀಪದ ಕೋಗಿಲು ಬಡಾವಣೆಯ ಫಕೀರ್ ಕಾಲೋನಿಯಲ್ಲಿ ಗ್ರೇಟರ್...