ನಂದಿನಿ ಬೆನ್ನಲ್ಲೇ ಅಮುಲ್, ಮದರ್ ಡೈರಿ ಹಾಲು ತುಟ್ಟಿ!

Date:

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ದೇಶದ ಜನಸಾಮಾನ್ಯರಿಗೆ ಪ್ರಮುಖ ಡೈರಿ ಸಂಸ್ಥೆಗಳು ಮತ್ತೊಂದು ಬರೆ ಎಳೆದಿವೆ. ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (GCMMF) ‘ಅಮುಲ್’ ಮತ್ತು ದೆಹಲಿ-ಎನ್‌ಸಿಆರ್ ಭಾಗದ ಪ್ರಮುಖ ಪೂರೈಕೆದಾರ ‘ಮದರ್ ಡೈರಿ’ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿಯಿಂದ 4 ರೂಪಾಯಿವರೆಗೆ ಹೆಚ್ಚಿಸಿವೆ. ನವೆಂಬರ್ 12ರ ಗುರುವಾರದಿಂದಲೇ ಈ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.

- Advertisement -

 ಅಮುಲ್ ಸಂಸ್ಥೆಯು ತನ್ನ ಪ್ರಮುಖ ತಾಜಾ ಪ್ಯಾಕೆಟ್ ಹಾಲಿನ ದರಗಳಲ್ಲಿ ಶೇಕಡಾ 4ರಿಂದ 5ರಷ್ಟು ಹೆಚ್ಚಳ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ...

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ...

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ ಒಲವಿನ ಬದಲಾವಣೆಯನ್ನು ದೃಢಪಡಿಸಿವೆ. ಡೆಮಾಕ್ರಟರು ಸಾಧಿಸಿದ 255 ಹೌಸ್ ಮತ್ತು 54 ಸೆನೆಟ್ ಸ್ಥಾನಗಳ ಜಯ, ಹಾಗೂ ಬ್ರೆಜಿಲ್‌ನಲ್ಲಿನ ಅಧಿಕಾರ...

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ...

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ ಜಾಲ ಮತ್ತು ಭದ್ರತಾ ಆರೋಪಗಳು ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿವೆ. ತಂತ್ರಜ್ಞಾನ ದೈತ್ಯರ ಒಳಸುಳಿಗಳೇನು? ಭಾರತದ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್...

ಅಮುಲ್ ತಾಜಾ (ಟೋನ್ಡ್ ಮಿಲ್ಕ್): ಪ್ರತಿ ಲೀಟರ್‌ಗೆ 2 ರೂ. ಏರಿಕೆಯಾಗಿದೆ (ಶೇ. 3.3 ಹೆಚ್ಚಳ).

ಅಮುಲ್ ಗೋಲ್ಡ್ (ಫುಲ್ ಕ್ರೀಮ್): ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳವಾಗಿದೆ (ಶೇ. 5.5 ಏರಿಕೆ).

ಮದರ್ ಡೈರಿಯೂ ಕೂಡ ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ಫುಲ್ ಕ್ರೀಮ್ ಹಾಲಿನ ದರ 72 ರೂ.ನಿಂದ 76 ರೂ.ಗೆ, ಟೋನ್ಡ್ ಹಾಲು (ಪ್ಯಾಕೆಟ್) 60 ರೂ.ನಿಂದ 62 ರೂ.ಗೆ, ಡಬಲ್ ಟೋನ್ಡ್ ಹಾಲು 54 ರೂ.ನಿಂದ 56 ರೂ.ಗೆ ಹಾಗೂ ಹಸುವಿನ ಹಾಲು 62 ರೂ.ನಿಂದ 65 ರೂ.ಗೆ ಏರಿಕೆಯಾಗಿದೆ.

ಹವಾಮಾನ ವೈಪರೀತ್ಯ ಮತ್ತು ಅಸಮರ್ಪಕ ಮುಂಗಾರು ಮಳೆಯಿಂದಾಗಿ ಹಸಿರು ಹಾಗೂ ಒಣ ಮೇವಿನ ಕೊರತೆ ಉಂಟಾಗಿದೆ. ಜೊತೆಗೆ ಹಿಂಡಿ, ಮೆಕ್ಕೆಜೋಳ, ಕಾಕಂಬಿಯಂತಹ ಪಶು ಆಹಾರದ ಕಚ್ಚಾ ವಸ್ತುಗಳ ಬೆಲೆ, ಪ್ಯಾಕೇಜಿಂಗ್ ವೆಚ್ಚ ಹಾಗೂ ಸಾಗಾಣಿಕೆ ದರಗಳು ಗಗನಕ್ಕೇರಿವೆ. ಈ ಹಿನ್ನೆಲೆಯಲ್ಲಿ ಹೈನುಗಾರರ ಹಿತಕಾಯಲು ಮತ್ತು ಅವರಿಗೆ ನೀಡುವ ಖರೀದಿ ದರವನ್ನು ಹೆಚ್ಚಿಸಲು ಗ್ರಾಹಕರ ಮೇಲಿನ ದರ ಏರಿಕೆ ಅನಿವಾರ್ಯವಾಗಿದೆ ಎಂದು ಅಮುಲ್ ಮತ್ತು ಮದರ್ ಡೈರಿ ಸಮರ್ಥಿಸಿಕೊಂಡಿವೆ. ಗ್ರಾಹಕರಿಂದ ಸಂಗ್ರಹಿಸುವ ಪ್ರತಿ ರೂಪಾಯಿಯಲ್ಲಿ ಶೇ. 80ರಷ್ಟು ಪಾಲು 36 ಲಕ್ಷ ಹಾಲು ಉತ್ಪಾದಕರಿಗೆ ತಲುಪುತ್ತದೆ ಎಂದು ಅಮುಲ್‌ ತಿಳಿಸಿದೆ.

ದೇಶದ ಪ್ರಮುಖ ಬ್ರ್ಯಾಂಡ್‌ಗಳ ಈ ದರ ಏರಿಕೆಯು ಇತ್ತೀಚೆಗಷ್ಟೇ ಕರ್ನಾಟಕದಲ್ಲಾದ ‘ನಂದಿನಿ’ ಹಾಲಿನ ದರ ಪರಿಷ್ಕರಣೆಯನ್ನು ನೆನಪಿಸುವಂತಿದೆ. ಕರ್ನಾಟಕ ಹಾಲು ಮಹಾಮಂಡಳ (KMF) ಕೂಡ ಹೈನುಗಾರರ ಒತ್ತಡ, ಪಶು ಆಹಾರದ ಬೆಲೆ ಏರಿಕೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣ ನೀಡಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿತ್ತು.

ಒಟ್ಟಾರೆಯಾಗಿ, ಒಂದೆಡೆ ಪ್ರಾದೇಶಿಕ ಬ್ರ್ಯಾಂಡ್ ಆದ ನಂದಿನಿ, ಮತ್ತೊಂದೆಡೆ ರಾಷ್ಟ್ರೀಯ ಮಟ್ಟದ ಅಮುಲ್ ಮತ್ತು ಮದರ್ ಡೈರಿ ದರ ಏರಿಕೆ ಮಾಡಿರುವುದು ದೇಶಾದ್ಯಂತ ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರಿದೆ. ಹಾಲಿನ ದರ ಹೆಚ್ಚಳದಿಂದಾಗಿ ಮುಂದಿನ ದಿನಗಳಲ್ಲಿ ಕಾಫಿ, ಟೀ ಹಾಗೂ ಸಿಹಿತಿಂಡಿಗಳ ಬೆಲೆಯೂ ತುಟ್ಟಿಯಾಗುವ ಆತಂಕ ಎದುರಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೂ ತತ್ವಾರ; ರೋಗಿಗಳ ಪರದಾಟ!

ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ...

ಅನುಭವ ಮಂಟಪ ಉತ್ಸವ | ಹಂಸಲೇಖ, ಸಿ.ಆರ್.ಚಂದ್ರಶೇಖರ್‌ ಸೇರಿ ನಾಲ್ವರಿಗೆ ಪ್ರಶಸ್ತಿ ಘೋಷಣೆ

ಬಸವಕಲ್ಯಾಣ: ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ನವೆಂಬರ್ 28 ಮತ್ತು 29ರಂದು ನಡೆಯಲಿರುವ...

ನ್ಯಾಷನಲ್ ಹೆರಾಲ್ಡ್ ಪ್ರಕರಣ: ನಾನಾಗಲಿ, ರಾಹುಲ್ ಆಗಲಿ ಒಂದೇ ಒಂದು ಪೈಸೆಯನ್ನೂ ಪಡೆದಿಲ್ಲ; ಸೋನಿಯಾ ಗಾಂಧಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತಮ್ಮ ಮತ್ತು ತಮ್ಮ ಪುತ್ರ ರಾಹುಲ್ ಗಾಂಧಿ...

ಬೀದರ್ ವಿವಿ | ಪರೀಕ್ಷೆಗೂ ಮುನ್ನವೇ ಮುಂದಿನ ಸೆಮಿಸ್ಟರ್ ತರಗತಿ‌ ಪುನಾರಾರಂಭ?

ಬೀದರ್ ವಿಶ್ವವಿದ್ಯಾಲಯದ ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳ ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್...