‘ಆರ್‌ಆರ್‌ಆರ್‌’ ತಮಿಳು ಸಿನಿಮಾ; ಟೀಕೆಗೆ ಗುರಿಯಾದ ಪ್ರಿಯಾಂಕಾ ಚೋಪ್ರಾ

Date:

  • ಪ್ರಿಯಾಂಕಾ ಚೋಪ್ರಾ ಅವರ ಹೇಳಿಕೆಗೆ ನೆಟ್ಟಿಗರ ಆಕ್ರೋಶ
  • ʼಆರ್‌ಆರ್‌ಆರ್‌ʼ ಬಾಲಿವುಡ್‌ ಸಿನಿಮಾ ಎಂದಿದ್ದ ನಿರೂಪಕರು

ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಅಮೆರಿಕದ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಾವು ಬಾಲಿವುಡ್‌ ತೊರೆಯಲು ಕಾರಣವಾದ ಅಂಶಗಳನ್ನು ಬಹಿರಂಗಪಡಿಸಿದ್ದರು. ಅಪಮಾನದ ಕಾರಣಕ್ಕೆ ನಟಿ ಬಾಲಿವುಡ್‌ ಮಾತ್ರವಲ್ಲ ಭಾರತವನ್ನೇ ತೊರೆದಿದ್ದನ್ನು ತಿಳಿದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದರು. ಇದೇ ಸಂದರ್ಶನದಲ್ಲಿ ʼಆರ್‌ಆರ್‌ಆರ್‌ʼ ಸಿನಿಮಾದ ಬಗ್ಗೆ ಪ್ರಿಯಾಂಕಾ ಚೋಪ್ರಾ ಆಡಿದ ಮಾತುಗಳು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿವೆ.

ಸಂದರ್ಶನದ ವೇಳೆ ನಿರೂಪಕರು ʼಆರ್‌ಆರ್‌ಆರ್‌ʼ ಬಾಲಿವುಡ್‌ ಸಿನಿಮಾ ಎಂದು ತಪ್ಪಾಗಿ ಸಂಬೋಧಿಸಿದ್ದಾರೆ. ಅವರ ಮಾತನ್ನು ತಿದ್ದಲು ಯತ್ನಿಸಿರುವ ಪ್ರಿಯಾಂಕಾ, ‘ಆರ್‌ಆರ್‌ಆರ್‌’ ಬಾಲಿವುಡ್‌ನ ಚಿತ್ರವಲ್ಲ, ಅದು ತಮಿಳು ಸಿನಿಮಾ” ಎಂದಿದ್ದಾರೆ. ಸದ್ಯ ಈ ಹೇಳಿಕೆಯ ಕಾರಣಕ್ಕೆ ನಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡಲಾಗುತ್ತಿದೆ.

ʼಆರ್‌ಆರ್‌ಆರ್‌ʼ ಸಿನಿಮಾ ಆಸ್ಕರ್‌ ಪ್ರಶಸ್ತಿಗೆ ನೇರ ನಾಮನಿರ್ದೇಶನಗೊಳ್ಳುವ ಮುನ್ನ ರಾಜಮೌಳಿ ಮತ್ತು ಚಿತ್ರತಂಡಕ್ಕೆ ಪ್ರಚಾರ ಕಾರ್ಯದಲ್ಲಿ ನೆರವಾಗಲು ಸ್ವತಃ ಪ್ರಿಯಾಂಕಾ ಅವರೇ ಲಾಸ್‌ ಏಂಜಲೀಸ್‌ನಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದರು. ನಿರೂಪಕರು ʼಆರ್‌ಆರ್‌ಆರ್‌ʼ ಬಾಲಿವುಡ್‌ ಚಿತ್ರ ಎಂದಾಗ ತಪ್ಪು ತಿದ್ದುವ ಪ್ರಯತ್ನವನ್ನೂ ಮಾಡಿದರು. ಆದರೆ, ಭಾರತ ಮೂಲದವರಾದ ನಟಿಗೆ ಅದು ತೆಲುಗಿನ ಸಿನಿಮಾ ಎಂಬುದು ತಿಳಿದಿಲ್ಲವೇ ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸರ್ಕಾರಿ ಬಂಗಲೆ ತೆರವಿಗೆ ಸೂಚನೆ; ರಾಹುಲ್‌ ನಮ್ಮ ಮನೆಗೆ ಬನ್ನಿ ಎಂದ ಪ್ರಕಾಶ್‌ ರಾಜ್‌

ಆಸ್ಕರ್‌ ವೇದಿಕೆಯಲ್ಲೂ ಕೂಡ ನಿರೂಪಕರು ಇದೇ ರೀತಿಯ ಎಡವಟ್ಟು ಮಾಡಿದ್ದರು. ಮೂಲ ತೆಲುಗಿನ ʼಆರ್‌ಆರ್‌ಆರ್‌ʼ ಚಿತ್ರವನ್ನು ಬಾಲಿವುಡ್‌ ಸಿನಿಮಾ ಎಂದು ಸಂಬೋಧಿಸಿದ್ದರು. ಆಗಲೂ ತೆಲುಗಿನ ಸಿನಿ ಪ್ರೇಕ್ಷಕರು ಮತ್ತು ನೆಟ್ಟಿಗರು ಆಸ್ಕರ್‌ ಅಕಾಡೆಮಿ ಮತ್ತು ನಿರೂಪಕರ ವಿರುದ್ಧ ಕಿಡಿ ಕಾರಿದ್ದರು.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪನೌತಿಯಿಂದ ಸೋಲು ಎಷ್ಟು ಸುಳ್ಳೊ, ಶ್ರೀರಾಮನಿಂದ ಗೆಲ್ಲುವುದೂ ಅಷ್ಟೇ ಸುಳ್ಳು : ನಟ ಕಿಶೋರ್‌

ಭಾರತ ವಿಶ್ವಕಪ್‌ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಪನೌತಿ ಎಂಬ ಪದ...

‘ಬೆಂಗಳೂರು ಕಂಬಳ’ಕ್ಕೆ ಚಾಲನೆ ನೀಡಲಿದ್ದಾರೆ ಅಶ್ವಿನಿ ಪುನೀತ್​ ರಾಜ್‌ಕುಮಾರ್

ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯಲಿರುವ 'ಬೆಂಗಳೂರು ಕಂಬಳ'ಕ್ಕೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್...

ಅಂಬೇಡ್ಕರರು ಬೋಧಿಸಿದ್ದ ಪ್ರತಿಜ್ಞೆ ಸ್ವೀಕರಿಸಿದವರಿಗೆ ’ಎಡಬಿಡಂಗಿಗಳು’ ಎಂದ ಕಂಬಳ ಸಂಘಟನಾ ಅಧ್ಯಕ್ಷ

ಬೌದ್ಧಧಮ್ಮ ಸ್ವೀಕರಿಸುವಾಗ ಪ್ರತಿಜ್ಞೆ ಮಾಡುತ್ತಿರುವವರ ವಿಡಿಯೊ ತುಣುಕೊಂದನ್ನು ಹಂಚಿಕೊಂಡಿರುವ ಉಮೇಶ್ ಶೆಟ್ಟಿ,...

ಕಾರಿನೊಳಗೆ ಶವವಾಗಿ ಪತ್ತೆಯಾದ ಮಲಯಾಳಂ ನಟ ವಿನೋದ್ ಥಾಮಸ್

ಮಲಯಾಳಂ ನಟ ವಿನೋದ್ ಥಾಮಸ್ ಕೇರಳದ ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ...