ಆದಿವಾಸಿಯೊಬ್ಬ ಸಚಿವನಾಗುವುದನ್ನು ಬಿಜೆಪಿ ಸಹಿಸಲ್ಲ: ಶಾಸಕ ಸ್ಥಾನಕ್ಕೂ ರಾಜೀನಾಮೆ ಘೋಷಿಸಿದ ಬಿ ನಾಗೇಂದ್ರ

Date:

ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಮನುವಾದಿಗಳು ದಲಿತರು ಬೆಳೆಯುವುದನ್ನು ಇಷ್ಟಪಡಲ್ಲ. ಆದಿವಾಸಿಯೊಬ್ಬ ಸಚಿವನಾದಾಗ ಬಿಜೆಪಿ ಸಹಿಸಲ್ಲ ಎಂದು ದೂರಿದ್ದಾರೆ. ಹಾಗೆಯೇ ಕಣ್ಣೀರಿಟ್ಟಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗೇಂದ್ರ, “ಇಲ್ಲಿಯವರೆಗೂ ನನಗೆ ನೈತಿಕವಾಗಿ ಬೆಂಬಲ ನೀಡಿದ ಎಲ್ಲ ಮಾಧ್ಯಮಗಳ ಮಿತ್ರರಿಗೆ ಧನ್ಯವಾದ ಹೇಳುತ್ತೇನೆ. ಸಂವಿಧಾನ ವಿರೋಧಿ ವಿಪಕ್ಷಗಳು ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಬಿಡದೆ, ಸದನವೇ ನಡೆಯದಂತೆ ಮಾಡಿದೆ. ಅವರಿಗೆ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ವಿಪಕ್ಷಗಳು ಮನುಸ್ಮೃತಿಯನ್ನೇ ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಯುಗ ಎಂತದ್ದೆಂದು ಅವರಿಗೆ ತಿಳಿದಿಲ್ಲ. ಇದು ಪುರಾತನ, ವೇದ ಕಾಲ ಎಂದು ಅವರಿಗೆ ಪದೇ ಪದೇ ಹೇಳ್ತಾ ಇದ್ದೇವೆ. ಇದು ಸಂವಿಧಾನದ ಕಾಲ, ಬಾಬಾ ಸಾಹೇಬರ ಯುಗ ಎಂಬುದು ವಿಪಕ್ಷಗಳಿಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದನ್ನೂ ಓದಿ: BREAKING NEWS | ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ

“ರಾಮಾಯಣದ ಉತ್ತರಕಾಂಡದಲ್ಲಿ ಶಂಬೂಕನ ಹತ್ಯೆ ಮಾಡಲಾಗಿದೆ. ಆದರೆ ಈ ಯುಗದಲ್ಲಿ ಶಂಬೂಕನ ಹತ್ಯೆ ನಡೆಸಲಾಗದು, ಅವರ ರಕ್ಷಣೆಗಾಗಿಯೇ ಸಂವಿಧಾನವಿದೆ, ನ್ಯಾಯದೇವತೆ ಇದ್ದಾಳೆ ಎಂದು ನಾನು ಭಾವಿಸುತ್ತೇನೆ. ಇಂದು ಶಂಬೂಕನ ಹತ್ಯೆ ಮಾಡಲಾಗದು ಎಂದು ನಾನು ವಿಪಕ್ಷಗಳ ಗಮನಕ್ಕೆ ತರಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.

“ಶೂದ್ರರು, ದಲಿತರು, ಮಹಿಳೆಯರು, ಮುಖ್ಯವಾಗಿ ಆದಿವಾಸಿಗಳು, ಅಲ್ಪಸಂಖ್ಯಾತರು ಸ್ವತಂತ್ರವಾಗಿ ಬದುಕಲೇ ಬಾರದು ಎಂಬ ಮನುಸ್ಮೃತಿಯ ಒಂದು ಪದ್ಧತಿಯನ್ನು ಇಟ್ಟುಕೊಂಡವರು ಬಿಜೆಪಿಗರು. ಆದರೆ ಇಂತಹ ಯುಗದಲ್ಲಿ ಅಂತಹ ಕೃತ್ಯಕ್ಕೆ ಅವಕಾಶ ಮಾಡಲ್ಲ. ಸಂವಿಧಾನ ನಮ್ಮ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆಯಿದೆ” ಎಂದಿದ್ದಾರೆ.

“ವಿಪಕ್ಷಗಳ ಕುತಂತ್ರ ರಾಜಕೀಯ ನಡೆಸುತ್ತಿದೆ. ಸದನದಲ್ಲಿ ಹಲವು ಮಾಡಿ ನೋಟಿಸ್ ನೀಡಿ ಚರ್ಚೆಗೆ ಬರಲು ತಿಳಿಸಿದೆವು. ರಾಜೀನಾಮೆ ಯಾಕೆ ನೀಡಬೇಕು ಎಂದು ಚರ್ಚಿಸೋಣ ಎಂದೆವು. ನಾವು ಮನವಿ ಮಾಡಿಕೊಂಡೆವು. ಆದರೆ ಅವರು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಇಂದು ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಕಾವೇರಿಯ ಜ್ವಲಂತ ಸಮಸ್ಯೆಯಿದೆ. ಮುಖ್ಯವಾಗಿ ಕೆಪಿಎಸ್‌ಸಿ ಹಗರಣ ನಡೆದಿದೆ. ಸುಮಾರು ಏಳು ಸಾವಿರ ಕೋಟಿಗೂ ಮೇಲ್ಪಟ್ಟ ಹಗರಣದ ಬಗ್ಗೆ ಬೆಳಕು ಚೆಲ್ಲಲು ಅವಕಾಶ ಮಾಡಿಕೊಡಲಿಲ್ಲ. ಇದು ಯಾವ ನ್ಯಾಯ ಸ್ವಾಮಿ” ಎಂದು ಪ್ರಶ್ನಿಸಿದರು.

“ಇಂದು ಸಮಸ್ಯೆಯೇ ಇಲ್ಲದ ವಿಷಯದ ಬಗ್ಗೆ ಪಾದಯಾತ್ರೆ ಮಾಡಲು ಹೊರಟ್ಟಿದ್ದಾರೆ. ಇದು ನಿಜವಾಗಿಯೂ ನಮ್ಮ ಮುಗ್ಧ ಜನರ ಮನಸ್ಸಲ್ಲಿ ಹಗರಣ ನಡೆದಿದೆ ಎಂಬ ಸುಳ್ಳನ್ನು ಬಿತ್ತಲು ಪ್ರಾರಂಭಿಸಿದ್ದೀರಿ. ರಾಜ್ಯದ ಜನ ನಿಮ್ಮನ್ನು ನೋಡುತ್ತಿದ್ದಾರೆ. ನಿಜವಾಗಿಯೂ ಒಳ್ಳೆಯಾಗಿದೆ. ವಾಲ್ಮೀಕಿ ಹಗರಣ ಆಗಿದೆ ಎಂದು ಸುಳ್ಳನ್ನು ಬಿತ್ತುತ್ತಿರುವ ಮನುವಾದಿಗಳಿಗೆ ಒಬ್ಬ ದಲಿತನೂ ಮೇಲೆ ಬಾರದು. ಬಿಜೆಪಿಗರಿಗೆ ಆದಿವಾಸಿಗಳು ಮಂತ್ರಿಗಳಾಗಬಾರದು. ಕುಂಟು ನೆಪವನ್ನು ಇಟ್ಟುಕೊಂಡು ಮುಗ್ಧ ಜನರ ಮನಸ್ಸನ್ನು ಹಾಳು ಮಾಡಲು ಬಿಜೆಪಿ ಹೊರಟಿದೆ. ಇದು ಬಿಜೆಪಿಗರಿಗೆ ಒಳ್ಳೇದು ಮಾಡದು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“2024ರಲ್ಲಿ ಪಕ್ಷಕ್ಕೆ ಮುಜುಗರ ಆಗಬಾರದು ಎಂದು ರಾಜೀನಾಮೆ ಕೊಟ್ಟೆ. ಅದಾದ ಬಳಿಕ ಎಲ್ಲ ರೀತಿಯ ತನಿಖೆಗಳು ನಡೆದಿವೆ. ಎಸ್‌ಐಟಿ ತನಿಖೆಯೂ ನಡೆದಿದೆ. ನಮ್ಮ ಎಸ್‌ಐಟಿ, ಸಿಒಡಿ ಬಗ್ಗೆ ನಮಗೆ ಗೌರವವಿದೆ. ನಮಗೆ ರಾಜ್ಯದ ಪೊಲೀಸರ ಮೇಲೆ ಗೌರವವಿದೆ. ಇಂದು ಬಿಜೆಪಿಗರು ಕುಂತಂತ್ರ ಮಾಡಿಕೊಂಡು ಸಿಬಿಐ, ಇಡಿ ಪ್ರಯೋಗ ಮಾಡುತ್ತಿದೆ. ಅಂತಹ ತನಿಖಾ ಸಂಸ್ಥೆ ನಮ್ಮದಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕೇಂದ್ರದ ಕೈಗೊಂಬೆಯಾಗಿರುವ ಇಡಿಯನ್ನು ತೆಗೆದುಕೊಂಡು ಬಂದು ನನ್ನ ವಿನಾಕಾರಣ ಬಂಧಿಸಿದರು. ಜಾಮೀನು ಪಡೆದೆ, ಆದರೆ ಮತ್ತೆ ಚಾರ್ಜ್‌ಶೀಟ್ ಮಾಡಿದರು. ಆದಿವಾಸಿಯೊಬ್ಬರು ಮಂತ್ರಿಯಾದಾಗ ಬಿಜೆಪಿ ಇಡಿ, ಸಿಬಿಐ ತಂದು ಮುಂದಿಡುತ್ತದೆ. ಎರಡನೇ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರನ್ನು ತರಾತುರಿಯಲ್ಲಿ ಸೇರಿಸಿದ್ದಾರೆ” ಎಂದು ದೂರಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...

ಜಂತರ್ ಮಂತರ್ ಧರಣಿ ಸ್ಥಳ ರದ್ದತಿ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನಾ ಮೆರವಣಿಗೆ: ಹಲವು ನಾಯಕರು ಪೊಲೀಸ್ ವಶಕ್ಕೆ

ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರಜಾಸತ್ತಾತ್ಮಕ ಪ್ರತಿಭಟನಾ...