ಜಿಬಿಎದಲ್ಲಿ 39 ಸಾವಿರ ಕೋಟಿ ಕಸದ ಅವ್ಯವಹಾರ: ಆಂಧ್ರದ ಗುತ್ತಿಗೆದಾರನಿಗೆ ಮಣೆ

Date:

ಸಿಲಿಕಾನ್ ಸಿಟಿ ಬೆಂಗಳೂರಿನ ಕಸ ವಿಲೇವಾರಿ ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಬರೋಬ್ಬರಿ 39,000 ಕೋಟಿ ರೂ.(ಎರಡು ಬಾರಿಯ ಬಿಬಿಎಂಪಿ ಬಜೆಟ್) ಮೊತ್ತದ ಬೃಹತ್ ಹಗರಣವೊಂದು ಬೆಳಕಿಗೆ ಬಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಬೃಹತ್ ಕಸದ ಟೆಂಡರ್ ಪ್ರಕ್ರಿಯೆಯಲ್ಲಿ ನೆರೆಯ ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ನಿಯಮಬಾಹಿರವಾಗಿ ಮಣೆ ಹಾಕಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ರಾಜಧಾನಿಯ ಕಸದ ಸಮಸ್ಯೆಯನ್ನು ಬಗೆಹರಿಸುವ ನೆಪದಲ್ಲಿ, ಸಾರ್ವಜನಿಕರು ಕಟ್ಟಿದ ತೆರಿಗೆ ಹಣವನ್ನು ವ್ಯವಸ್ಥಿತವಾಗಿ ಲೂಟಿ ಮಾಡುವ ಬಹುದೊಡ್ಡ ಹುನ್ನಾರ ಇದರ ಹಿಂದಿದೆ ಎನ್ನಲಾಗುತ್ತಿದೆ.

- Advertisement -

ಈ ಬೃಹತ್ ಹಗರಣದಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆಯನ್ನು ಉಲ್ಲಂಘಿಸಿ, ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯನ್ನು ಹತ್ತಿಕ್ಕಲಾಗಿದೆ. ಸ್ಥಳೀಯ ಹಾಗೂ ರಾಜ್ಯದ ಗುತ್ತಿಗೆದಾರರನ್ನು ವ್ಯವಸ್ಥಿತವಾಗಿ ಕಡೆಗಣಿಸುವ ಏಕೈಕ ಉದ್ದೇಶದಿಂದಲೇ ಟೆಂಡರ್ ಷರತ್ತುಗಳನ್ನು ತಿದ್ದುಪಡಿ ಮಾಡಲಾಗಿದೆ. ಸ್ಥಳೀಯರಿಗೆ ‘ಅನುಭವದ ಕೊರತೆ’ ಎಂಬ ನೆಪವೊಡ್ಡಿ ಅವರನ್ನು ಹೊರಗಿಡಲಾಗಿದ್ದು, ಆಂಧ್ರ ಮೂಲದ ನಿರ್ದಿಷ್ಟ ಪ್ರಭಾವಿ ಕಂಪನಿಗಳಿಗೆ ಮಾತ್ರ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಟೆಂಡರ್ ನಿಯಮಗಳನ್ನು ರೂಪಿಸಿರುವುದು ಭಾರಿ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

ಕಸ ವಿಲೇವಾರಿಯ ಈ ದೀರ್ಘಾವಧಿಯ ಗುತ್ತಿಗೆಯ ಒಟ್ಟು ಮೌಲ್ಯವು 39 ಸಾವಿರ ಕೋಟಿಯಷ್ಟಾಗಿದ್ದು, ಇದರಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಕಮಿಷನ್ ವ್ಯವಹಾರ ನಡೆದಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಕೇವಲ ಕಾಗದದ ಮೇಲಷ್ಟೇ ಕಸ ವಿಲೇವಾರಿಯಾದ ಲೆಕ್ಕವನ್ನು ತೋರಿಸಿ, ಕನ್ನಡಿಗರ ಬೆವರಿನ ಹಣವನ್ನು ಲೂಟಿ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ದೂರಿದ್ದಾರೆ. ಇದು ಕೇವಲ ಕಸದ ವಿಲೇವಾರಿಯಲ್ಲ, ಬದಲಾಗಿ ರಾಜಧಾನಿಯ ಅಭಿವೃದ್ಧಿಗೆ ಮೀಸಲಾದ ಭಾರಿ ಮೊತ್ತದ ಹಣವನ್ನು ಬೇರೆಡೆಗೆ ತಿರುಗಿಸುವ ದೊಡ್ಡ ಷಡ್ಯಂತ್ರವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿದ್ದೀರಾ? ಪೆಟ್ರೋಲ್‌ -ಡೀಸೆಲ್‌ ಎಥೆನಾಲ್ ಮಿಶ್ರಣ ಶೇ. 20ಕ್ಕೆ ಹೆಚ್ಚಳ; ಆರ್ಥಿಕ ಲಾಭವೋ, ಪರೋಕ್ಷ ನಷ್ಟವೋ?

ಈ ತಾರತಮ್ಯದ ನೀತಿಯ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ನಮ್ಮ ರಾಜ್ಯದ ಗುತ್ತಿಗೆದಾರರು ದೊಡ್ಡ ಮಟ್ಟದ ಕಸ ವಿಲೇವಾರಿಗೆ ಸಂಪೂರ್ಣವಾಗಿ ಸಮರ್ಥರಿದ್ದರೂ ಅವರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ, ಆಂಧ್ರದ ಕಂಪನಿಗಳ ಮೇಲಿನ ಈ ಅತಿಯಾದ ಒಲವಿನ ಹಿಂದಿರುವ ‘ಕಾಣದ ಕೈ’ಗಳು ಯಾವುವು ಎಂದು ಪ್ರತಿಪಕ್ಷಗಳ ನಾಯಕರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈ ಬೃಹತ್ ಹಗರಣದ ಹಿಂದಿನ ಸತ್ಯಾಸತ್ಯತೆ ಹೊರಬರಲು ತಕ್ಷಣವೇ ಉನ್ನತ ಮಟ್ಟದ ನ್ಯಾಯಾಂಗ ಅಥವಾ ಲೋಕಾಯುಕ್ತ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಜ್ವಲಂತ ಕಸದ ಸಮಸ್ಯೆ ಬಗೆಹರಿಯುವ ಬದಲು, ಇದೀಗ 39,000 ಕೋಟಿಯ ಈ ಟೆಂಡರ್ ಹಗರಣದ ರೂಪದಲ್ಲಿ ಮತ್ತಷ್ಟು ನಾರಲಾರಂಭಿಸಿದೆ. ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಈ ಬೃಹತ್ ಆರ್ಥಿಕ ನಷ್ಟವನ್ನು ತಡೆಯಲು ತಕ್ಷಣವೇ ವಿವಾದಾತ್ಮಕ ಟೆಂಡರ್ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಮತ್ತು ಪಾರದರ್ಶಕವಾಗಿ ಮರುಪರಿಶೀಲನೆ ನಡೆಸಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾಲ್ಕಿ | ಬಸವಣ್ಣನವರ ಅವಹೇಳನ : ರವಿ ಹಂಜ್, ವಿಶ್ವೇಶ್ವರ ಭಟ್ ಪ್ರತಿಕೃತಿ ದಹಿಸಿ ಆಕ್ರೋಶ

ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತು ಆಕ್ಷೇಪಾರ್ಹ ಬರಹ ಹಾಗೂ...

ಮಂಗಳೂರು | ವಾಣಿಜ್ಯ ಮಳಿಗೆಗಳಿಗೆ ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ನಿರ್ಬಂಧ!

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ತಡರಾತ್ರಿ ನಡೆಯುವ ಅಹಿತಕರ ಘಟನೆಗಳನ್ನು...

ಮಂಗಳೂರು | ಪ್ರತಿಭಟನಾಕಾರರ ಅಹವಾಲು ಆಲಿಸಲು ಸಚಿವರ ನಿಯೋಜನೆ: ಸಲೀಂ ಅಹ್ಮದ್

ಡಿಸೆಂಬರ್ 2ರಿಂದ 11ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ...