ಅಲ್ಲಾವುದ್ದೀನನ ಅದ್ಭುತ ದೀಪದಂತೆ ಜಿಎಸ್‌ಎಸ್;‌ ʼಹಣತೆಯಿಂದ ಹಣತೆಗೆʼ ಸಂವಾದದಲ್ಲಿ ಮೇಷ್ಟ್ರು ನೆನಪು

Date:

ಒಂದು ಹಣತೆಯಿಂದ ಮತ್ತೊಂದು ಹಣತೆಯನ್ನು ಹಚ್ಚಿದಾಗ ಮೊದಲ ಹಣತೆಯ ಬೆಳಕು ಕಡಿಮೆಯಾಗುವುದಿಲ್ಲ, ಬದಲಾಗಿ ಬೆಳಕು ಮತ್ತಷ್ಟು ವಿಸ್ತರಿಸುತ್ತದೆ. ಇದೇ ಆಶಯದೊಂದಿಗೆ ಕನ್ನಡದ ಹಿರಿಯ ಸಾಹಿತಿ, ವಿಮರ್ಶಕ ಹಾಗೂ ವಿದ್ಯಾರ್ಥಿಗಳ ಪ್ರೀತಿಯ ಮೇಷ್ಟ್ರು ಜಿ.ಎಸ್. ಶಿವರುದ್ರಪ್ಪ (ಜಿಎಸ್ಎಸ್) ಅವರ ಜನ್ಮಶತಮಾನೋತ್ಸವದ ಅಂಗವಾಗಿ ‘ಹಣತೆಯಿಂದ ಹಣತೆಗೆ’ ಎಂಬ ಸಂವಾದ ಕಾರ್ಯಕ್ರಮ ನಡೆಯಿತು.

- Advertisement -

1970ರಿಂದ 1986ರವರೆಗೆ ಹದಿನಾರು ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಜಿಎಸ್ಎಸ್ಅ, ತಮ್ಮ ಬೋಧನೆ, ಸಾಹಿತ್ಯ ವಿಮರ್ಶೆ, ವೈಚಾರಿಕತೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಅನೇಕ ತಲೆಮಾರುಗಳ ವಿದ್ಯಾರ್ಥಿಗಳು ಹಾಗೂ ಬರಹಗಾರರ ಮೇಲೆ ಪ್ರಭಾವ ಬೀರಿದವರು. ಅವರ ವ್ಯಕ್ತಿತ್ವ ಮತ್ತು ಸಾಹಿತ್ಯಿಕ ಕೊಡುಗೆಯನ್ನು ಸ್ಮರಿಸಿದ ಹಿರಿಯರು, ಅವರ ಬದುಕಿನ ವಿವಿಧ ಮಗ್ಗುಲುಗಳನ್ನು ಸಂವಾದದಲ್ಲಿ ತೆರೆದಿಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೇಡ್ತಿ ನದಿ ತಿರುವು ಯೋಜನೆಯೂ, ಬೊಮ್ಮಾಯಿ-ಕಾಗೇರಿ ಪೀಕಲಾಟವೂ

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದಕ್ಕಿದ್ದಂತೆಯೇ ಬೇಡ್ತಿ-ವರದಾ ಮತ್ತು ಬೇಡ್ತಿ-ಧರ್ಮ-ವರದಾ ನದಿ ಜೋಡಣೆ ಎಂಬ ಅವಳಿ ಗುಮ್ಮಗಳು ಎದ್ದು ಕುಳಿತು ಬೆಚ್ಚಿ ಬೀಳಿಸಿವೆ. ಸ್ವರ್ಣವಲ್ಲೀ ಸ್ವಾಮಿ, ಎಂಪಿ ಕಾಗೇರಿ ಮತ್ತು...

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಹೆಸರಿಗಷ್ಟೇ; ಇಂದಿಗೂ ಅಧಿಕಾರ...

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿಯ ಮೂಲಕ ಅನೇಕ ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ. ಆದರೂ ಕೆಲವು ಕಡೆ ಮಹಿಳಾ ಪ್ರತಿನಿಧಿಗಳ ಬದಲಿಗೆ ಅವರ ಪತಿ, ತಂದೆ, ಸಹೋದರ ಅಥವಾ ಕುಟುಂಬದ ಇತರ ಪುರುಷರು ಆಡಳಿತದಲ್ಲಿ ಹಸ್ತಕ್ಷೇಪ...

ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ

ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ. ಅಕ್ಟೋಬರ್ 10ರಂದು ದೆಹಲಿಯಲ್ಲಿ...

ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಶಶಿಕಲಾ ಮಾತನಾಡಿ, ಸಾಹಿತ್ಯ ಚರಿತ್ರೆಯನ್ನು ಕಟ್ಟುವ ಕ್ರಮ ಹೇಗಿರಬೇಕು ಎಂಬುದನ್ನು ತಮ್ಮ ಕೆಲಸದ ಮೂಲಕ ತೋರಿಸಿಕೊಟ್ಟವರು ಜಿಎಸ್ಎಸ್. ಸಾಹಿತ್ಯವನ್ನು ಕೇವಲ ಕಾಲಾನುಕ್ರಮದಲ್ಲಿ ನೋಡುವುದಕ್ಕಿಂತ ಅದರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ವೈಚಾರಿಕ ನೆಲೆಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಡಾ. ಸಿ. ವೀರಣ್ಣ ಮಾತನಾಡಿ, ಅಲ್ಲಾವುದ್ದೀನನ ಅದ್ಭುತ ದೀಪದಂತೆ ಜಿಎಸ್‌ಎಸ್. ಅವರ ಸಂಪರ್ಕಕ್ಕೆ ಬಂದವರು ಸಾಹಿತಿಗಳಾಗಿ, ಬರಹಗಾರರಾಗಿ ಮತ್ತು ವಿಚಾರವಂತರಾಗಿ ಬೆಳೆದಿದ್ದಾರೆ. ಜಿಎಸ್‌ಎಸ್ ಅವರ ವ್ಯಕ್ತಿತ್ವವು ಇತರರೊಳಗಿನ ಸೃಜನಶೀಲತೆ ಮತ್ತು ಚಿಂತನಾ ಸಾಮರ್ಥ್ಯವನ್ನು ಬೆಳಗಿಸುವ ಶಕ್ತಿಯನ್ನು ಹೊಂದಿತ್ತು ಎಂದು ವಿವರಿಸಿದರು.

ಬಸವರಾಜ ಕಲ್ಗುಡಿ ಮಾತನಾಡಿ, ವೈಚಾರಿಕತೆ ಮತ್ತು ಮಾನವೀಯತೆಯ ಕುರಿತ ಪಠ್ಯವನ್ನು ಜಿಎಸ್‌ಎಸ್ ರೂಪಿಸಲು ಕಾರಣ ಅವರ ಬದುಕೇ ಆ ಮೌಲ್ಯಗಳಿಗೆ ಸಾಕ್ಷಿಯಾಗಿದ್ದದ್ದು. ಜನಪದ ಮತ್ತು ಲಿಖಿತ ಸಾಹಿತ್ಯದ ನಡುವಿನ ವ್ಯತ್ಯಾಸ, ಸಾಹಿತ್ಯದ ಭಾಷೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯ ಹಾಗೂ ಸಾಹಿತ್ಯ ಚರಿತ್ರೆಯ ಬದಲಾಗುತ್ತಿರುವ ಪರಿಕಲ್ಪನೆಗಳ ಕುರಿತು ಜಿಎಸ್‌ಎಸ್ ಅವರ ಚಿಂತನೆಗಳು ಅಗಾಧ. ಸಾಹಿತ್ಯವನ್ನು ಓದುವುದು ಎಂದರೆ ಕೇವಲ ಅದರ ಭಾವವನ್ನು ಗ್ರಹಿಸುವುದಲ್ಲ, ಅದರ ಭಾಷೆ, ರಚನೆ ಮತ್ತು ಅರ್ಥದ ಪದರಗಳನ್ನು ಅರ್ಥಮಾಡಿಕೊಳ್ಳುವುದೂ ಮುಖ್ಯ. ಬೋಧನೆಗೆ ಶಿಕ್ಷಕರು ಆಳವಾದ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ನಿಲುವನ್ನು ಜಿಎಸ್‌ಎಸ್ ಅವರು ತಮ್ಮ ಪಠ್ಯಗಳ ಮೂಲಕ ತೋರಿಸಿಕೊಟ್ಟಿದ್ದರು‌. ಸಾಹಿತ್ಯ ಚರಿತ್ರೆಯನ್ನು ನಿರ್ದಿಷ್ಟ ಕಾಲಘಟ್ಟದ ನಿಯಮಗಳಿಗೆ ಸೀಮಿತಗೊಳಿಸಿ ನೋಡುವ ದೃಷ್ಟಿಕೋನ ಬದಲಾಗಿದ್ದು, ಓದುಗರಿಗೆ ಪ್ರಸ್ತುತವಾಗಿರುವ ಶ್ರೇಷ್ಠ ಪದಗಳು ಮತ್ತು ಕೃತಿಗಳೇ ದೀರ್ಘಕಾಲ ಉಳಿಯುತ್ತವೆ ಎಂದು ಸ್ಮರಿಸಿದರು.

ಕನ್ನಡದ ಹಿರಿಯ ಕವಿ ಓಎಲ್ಎನ್ ಮಾತನಾಡಿ, ಕನ್ನಡದ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಜಿಎಸ್‌ಎಸ್ ಅವರ ಚಿಂತನೆಗಳು ಹೆಚ್ಚು ಪ್ರಸ್ತುತವಾಗುತ್ತವೆ. ಕನ್ನಡದ ಮೂಲಕ ತಮ್ಮ ಅಸ್ತಿತ್ವವನ್ನು ರೂಪಿಸಿಕೊಂಡು, ತಮ್ಮ ಮೂಲಕ ಕನ್ನಡದ ಲೋಕವನ್ನು ವಿಸ್ತರಿಸಿದವರು ಅವರು. ಪ್ರತಿಯೊಂದು ವಿಚಾರವನ್ನೂ ಕನ್ನಡದಲ್ಲಿ ಹೇಗೆ ಅಭಿವ್ಯಕ್ತಿಸಬಹುದು ಎಂಬುದರ ಬಗ್ಗೆ ಅವರು ನಿರಂತರವಾಗಿ ಯೋಚಿಸುತ್ತಿದ್ದರು. ಕನ್ನಡವು ಅನ್ನದ ಭಾಷೆಯಾಗಿ, ಬದುಕಿನ ಭಾಷೆಯಾಗಿ ರೂಪುಗೊಳ್ಳಬೇಕಾದ ಅಗತ್ಯವಿದೆ. ಕನ್ನಡದ ಮೂಲಕವೇ ಜ್ಞಾನ, ಚಿಂತನೆ ಮತ್ತು ಬದುಕಿನ ಸಾಧ್ಯತೆಗಳನ್ನು ವಿಸ್ತರಿಸಬೇಕಾದ ಇಂದಿನ ಸಂದರ್ಭದಲ್ಲಿ ಜಿಎಸ್‌ಎಸ್ ಅವರ ದಾರಿ ನಮಗೆ ಮಾರ್ಗದರ್ಶಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಕರೀಗೌಡ ಬೀಚನಹಳ್ಳಿ ಅವರು ಮಾತನಾಡಿ, ಪ್ರಸಾರಾಂಗದಲ್ಲಿ ತಮಗೆ ಕೆಲಸ ದೊರೆಯಲು ಜಿಎಸ್‌ಎಸ್ ಅವರು ಕಾರಣರಾಗಿದ್ದರು. ಜಿಎಸ್‌ಎಸ್ ಅವರು ತಮ್ಮ ಸಂಪರ್ಕಕ್ಕೆ ಬಂದವರಿಗೆ ಜಾತಿ ಮತ್ತು ಧರ್ಮಗಳ ಎಲ್ಲೆಗಳನ್ನು ಮೀರಿ ಬದುಕುವ ಮೌಲ್ಯಗಳನ್ನು ಕಲಿಸಿದವರು. ಅವರ ವ್ಯಕ್ತಿತ್ವವು ಮಾನವೀಯತೆ, ಸಮಾನತೆ ಮತ್ತು ಸೌಹಾರ್ದದ ನೆಲೆಗಳನ್ನು ಹೊಂದಿತ್ತು ಎಂದು ಸ್ಮರಿಸಿದರು.

ಡಾ. ಎಂ.ಎಸ್. ಆಶಾದೇವಿ ಮಾತನಾಡಿ, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಶಿಕ್ಷಕರು ಇಂದಿಗೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಜಿಎಸ್‌ಎಸ್ ಮತ್ತು ಎಂ.ಎಂ. ಕಲಬುರ್ಗಿ ಅವರು ಕನ್ನಡದ ಲೋಕವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಚಿಂತಿಸುತ್ತಿದ್ದರು. ಜಿಎಸ್‌ಎಸ್ ಅವರ ನಾಯಕತ್ವದಲ್ಲಿ ರೂಪುಗೊಂಡ ಪಠ್ಯಗಳ ಮೇಲೆ ಶರಣರ ಚಿಂತನೆಗಳು ಮತ್ತು ಕುವೆಂಪು ಅವರ ವಿಚಾರಧಾರೆಗಳ ಪ್ರಭಾವ ಗಾಢವಾಗಿತ್ತು. ಇಂದಿನ ಸಮಾಜವನ್ನು ವಿವಿಧ ನೆಲೆಗಳಲ್ಲಿ ಕಾಡುತ್ತಿರುವ ಸಮಸ್ಯೆಗಳ ನಡುವೆ ಜಿಎಸ್‌ಎಸ್ ಅವರು ಹಚ್ಚಿದ ಪ್ರೀತಿ ಮತ್ತು ಸೌಹಾರ್ದದ ಹಣತೆಯನ್ನು ಎಲ್ಲರೂ ಪಡೆದುಕೊಳ್ಳಬೇಕಿದೆ ಎಂದರು.

ಡಾ. ಸುಮಿತ್ರ ಮಾತನಾಡಿ, ಜಿಎಸ್‌ಎಸ್ ಅವರ ಸಮಗ್ರ ಗದ್ಯ ಕೃತಿಗಳು ಕನ್ನಡ ಸಾಹಿತ್ಯವನ್ನು ಹೇಗೆ ಓದಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಕಲಿಸಿಕೊಟ್ಟವು. ಅವರ ವಿಮರ್ಶಾ ಬರಹಗಳಲ್ಲಿ ಬಳಸಿದ ಸರಳವಾದ ಭಾಷೆ ತಮ್ಮನ್ನು ಆಕರ್ಷಿಸಿತ್ತು. ಗಂಭೀರವಾದ ಸಾಹಿತ್ಯಿಕ ವಿಚಾರಗಳನ್ನು ಸರಳವಾಗಿ ಓದುಗರಿಗೆ ತಲುಪಿಸುವ ಅವರ ಸಾಮರ್ಥ್ಯ ವಿಶೇಷವಾಗಿತ್ತು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಶಿವಮೊಗ್ಗ | ವಿ. ಸೋಮಣ್ಣ ಕಾರು ಅಡ್ಡಗಟ್ಟಿ ಕಪ್ಪು ಬಟ್ಟೆ ಪ್ರದರ್ಶನ; ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ FIR!

ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಕಾರ್ಯರೂಪಕ್ಕೆ ಇಳಿಸಿದವರಲ್ಲಿ ಜಿಎಸ್‌ಎಸ್ ಪ್ರಮುಖರು. “ಪದ್ಯಕ್ಕಿಂತ ದೊಡ್ಡದಲ್ಲವೇ ಬದುಕು?” ಎನ್ನುವ ಮೂಲಕ ಸಾಹಿತ್ಯಕ್ಕಿಂತಲೂ ವಿಶಾಲವಾದ ಮಾನವ ಬದುಕಿನ ಮೌಲ್ಯಗಳನ್ನು ಅವರು ಎತ್ತಿಹಿಡಿದಿದ್ದರು. ಸಿದ್ದಲಿಂಗಯ್ಯ ಅವರ ಕವಿತೆಗಳನ್ನು ಅಂದಿನ ಕೆಲವು ಸಂಪ್ರದಾಯಬದ್ಧ ಮನಸ್ಸುಗಳು ಒಪ್ಪಿಕೊಳ್ಳದಿದ್ದರೂ, ಅವರನ್ನು ಪ್ರೋತ್ಸಾಹಿಸಿ, ಸಾಹಿತ್ಯಿಕವಾಗಿ ಬೆಳೆಯಲು ಅವಕಾಶಗಳನ್ನು ಕಲ್ಪಿಸಿದವರು ಜಿಎಸ್‌ಎಸ್ ಹೊಸ ಧ್ವನಿಗಳಿಗೆ ವೇದಿಕೆ ಕಲ್ಪಿಸುವ ಅವರ ಗುಣವನ್ನು ಇದು ತೋರಿಸುತ್ತದೆ. ಕುವೆಂಪು ಅವರ ಪರಂಪರೆಯಿಂದ ಪ್ರೇರಣೆ ಪಡೆದಿದ್ದ ಜಿಎಸ್‌ಎಸ್ ಅವರು ತಮ್ಮ ವಿಶಿಷ್ಟ ಬೋಧನಾ ಶೈಲಿ ಮತ್ತು ಆಕರ್ಷಕ ನಿರೂಪಣೆಯ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದರು. ಅವರ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಉತ್ಸುಕರಾಗಿರುತ್ತಿದ್ದರು. ಜಿಎಸ್‌ಎಸ್ ಅವರ ಶಿಸ್ತಿನ ಬದುಕನ್ನು ಸ್ಮರಿಸಿದ ಅವರು, ಅವರ ಮಗ ಜಯದೇವ್ ಹೇಳಿದ್ದ ಘಟನೆಯೊಂದನ್ನು ಹೇಳುವುದಾದರೆ, ಜಿಎಸ್‌ಎಸ್ ಅವರು ಶೇವಿಂಗ್ ಬ್ಲೇಡ್ ಬಳಸುವಾಗಲೂ ದಿನಾಂಕವನ್ನು ಬರೆದು ಇಡುತ್ತಿದ್ದರಂತೆ. ಸಣ್ಣ ಸಂಗತಿಗಳಲ್ಲಿಯೂ ಶಿಸ್ತನ್ನು ಪಾಲಿಸುತ್ತಿದ್ದ ಅವರ ಗುಣವೇ ದೊಡ್ಡ ಸಂಸ್ಥೆಗಳನ್ನು ಕಟ್ಟಲು ಅಗತ್ಯವಾದ ಬದ್ಧತೆಯನ್ನು ರೂಪಿಸಿತ್ತು. ಶಿಕ್ಷಣವನ್ನು ತರಗತಿಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸದೆ, ಬದುಕಿನ ಅನುಭವಗಳ ಮೂಲಕ ಕಲಿಸುವ ವಾತಾವರಣವನ್ನು ಅವರು ನಿರ್ಮಿಸಿದ್ದರು. ವಿದ್ಯಾರ್ಥಿಗಳಿಗೆ ಸ್ನೇಹಪರ ವಾತಾವರಣ ಕಲ್ಪಿಸಿ, ಅವರ ಚಿಂತನೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದದ್ದು ಜಿಎಸ್‌ಎಸ್ ಅವರ ವಿಶೇಷತೆಯಾಗಿತ್ತು ಎಂದು ಅಭಿಪ್ರಾಯಪಟ್ಟರು.

ಚಂದ್ರಶೇಖರ್ ನಂಗಲಿ ಜಿಎಸ್‌ಎಸ್ ಅವರನ್ನು ನುಡಿದಂತೆ ನಡೆಯುತ್ತಿದ್ದ ಶರಣ ವ್ಯಕ್ತಿತ್ವದವರು ಎಂದು ಬಣ್ಣಿಸಿದರು. ಅವರ ನಡೆ ಮತ್ತು ನುಡಿಗಳ ನಡುವೆ ಯಾವುದೇ ಬಿರುಕಿರಲಿಲ್ಲ. ಅವರು ಪ್ರತಿಪಾದಿಸಿದ ಮೌಲ್ಯಗಳು ಕೇವಲ ಬರಹ ಅಥವಾ ಭಾಷಣಗಳಿಗೆ ಸೀಮಿತವಾಗಿರಲಿಲ್ಲ. ತಮ್ಮ ಬದುಕಿನಲ್ಲಿಯೂ ಅವುಗಳನ್ನು ಅಳವಡಿಸಿಕೊಂಡಿದ್ದರು ಎಂಬುದನ್ನು ಈ ಮಾತುಗಳು ಎತ್ತಿಹಿಡಿದವು.

ಒಟ್ಟಿನಲ್ಲಿ, ‘ಹಣತೆಯಿಂದ ಹಣತೆಗೆ’ ಸಂವಾದವು ಜಿಎಸ್‌ಎಸ್ ಅವರ ಸಾಹಿತ್ಯಿಕ ಸಾಧನೆಗಳನ್ನು ಮಾತ್ರವಲ್ಲದೆ, ಅವರ ಶಿಸ್ತು, ಮಾನವೀಯತೆ, ಜಾತ್ಯತೀತ ನಿಲುವು, ಬೋಧನಾ ಕ್ರಮ ಮತ್ತು ಹೊಸ ತಲೆಮಾರುಗಳನ್ನು ರೂಪಿಸಿದ ಗುರುತ್ವವನ್ನು ಸ್ಮರಿಸುವ ವೇದಿಕೆಯಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದಲ್ಲಿ ಮೊಹಮ್ಮದ್ ಯೂನಸ್‌ಗೆ ‘ಉಗ್ರ’ ಎಂದ ಪ್ರತಿಭಟನಾಕಾರರು: ಕಠಿಣ ಕ್ರಮಕ್ಕೆ ಮುಂದಾದ ಬಾಂಗ್ಲಾ

ಬಾಂಗ್ಲಾದೇಶದ ಮಾಜಿ ಮುಖ್ಯ ಸಲಹೆಗಾರರಾದ ಮೊಹಮ್ಮದ್ ಯೂನಸ್ ಅವರಿಗೆ ಅಮೆರಿಕದ ...

ಬೇಡ್ತಿ ನದಿ ತಿರುವು ಯೋಜನೆಯೂ, ಬೊಮ್ಮಾಯಿ-ಕಾಗೇರಿ ಪೀಕಲಾಟವೂ

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದಕ್ಕಿದ್ದಂತೆಯೇ ಬೇಡ್ತಿ-ವರದಾ ಮತ್ತು...

ಗ್ಯಾನೇಶ್‌ ಕುಮಾರ್ ಗಂಡಾಂತರ – ಪಾರಾಗುವರೇ ಮೋದಿ?

1975ರಲ್ಲಿ ಇಸ್ರೇಲ್‌ ಪ್ರವಾಸದಲ್ಲಿದ್ದ ಅಂದಿನ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್,...