ವೈದ್ಯಲೋಕಕ್ಕೆ ತರೀಕೆರೆಯಲ್ಲಿ ಮುಸ್ಲಿಂ ಯುವತಿಯರ ಸಾಧನೆ

Date:

ಕೇವಲ ಶ್ರೀಮಂತರ ಮತ್ತು ಸಾಧಕ ವಿದ್ಯಾರ್ಥಿಗಳ ಕ್ಷೇತ್ರವಾಗಿದ್ದ ವೈದ್ಯಕೀಯ ಶಿಕ್ಷಣಕ್ಕೆ ತರೀಕೆರೆ ಪಟ್ಟಣದ ಸಾಮಾನ್ಯ ಕುಟುಂಬಗಳ ಯುವತಿಯರು ಲಗ್ಗೆ ಇಡುತ್ತಿದ್ದು ಸಮುದಾಯದಲ್ಲಿ ಹೊಸ ಗಾಳಿಯೊಂದು ಬೀಸುತ್ತಿದೆ.

- Advertisement -
Screenshot 2026 05 28 19 11 04 77 7352322957d4404136654ef4adb64504

ಕಳೆದ 20ವಷ೯ಗಳ ಹಿಂದೆ ಏಳನೇ‌ ತರಗತಿ ಪಾಸಾದ ಮುಸ್ಲಿಂ ಹುಡ್ಗಿಯರಿಗೆ ನಂತರದ ಓದು ಸಾಧ್ಯವಿರಲಿಲ್ಲ. ಆ ಕಾಲವು ಹಂಗೇ ಇತ್ತು ಬಿಡಿ. ಪೋಷಕರಲ್ಲಿ ದುಡ್ಡಿನ ಕೊರತೆ, ಊರಿಂದೂರಿಗೆ ಹೋಗಿ ಓದಲು ಇದ್ದ ಅಡ್ಡಿ ಆತಂಕಗಳು ಒಂದೇರಡಲ್ಲ. ಸುರಕ್ಷತೆಯ ಗಂಭೀರ ಸಮಸ್ಯೆ . ಹೆಚ್ಚು ಓದಿದ ಹುಡ್ಗಿಗೆ ತಕ್ಕ ವರ ಸಿಗದು ಕಷ್ಟ ಎಂಬ ಮೈನಸ್ ಪಾಯಿಂಟ್ ಗಳೆ ಅಡ್ಡಿಯಾಗಿದ್ದವು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್...

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಆಸನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬಸ್‌ಗಳು ನಿಲುಗಡೆಗೊಳ್ಳಲು ಪ್ರತ್ಯೇಕ ಜಾಗವನ್ನೂ ಗುರುತಿಸಲಾಗಿದೆ. ಆದರೆ, ಬಸ್‌ಗಳು ಮಾತ್ರ ನಿಲ್ದಾಣಕ್ಕೆ...
Screenshot 2026 05 28 19 11 20 99 7352322957d4404136654ef4adb64504

ಹೀಗಿರುವಾಗ ಸಕಾ೯ರದ ಸೌಲಭ್ಯಗಳು, ಜಾಗೃತಿ, ಬದುಕು ಕಟ್ಟಿಕೊಳ್ಳುವ ಛಲ ಮೂಡಿದ ಕಾರಣ ಈ ಸಮುದಾಯದ ಹುಡ್ಗಿಯರು ಉನ್ನತ ಶಿಕ್ಷಣ ಪಡೆದು ಯಶಸ್ಸಿಯಾಗುತ್ತಿರುವುದು ಪ್ರಗತಿ ಶೀಲ ರಾಷ್ಟ್ರಗಳ ಅಭಿವೃದ್ಧಿಗೆ ಹಿಡಿದ ಕನ್ನಡಿ.

Screenshot 2026 05 28 19 11 51 89 7352322957d4404136654ef4adb64504

ಐದರಿಂದ ಆರು  ಸಾವಿರ ಮುಸ್ಲಿಂ ಜನಸಂಖ್ಯೆ ಹೊಂದಿರುವ ತರೀಕೆರೆ ಪಟ್ಟಣದಲ್ಲಿ ಈಗಾಗಲೇ ವೈದ್ಯಕೀಯ ಶಿಕ್ಷಣ ತರಬೇತಿ ಪಡೆದು ಸೇವೆಗೆ ರೆಡಿಯಾಗಿರುವ ಯುವತಿಯರ ಮದ್ಯೆ ದೂರದ ಉಜ್ಬೇಕಿಸ್ತಾನ್ ನಲ್ಲಿ ತರಬೇತಿ ಪಡೆಯಲು ಹೋಗುತ್ತಿರುವ ಸನ್ನಿವೇಶಗಳ ನೋಡಿದರೆ ಸಮುದಾಯದಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕೆ ಉತ್ತೇಜನ ಸಿಕ್ಕಿರುವುದಂತು ದಿಟ.

Screenshot 2026 05 28 19 11 41 53 7352322957d4404136654ef4adb64504

ಹಿಜಾಬ್ , ಬುಕಾ೯ ಮಹಿಳಾ ಸ್ವಾತಂತ್ರ್ಯಕ್ಕೆ ಮಾರಕ ಎಂಬ ಹುಸಿ   ಸತ್ಯ ಮಿಥ್ಯಗಳ ನಡುವೆ ಪಟ್ಟಣದ ಈ ಯುವತಿಯರು ಇಸ್ಲಾಂ ಶಿಷ್ಟಾಚಾರಗಳ ಅಳವಡಿಸಿಕೊಂಡೆ ನಿರಾಯಾಸವಾಗಿ ಎಂ.ಬಿ.ಬಿ.ಎಸ್.ಹಾಗೂ  ಬಿ.ಡಿ.ಎಸ್ ಗಳ ಮುಗಿಸಿರುವ ಸಾಧನೆ ಬಾಯಿಗೆ ಬೆರಳಿಡುವಂತೆ ಮಾಡಿದೆ. ಹತ್ತನೇ ತರಗತಿ, ಪಿಯೂ ಓದಿದ್ದೆ ಮುಸ್ಲಿಂ ಹುಡ್ಗಿಯರ ಸಾಧನೆ ಅಂತಿದ್ದಾಗ ಇದೀಗ ಏರಿಯಾ ಮೊಹಲ್ಲ ಗಳಲ್ಲಿ ಸ್ಟೆತೋಸ್ಕೋಪ್ ಹಿಡಿದು ಕೊಂಡು ಓಡಾಡುವುದನ್ನು ನೋಡಬಹುದಾಗಿದೆ.

Screenshot 2026 05 28 19 11 31 54 7352322957d4404136654ef4adb64504

ಪಟ್ಟಣದ ಕಾಪೆ೯ಂಟರ್ ವೃತ್ತಿಯ ಜಾವೀದ್ ಎಂಬುವವರ ಇಬ್ಬರು ಮಕ್ಕಳಲ್ಲಿ ತಲಹ ಫರ್ಜೀನ್ ಎಂ.ಬಿ.ಬಿ.ಎಸ್. ಇನ್ನೊಬ್ಬಳು ನೇಹಾ ಫಿದೋಸ್ ದಂತ ವೈದ್ಯೆ,  ಖ್ವಾಜಾ ಮೋಹಿದ್ದೀನ್ ರವರ ಮಗಳು ತಾಮೀನ ಫಾತೀಮಾ ಎಂ.ಬಿ.ಬಿ.ಎಸ್ ಮುಗಿಸಿದ್ದಾರೆ . ಸಮೀಉಲ್ಲಾ ಹಸನ್ ರ ಮಗಳು ಸೈಯದ ಫಿಜಾ ನೂರಾನಿ ದಂತವೈದ್ಯೆ, ಟಿ.ಎನ್. ರಫೀಕ್ ಇವರ ಮಗಳು ಸಾದೀಯ ಉಜ್ಬೇಕಿಸ್ತಾನ್ ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ.

ಇದನ್ನೂ ಓದಿದ್ದೀರಾ?ತರೀಕೆರೆ |ವೈದ್ಯಾಧಿಕಾರಿಯನ್ನು ಬದಲಾಯಿಸಲು ಡಿ.ಸಿ.ಗೆ ಮನವಿ; ಟಿ. ದಾದಾ ಪೀರ್

ಈ ಕುರಿತು ಸಂತಸದ ವಿಚಾರವನ್ನು ತರೀಕೆರೆ ತಾಲೂಕಿನ ಸಾಮಾಜಿಕ ಹೋರಾಟಗಾರ ಟಿ. ದಾದಾ ಪೀರ್ ಈದಿನ.ಕಾಂ ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಅಪವಾದಗಳ ಕಳಚಿ ಸಮುದಾಯದ ಯುವ ಜನತೆ ದೇಶಕ್ಕೆ ಸೇವೆಯ ಕೊಡುಗೆ ನೀಡಲಿ ಎಂದು ನಾವೆಲ್ಲ ಹಾರೈಸುತ್ತ ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕಿದೆ.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಕೊಡಗು | ಕಾಫಿ ಬೆಳೆಗಾರರು ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬು: ಡಾ. ಮಂತರ್ ಗೌಡ

ಕಾಫಿ ಬೆಳೆಗಾರರು ಕೊಡಗು ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಕಾಫಿ ಕೃಷಿ ಮತ್ತು...

ಅಕ್ಟೋಬರ್ 17ರಂದು ರಾತ್ರಿ 7.50ಕ್ಕೆ ಕಾವೇರಿ ತೀರ್ಥೋದ್ಭವ

ಕೊಡಗಿನ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ನಡೆಯಲಿರುವ ಕಾವೇರಿ ತೀರ್ಥೋದ್ಭವ ಹಾಗೂ ತಿಂಗಳ...

ವಿಜಯಪುರ | ಬಿ.ಎಲ್.ಡಿ.ಇ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನೇಮಕಾತಿ

ತಾಂತ್ರಿಕ ಶಿಕ್ಷಣದೊಂದಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ...