ಉದ್ಯೋಗ ಮಾಹಿತಿ | ರೈಲ್ವೆಯಲ್ಲಿ 590 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Date:

ಭಾರತೀಯ ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ಖಾಲಿ ಇರುವ ಪ್ಯಾರಾಮೆಡಿಕಲ್ ವಿಭಾಗದ ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಮಂಡಳಿ (RRB) ಮುಂದಾಗಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ವಿವಿಧ ವಿಭಾಗಗಳಲ್ಲಿ ಒಟ್ಟು 590 ಹುದ್ದೆಗಳನ್ನು ಭರ್ತಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

- Advertisement -

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸೆಪ್ಟೆಂಬರ್ 15ರಿಂದಲೇ ಆರಂಭಗೊಂಡಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್ 14ರ ರಾತ್ರಿ 11:59ರವರೆಗೆ ಅವಕಾಶ ಕಲ್ಪಿಸಲಾಗಿದೆ. ಶುಲ್ಕ ಪಾವತಿಸಲು ಅಕ್ಟೋಬರ್ 16 ಕೊನೆಯ ದಿನವಾಗಿದ್ದು, ಸಲ್ಲಿಕೆಯಾದ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅಕ್ಟೋಬರ್ 17ರಿಂದ ಅಕ್ಟೋಬರ್ 26ರವರೆಗೆ ಕಾಲಾವಕಾಶ ನೀಡಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯಲಿದ್ದು, ಪರೀಕ್ಷಾ ದಿನಾಂಕವನ್ನು ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್ rrb.indianrailways.gov.in ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಆರ್‌ಅರ್‌ಬಿ ತಿಳಿಸಿದೆ.

ಈ ನೇಮಕಾತಿ ಪ್ರಕ್ರಿಯೆಯಲ್ಲಿ; ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳು 365, ಫಾರ್ಮಸಿಸ್ಟ್ (118), ಹೆಲ್ತ್ ಆಂಡ್ ಮಲೇರಿಯಾ ಇನ್‌ಸ್ಪೆಕ್ಟರ್ ಗ್ರೇಡ್-II (43), ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-II (31), ರೇಡಿಯೋಗ್ರಾಫರ್ ಎಕ್ಸ್‌ರೇ ಟೆಕ್ನಿಷಿಯನ್ (25), ಇಸಿಜಿ ಟೆಕ್ನಿಷಿಯನ್ (04), ಆಪ್ಟೋಮೆಟ್ರಿಸ್ಟ್ (02), ಆಡಿಯಾಲಜಿಸ್ಟ್ ಆಂಡ್ ಸ್ಪೀಚ್ ಥೆರಪಿಸ್ಟ್ (01) ಹಾಗೂ ಡಯಾಲಿಸಿಸ್ ಟೆಕ್ನಿಷಿಯನ್ (01) ಹುದ್ದೆಗಳನ್ನು ಭರ್ತಿ ಮಾಡಲು ಆರ್‌ಆರ್‌ಬಿ ಮುಂದಾಗಿದೆ.

ಪರೀಕ್ಷಾ ಶುಲ್ಕವು; ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ ಇರಲಿದೆ. ಇದರಲ್ಲಿ, ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT) ಹಾಜರಾದ ಬಳಿಕ ಬ್ಯಾಂಕ್ ಶುಲ್ಕವನ್ನು ಹೊರತುಪಡಿಸಿ 400 ರೂಪಾಯಿಗಳನ್ನು ಮರುಪಾವತಿ ಮಾಡಲಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕ, ವಿಶೇಷಚೇತನರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 250 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಹಾಜರಾದ ನಂತರ ಈ ಪೂರ್ಣ ಮೊತ್ತವನ್ನು ಮರುಪಾವತಿಸಲಾಗುತ್ತದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಈ ಶುಲ್ಕ ಮರುಪಾವತಿ ಸೌಲಭ್ಯ ಸಿಗಲಿದೆ.

ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಆರ್‌ಆರ್‌ಬಿಗಳಿಗೆ ಅಥವಾ ಒಂದೇ ಹುದ್ದೆಗೆ ಎರಡೆರಡು ಅರ್ಜಿಗಳನ್ನು ಸಲ್ಲಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಮಂಡಳಿ ಹೇಳಿದೆ. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸುವುದಲ್ಲದೆ, ಭವಿಷ್ಯದಲ್ಲಿ ಆರ್‌ಆರ್‌ಬಿ ನಡೆಸುವ ಯಾವುದೇ ಪರೀಕ್ಷೆಗಳಿಂದ ಅವರನ್ನು ಅನರ್ಹಗೊಳಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಅಭ್ಯರ್ಥಿಗಳ ವಿದ್ಯಾಹರ್ತೆಗಳು ಹುದ್ದೆಯಿಂದ ಹುದ್ದೆಗೆ ಭಿನ್ನವಾಗಿವೆ;

1. ನರ್ಸಿಂಗ್ ಸೂಪರಿಂಟೆಂಡೆಂಟ್: ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ.ಎಸ್ಸಿ ನರ್ಸಿಂಗ್ ಪಡೆದಿರಬೇಕು ಅಥವಾ  ಜಿಎನ್‌ಎಮ್ (General Nursing and Midwifery – GNM) ಕೋರ್ಸ್‌ ಮುಗಿಸಿ, ನರ್ಸ್ ಹಾಗೂ ಮಿಡ್‌ವೈಫ್ ಆಗಿ ನೋಂದಾಯಿಸಿಕೊಂಡಿರಬೇಕು.

2. ಫಾರ್ಮಸಿಸ್ಟ್: ವಿಜ್ಞಾನ ವಿಭಾಗದಲ್ಲಿ ಪಿಯುಸಿ ಪಾಸ್‌ ಮಾಡಿರಬೇಕು ಮತ್ತು ಫಾರ್ಮಸಿ ಡಿಪ್ಲೊಮಾ (D.Pharma) ಅಥವಾ ಬ್ಯಾಚುಲರ್ ಪದವಿ (B.Pharma) ಉತ್ತೀರ್ಣರಾಗಿರಬೇಕು ಹಾಗೂ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು.

3. ಹೆಲ್ತ್ ಆಂಡ್ ಮಲೇರಿಯಾ ಇನ್‌ಸ್ಪೆಕ್ಟರ್ ಗ್ರೇಡ್-II: ಬಿ.ಎಸ್ಸಿ ಪದವಿ (ರಸಾಯನಶಾಸ್ತ್ರ ಮುಖ್ಯ/ಐಚ್ಛಿಕ ವಿಷಯವಾಗಿರಬೇಕು) ಮತ್ತು ಹೆಲ್ತ್/ಸಾನಿಟರಿ ಇನ್‌ಸ್ಪೆಕ್ಟರ್‌ನಲ್ಲಿ 1 ವರ್ಷದ ಡಿಪ್ಲೊಮಾ ಹೊಂದಿರಬೇಕು.

4. ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-II: 12ನೇ ತರಗತಿ (ವಿಜ್ಞಾನ ವಿಭಾಗ) ಜೊತೆಗೆ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಯಲ್ಲಿ ಡಿಪ್ಲೊಮಾ (DMLT) ಪೂರ್ಣಗೊಳಿಸಿರಬೇಕು.

5. ರೇಡಿಯೋಗ್ರಾಫರ್ ಎಕ್ಸ್‌ರೇ ಟೆಕ್ನಿಷಿಯನ್: ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳೊಂದಿಗೆ 12ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ರೇಡಿಯೋಗ್ರಫಿ / ಎಕ್ಸ್‌ರೇ ಟೆಕ್ನಿಷಿಯನ್ ಕೋರ್ಸ್‌ನಲ್ಲಿ 2 ವರ್ಷದ ಡಿಪ್ಲೊಮಾ ಪಡೆದಿರಬೇಕು.

6. ಇಸಿಜಿ ಟೆಕ್ನಿಷಿಯನ್: ವಿಜ್ಞಾನ ವಿಷಯದಲ್ಲಿ 12ನೇ ತರಗತಿ ಅಥವಾ ಬಿ.ಎಸ್ಸಿ ಪದವಿ ಜೊತೆಗೆ ಇಸಿಜಿ ಲ್ಯಾಬೊರೇಟರಿ ತಂತ್ರಜ್ಞಾನದಲ್ಲಿ ಪ್ರಮಾಣಪತ್ರ ಅಥವಾ ಡಿಪ್ಲೊಮಾ ಕೋರ್ಸ್ ಮಾಡಿರಬೇಕು.

7. ಆಪ್ಟೋಮೆಟ್ರಿಸ್ಟ್: ಆಪ್ಟೋಮೆಟ್ರಿಯಲ್ಲಿ ಬಿ.ಎಸ್ಸಿ (B.Sc in Optometry) ಅಥವಾ ಆಫ್ತಾಲ್ಮಿಕ್ ತಂತ್ರಜ್ಞಾನದಲ್ಲಿ (Ophthalmic Technology) ಡಿಪ್ಲೊಮಾ ಹೊಂದಿರಬೇಕು.

8. ಆಡಿಯಾಲಜಿಸ್ಟ್ ಆಂಡ್ ಸ್ಪೀಚ್ ಥೆರಪಿಸ್ಟ್: ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಯಲ್ಲಿ ಬ್ಯಾಚುಲರ್ ಪದವಿ (BASLP) ಪಡೆದಿರಬೇಕು ಮತ್ತು ಆರ್‌ಸಿಐನಲ್ಲಿ ನೋಂದಾಯಿತರಾಗಿರಬೇಕು.

9. ಡಯಾಲಿಸಿಸ್ ಟೆಕ್ನಿಷಿಯನ್: ಬಿ.ಎಸ್ಸಿ ಜೊತೆಗೆ ಹೆಮೋಡಯಾಲಿಸಿಸ್‌ನಲ್ಲಿ ಡಿಪ್ಲೊಮಾ ಪಡೆದಿರಬೇಕು ಅಥವಾ ಸಂಬಂಧಿತ ಕೆಲಸದ ಅನುಭವ ಹೊಂದಿರಬೇಕು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆ ಕಳಪೆ ಕಾಮಗಾರಿ ಪ್ರಶ್ನಿಸಿದ ಯುವಕನಿಗೆ ದೆಹಲಿ ಸಚಿವನಿಂದ ಕಪಾಳ ಮೋಕ್ಷ

ದೆಹಲಿಯಲ್ಲಿ ಸಚಿವ ಪರ್ವೇಶ್ ವರ್ಮಾ ಅವರು ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ...

ಪಂಜಾಬ್: ಎಲ್‌ಪಿಯು ‘ವಿವಿ’ಯಲ್ಲಿ ಅತ್ಯಾಚಾರ ಆರೋಪ; ಭುಗಿಲೆದ್ದ ಪ್ರತಿಭಟನೆ, ತರಗತಿಗಳು ರದ್ದು

ಪಂಜಾಬ್‌ನ ಫಗ್ವಾರಾದಲ್ಲಿರುವ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ (ಎಲ್‌ಪಿಯು) ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ...

3 ದಿನಗಳ ಬ್ಯಾಂಕ್ ಮುಷ್ಕರ ವಾಪಸ್: ವಾರಕ್ಕೆ 5 ದಿನ ಕೆಲಸದ ಪರಿಶೀಲನೆಗೆ ಸಮಿತಿ

ಸಾರ್ವಜನಿಕ ವಲಯದ ಬ್ಯಾಂಕ್‌ ನೌಕರರ ಒಕ್ಕೂಟವು (ಯುಎಫ್‌ಬಿಯು) ಸೋಮವಾರದಿಂದ ಹಮ್ಮಿಕೊಂಡಿದ್ದ ಮೂರು...

ವಿರಾಟ್ ‘ವಿಶ್ವ’ರೂಪ: 15 ಸಾವಿರ ರನ್ ಗಡಿ ದಾಟಿ ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ

ಕೇರಳದ ತಿರುವನಂತಪುರದಲ್ಲಿರುವ ಗ್ರೀನ್‌ಫೀಲ್ಡ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್...