‘ಜೋಗಿ’ಯಿಂದ ‘ಕೆಡಿ’ವರೆಗೆ: ಕಲಾತ್ಮಕ ಮೌಲ್ಯಗಳ ಕುಸಿತ?

Date:

ʼನಾನು ಎಣ್ಣೆ ಹಾಗೂ ಉಪ್ಪಿನಕಾಯಿಯ ಬಗ್ಗೆ ಬರೆದಿದ್ದೇನೆʼ. ʼಈ ಹಾಡಿನ ಸಾಹಿತ್ಯದಲ್ಲಿ ಯಾವ ತರಹದ ಅಶ್ಲೀಲತೆಯು ನನಗೆ ಕಂಡಿಲ್ಲʼ ಎಂದು ಸಮರ್ಥಿಸಿಕೊಂಡ ಪ್ರೇಮ್‌, ತಾವೇ ಬರೆದ ಸಾಲುಗಳನ್ನು ಕಣ್ಣು ತೆರೆದು ನೊಡಲಿಲ್ಲವೋ ಬರೆಯುವಾಗ ಅವರ ಬುದ್ಧಿ ಎಚ್ಚರದಲ್ಲಿ ಇರಲಿಲ್ಲವೋ ಅವರೇ ಉತ್ತರಿಸಲಿ. ʼಕೆಡಿ ದ ಡೆವಿಲ್‌ʼ ಸಿನಿಮಾದ ಅಶ್ಲೀಲ ಹಾಡು ಎಲ್ಲಡೆ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ ನಿರ್ದೇಶಕ ಪ್ರೇಮ್‌ ಮಾಧ್ಯಮದ ಮುಂದೆ ಕ್ಷಮೆ ಕೇಳಿದ್ದಾರೆ. ಧ್ರುವ ಸರ್ಜಾ ನಟನೆಯ ಪ್ರೇಮ್‌ ನಿರ್ದೇಶನದ ಈ ಸಿನಿಮಾ ಏಪ್ರಿಲ್ 30 ರಂದು ತೆರೆ ಕಾಣಲಿದೆ.

- Advertisement -

 ಪ್ರೇಮ್‌ ಬೇಡಿದ ಕ್ಷಮೆ, ಕ್ಷಮೆಯ ದಾಟಿಯಲ್ಲೇ ಇತ್ತಾ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಚಿತ್ರತಂಡ ʼಸರ್ಸೆ ನಿನ್ನ ಸೆರಗʼ ಹಾಡನ್ನು ಸೋಮವಾರ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಅರ್ಧ ತಾಸಿನಲ್ಲೇ ನೆಟ್ಟಿಗರಿಂದ ಹಿಗ್ಗಾ-ಮುಗ್ಗಾ ಟೀಕೆಗೆ ಗುರಿಯಾದ ಹಾಡನ್ನು ತಕ್ಷಣವೇ ಯೂಟೂಬ್‌ನಿಂದ ಹೈಡ್‌ ಮಾಡಿದ ಕೆಡಿ ತಂಡ ಅರ್ಧ ಗಂಟೆ ತಡೆದು ಮತ್ತೆ ಅಪ್ಲೋಡ್‌ ಮಾಡಿತ್ತು.

KD The Devil KD teaser Sanjay Dutt 1

ಮೂರು ದಿನಗಳ ಕಾಲ ಚಿತ್ರತಂಡ ಯಾವುದೇ ಚಕಾರ ಎತ್ತದೆ ಮೌನವಾಗಿದ್ದು, ಗುರುವಾರ ಸಂಜೆ ಮಾಧ್ಯಮದ ಮುಂದೆ ಕ್ಷಮೆ ಕೇಳಿದ ಪ್ರೇಮ್‌, ತಮ್ಮಲ್ಲಿ ನೈತಿಕತೆಯ ತುಣುಕು ಉಳಿದಿಲ್ಲ ಎಂಬುದನ್ನು ಸಾಬೀತು ಮಾಡಿದರು.

ಹೊರ ರಾಜ್ಯದ ನರ್ತಕಿಯರನ್ನು ಕರೆದು ಅವರಿಂದ ಇಂತಹ ಅಸಂಬದ್ಧ ಹಾಡಿಗೆ ಹೆಜ್ಜೆ ಹಾಕಿಸಿ ಕರ್ನಾಟಕ ಚಿತ್ರರಂಗದ ಮಾನವನ್ನು, ಹೆಣ್ಣಿನ ಘನತೆಯನ್ನು ಕಳೆದವರು ಖಾಲಿ ಕ್ಷಮೆ ಕೇಳಿದರೆ ಸಾಕೆ? ಸಾವಿರಾರು ಜನರಿಂದ ವೀಕ್ಷಣೆ ಪಡೆದು, ದೇಶದೆಲ್ಲೆಡೆ ಕನ್ನಡ ಸಿನಿಲೋಕದ ಮಾನ ಕಳೆದ ಪ್ರೇಮ್‌, ಸ್ತ್ರೀಯರ ಆತ್ಮಗೌರವ ಕುರಿತು ಒಂದಿಷ್ಟೂ ಕಾಳಜಿಯಿಲ್ಲದ ಹಾಗೆ ನಡೆದು ಕೊಳ್ಳುತ್ತಾರೆಂದು ಯಾರೂ ಅಂದಾಜಿಸಿರಲಿಲ್ಲ.

ನೊರಾ ಹೇಳಿಕೆಯಂತೆ ಪ್ರೇಮ್‌ ಹಾಗೂ ಕೆಡಿ ಚಿತ್ರತಂಡ ಕನ್ನಡ ಬಾರದ ಕಲಾವಿದೆಗೆ ಹಾಡಿನ ಸಾಹಿತ್ಯ ಅರ್ಥ ಮಾಡಿಸದೆ ನೃತ್ಯ ಸಂಯೋಜಿಸಿ ಕೊಟ್ಟದ್ದು ನಿಜವೇ ಆಗಿದ್ದರೆ, ಈ ಕೃತ್ಯ  ಪ್ರೇಮ್‌ ಹಾಗೂ ಅವರ ತಂಡ ವ್ಯಕ್ತಿಗೌರವದ ಜೊತೆಗೆ ವೃತ್ತಿಗೌರವಕ್ಕೆ ಮಾಡಿಕೊಂಡ ಬಹುದೊಡ್ಡ ಮೋಸ.

ಇದೇ ಪ್ರೇಮ್‌ ತಮ್ಮ ಜೋಗಿ ಚಲನಚಿತ್ರದಲ್ಲಿ ತಾಯಿಯ ಕುರಿತು ಬರೆದ ಸಾಲುಗಳು ಪ್ರೇಮ್‌,ಜೋಗಿ ಪ್ರೇಮ್‌ ಆಗಲು, ಕನ್ನಡದ ಹೆಸರಾಂತ ನಿರ್ದೇಶಕರ ಪಟ್ಟಿಯಲ್ಲಿ ತಮ್ಮ ಛಾಪು ಮೂಡಿಸಲು ಸಾಧ್ಯವಾಗಿಸಿತು. ʼತಾಯೀನೆ ಎಲ್ಲಾ ಮಿಗಿಲ್ಯಾರು ಇಲ್ಲ ಹಣೆಬರಹ ಬದಲಾದರು..ʼ ಎಂದು ಬರೆದು ಹಾಡಿದ್ದ ಪ್ರೇಮ್‌ರ ಹಣೆಬರಹ ಬದಲಿಸಿದ್ದು ತಮ್ಮ ಕಲಾಭಿವ್ಯಕ್ತಿಯ ಹೊರ ತರುವಾಗ ಹೆಣ್ಣಿನ ಕುರಿತು ಅಂದು ಅವರಿಗಿದ್ದ ಅಪಾರ ವಾತ್ಸಲ್ಯ, ಗೌರವ ಹಾಗೂ ಪ್ರೀತಿ.

Jogi Shivarajkumar Arundhathi Nag

ಇಂದು ಅದೇ ವೇದಿಕೆಯನ್ನೇ ಹೆಣ್ಣನ್ನು ಅರೆಬರೆ ಬಟ್ಟೆಯಲ್ಲಿ ತೋರಿಸಿ  ತಮ್ಮ ಕಾಮವಾಂಛೆ ತಣಿಸಲು ಇರುವ ಸಾಧನವಾಗಿ ಚಿತ್ರಿಸುವ ಆತ್ಮವಂಚನೆಗೆ ಬಿದ್ದಿದ್ದಾರೆ. ವಂಚಿಸಿದ್ದು ಕೇವಲ ಅವರ ಆತ್ಮವನ್ನು ಮಾತ್ರವಲ್ಲ ಬದಲಿಗೆ ಜೋಗಿ ಪ್ರೇಮ್‌ ಎಂದು ಕರೆದು ಮನವಪ್ಪಿದ ಲಕ್ಷಾಂತರ ತಾಯಂದಿರ ಮಮತೆ ಅಭಿಮಾನವನ್ನೂ ಸಹ.

ಹಾಡಹಗಲೇ ನಿದ್ರಿಸುತ್ತಾ ಇದೆಯಾ  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ?

ಇನ್ನೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಮಾನ ಸ್ಥಾನ ಎರಡನ್ನೂ ಮರೆತು ಶಾಶ್ವತ ನಿದ್ರೆಗೆ ಜಾರಿದಂತಿದೆ. ನೈತಿಕತೆಯ ಆಧರಿಸಿ ಮಂಡಳಿ ಕೆಲಸ ಮಾಡುವುದೇ ಆದರೆ ಸ್ತ್ರೀಯರನ್ನು ತಮ್ಮ ಕಾಮಾಭಿಲಾಷೆ ಪೂರೈಸುವ ಮನರಂಜನೆಯ ವಸ್ತುವಾಗಿ ನೋಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಿ. ಪ್ರೇಮ್‌ ಕ್ಷಮೆ ಕೇಳಿ, ಬಂದಿರುವ ಅಪವಾದದಿಂದ ಪಾರಾದರೆ ಮುಂದೆ ಇಂತಹ ಲಜ್ಜೆಗೇಡಿತನ ಮೆರೆಯುವವರಿಗೆ ಯಾವ ಅಂಜಿಕೆಯೂ ಇರಲಾರದು.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

4 ವರ್ಷಗಳಲ್ಲಿ 111 ಸಂಸದರು, ಶಾಸಕರ ಪಕ್ಷಾಂತರ: ಶೇ. 26ರಷ್ಟು ನಾಯಕರನ್ನು ಸೇರಿಸಿಕೊಂಡ ಬಿಜೆಪಿ!

ದೇಶದ ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಪಕ್ಷಾಂತರ ಪರ್ವ ತಡೆಯಿಲ್ಲದೆ ಮುಂದುವರಿದಿದೆ. ಅದರಲ್ಲೂ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ...

ಮಳೆ ಅಬ್ಬರ: ಉತ್ತರ ಪ್ರದೇಶದಲ್ಲಿ 10 ಮಂದಿ ಸಾವು; ಒಡಿಶಾದಲ್ಲಿ ಪ್ರವಾಹ

ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಉತ್ತರ ಪ್ರದೇಶ...

26 ಬಾರಿ ಸೋತರೂ ಕುಗ್ಗದ ಛಲ; 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕ ಹುದ್ದೆ ಪಡೆದ ವೃದ್ಧ

ಸರಿಯಾದ ಪ್ರಯತ್ನ ಮತ್ತು ಛಲವಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು...