ಕನ್ನಡದ ‘ಕಪ್ಪೆರಾಗ-ಕುಂಬಾರನ ಹಾಡು’ ಕಿರುಚಿತ್ರಕ್ಕೆ ಗ್ರೀನ್ ಆಸ್ಕರ್ ಪ್ರಶಸ್ತಿ

Date:

ಪಶ್ಚಿಮ ಘಟ್ಟದಲ್ಲಿ ಕಂಡುಬರುವ ‘ಕುಂಬಾರ ಕಪ್ಪೆ’ ಕುರಿತು ರಚಿಸಲಾಗಿರುವ ‘ಕಪ್ಪೆರಾಗ-ಕುಂಬಾರನ ಹಾಡು’ ಎಂಬ ಕನ್ನಡ ಕಿರುಚಿತ್ರಕ್ಕೆ ‘ಜ್ಯಾಕ್ಸನ್ ವೈಲ್ಡ್ ಮೀಡಿಯಾ’ ಪ್ರಶಸ್ತಿ ಲಭಿಸಿದೆ.

ಕುಂಬಾರ ಕಪ್ಪೆಯನ್ನು ನಿಶಾಚಾರಿ ಕಪ್ಪೆ ಎಂದೂ ಕರೆಯಲಾಗುತ್ತದೆ. ಈ ಕಪ್ಪೆಯ ಕುರಿತು ನಿರ್ದೇಶಕ ಪ್ರಶಾಂತ್ ಎಸ್. ನಾಯಕ್ ಅವರು ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಖ್ಯಾತಿ ಪಡೆದಿರುವ ‘ಜ್ಯಾಕ್ಸನ್ ವೈಲ್ಡ್ ಮೀಡಿಯಾ’ದ ಅತ್ಯುತ್ತಮ ಪ್ರಾಣಿ ವರ್ತನೆ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.

“ಕಿರುಚಿತ್ರವನ್ನು ಜಗತ್ತಿನಲ್ಲಿರುವ 8 ಕೋಟಿ ಕನ್ನಡ ಮಾತನಾಡುವ ಜನರಿಗೆ ಹಾಗೂ ಭಾರತದ 150 ಕೋಟಿ ಜನರಿಗೆ ಅರ್ಪಣೆ ಮಾಡಿದ್ದೇನೆ” ಎಂದು ನಿರ್ದೇಶಕ ಪ್ರಶಾಂತ್ ಎಸ್. ನಾಯಕ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸಂಗೀತ, ಸಾಹಿತ್ಯ ಸೇರಿದಂತೆ ಅನಾದಿ ಕಾಲದಿಂದಲೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕನ್ನಡ ನಾಡು ಸಾವಿರಾರು ವರ್ಷಗಳಿಂದ ನಿಸರ್ಗದತ್ತವಾಗಿಯೂ ಸಂಪದ್ಭರಿತವಾಗಿದೆ. ಇಂಥ ನಾಡಿನ ಕನ್ನಡ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಜ್ಯಾಕ್ಸನ್ ವೈಲ್ಡ್ ಮೀಡಿಯಾ ಪ್ರಶಸ್ತಿ ಲಭಿಸಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಿರುಚಿತ್ರಕ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಪ್ರತಿಷ್ಠಿತ ಜಾಕ್ಸನ್ ವೈಲ್ಡ್ ಅವಾರ್ಡ್‌ಗೆ ಭಾಜನವಾಗಿರುವ ಕನ್ನಡದ ಮೊದಲ ‘ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯು ಫಿಲಂ’ ಕಪ್ಪೆರಾಗ ಚಿತ್ರತಂಡಕ್ಕೆ ಅಭಿನಂದನೆಗಳು. ಕರುನಾಡಿನ ಪ್ರತಿಭೆಗಳ ಪರಿಶ್ರಮದ ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರುವಾಸಿಯಾಗಿರುವ ಜಾಕ್ಸನ್ ವೈಲ್ಡ್ ಅವಾರ್ಡ್ ‌ನಂತ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತದ್ದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿ. ಚಿತ್ರದ ನಿರ್ದೇಶಕ ಪ್ರಶಾಂತ್ ಎಸ್. ನಾಯ್ಕ ಮತ್ತವರ ತಂಡದ ಸಾಧನೆ ನಾಡಿನ ಯುವ ನಿರ್ದೇಶಕರಿಗೆ ಪ್ರೇರಣೆಯಾಗಲಿ, ಇಂಥ ಇನ್ನಷ್ಟು ಚಿತ್ರಗಳು ನಮ್ಮಲ್ಲಿ ಮೂಡಿಬಂದು, ಕನ್ನಡದ ಕಲರವ ಜಗದಗಲ ಮೊಳಗಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏನಿದು ಮುಡಾ – ವಾಲ್ಮೀಕಿ ನಿಗಮ ಅಕ್ರಮ; ಈ ಹಿಂದೆ ಯಾವೆಲ್ಲಾ ಹಗರಣಗಳು ನಡೆದಿವೆ?

ಲೋಕಸಭಾ ಚುನಾವಣಾ ಫಲಿತಾಂಶ ಹೊರಬಂದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮುಡಾ ಮತ್ತು...

ಮುಡಾ, ವಾಲ್ಮೀಕಿ ನಿಗಮ ಅಕ್ರಮ ಖಂಡಿಸಿ ದೆಹಲಿಯಲ್ಲಿ ಬಿಜೆಪಿ ಸಂಸದರ ಪ್ರತಿಭಟನೆ, ಸಿಎಂ ರಾಜೀನಾಮೆಗೆ ಆಗ್ರಹ

ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಮತ್ತು ಜೆಡಿಎಸ್ ಸಂಸದರು ದೆಹಲಿಯಲ್ಲಿ ಕರ್ನಾಟಕ ಸರ್ಕಾರದ...

ಮುಂಗಾರು ಅಧಿವೇಶನ | ತಮ್ಮ ಗುರಿ ಸಾಧಿಸಿಕೊಂಡ ಪ್ರತಿಪಕ್ಷಗಳು, ಚರ್ಚೆಯಾಗದ ಗಂಭೀರ ಸಮಸ್ಯೆಗಳು

ಎರಡು ವಾರಗಳ ಮುಂಗಾರು ಅಧಿವೇಶನ ಮುಗಿದಿದೆ. ಜನರ ಸಮಸ್ಯೆಗಳನ್ನು ಚರ್ಚಿಸಿ, ಸರ್ಕಾರದ...

ಮಂಡ್ಯ, ಯಾದಗಿರಿಯಲ್ಲಿ ಲಿಥಿಯಂ ಸಂಪನ್ಮೂಲ ಪತ್ತೆ: ಕೇಂದ್ರ ಸಚಿವ

ಮಂಡ್ಯ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಲಿಥಿಯಂ ಸಂಪನ್ಮೂಲ ಇರುವುದನ್ನು ಪರಮಾಣು ಖನಿಜ...