ಬಿಜೆಪಿ ಆಸೆಗೆ ತಣ್ಣೀರು ಎರಚಿದ ಕಾಂಗ್ರೆಸ್ ನಾಯಕರ ನಡೆ; ಅನಿಲ್ ಹೊಸಕೊಪ್ಪ  

Date:

ಅಧಿಕಾರ ಹಸ್ತಾಂತರ, ಸಿ ಎಂ ಬದಲಾವಣೆ ವಿಚಾರವಾಗಿ ಹಲವು ತಿಂಗಳುಗಳಿಂದ ಚರ್ಚೆಗಳು ನಡೆಯುತ್ತಿರುವಾಗ ಬಿಜೆಪಿಯಾ ಹಲವು ಮುಖಂಡರುಗಳ ಆಸೆ ಏನಾಗಿತ್ತು ಅಂದರೆ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೆ ಕಾಂಗ್ರೆಸ್ ಎರಡು ಭಾಗವಾಗುತ್ತೆ ಸರ್ಕಾರನೂ ಬಿದ್ದು ಹೋಗುತ್ತೆ ಎಂಬ ಆಸೆಗಣ್ಣಿನಿಂದ ನೋಡುತ್ತಾ ಕುಳಿತವರು ಒಂದೆಡೆ , ಮತ್ತೊಂದು ಕಡೆ ಡಿ ಕೆ ಶಿವಕುಮಾರ್ ರವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದೇ ಇದ್ದರೆ ಬೆಂಬಲಿಗರೊಂದಿಗೆ ಪಕ್ಷ ಬಿಟ್ಟು ಕಾಂಗ್ರೆಸ್ ನುಚ್ಚು ನೂರು ಆಗುತ್ತೆ ಎಂಬ ನಂಬಿಕೆಯಾ ಎಲ್ಲಾ ಆಸೆಗಳಿಗೂ ತಣ್ಣೀರು ಎರಚಿದಂತಾಗಿದೆ.

- Advertisement -

ಯಾಕೆಂದರೆ ಹಿಂದೆ ಎಂದೂ ನಡೆಯದ ರೀತಿಯಲ್ಲಿ ಇವತ್ತು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಮುಖಂಡರು ಮಾಧ್ಯಮದ ಎದುರು ತುಂಬಾ ಗೌರವಯುತವಾಗಿ ಒಗ್ಗಟ್ಟನ್ನು ಪ್ರದರ್ಶಿಸಿ ಮಾದರಿಯಾದರು. ಸಿದ್ದರಾಮಯ್ಯ ಈ ರಾಜ್ಯದ ಒಬ್ಬ ಹಿರಿಯ ಮುತ್ಸದ್ದಿ ರಾಜಕಾರಣಿ ವಿಧಾನ ಸಭೆಯಲ್ಲಿ ಕಳೆದ ಹಲವು ವರ್ಷಗಳಿಂದ ಬಹಳ ಉತ್ತಮವಾಗಿ ಮಾತನಾಡಬಲ್ಲ ತಿಳುವಳಿಕೆ ಇದ್ದ ನಾಯಕರೆಂದರೆ ಸಿದ್ದರಾಮಯ್ಯ ಮಾತ್ರ ಎಂಬುದರಲ್ಲಿ ಸಂದೇಹವಿಲ್ಲ. ಬಡ ಕುಟುಂಬದಿಂದ ಬಂದ ಸಿದ್ದರಾಮಯ್ಯ ರಾಜ್ಯ ರಾಜಕಾರದಲ್ಲಿ ಈ ಮಟ್ಟಕ್ಕೆ ಬೆಳೆದದ್ದು ಬಾರಿ ದೊಡ್ಡ ಸಾಹಸವೇ ಸರಿ ಎಂಬಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

8 ವರ್ಷ ಮುಖ್ಯಮಂತ್ರಿಯಾಗಿ ದಾಖಲೆ, 17 ಬಾರಿ ಬಜೆಟ್ ದಾಖಲೆ , ಎರಡು ಬಾರಿ ವಿರೋಧಪಕ್ಷದ ನಾಯಕ ಎಲ್ಲವೂ ಕಾಂಗ್ರೆಸ್ ನೀಡಿದೆ ಜೊತೆಗೆ ಅವರ ವರ್ಚಸ್ಸು, ಹೋರಾಟ, ತಿಳುವಳಿಕೆ ಸಹ ಕಾಂಗ್ರೆಸ್ಗೆ ಸಹಕಾರಿಯಾಗಿದೆ ಈಗ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ಮಾಡಿ ಕೊಡುವುದು ಸರಿಯಾದ ನಿರ್ಧಾರವೇ ಆಗಿದೆ ರಾಷ್ಟ್ರ ರಾಜಕಾರಣದಲ್ಲಿ ರಾಜ್ಯದ ಧ್ವನಿಯಾಗಲಿ ಎಂಬುವುದು ನಮ್ಮೆಲ್ಲರ ಬಯಕೆಯಾಗಿದೆ.

ಇದನ್ನೂ ಓದಿದ್ದೀರಾ?ವೈದ್ಯಲೋಕಕ್ಕೆ ತರೀಕೆರೆಯಲ್ಲಿ ಮುಸ್ಲಿಂ ಯುವತಿಯರ ಸಾಧನೆ

ಕಾಂಗ್ರೆಸ್ ಬಹಳ ಹೀನಾಯ ಸ್ಥಿತಿಯಲ್ಲಿ ಇದ್ದಾಗ ಡಿ ಕೆ ಶಿವಕುಮಾರ್ ರವರು ಕೆ ಪಿ ಸಿ ಸಿ ಅಧ್ಯಕ್ಷಗಿರಿ ವಹಿಸಿಕೊಂಡು ಬಹಳ ಶ್ರಮ ಪಟ್ಟು ಪಕ್ಷ ಕಟ್ಟಿ ಬೆಳೆಸಿದ್ದಾರೆ ಎಂತಹ ಸಂಧಿಗ್ದ ಪರಿಸ್ಥಿಯಲ್ಲೂ ಪಕ್ಷ ಬಿಡದೆ ಪಕ್ಷಕ್ಕಾಗಿ ದುಡಿದಿದ್ದಾರೆ ಹಾಗಾಗಿ ಅವರು ಸಿ ಎಂ ಸ್ಥಾನ ಕೇಳುವುದರಲ್ಲಿ… ಆಗುವುದರಲ್ಲಿ.. ತಪ್ಪೇನಿಲ್ಲ ಆಗಲೇ ಬೇಕು ಆದರೆ ಬಹಳ ಅನುಭವ ಇರುವ ಸಿದ್ದರಾಮಯ್ಯ ನವರ ಮಾರ್ಗದರ್ಶನ ಪಡೆದು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರವನ್ನು ಮುನ್ನಡೆಸಿದರೆ ಪಕ್ಷಕ್ಕೂ, ಸರ್ಕಾರಕ್ಕೂ, ರಾಜ್ಯದ ಅಭಿರುದ್ದಿಗೂ ಒಳ್ಳೆಯದು ಮತ್ತು ಡಿ ಕೆ ಶಿವಕುಮಾರ್ ರವರ ವರ್ಚಸ್ಸಿಗೂ ಇನ್ನಷ್ಟು ಮೆರಗು ಕೊಡುವುದರಲ್ಲಿ ಸಂದೇಹವಿಲ್ಲ.  ಕಾಂಗ್ರೆಸ್ ನ ಎಲ್ಲಾ ಮುಖಂಡರು ಇವತ್ತು ಮುಂಜಾನೆಯಿಂದ ತುಂಬಾ ಎತ್ತರದಲ್ಲಿ ನಡೆದುಕೊಂಡಿದ್ದೀರಿ ಮುಂದೆಯೂ ಹೀಗೆ ನಡೆದು ಕೊಂಡರೆ ವಿರೋಧಪಕ್ಷಗಳನ್ನು ಎದುರಿಸಲು ಬಾರಿ ದೊಡ್ಡ ಶಕ್ತಿ ಕಾಂಗ್ರೆಸ್ ಗೆ ಬರುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...

ಕಾರವಾರ | ಅಕ್ಟೋಬರ್ 16ರಂದು ಹಾರವಾಡದಿಂದ ಮಾಜಾಳಿವರೆಗೆ ಮೀನುಗಾರಿಕೆಗೆ ನಿರ್ಬಂಧ

ಕಾರವಾರ: ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಅಕ್ಟೋಬರ್ 16ರಂದು ಉತ್ತರ ಕನ್ನಡ...

ಕೋಲಾರ | 108 ಆಂಬ್ಯುಲೆನ್ಸ್ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಿ: ಕೆ.ನಾರಾಯಣಗೌಡ

ಅಪತ್ಬಾಂಧವರೆಂದೇ ಕರೆಯಲಾಗುವ 108 ಆಂಬ್ಯುಲೆನ್ಸ್ ನೌಕರರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ...