ಕೋಲಾರ|ಮಾರುಕಟ್ಟೆಗೆ ಮೂಲಭೂತ ಸೌರ್ಕಯಗಳನ್ನು ಒದಗಿಸುವಂತೆ ಸಂಸದ ಮಲ್ಲೇಶ ಬಾಬು ಸೂಚನೆ

Date:

ಕೋಲಾರ :- ಹಳೆ ಬಸ್‌ನಿಲ್ದಾಣದಲ್ಲಿ ಹೂ ಮಾರಾಟಗಾರರ ಹಾಗೂ ಹೂ ಬೆಳೆಗಾರರ ಸಮಸ್ಯೆ ಆಲಿಸಲು ಮಾರುಕಟ್ಟೆಗೆ ಭೇಟಿ ನೀಡಿದ ಸಂಸದರಾದ ಮಲ್ಲೇಶ ಬಾಬು ರವರು ಮಾರುಕಟ್ಟೆಯನ್ನು ವಿಕ್ಷಣೆ ಮಾಡಿ ಹೂ ಬೆಳೆಗಾರರಿಗೆ ತೊಂದರೆ ನೀಡದಂತೆ ನಗರಸಭೆ ಕಮಿಷನರ್‌ ನವೀನ್‌ ರವರಿಗೆ ಸೂಚನೆ ನೀಡಿ ಮಾರುಕಟ್ಟೆಗೆ ಮೂಲಭೂತ ಸೌರ್ಕಯಗಳನ್ನು ಒದಗಿಸುವಂತೆ ಸೂಚನೆ ನೀಡಿದರು.

ಮೂರು ದಿನದ ಹಿಂದೆ ಹೂ ಮಾರುಕಟ್ಟೆಗೆ ಭೇಟಿ ನೀಡಿದ ನಗರಸಭೆ ಕಮೀಷನರ್‌ ನವೀನ್‌ ರವರು ರೈತರ ಹೂ ಹರಾಜು ಹಾಕದಂತೆ ಸೂಚನೆ ನೀಡಿದ್ದು ಇದ್ದರಿಂದ ಕೆರಳಿದ್ದ ರೈತರು ವ್ಯಾಪಾರಸ್ಥರು ರೈತಸಂಘದವರು ಹೂವನ್ನು ರಸ್ತೆಗೆ ಸುರಿಯುವ ನಿರ್ಧಾರ ಕೈಗೊಂಡಿರುವ ವಿಷಯ ತಿಳಿದು ಮಾರುಕಟ್ಟೆಗೆ ಬಂದ ಸಂಸದರು ಹೂ ಬೆಳೆಗಾರರ ರೈತರ ಜೊತೆ ಚರ್ಚೆ ಮಾಡಿ ಸ್ಥಳದಲ್ಲಿದ್ದ ನಗರಸಭೆ ಕಮೀಷನರ್‌ ರವರಿಗೆ ಅನಾಧೀಕೃತ ಅಂಗಡಿಗಳನ್ನು ತೆರೆವುಗೊಳಿಸಿ ಅದನ್ನು ಬಿಟ್ಟು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಹೂ ಬೆಳೆಗಾರರಿಗೆ ತೊಂದರೆ ಯಾಗದಂತೆ ಕ್ರಮ ವಹಿಸಿ ಎಂದು ಸೂಚನೆ ಮಾಡುವ ಜೊತೆಗೆ ಇಂದಿರಾ ಕ್ಯಾಂಟಿನ್‌ ಪಕ್ಕದಲ್ಲಿರುವ ಸ್ಥಳವನ್ನು ಅಭಿವೃದ್ಧಿಪಡಿಸಿ ಪಾರ್ಕಿಂಗ್‌ ವ್ಯವಸ್ಥೆಮಾಡಿ ಎಂದು ಸೂಚಿಸಿದರು.

50-60 ವರ್ಷಗಳಿಂದ ಹಳೇ ಬಸ್‌ ನಿಲ್ದಾಣೆದಲ್ಲಿ ಹೂ ವ್ಯಾಪಾರ ಮಾಡಿಕೊಂಡು ರೈತರು ತರುವ ಹೂವನ್ನು ಹರಾಜು ಹಾಕಿ ಉತ್ತಮ ಬೆಲೆ ನೀಡುತ್ತಿದ್ದ ಈಗ ಏಕಾಏಕಿ ನಗರಸಭೆ ಹೊಸ ಕಾನೂನು ತರುವುದು ರೈತರಿಗೆ ಅನ್ಯಾಯ ಮಾಡಿದಂತೆ ರೈತರಿಗೆ ತೊಂದರೆಯಾದರೆ ರೈತರ ಪರವಾಗಿ ಬೀದಿಗಿಳಿಯುವ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡುವ ಜೊತೆಗೆ ವ್ಯಾಪಾರಸ್ಥರು ರೈತರು ಸಹ ಮಾರುಕಟ್ಟೆಯಲ್ಲಿ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಸಹಕಾರಿಸಬೇಕೆಂದು ಸಲಹೆ ನೀಡಿದರು.

ಗಲ್‌ಪೇಟೆ ಉಪನೀರಿಕ್ಷರಾದ ಭಾರತಿ ರವರು ಮಾತನಾಡಿ ರೈತರು ಹೂ ತಂದ ಗಾಡಿಗಳನ್ನು ಬೇರೆ ಕಡೆ ಪಾರ್ಕಿಂಗ್‌ ಮಾಡಿ ಸಂಚಾರಿ ಅಡಚಣೆ ಆಗದಂತೆ ರೈತರ ಸಹಕರಿಸಿ ಯಾವುದೇ ದಂಡ ಹಾಕಿಸಿಕೊಳ್ಳದಂತೆ ಪೊಲೀಸ್ ರವರಿಗೆ ಸಹಕರಿಸಬೇಕೆಂದು ರೈತರಿಗೆ ಸಲಹೆ ನೀಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ ನಾರಾಯಣಗೌಡ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆಯುತ್ತಿರುವ ಟೆಮೋಟ ಮತ್ತಿತರ ಬೆಳೆಗಳಿಗೆ ರೋಗ ನಿಯಂತ್ರಣಕ್ಕೆ ಬಾರದ ಪರ್ಯಾಯವಾಗಿ ಜಿಲ್ಲೆಯಲ್ಲಿ ರೈತರು ಹೂ ಬೆಳೆಯನ್ನು ಬೆಳೆದು ಜೀವನ ರೂಪಿಸಿಕೊಳ್ಳುತ್ತಿರುವ ಸಮಯದಲ್ಲಿ ಕಷ್ಟಪಟ್ಟು ಬೆಳೆದ ಹೂವನ್ನು ಮಾರುಕಟ್ಟೆಗೆ ತಂದರೆ ಅಧಿಕಾರಿಗಳ ದೌರ್ಜನ್ಯದಿಂದ ಹರಾಜು ಪ್ರಕ್ರಿಯೇ ಸ್ಥಗೀತವಾಗಿ ಹೂಬೆಲೆಯು ಕುಸಿದು ರೈತರನ್ನು ಕೆರಳುವಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಹಳೆ ಬಸ್‌ ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶದ ನೆಪದಲ್ಲಿ ಹೂ ಬೆಳೆಗಾರರು ಮತ್ತು ರೈತರ ಮೇಲೆ ಅಧಿಕಾರಿಗಳ ದೌರ್ಜನ್ಯ ಸಹಿಸುವುದಿಲ್ಲ ನಗರಾಧ್ಯಂತಹ ನೂರಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಒತ್ತುವರಿಧಾರರಿಂದ ನಗರ ಸಭೆ ಜಮೀನು ವಶ ಪಡಿಸಿಕೊಳ್ಳಲು ತಾಕತ್ತು ಇಲ್ಲದೇ ರೈತರ ಜೀವನಾಡಿಯಾಗಿರುವ ಹೂ ಮಾರುಕಟ್ಟೆಯ ಮೇಲೆ ಅಧಿಕಾರಿಗಳಗೆ ಏಕೆ ಕಣ್ಣು ಎಂದು ಕೀಡಿಕಾರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಖಾಲಿ ಇರುವ ಜಾಗವನ್ನು ಮೊದಲು ಅಭಿವೃದ್ಧಿಪಡಿಸಿಲಿ ಇಲ್ಲವೇ ನಗರದಲ್ಲಿ ಹೂ ಮಾರುಕಟ್ಟೆಗೆ ಸೂಕ್ತವಾದ ಜಾಗ ಗುರುತಿಸಿ ಅದನ್ನು ಬಿಟ್ಟು ಸ್ವಚ್ಛತೆಯಿಲ್ಲದ ಶೌಚಾಲಯಗಳ ನೀರು ಹರಿಯುವ ಜಾಗದಲ್ಲಿ ರೈತರು ಹೂ ಮಾರಾಟ ಮಾಡಿಕೊಳ್ಳಲಿ ಎಂದು ಹೇಳುವ ಅಧಿಕಾರಿಗಳೇ ಯಾವತ್ತಾದರು ಒಂದು ಎಕರೆ ಹೂ ಬೆಳೆದು ಅದರ ಕಷ್ಟದ ಹರಿವು ಇದೆಯೇ ಎಂದು ಪ್ರಶ್ನೆ ಮಾಡುವ ಜೊತೆಗೆ ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಿ ಇಲ್ಲವೇ ರಸ್ತೆಗಳಲ್ಲಿ ಹೂ ಹರಾಜು ಹಾಕುತ್ತೇವೆಂದು ಎಚ್ಚರಿಕೆ ನೀಡಿದರು.

ನಂತರ ಮಾತನಾಡಿದ ನಗರಸಭೆ ಕಮಿಷನರ್‌ ನವೀನ್‌ ರವರು ರೈತರಿಗೆ ವ್ಯಾಪಾರಸ್ಥರಿಗೆ ತೊಂದರೆ ನೀಡುವುದಿಲ್ಲ ಜೊತೆಗೆ ಒತ್ತುವರಿ ಮಾಡಿಕೊಂಡಿರುವ ಅನಧಿಕೃತ ಅಂಗಡಿಗಳನ್ನು ತೆರವು ಮಾಡಿ ಇಂದಿರ ಕ್ಯಾಂಟಿನ್‌ ಪಕ್ಕ ಪಾರ್ಕಿಂಗ ವ್ಯವಸ್ಥೆ ಮಾಡುವ ಭರವಸೆಯನ್ನು ಸಂಸದರ ಸಮ್ಮುಖದಲ್ಲಿ ರೈತರಿಗೆ ನೀಡಿದರು.

ಇದನ್ನು ಓದಿದ್ದೀರಾ..? ಸರ್ಕಾರಿ ಗೋಮಾಳದಲ್ಲಿ ಅಕ್ರಮ ಸೋಲಾರ್ ಪ್ಲಾಟ್ ವಿರುದ್ಧ ಕ್ರಮಕ್ಕೆ ಒತ್ತಾಯ: ಸಂದಾ ಮುನಿಸ್ವಾಮಿ

ಹೋರಾಟದಲ್ಲಿ ಇರಗಸಂದ್ರ ವಿಶ್ವನಾಥ, ಜಿಲ್ಲಾಧಕ್ಷ ಈಕಂಬಳ್ಳಿ ಮಂಜುನಾಥ ಕೆ.ಎಂ.ಕೆ ಹೂ ಮಾರಾಟಗಾರರಾದ ಗೋಪಾಲ ಕೃಷ್ಣ, ಕಿಲಾರಿಪೇಟೆ ಮಣಿ, ಮುನಿಯಪ್ಪ ವಿನಯ್‌, ಕೃಷ್ಣಮೂರ್ತಿ ಚಲಪತಿ, ಗಿರೀಶ್‌, ನಟರಾಜ್‌ ದಿಂಬ ನಾಗರಾಜ್‌, ನೂರಾರು ರೈತರರು ವ್ಯಾಪಾರಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ಭಾಗವಹಿಸಿದರು

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆಜಿಎಫ್ | ಗಾಳಿ ಮಳೆಗೆ ಮನೆಯ ಮೇಲ್ಚಾವಣಿ ನಾಶ ಕುಟುಂಬಸ್ಥರು ಕಣ್ಣೀರು

ಬೇತಮಂಗಲ ಸಮೀಪದ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ರತ್ನಮ್ಮ...

ಕೋಲಾರ | ಬೆಗ್ಲಿ ಹೊಸಹಳ್ಳಿ ಶಾಲೆಯಲ್ಲಿ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ

ತಾಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2003-2004ನೇ ಸಾಲಿನ ವಿದ್ಯಾರ್ಥಿಗಳಿಂದ...

ಕೋಲಾರ | ಅವೈಜ್ಞಾನಿಕ ರಸ್ತೆ, ಚರಂಡಿ ಕಾಮಗಾರಿ: ವಿಜಯಗರ ಬಡಾವಣೆ ನಿವಾಸಿಗಳು ಆಕ್ರೋಶ

ನಗರ ಹೊರವಲಯದ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಬಡಾವಣೆಯಲ್ಲಿ (ಹಾರೋಹಳ್ಳಿ...

ಶ್ರೀನಿವಾಸಪುರ | ದಕ್ಷಿಣ ಭಾರತ ಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಶ್ರೀನಿವಾಸಪುರದ ಅಬ್ಬಾಸ್ ಬಾಬುಗೆ ತೃತೀಯ ಸ್ಥಾನ

ಶ್ರೀನಿವಾಸಪುರ: ಪಟ್ಟಣದ ಅಕ್ಬರ್ ರಸ್ತೆಯ ನಿವಾಸಿ ಅಬ್ಬಾಸ್ ಬಾಬು ಅವರು ಬೆಂಗಳೂರಿನಲ್ಲಿ...