ಕೇರಳ ಮೂಲದ ನಿತ್ಯಾ ರಾಮನ್; ದೆಹಲಿಯ ಕೊಳೆಗೇರಿ ಹೋರಾಟದಿಂದ ಲಾಸ್ ಏಂಜಲೀಸ್ ಮೇಯರ್ ಪಟ್ಟದವರೆಗೆ

Date:

ಅಮೆರಿಕದ ಎರಡನೇ ಅತಿದೊಡ್ಡ ನಗರವಾದ ಲಾಸ್ ಏಂಜಲೀಸ್‌ನ ನೂತನ ಮೇಯರ್ ಆಗಿ ಕೇರಳ ಮೂಲದ 45 ವರ್ಷದ ನಿತ್ಯಾ ರಾಮನ್ ಆಯ್ಕೆಯಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಾಲಿ ಮೇಯರ್ ಕರೆನ್ ಬಾಸ್ ಅವರನ್ನು ತೀವ್ರ ಪೈಪೋಟಿಯಲ್ಲಿ ಮಣಿಸಿರುವ ಡೆಮಾಕ್ರಟಿಕ್ ಸೋಷಿಯಲಿಸ್ಟ್ ನಾಯಕಿ ನಿತ್ಯಾ, ಈ ಪ್ರತಿಷ್ಠಿತ ಹುದ್ದೆಗೇರಿದ ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಗೆಲುವಿನೊಂದಿಗೆ ಅಮೆರಿಕದ ಎರಡು ಅತಿ ದೊಡ್ಡ ನಗರಗಳು ಹಾಗೂ ರಾಜಧಾನಿ ವಾಷಿಂಗ್ಟನ್ ಡಿಸಿ ಈಗ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಮೇಯರ್‌ಗಳನ್ನು ಹೊಂದಿದಂತಾಗಿದೆ.

- Advertisement -

ನಿತ್ಯಾ ರಾಮನ್ ಅವರ ಬೇರುಗಳು ಕೇರಳದಲ್ಲಿವೆ. ಅವರು 1981ರಲ್ಲಿ ಕೇರಳದ ತ್ರಿಶೂರ್‌ನಲ್ಲಿ ಜನಿಸಿದರು. ಅವರ ತಂದೆ ವೆಂಕಿಟರಾಮನ್ ಸರ್ಕಾರಿ ಸ್ವಾಮ್ಯದ ಕೆಲ್ಟ್ರಾನ್‌ನಲ್ಲಿ (KELTRON) ಹಾಗೂ ತಾಯಿ ಸುಧಾ ಕೇಚೇರಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣ, ನಿತ್ಯಾ ಬಾಲ್ಯದ ಕೆಲ ಕಾಲ ತಿರುವನಂತಪುರದ ಈಸ್ಟ್ ಫೋರ್ಟ್‌ನಲ್ಲಿ ಕಳೆದರು. ಉನ್ನತ ವ್ಯಾಸಂಗಕ್ಕಾಗಿ ತಂದೆ ಅಮೆರಿಕಕ್ಕೆ ತೆರಳಿದಾಗ ತ್ರಿಶೂರ್‌ಗೆ ಮರಳಿದ್ದ ಅವರು, ತಮ್ಮ 6ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ವಲಸೆ ಹೋಗಿ ಮ್ಯಾಸಚೂಸೆಟ್ಸ್‌ನ ಬರ್ಲಿಂಗ್‌ಟನ್‌ನಲ್ಲಿ ನೆಲೆಸಿದರು. ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಪದವಿ ಪಡೆದ ಅವರು, ತಮಿಳುನಾಡು ಮೂಲದ ಟಿವಿ ಬರಹಗಾರ ವಾಲಿ ಚಂದ್ರಶೇಖರನ್ ಅವರನ್ನು ವಿವಾಹವಾದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕೆವಿಎನ್- ನಿಜ ಅರ್ಥದ ಕನ್ನಡದ...

ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ ಪರಿಚಿತರು. ಅವರ ಇತ್ತೀಚಿನ ಪ್ರತಿಯೊಂದು ಮಾತು ಮತ್ತು ಬರಹಗಳಲ್ಲೂ ವೈಚಾರಿಕತೆ ಇದ್ದೆ ಇರುತ್ತಿತ್ತು. ಅವರು ಇಷ್ಟು ಬೇಗ ಅಗಲಿ ಹೋಗುತ್ತಾರೆ...

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ವ್ಯಾಸಂಗದ ಬಳಿಕ ಭಾರತಕ್ಕೆ ಮರಳಿದ್ದ ನಿತ್ಯಾ, 2010ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸಂದರ್ಭದಲ್ಲಿ ನವದೆಹಲಿಯಲ್ಲಿ ಕೊಳೆಗೇರಿ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಸರ್ಕಾರದ ಕ್ರಮದ ವಿರುದ್ಧ ಎನ್‌ಜಿಒ (NGO) ಗಳೊಂದಿಗೆ ಸೇರಿ ಬೃಹತ್ ಹೋರಾಟ ಮುನ್ನಡೆಸಿದ್ದರು. ತದನಂತರ ಚೆನ್ನೈಗೆ ತೆರಳಿ 2010ರಲ್ಲಿ ‘ಟ್ರಾನ್ಸ್‌ಪರೆಂಟ್ ಚೆನ್ನೈ’ (Transparent Chennai) ಎಂಬ ಲಾಭರಹಿತ ಸಂಸ್ಥೆಯನ್ನು ಹುಟ್ಟುಹಾಕಿದರು. ದತ್ತಾಂಶಗಳನ್ನು ಬಳಸಿ ಕೊಳೆಗೇರಿಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಒತ್ತಾಯಿಸಿದ್ದು, ಬಡಾವಣೆಗಳ ಸಾರ್ವಜನಿಕ ಶೌಚಾಲಯಗಳ ನಕ್ಷೆ ತಯಾರಿಸಿದ್ದು ಹಾಗೂ ಬಸ್ ಮಾರ್ಗಗಳನ್ನು ದಾಖಲಿಸಿದ್ದು ಅವರ ಮುಂದಿನ ರಾಜಕೀಯ ಬದುಕಿಗೆ ಭದ್ರ ಬುನಾದಿ ಒದಗಿಸಿತು.

2013ರಲ್ಲಿ ಮರಳಿ ಲಾಸ್ ಏಂಜಲೀಸ್‌ಗೆ ತೆರಳಿದ ನಿತ್ಯಾ, ನಗರ ಆಡಳಿತ ಕಚೇರಿಯಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ವಸತಿಹೀನರ ಮೇಲಿನ ವೆಚ್ಚದ ವರದಿ ತಯಾರಿಸುವ ಜವಾಬ್ದಾರಿ ಹೊತ್ತರು. 2017ರಲ್ಲಿ ‘ಸೆಲಾ ನೈಬರ್‌ಹುಡ್ ಹೋಮ್‌ಲೆಸ್ ಕೋಯಲಿಷನ್’ (SELAH) ಎಂಬ ಸಂಸ್ಥೆಯನ್ನು ಸ್ಥಾಪಿಸಿ ವಸತಿಹೀನರ ಪರವಾಗಿ ಧ್ವನಿಯೆತ್ತಿದರು. ಈ ಸಂಸ್ಥೆಯು ಪ್ರಸ್ತುತ ಈಶಾನ್ಯ ಲಾಸ್ ಏಂಜಲೀಸ್‌ನಲ್ಲಿ 800 ಸ್ವಯಂಸೇವಕರನ್ನು ಹೊಂದಿದ್ದು, ವಸತಿಹೀನರನ್ನು ಘನತೆಯಿಂದ ಕಾಣುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಜೊತೆಗೆ, ‘ಮೀಟೂ’ (#MeToo) ಅಭಿಯಾನದ ಉತ್ತುಂಗದ ವೇಳೆ ಹಾಲಿವುಡ್‌ನ ‘ಟೈಮ್ಸ್ ಅಪ್’ (Time’s Up) ಸಂಸ್ಥೆಯ ಎಂಟರ್‌ಟೈನ್‌ಮೆಂಟ್ ನಿರ್ದೇಶಕಿಯಾಗಿಯೂ ಅವರು ಕೆಲಸ ಮಾಡಿದ್ದರು.

ಅಮೆರಿಕ ರಾಜಕೀಯ ಪ್ರವೇಶಿಸಿದ ನಿತ್ಯಾ, 2020ರ ನಗರ ಕೌನ್ಸಿಲ್ ಚುನಾವಣೆಯಲ್ಲಿ ಹಾಲಿ ಸದಸ್ಯ ಡೇವಿಡ್ ರ್ಯು ಅವರನ್ನು ಸೋಲಿಸಿ ಇತಿಹಾಸ ಬರೆದರು. 17 ವರ್ಷಗಳ ಬಳಿಕ ಲಾಸ್ ಏಂಜಲೀಸ್ ನಗರ ಕೌನ್ಸಿಲ್‌ನ ಹಾಲಿ ಸದಸ್ಯರೊಬ್ಬರನ್ನು ಮಣಿಸಿದ ಹಾಗೂ ‘ಡಿಎಸ್‌ಎ’ (DSA – ಡೆಮಾಕ್ರಟಿಕ್ ಸೋಷಿಯಲಿಸ್ಟ್ಸ್ ಆಫ್ ಅಮೆರಿಕ) ಬೆಂಬಲದೊಂದಿಗೆ ಗೆದ್ದ ಮೊದಲ ಅಭ್ಯರ್ಥಿ ಎಂಬ ಕೀರ್ತಿಗೆ ಅವರು ಭಾಜನರಾದರು. ಬರ್ನಿ ಸ್ಯಾಂಡರ್ಸ್ ಬೆಂಬಲವಿದ್ದ ಆ ಚುನಾವಣೆಯಲ್ಲಿ ಅವರು ಬರೋಬ್ಬರಿ 80 ಸಾವಿರ ಮನೆಗಳ ಬಾಗಿಲು ತಟ್ಟಿ ತಳಮಟ್ಟದ ಪ್ರಚಾರ ನಡೆಸಿದ್ದರು. 2022ರ ಆಡಿಯೋ ಟೇಪ್ ಸೋರಿಕೆ ಹಗರಣದಲ್ಲಿ ಡೆಮಾಕ್ರಟಿಕ್ ನಾಯಕರ ಟೀಕೆಗೆ ಗುರಿಯಾಗಿದ್ದರೂ, 2024ರಲ್ಲಿ ನಗರ ಕೌನ್ಸಿಲ್‌ನ 4ನೇ ಜಿಲ್ಲೆಯಿಂದ ಭಾರಿ ಬಹುಮತದಿಂದ ಮರುಆಯ್ಕೆಯಾದರು.

ಪ್ರಸ್ತುತ ಮೇಯರ್ ಚುನಾವಣೆಯಲ್ಲಿ ಹಾಲಿ ಮೇಯರ್ ಕರೆನ್ ಬಾಸ್ ಅವರನ್ನು ಮಣಿಸುವಲ್ಲಿ ನಿತ್ಯಾ ಸಫಲರಾಗಿದ್ದಾರೆ. ಪ್ರಬಲ ನಗರ ಕೌನ್ಸಿಲ್ ಸದಸ್ಯರ ಬೆಂಬಲವಿಲ್ಲದಿದ್ದರೂ, ಹಾಲಿ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊಂದಿದ್ದ ಜನಸಾಮಾನ್ಯರು ನಿತ್ಯಾ ಅವರ ಕೈಹಿಡಿದರು. ಕರೆನ್ ಬಾಸ್ ಪರವಾಗಿ ಜೇನ್ ಫೋಂಡಾ ಅವರಂತಹ ಹಿರಿಯ ಹಾಲಿವುಡ್ ನಟರಿದ್ದರೆ, ನಿತ್ಯಾ ಅವರಿಗೆ ಮಿಂಡಿ ಕಲಿಂಗ್ ಹಾಗೂ ಆಡಮ್ ಸ್ಕಾಟ್‌ನಂತಹ ಯುವ ತಾರೆಯರ ಮತ್ತು ಹಾಲಿವುಡ್ ಬರಹಗಾರರ ಸಂಘದ ಬೆಂಬಲವಿತ್ತು. ಚುನಾವಣೆಯ ವೇಳೆ ಅವರು ರಿಪಬ್ಲಿಕನ್ ನಾಯಕ ಹಾಗೂ ಮಾಜಿ ಗವರ್ನರ್ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರನ್ನೂ ಖಾಸಗಿಯಾಗಿ ಭೇಟಿಯಾಗಿ ಗಮನ ಸೆಳೆದಿದ್ದರು.

ಡಿಎಸ್‌ಎ-ಎಲ್‌ಎ (DSA-LA) ಜೊತೆಗಿನ ಅವರ ಸಂಬಂಧವು ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ವಸತಿ ಸಮಸ್ಯೆಯ ಪರಿಹಾರಕ್ಕಾಗಿ 2019ರಲ್ಲಿ ಈ ಸಂಘಟನೆ ಸೇರಿದರೂ, ಪ್ಯಾಲೆಸ್ಟೈನ್ ನಿಲುವು ಹಾಗೂ ಭವನಗಳ ಮೇಲಿನ ತೆರಿಗೆ (mansion tax) ಸುಧಾರಣೆಯ ವಿಚಾರದಲ್ಲಿ ಸಂಘಟನೆಯೊಂದಿಗೆ ಸಂಘರ್ಷವೇರ್ಪಟ್ಟಿತ್ತು. ಅವರು ಸಂಪೂರ್ಣ ಬಂಡವಾಳಶಾಹಿ ವಿರೋಧಿ ಸಿದ್ಧಾಂತದ ಬದಲಾಗಿ, ಮುಕ್ತ ಮಾರುಕಟ್ಟೆಯನ್ನು ನಿಯಂತ್ರಿಸುವ ‘ಸ್ಕ್ಯಾಂಡಿನೇವಿಯನ್ ಮಾದರಿಯ ಸಾಮಾಜಿಕ ಪ್ರಜಾಪ್ರಭುತ್ವ’ವನ್ನು ಹೆಚ್ಚು ಬೆಂಬಲಿಸುತ್ತಾರೆ. ನ್ಯೂಯಾರ್ಕ್‌ನ ಸೋಷಿಯಲಿಸ್ಟ್ ಮೇಯರ್ ಜೊಹ್ರಾನ್ ಮಮದಾನಿ ಅವರಿಗೆ ಹೋಲಿಸಿದಾಗ, “ಅವರಿಗಿರುವ ಸಂವಹನ ಕೌಶಲ್ಯದ ಹೋಲಿಕೆಗೆ ನಾನು ಕೃತಜ್ಞಳಾಗಿದ್ದೇನೆ, ಆದರೆ ನಾನು ನಾನಾಗಿಯೇ ಇರಲು ಬಯಸುತ್ತೇನೆ” ಎಂದು ನಿತ್ಯಾ ಸ್ಪಷ್ಟಪಡಿಸಿದ್ದಾರೆ.

ವೃತ್ತಿಯಲ್ಲಿ ನಗರ ಯೋಜಕಿಯಾಗಿದ್ದ (Urban Planner) ನಿತ್ಯಾ ರಾಮನ್ ಅವರ ಮೇಯರ್ ಅಧಿಕಾರದ ಪ್ರಮುಖ ಆದ್ಯತೆ ವಸತಿ ನೀತಿ, ಬಾಡಿಗೆದಾರರ ಹಕ್ಕುಗಳು ಮತ್ತು ವಸತಿಹೀನರ ಸಮಸ್ಯೆ ನಿವಾರಣೆಯಾಗಿದೆ. ನಗರದಲ್ಲಿ ಕೈಗೆಟುಕುವ ದರದಿಂದ ಹಿಡಿದು ಮಾರುಕಟ್ಟೆ ದರದವರೆಗೆ ಹಾಗೂ ಆಶ್ರಯ ತಾಣಗಳಿಂದ ಹಿಡಿದು ಸಾಮಾಜಿಕ ವಸತಿಗಳವರೆಗೆ ಎಲ್ಲಾ ಆದಾಯ ವರ್ಗದವರಿಗೂ ಮನೆ ನಿರ್ಮಿಸುವ ಗುರಿ ಹೊಂದಿದ್ದಾರೆ. ವಾರ್ಷಿಕ ವಸತಿ ನಿರ್ಮಾಣವನ್ನು ಮೂರು ಪಟ್ಟು ಹೆಚ್ಚಿಸುವ ಅವರ ಯೋಜನೆಗೆ ‘ಯಿಂಬಿ ಆಕ್ಷನ್’ (Yimby Action) ಎಂಬ ವಸತಿ ಹಕ್ಕುಗಳ ಹೋರಾಟ ಗುಂಪು ಕೂಡ ಬೆಂಬಲ ನೀಡಿದೆ. ದೆಹಲಿ ಹಾಗೂ ಚೆನ್ನೈನ ಕೊಳೆಗೇರಿಗಳ ಪರ ಧ್ವನಿಯೆತ್ತಿದ್ದ ಭಾರತೀಯ ಮೂಲದ ನಾಯಕಿಯೊಬ್ಬರು ಇಂದು ಅಮೆರಿಕದ ಪ್ರಮುಖ ನಗರದ ಚುಕ್ಕಾಣಿ ಹಿಡಿದಿರುವುದು ನಿಜಕ್ಕೂ ಅಭೂತಪೂರ್ವವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕನ್ನಡ ಅಸ್ಮಿತೆ ಉಳಿಸಿ ಬೆಳೆಸುವಲ್ಲಿ ಏಕೀಕರಣ ಚಳವಳಿ ಕೊಡುಗೆ ಅಪಾರ

ಕರ್ನಾಟಕ ಏಕೀಕರಣ ಚಳವಳಿ ಕನ್ನಡಿಗರಲ್ಲಿ ನಾಡು, ನುಡಿ ಹಾಗೂ ಭಾಷಾಭಿಮಾನವನ್ನು ಜಾಗೃತಗೊಳಿಸುವಲ್ಲಿ...

ಭೂ ಮಾಫಿಯಾ, ಬೆದರಿಕೆ ಆರೋಪ: ಫೇಸ್‌ಬುಕ್ ಲೈವ್‌ನಲ್ಲಿ ಕಣ್ಣೀರಿಟ್ಟು ಜಾರ್ಖಂಡ್ ಬುಡಕಟ್ಟು ನಾಯಕಿ ಆತ್ಮಹತ್ಯೆ

ಜಾರ್ಖಂಡ್‌ನ ರಾಂಚಿಯಲ್ಲಿ ಬುಡಕಟ್ಟು ಹಕ್ಕುಗಳ ಹೋರಾಟಗಾರ್ತಿ ಮತ್ತು ನಾಯಕಿ ನಿಶಾ ಕುಮಾರಿ...

ದೇಶದ ಭದ್ರತೆಗೆ ಧಕ್ಕೆಯಾದ ಅಗ್ನಿಪಥ್ ಯೋಜನೆ ತಕ್ಷಣವೇ ರದ್ದುಗೊಳಿಸಿ: ಕಾಂಗ್ರೆಸ್ ಆಗ್ರಹ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಶಸ್ತ್ರ ಪಡೆಗಳ 'ಅಗ್ನಿಪಥ್' ನೇಮಕಾತಿ ಯೋಜನೆಯನ್ನು...

ಸರ್ಕಾರಿ ಶಾಲೆ ಮುಚ್ಚುವುದು, ಖಾಸಗೀಕರಣ ಎರಡೂ ಅಪಾಯದ ಸೂಚನೆ; ಅವುಗಳನ್ನು ಉಳಿಸಿ, ಉನ್ನತೀಕರಿಸಬೇಕು! ಏಕೆಂದರೆ…

ಒಂದು ಸರ್ಕಾರಿ ಶಾಲೆ ಮುಚ್ಚಿದಾಗ ಆ ಪ್ರದೇಶದ ಮಕ್ಕಳಿಗೆ ಹತ್ತಿರದಲ್ಲೇ ದೊರೆಯುತ್ತಿದ್ದ...