SIR | 7 ರಾಜ್ಯಗಳ ಅಳಿಸಲಾದ ಮತದಾರರಿಗೆ ‘ಫಾರ್ಮ್‌-6’ ಇಲ್ಲದೆಯೇ ಮರುನೋಂದಣಿಗೆ ಅವಕಾಶ; ಕರ್ನಾಟಕಕ್ಕೆ ಮಾತ್ರ ಏಕಿಲ್ಲ?

Date:

ಮತಪಟ್ಟಿಯಿಂದ ಹೊರಗುಳಿದವರಿಗೆ ಹಳೆಯ ಗುರುತಿನ ಚೀಟಿಯಲ್ಲೇ ಮರುಸೇರ್ಪಡೆಗೆ ಚುನಾವಣಾ ಆಯೋಗ ಅವಕಾಶ ನೀಡಿದೆ; ಏಳು ರಾಜ್ಯಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಆದರೆ, ಈ ಅವಕಾಶ ಕರ್ನಾಟಕಕ್ಕಿಲ್ಲ! 

- Advertisement -

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಹೆಸರಿನಲ್ಲಿ ದೇಶಾದ್ಯಂತ ಮತದಾರರ ಪಟ್ಟಿಯಲ್ಲಿನ ಹೆಸರುಗಳ ಮಾರಣಹೋಮ ನಡೆದಿದೆ. ಬರೋಬ್ಬರಿ 13 ಕೋಟಿ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ. ಮತದ ಹಕ್ಕು ಕಳೆದುಕೊಂಡವರಲ್ಲಿ ಬಹುಸಂಖ್ಯಾತರು ಅರ್ಹ ಮತದಾರರೇ ಆಗಿದ್ದಾರೆ. ಮತಪಟ್ಟಿಯಲ್ಲಿ ಬಿಜೆಪಿ ವಿರೋಧಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಅಳಿಸುವ ಉದ್ದೇಶದಿಂದಲೇ ನಡೆದಿದ್ದ ಈ ಎಸ್‌ಐಆರ್ ಪ್ರಕ್ರಿಯೆಯ ರದ್ದತಿ ಮತ್ತು ಗ್ಯಾನೇಶ್‌ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಜನಾಂದೋಲನಗಳು ನಡೆಯುತ್ತಿವೆ. ಇದೆಲ್ಲದರ ನಡುವೆ,  ಮತಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರು ಫಾರ್ಮ್‌-6 ಭರ್ತಿ ಮಾಡದೆಯೇ ಮತಪಟ್ಟಿಗೆ ಮರುಸೇರ್ಪಡೆಗೊಳ್ಳಲು ಚುನಾವಣಾ ಆಯೋಗ ಮಾರ್ಗಸೂಚಿಗಳನ್ನು ಘೋಷಿಸಿದೆ. ಆದರೆ, ಇದು ಎಲ್ಲ ರಾಜ್ಯಗಳಿಗೂ ಮುಖ್ಯವಾಗಿ ಕರ್ನಾಟಕಕ್ಕೂ ಅನ್ವಯವಾಗುವುದಿಲ್ಲ ಎಂಬುದು ಆಘಾತಕಾರಿ ಸಂಗತಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕೆವಿಎನ್- ನಿಜ ಅರ್ಥದ ಕನ್ನಡದ...

ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ ಪರಿಚಿತರು. ಅವರ ಇತ್ತೀಚಿನ ಪ್ರತಿಯೊಂದು ಮಾತು ಮತ್ತು ಬರಹಗಳಲ್ಲೂ ವೈಚಾರಿಕತೆ ಇದ್ದೆ ಇರುತ್ತಿತ್ತು. ಅವರು ಇಷ್ಟು ಬೇಗ ಅಗಲಿ ಹೋಗುತ್ತಾರೆ...

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ನವೆಂಬರ್ 6ರಂದು ಚುನಾವಣಾ ಆಯೋಗವು 7 ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ (ಸಿಇಒ) ಹೊಸ ಮಾರ್ಗಸೂಚಿ ಕಳುಹಿಸಿದೆ. ದೆಹಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆಯ ಸಂದರ್ಭದಲ್ಲಿ ಗೈರು, ಸ್ಥಳಾಂತರಗೊಂಡವರು, ಮೃತಪಟ್ಟವರು ಹಾಗೂ ನಕಲಿ ಮತದಾರರು (ASDD) ಎಂದು ಗುರುತಿಸಿ ಮತಪಟ್ಟಿಯಿಂದ ಹೊರಗಿಡಲಾದವರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.

ಅಂದಹಾಗೆ, ಎಎಸ್‌ಡಿಡಿ ವರ್ಗದಡಿ ಮತಪಟ್ಟಿಯಿಂದ ಅಳಿಸಲಾಗಿದ್ದ ಮತದಾರರು ತಮ್ಮ ಹೆಸರನ್ನು ಮರುನೋಂದಣಿ ಮಾಡಿಕೊಳ್ಳಲು ಫಾರ್ಮ್‌-6ಅನ್ನು ಮಾತ್ರವೇ ಸಲ್ಲಿಸಲು ಈ ಹಿಂದೆ ಚುನಾವಣಾ ಆಯೋಗ ಸೂಚಿಸಿತ್ತು. ಅದರಲ್ಲಿ, ತಾವು ಈವರೆಗೆ ಮತಪಟ್ಟಿಯಲ್ಲಿ ಹೆಸರು ಹೊಂದಿರಲಿಲ್ಲ. ಇದೇ ಮೊದಲ ಬಾರಿಗೆ ಹೊಸ ಮತದಾರರಾಗಿ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದು ಅರ್ಜಿ ಸಲ್ಲಿಸುವ ಮತದಾರರು ಸುಳ್ಳು ಘೋಷಣೆಯನ್ನೂ ಮಾಡುವುದು ಅನಿವಾರ್ಹವಾಗಿತ್ತು.

ಚುನಾವಣಾ ಆಯೋಗವೇ ಸುಳ್ಳು ಘೋಷಣೆ ನೀಡುವಂತೆ ಮತದಾರರನ್ನು ಒತ್ತಾಯಿಸುವುದರ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು. ಮಾತ್ರವಲ್ಲದೆ, ನ್ಯಾಯಾಲಯಗಳಲ್ಲಿಯೂ ಅರ್ಜಿಗಳು ಸಲ್ಲಿಕೆಯಾಗಿದ್ದವು. ಫಾರ್ಮ್‌-6ನಲ್ಲಿ ನೀಡಲಾಗಿದ್ದ ಈ ಹೊಸ/ಸುಳ್ಳು ಘೋಷಣೆ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ಬಳಿಕ, ಆ ಸುಳ್ಳು ಘೋಷಣೆಯನ್ನು ಆಯೋಗ ‘ECI-NET’ ಸಾಫ್ಟ್‌ವೇರ್‌ನಲ್ಲಿ ತೆಗೆದುಹಾಕಿತ್ತು.

ಇದೀಗ, ಹಳೆಯ ಮತದಾರರು ಮರುನೋಂದಣಿಗೆ ಫಾರ್ಮ್‌-6 ಸಲ್ಲಿಸುವ ಅಗತ್ಯವೇ ಇಲ್ಲವೆಂದು ಆಯೋಗ ಮಾರ್ಗಸೂಚಿ ಹೊರಡಿಸಿದೆ. ಇದರ ಪ್ರಕಾರ, ಈಗಾಗಲೇ ಮತದಾರರಾಗಿದ್ದು, EPIC ಗುರುತಿನ ಚೀಟಿ ಸಂಖ್ಯೆ ಹೊಂದಿರುವವರು ಮತ್ತೆ ಹೊಸ ಮತದಾರರಂತೆ ನೋಂದಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ಅವರು ತಮ್ಮ ಹಳೆಯ ಗುರುತಿನ ಚೀಟಿಯನ್ನೇ ಬಳಸಿಕೊಂಡು ಮೂರು ರೀತಿಯಲ್ಲಿ ಮರುಸೇರ್ಪಡೆಗೆ ಪ್ರಯತ್ನಿಸಬಹುದು.

1. ಸ್ಥಳಾಂತರಗೊಂಡ ಮತದಾರರು: ಒಂದೇ ರಾಜ್ಯದೊಳಗೆ ವಿಳಾಸ ಬದಲಾಯಿಸಿರುವ ಮತದಾರರು ತಮ್ಮ ಹೊಸ ವಿಳಾಸದ ವಿವರಗಳೊಂದಿಗೆ ‘ಎನ್ಯುಮರೇಷನ್ ಫಾರ್ಮ್‌’ ಸಲ್ಲಿಸಬಹುದು. ನಿರಾಶ್ರಿತರು ಅಥವಾ ಶಾಶ್ವತ ವಿಳಾಸವಿಲ್ಲದವರ ವಿಚಾರದಲ್ಲಿ ಬೂತ್ ಮಟ್ಟದ ಅಧಿಕಾರಿಗಳ (BLO) ಸ್ಥಳ ಪರಿಶೀಲನೆಯನ್ನೂ ಪರಿಗಣಿಸಬಹುದು.

2. ಗಡುವಿನೊಳಗೆ ಫಾರ್ಮ್‌ ಸಲ್ಲಿಸಲಾಗದವರು: ನಿಗದಿತ ಅವಧಿಯಲ್ಲಿ ‘ಎನ್ಯುಮರೇಷನ್ ಫಾರ್ಮ್‌’ ಸಲ್ಲಿಸಲು ಸಾಧ್ಯವಾಗದೆ ASDD ಪಟ್ಟಿಗೆ ಸೇರಿದವರು ಈಗ ಮತ್ತೆ ನಮೂನೆ ಸಲ್ಲಿಸಬಹುದು. ವಿಳಂಬಕ್ಕೆ ಕಾರಣವನ್ನೂ ತಿಳಿಸಬೇಕು.

3. ಹಳೆಯ ಮತದಾರರ ಗುರುತಿನ ಚೀಟಿಯೇ ಮಾನ್ಯ: ಈಗಾಗಲೇ EPIC ಸಂಖ್ಯೆ ಹೊಂದಿರುವ ಮತದಾರರಿಗೆ ಅದೇ ಸಂಖ್ಯೆಯನ್ನು ಮರುನೀಡಲು ಅವಕಾಶ ಕಲ್ಪಿಸಲಾಗಿದೆ. ಸೂಕ್ತ ಪರಿಶೀಲನೆಯ ನಂತರ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಪ್ರಕ್ರಿಯೆ ನಡೆಯಲಿದೆ.

ಆದರೆ, ಈ ಮರುಸೇರ್ಪಡೆ ಸ್ವಯಂಚಾಲಿತವಾಗಿ ನಡೆಯುವುದಿಲ್ಲ. ಬೂತ್ ಮಟ್ಟದ ಅಧಿಕಾರಿಗಳ ಪರಿಶೀಲನೆ ಮತ್ತು ಮತದಾರರ ನೋಂದಣಾಧಿಕಾರಿಗಳ ಅನುಮೋದನೆ ಕಡ್ಡಾಯವಾಗಿದೆ.

ಆದರೆ, ಈ ಅವಕಾಶ ನೀಡಲಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಇಲ್ಲ. ಕರ್ನಾಟಕದಲ್ಲಿಯೂ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ 99 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟಿರುವುದಾಗಿ ಆಯೋಗ ಹೇಳಿದೆ. ಆದರೆ, ಇದರ ಅಸತಿ ಸಂಖ್ಯೆ 1.08 ಕೋಟಿ ಎಂದು ನಾಗರಿಕ ಸಂಘಟನೆಗಳು ಆರೋಪಿಸಿವೆ. ಈ ಅಳಿಸುವಿಕೆ ವಿರುದ್ಧ ನಿರಂತರ ಹೋರಾಟವನ್ನೂ ನಡೆಸುತ್ತಿವೆ. ಆದರೂ, ಕರ್ನಾಟಕದಲ್ಲಿ ಪಟ್ಟಿಯಿಂದ ಹೊರಲಾಕಲ್ಪಟ್ಟ ಮತದಾರರು ಮರಳಿ ಪಟ್ಟಿಗೆ ಸೇರಲು ಹೊಸ ಕ್ರಮದಡಿ ಅವಕಾಶ ನೀಡಲಾಗಿಲ್ಲ.

ಈ ಲೇಖನ ಓದಿದ್ದೀರಾ?: SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

ಆಯೋಗವು ಕರ್ನಾಟಕದಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಹಾಕಲಾಗಿಲ್ಲ ಅಥವಾ ಹೊರಹಾಕಲಾದ ಎಲ್ಲ ಮತದಾರರು ಅನರ್ಹರು ಎಂಬ ನಿರ್ಧಾರಕ್ಕೆ ಬಂದಿದೆಯೇ ಎಂಬ ಪ್ರಶ್ನೆಯನ್ನು ನಾಗರಿಕ ಸಂಘಟನೆಗಳು ಮುನ್ನೆಲೆಗೆ ತಂದಿವೆ. ಮಾತ್ರವಲ್ಲದೆ, ಕರ್ನಾಟಕದಲ್ಲಿಯೂ ಗೈರು, ಸ್ಥಳಾಂತರ, ಮೃತಪಟ್ಟವರು ಹಾಗೂ ನಕಲಿ ಮತದಾರರು ಎಂಬ ವರ್ಗೀಕರಣದಡಿ ಬರೋಬ್ಬರಿ 1 ಕೋಟಿ ಮತದಾರರನ್ನು ಹೊರಹಾಕಲಾಗಿದೆ. ಅವರೆಲ್ಲರೂ ಮರುನೋಂದಣಿಗೆ ಅವಕಾಶ ನೀಡಲೇಬೇಕೆಂದು ಒತ್ತಾಯಿಸಿವೆ.

“ಮತದಾರರ ಹಕ್ಕು ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಹಕ್ಕಲ್ಲ. ಚುನಾವಣಾ ಆಯೋಗದ ನಿಯಮಗಳು ಮತ್ತು ಮತದಾರರ ರಕ್ಷಣೆಯ ಕ್ರಮಗಳು ಎಲ್ಲ ರಾಜ್ಯಗಳಲ್ಲಿಯೂ ಸಮಾನವಾಗಿ ಅನ್ವಯವಾಗಬೇಕು. ಏಳು ರಾಜ್ಯಗಳ ಮತದಾರರಿಗೆ ಹಳೆಯ EPIC ಸಂಖ್ಯೆಯೊಂದಿಗೆ ಮರುಸೇರ್ಪಡೆಯ ಅವಕಾಶ ನೀಡುವ ಆಯೋಗ, ಕರ್ನಾಟಕದ ಮತದಾರರಿಗೂ ಅದೇ ಅವಕಾಶ ಕಲ್ಪಿಸಬೇಕು” ಎಂದು ಸಂಘಟನೆಗಳು ಆಗ್ರಹಿಸಿವೆ.

ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವುದು ಮುಖ್ಯವೇ ಹೊರತು, ದೋಷಪೂರಿತ ಪರಿಷ್ಕರಣೆಯ ಕಾರಣಕ್ಕೆ ನೈಜ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸುವುದಲ್ಲ. ಏಳು ರಾಜ್ಯಗಳ ಮತದಾರರಿಗೆ ಸಿಕ್ಕಿರುವ ಎರಡನೇ ಅವಕಾಶ ಕರ್ನಾಟಕದ ಮತದಾರರಿಗೂ ಸಿಗಬೇಕು. ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಎಲ್ಲರಿಗೂ ಸಮಾನವಾಗಿರಬೇಕು; ಚುನಾವಣಾ ಆಯೋಗದ ರಕ್ಷಣೆಯೂ ಅಷ್ಟೇ ಸಮಾನವಾಗಿರಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ 24 ಗಂಟೆಯೊಳಗೆ ಪರಿಹಾರ ಕಲ್ಪಿಸಿ: ಈಶ್ವರ ಖಂಡ್ರೆ

ಬೀದರ್‌ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ 24 ಗಂಟೆಯೊಳಗೆ ಪರ್ಯಾಯ...

ಬೀದರ್‌ | ಕನ್ನಡ ಅಸ್ಮಿತೆ ಉಳಿಸಿ ಬೆಳೆಸುವಲ್ಲಿ ಏಕೀಕರಣ ಚಳವಳಿ ಕೊಡುಗೆ ಅಪಾರ

ಕರ್ನಾಟಕ ಏಕೀಕರಣ ಚಳವಳಿ ಕನ್ನಡಿಗರಲ್ಲಿ ನಾಡು, ನುಡಿ ಹಾಗೂ ಭಾಷಾಭಿಮಾನವನ್ನು ಜಾಗೃತಗೊಳಿಸುವಲ್ಲಿ...

ಭೂ ಮಾಫಿಯಾ, ಬೆದರಿಕೆ ಆರೋಪ: ಫೇಸ್‌ಬುಕ್ ಲೈವ್‌ನಲ್ಲಿ ಕಣ್ಣೀರಿಟ್ಟು ಜಾರ್ಖಂಡ್ ಬುಡಕಟ್ಟು ನಾಯಕಿ ಆತ್ಮಹತ್ಯೆ

ಜಾರ್ಖಂಡ್‌ನ ರಾಂಚಿಯಲ್ಲಿ ಬುಡಕಟ್ಟು ಹಕ್ಕುಗಳ ಹೋರಾಟಗಾರ್ತಿ ಮತ್ತು ನಾಯಕಿ ನಿಶಾ ಕುಮಾರಿ...

ದೇಶದ ಭದ್ರತೆಗೆ ಧಕ್ಕೆಯಾದ ಅಗ್ನಿಪಥ್ ಯೋಜನೆ ತಕ್ಷಣವೇ ರದ್ದುಗೊಳಿಸಿ: ಕಾಂಗ್ರೆಸ್ ಆಗ್ರಹ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಶಸ್ತ್ರ ಪಡೆಗಳ 'ಅಗ್ನಿಪಥ್' ನೇಮಕಾತಿ ಯೋಜನೆಯನ್ನು...