ಎಸ್‌ಐಆರ್ ಮ್ಯಾಪಿಂಗ್: ಕೃತಕ ದಾಖಲೆ ಸೃಷ್ಟಿಗೆ ಒತ್ತಡ, ಅಂಗನವಾಡಿ ಕಾರ್ಯಕರ್ತೆಯರ ಗಂಭೀರ ಆರೋಪ

Date:

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪೂರ್ವ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿದ್ದು, ಕೃತಕ ಮತದಾರರ ದಾಖಲೆಗಳನ್ನು ಸೃಷ್ಟಿಸುವಂತೆ ತಮ್ಮ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘ ಗಂಭೀರ ಆರೋಪ ಮಾಡಿದೆ. ‘ನನ್ನ ಮತ, ನನ್ನ ಹಕ್ಕು’ ಅಭಿಯಾನದಡಿ ಈ ಆತಂಕವನ್ನು ಹೊರಹಾಕಲಾಗಿದ್ದು, ವಿವಾಹಿತ ಮಹಿಳೆಯರನ್ನು ಅವರ ತವರು ಕುಟುಂಬಗಳ ಬದಲಿಗೆ ಪತಿಯ ಕುಟುಂಬದ ಅಡಿಯಲ್ಲಿಯೇ ಮ್ಯಾಪ್ ಮಾಡುವಂತೆ ಸ್ಥಳೀಯ ಚುನಾವಣಾ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ದೂರಲಾಗಿದೆ.

- Advertisement -

ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರು ಶೇ. 85ರಷ್ಟು ಮ್ಯಾಪಿಂಗ್ ಪೂರ್ಣಗೊಂಡಿದೆ ಎಂದು ಹೇಳಿಕೆ ನೀಡಿದ್ದರೂ, ವಾಸ್ತವದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಮ್ಯಾಪಿಂಗ್ ದತ್ತಾಂಶವೇ ಆಧಾರವಾಗಿರುವುದರಿಂದ ಈ ಬೆಳವಣಿಗೆಯು ಮತದಾರರ ಹಕ್ಕುಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಪರಿಷ್ಕೃತ ವಿಧಾನಗಳ ಬಗ್ಗೆ ಯಾವುದೇ ಸಮರ್ಪಕ ತರಬೇತಿ ನೀಡದೆ, ಅಸಾಧ್ಯವಾದ ಗುರಿಗಳನ್ನು ನೀಡಿರುವುದು ಮತ್ತೊಂದು ಗಂಭೀರ ಸಮಸ್ಯೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ನಿಗದಿತ ಅತ್ಯಲ್ಪ ಸಮಯದೊಳಗೆ ಕಾರ್ಯ ಪೂರ್ಣಗೊಳಿಸದಿದ್ದರೆ ಅಮಾನತು ಮಾಡುವ ಅಥವಾ ಶಿಕ್ಷೆಯ ಎಚ್ಚರಿಕೆ ನೀಡಿ ಬರೋಬ್ಬರಿ 5,000 ಬಿಎಲ್‌ಒಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಅವೈಜ್ಞಾನಿಕ ಒತ್ತಡದಿಂದಾಗಿ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳ ಆರೈಕೆಯಂತಹ ಅಂಗನವಾಡಿ ಕಾರ್ಯಕರ್ತೆಯರ ಮೂಲ ಕರ್ತವ್ಯಗಳಿಗೆ ತೀವ್ರ ಅಡ್ಡಿಯಾಗುತ್ತಿದ್ದು, ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರ ಈ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಾರ್ಯಕರ್ತೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನು ಓದಿದ್ದೀರಾ? ಫಿಫಾ 2026: ಆಕರ್ಷಕ ಗೋಲು ಬಾರಿಸಿದರೂ ರೆಫರಿಗಳು ಅದನ್ನು ತಿರಸ್ಕರಿಸುವುದೇಕೆ?

ಈ ಹಿನ್ನೆಲೆಯಲ್ಲಿ ‘ನನ್ನ ಮತ, ನನ್ನ ಹಕ್ಕು’ ಅಭಿಯಾನವು ಮುಖ್ಯ ಚುನಾವಣಾಧಿಕಾರಿಗಳ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳೆಂದರೆ, ಅಂಗನವಾಡಿ ಕಾರ್ಯಕರ್ತೆಯರ ಆತಂಕಗಳನ್ನು ಪರಿಹರಿಸಿ ಸೂಕ್ತ ತರಬೇತಿ ನೀಡಬೇಕು, 50 ವರ್ಷ ಮೇಲ್ಪಟ್ಟ ಹಾಗೂ ಅನಾರೋಗ್ಯ ಪೀಡಿತ ಸಿಬ್ಬಂದಿಗೆ ವಿನಾಯಿತಿ ನೀಡಬೇಕು ಹಾಗೂ ತಪ್ಪಾದ ದಾಖಲೆ ಸೃಷ್ಟಿಸಲು ಒತ್ತಾಯಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ, ಪ್ರಕ್ರಿಯೆಯ ಪ್ರತಿ ಹಂತದ ಅವಧಿಯನ್ನು ಒಂದು ತಿಂಗಳಿಂದ ಮೂರು ತಿಂಗಳಿಗೆ ವಿಸ್ತರಿಸಬೇಕು, ನಾಗರಿಕ ಸಂಘಟನೆಗಳ ಉಪಸ್ಥಿತಿಯಲ್ಲಿ ಸಾರ್ವಜನಿಕ ಸಭೆ ನಡೆಸಬೇಕು, ಸಾಫ್ಟ್‌ವೇರ್‌ನ ಮೂಲ ಕೋಡ್ (Source Code) ಸಾರ್ವಜನಿಕಗೊಳಿಸಬೇಕು ಮತ್ತು ಯಾವುದೇ ಅರ್ಹ ಮತದಾರ ತನ್ನ ಹಕ್ಕು ಕಳೆದುಕೊಳ್ಳುವುದಿಲ್ಲ ಎಂಬ ಸಾರ್ವಜನಿಕ ಭರವಸೆಯನ್ನು ನೀಡಬೇಕು ಎಂದು ಆಗ್ರಹಿಸಲಾಗಿದೆ.

ಮಾನ್ಯ ಮುಖ್ಯಮಂತ್ರಿಗಳು ತಕ್ಷಣ ಮಧ್ಯಪ್ರವೇಶಿಸಿ, ಎಸ್‌ಐಆರ್‌ಗೆ ಅಗತ್ಯವಿರುವ ದಾಖಲೆ ಒದಗಿಸುವ ಜವಾಬ್ದಾರಿ ಸ್ಥಳೀಯ ಆಡಳಿತದ್ದೇ ಎಂಬುದನ್ನು ಸ್ಪಷ್ಟಪಡಿಸಿ ಸುತ್ತೋಲೆ ಹೊರಡಿಸಬೇಕು ಹಾಗೂ ಇತರ ರಾಜ್ಯಗಳಲ್ಲಿನ ಸಮಸ್ಯೆಗಳ ಬಗ್ಗೆ ಸಿಇಒಗೆ ಪತ್ರ ಬರೆದು ರಾಜ್ಯದ ಮತದಾರರ ರಕ್ಷಣೆಗೆ ಸೂಚಿಸಬೇಕು ಎಂದು ಒತ್ತಾಯಿಸಲಾಗಿದೆ. ಇದೇ ವೇಳೆ, ಎಸ್‌ಐಆರ್ ಮೂಲಕ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ನಿವಾಸಿಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬ ಬಿಜೆಪಿ-ಆರ್‌ಎಸ್‌ಎಸ್‌ನ ಸುಳ್ಳು ಪ್ರಚಾರವು ಸಮಾಜದಲ್ಲಿ ದ್ವೇಷ ಬಿತ್ತುತ್ತಿದ್ದು, ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇತರ ರಾಜ್ಯಗಳ ವಾಸ್ತವ ಅಂಕಿ-ಅಂಶಗಳನ್ನು ನೀಡಿ ರಾಜ್ಯ ಸರ್ಕಾರ ಈ ಅಪಪ್ರಚಾರವನ್ನು ತಡೆಯಬೇಕು ಎಂದು ಅಭಿಯಾನವು ಎಚ್ಚರಿಸಿದೆ.

ಸಾರ್ವಜನಿಕರಲ್ಲಿ ಎಸ್‌ಐಆರ್ ಕುರಿತು ತೀವ್ರ ಗೊಂದಲಗಳಿದ್ದು, 1994 ಅಥವಾ 2002ರ ಗುರುತಿನ ಚೀಟಿ ಇದ್ದರೂ, ಹಳೆಯ ಮತಗಟ್ಟೆ ಸಂಖ್ಯೆ ನೀಡಬೇಕೆಂಬ ಮಾಹಿತಿಯೇ ಜನರಿಗಿಲ್ಲ. ಈ ಗೊಂದಲ ನಿವಾರಣೆ ಹಾಗೂ ಜಾಗೃತಿ ಮೂಡಿಸಲು ಎರಡನೇ ದಿನದ ‘ಎಸ್‌ಐಆರ್ ಜನಜಾಗೃತಿ ಜಾಥಾ’ ಮಂಗಳವಾರ ಶಿವಾಜಿನಗರ ಬಸ್ ನಿಲ್ದಾಣದಿಂದ ಆರಂಭವಾಗಿ ಶಿವಾಜಿನಗರ ಮಾರುಕಟ್ಟೆ, ಕೆ.ಆರ್. ಮಾರುಕಟ್ಟೆ, ಪಾದರಾಯನಪುರ, ವಿಜಯನಗರ ಮಾರುಕಟ್ಟೆ ಮೂಲಕ ಸಾಗಿ ಮೈಸೂರು ರಸ್ತೆಯ ಗಂಗೊಂಡನಹಳ್ಳಿಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ವ್ಯಾಪಾರ ಮತ್ತು ವಸತಿ ಪ್ರದೇಶಗಳ ಸಂಘಟನೆಗಳೂ ಕಾರ್ಯಾಗಾರಕ್ಕೆ ಮನವಿ ಮಾಡಿದ್ದು, ಜಾಥಾದ ಜೊತೆಯಲ್ಲೇ ನಡೆಸಲಾಗುತ್ತಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ಕೇವಲ ಎರಡು ದಿನಗಳಲ್ಲಿ ಸಾವಿರಾರು ಸಾರ್ವಜನಿಕರು ಬೆಂಬಲ ಸೂಚಿಸಿದ್ದಾರೆ.

ಜನರಲ್ಲಿರುವ ವ್ಯಾಪಕ ಗೊಂದಲ ಮತ್ತು ತಪ್ಪು ಮಾಹಿತಿಯನ್ನು ತಡೆಗಟ್ಟಿ, ಎಸ್‌ಐಆರ್ ಪ್ರಕ್ರಿಯೆಯ ಕುರಿತು ಸರಿಯಾದ ಮಾಹಿತಿಯನ್ನು ತಲುಪಿಸುವ ಕೆಲಸವನ್ನು ಚುನಾವಣಾ ಆಯೋಗ ಮತ್ತು ಸರ್ಕಾರ ತಕ್ಷಣವೇ ಮಾಡಬೇಕಿದೆ. ಏತನ್ಮಧ್ಯೆ, ಎಸ್‌ಐಆರ್ ಜನಜಾಗೃತಿ ಜಾಥಾದ ಮೂರನೇ ದಿನದ ಕಾರ್ಯಕ್ರಮವು ಜೂನ್ 19ರಂದು ಜಯನಗರ 4ನೇ ಬ್ಲಾಕ್‌ನಿಂದ ಆರಂಭವಾಗಿ, ತಿಲಕ್ ನಗರ, 9ನೇ ಬ್ಲಾಕ್ ಮಾರುಕಟ್ಟೆ, ಗುರಪ್ಪನಪಾಳ್ಯ, ಗಂಗೋತ್ರಿ ವೃತ್ತ, ವಿರಾಟ್ ನಗರ ಮೂಲಕ ಸಾಗಿ ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಮಾಪ್ತಿಗೊಳ್ಳಲಿದೆ. ಅಭಿಯಾನದ ಅಥವಾ ಜಾಥಾದ ಕುರಿತ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ವಿನಯ್ (9880595032) ಅಥವಾ ಐಶ್ವರ್ಯ (9900047744) ಅವರನ್ನು ಸಂಪರ್ಕಿಸಬಹುದಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ಮತಪಟ್ಟಿಯಿಂದ ಎಷ್ಟು ಹೆಸರು ರದ್ದು? ಸ್ಪಷ್ಟ ವರದಿ ನೀಡುವಂತೆ ಚು. ಆಯೋಗಕ್ಕೆ ಜಾಗೃತ ಕರ್ನಾಟಕ ಆಗ್ರಹ

ರಾಜ್ಯದಲ್ಲಿ ಕರಡು ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕ, ಲಕ್ಷಾಂತರ ಮತದಾರರಿಗೆ ನೋಟಿಸ್...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಭೂಮಿ ಹಕ್ಕು ವೇದಿಕೆ ಹೇಳುವುದೇನು?

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA)...