ವಿಜಯೇಂದ್ರ ಹೇಳಿಕೆಗೆ ಖಂಡನೆ: ಬಿಜೆಪಿ ನಾಯಕರ ನಿವಾಸ, ಕಚೇರಿ ಬಳಿ ಯುವ ಕಾಂಗ್ರೆಸ್ ಪೋಸ್ಟರ್ ಅಭಿಯಾನ

Date:

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ವಾಕ್ಸಮರ ಈಗ ಪೋಸ್ಟರ್ ಮತ್ತು ಸ್ಟಿಕ್ಕರ್ ಯುದ್ಧಕ್ಕೆ ತಿರುಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಾಂಗ್ರೆಸ್ ನಾಯಕರ ವಿರುದ್ಧ ಇತ್ತೀಚೆಗೆ ಬಳಸಿದ್ದ ಏಕವಚನ ಮತ್ತು ಆಕ್ಷೇಪಾರ್ಹ ಪದಪ್ರಯೋಗವನ್ನು ಖಂಡಿಸಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಮುಖ ಬಿಜೆಪಿ ನಾಯಕರ ನಿವಾಸ ಹಾಗೂ ಕಚೇರಿಗಳ ಬಳಿ ತೀವ್ರ ಪ್ರತಿಭಟನಾತ್ಮಕ ಪೋಸ್ಟರ್ ಅಭಿಯಾನ ನಡೆಸಿದ್ದಾರೆ.

- Advertisement -

ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಮುಂಜಾನೆಯ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಕಚೇರಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ನಿವಾಸ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ನಿವಾಸಗಳ ಮುಂಭಾಗ, ಸುತ್ತಮುತ್ತಲಿನ ಗೋಡೆಗಳ ಮೇಲೆ ಪ್ರಚೋದನಾತ್ಮಕ ವಾಕ್ಯಗಳಿರುವ ಸ್ಟಿಕ್ಕರ್‌ಗಳನ್ನು ಅಂಟಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

E20 ಹೆಸರಲ್ಲಿ E31 ಸುಲಿಗೆ: ಕರ್ನಾಟಕದಲ್ಲಿ ಮೋದಿ ಸರ್ಕಾರದ...

ದೇಶದ ಇಂಧನ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಕರಾಳವಾದ, ಜನರ ಕಣ್ಣಿಗೆ ಮಣ್ಣು ಎರಚಿ ಅವರ ವಾಹನಗಳ ಎಂಜಿನ್‌ಗಳನ್ನು ನಾಶಪಡಿಸುವ ಮತ್ತು ಜೇಬಿಗೆ ಕತ್ತರಿ ಹಾಕುವ ಬೃಹತ್ ದರೋಡೆಕೋರತನ ಕರ್ನಾಟಕದಲ್ಲಿ ಬಯಲಾಗಿದೆ. ಪೆಟ್ರೋಲ್‌ನಲ್ಲಿ 20%ರ...

ಮೀಟರ್ ಹಾಕಲ್ಲ, ನಿಗದಿತ ಬಾಡಿಗೆಗೆ ಬರಲ್ಲ: ಆಟೋ ಸುಲಿಗೆಯಿಂದ...

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋಗಳ ಸಂಚಾರ ಮತ್ತು ಆಟೋ ಪ್ರಯಾಣಿಕರ ಸಮಸ್ಯೆ ಇಂದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ನಗರದ ರಸ್ತೆಗಳಲ್ಲಿ ಆಟೋಗಳ ಸಂಖ್ಯೆ ಹೆಚ್ಚುತ್ತಿರುವುದು, ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ಕೇಳುವುದು,...

ದೆಹಲಿಯಲ್ಲಿ ದಿನಕ್ಕೆ 20 ಸಿಗರೇಟು ‘ಉಚಿತ’ ಕೊಡುಗೆ! ‘ವಿಷ’...

ಪ್ರತಿ ವರ್ಷ ನವೆಂಬರ್ ಬಂತೆಂದರೆ ದೆಹಲಿ ಜಗತ್ತಿನ ಅತಿ ದೊಡ್ಡ ಗ್ಯಾಸ್ ಚೇಂಬರ್ ಆಗುತ್ತದೆ. ಟಿವಿ ತೆರೆದರೆ ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಸರ್ಕಾರ ಮತ್ತೊಂದು ಸರ್ಕಾರವನ್ನು ದೂರುತ್ತದೆ. ಪಂಜಾಬ್ ಹರಿಯಾಣದ ಕಡೆ...

ಇದನ್ನೂ ಓದಿ: ಕದನವಿರಾಮ ಶಾಶ್ವತ ಅಲ್ಲ, ಕಾಂಗ್ರೆಸ್ಸಿನವರು ಅರ್ಥ ಮಾಡಿಕೊಳ್ಳಲಿ: ಬಿ.ವೈ.ವಿಜಯೇಂದ್ರ

ಅಂಟಿಸಲಾಗಿರುವ ಪೋಸ್ಟರ್‌ ಮತ್ತು ಸ್ಟಿಕ್ಕರ್‌ಗಳಲ್ಲಿ “ಕಾಂಗ್ರೆಸ್ ಮಕ್ಕಳು ಗಾಂಧೀಜಿಯ ಮಕ್ಕಳು, ವಿಜಯೇಂದ್ರನ ಮಕ್ಕಳು ಕಳ್ನನ್ ಮಕ್ಕಳು” ಹಾಗೂ “ಕಾಂಗ್ರೆಸ್‌ನವರು ದೇಶಕ್ಕಾಗಿ ಹುಟ್ಟಿದವರು, ಬಿಜೆಪಿಯವರು ದ್ವೇಷಕ್ಕಾಗಿ ಹುಟ್ಟಿದವರು” ಎಂಬ ಬರಹಗಳು ಪ್ರಮುಖವಾಗಿ ಕಂಡುಬಂದಿವೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಂದರ್ಭದಲ್ಲಿ “ಈ ನನ್ನ ಮಕ್ಕಳು ಕಾಂಗ್ರೆಸ್‌ನವರು…” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿತ್ತು. ವಿಜಯೇಂದ್ರ ಅವರು ತಮ್ಮ ಹೇಳಿಕೆಗೆ ತರುವಾಯ ಕ್ಷಮೆಯಾಚಿಸಿದ್ದರೂ, ಯುವ ಕಾಂಗ್ರೆಸ್ ತನ್ನ ಆಕ್ರೋಶವನ್ನು ಈ ರೀತಿಯ ಪ್ರತ್ಯಕ್ಷ ಸ್ಟಿಕ್ಕರ್ ಮತ್ತು ಪೋಸ್ಟರ್ ಅಭಿಯಾನದ ಮೂಲಕ ಹೊರಹಾಕಿದೆ. ಬಿಜೆಪಿ ನಾಯಕರ ನಿವಾಸಗಳ ಬಳಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದ್ದು, ಅಂಟಿಸಲಾದ ಸ್ಟಿಕ್ಕರ್‌ಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಲಮಟ್ಟಿ– ಕುಷ್ಟಗಿ ರೈಲು ಮಾರ್ಗಕ್ಕೆ ಭೂಮಿ ಒದಗಿಸಲು ರೈಲ್ವೇ ಹೋರಾಟ ಸಮಿತಿಯ ಮನವಿ

ರಾಜ್ಯದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಹಾಗೂ ಅನುದಾನ...

SIR | 7 ರಾಜ್ಯಗಳ ಅಳಿಸಲಾದ ಮತದಾರರಿಗೆ ‘ಫಾರ್ಮ್‌-6’ ಇಲ್ಲದೆಯೇ ಮರುನೋಂದಣಿಗೆ ಅವಕಾಶ; ಕರ್ನಾಟಕಕ್ಕೆ ಮಾತ್ರ ಏಕಿಲ್ಲ?

ಮತಪಟ್ಟಿಯಿಂದ ಹೊರಗುಳಿದವರಿಗೆ ಹಳೆಯ ಗುರುತಿನ ಚೀಟಿಯಲ್ಲೇ ಮರುಸೇರ್ಪಡೆಗೆ ಚುನಾವಣಾ ಆಯೋಗ ಅವಕಾಶ...

ಕೇರಳ ಮೂಲದ ನಿತ್ಯಾ ರಾಮನ್; ದೆಹಲಿಯ ಕೊಳೆಗೇರಿ ಹೋರಾಟದಿಂದ ಲಾಸ್ ಏಂಜಲೀಸ್ ಮೇಯರ್ ಪಟ್ಟದವರೆಗೆ

ಅಮೆರಿಕದ ಎರಡನೇ ಅತಿದೊಡ್ಡ ನಗರವಾದ ಲಾಸ್ ಏಂಜಲೀಸ್‌ನ ನೂತನ ಮೇಯರ್ ಆಗಿ...

‘ಕೋಲ್ಕತ್ತಾ ಪೊಲೀಸರ ಕಾವಲಿನಲ್ಲೇ ನನ್ನ ಮನೆ ಮೇಲೆ ದಾಳಿ’ – ಬಿಜೆಪಿ ವಿರುದ್ಧ ಅಭಿಷೇಕ್ ಬ್ಯಾನರ್ಜಿ ಆರೋಪ

ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ...