ಶಿವಮೊಗ್ಗ | ವಿ. ಸೋಮಣ್ಣ ಕಾರು ಅಡ್ಡಗಟ್ಟಿ ಕಪ್ಪು ಬಟ್ಟೆ ಪ್ರದರ್ಶನ; ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ FIR!

Date:

SIR ವಿರೋಧಿಸಿ ಶಿವಮೊಗ್ಗ ನಗರದ ಬಿ.ಎಚ್. ರಸ್ತೆಯಲ್ಲಿ ಸೋಮವಾರ, ಅಕ್ಟೋಬರ್ 12, 2026 ರಂದು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರ ಕಾರನ್ನು ತಡೆದು ಕಪ್ಪು ಬಟ್ಟೆ ಪ್ರದರ್ಶಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

ನಗರದ ಪಾರೇಖಾ ವಿನಾಯಕ ಮಾಲ್‌ನಲ್ಲಿರುವ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಬಟ್ಟೆ ಅಂಗಡಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವರು ಆಗಮಿಸುತ್ತಿದ್ದ ವೇಳೆ, ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಸತೀಶ್ ಟ್ರಾವೆಲ್ಸ್ ಮುಂಭಾಗ ಈ ಘಟನೆ ನಡೆದಿದೆ. ಚರಣ್ ಬೊಮ್ಮನಕಟ್ಟೆ, ಗಿರೀಶ್, ಬಾಲಾಜಿ ಸೇರಿದಂತೆ 18 ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಇತರೆ 5-6 ಜನ ಗುಂಪು ಸೇರಿ, ಕಾನೂನುಬಹಿರವಾಗಿ ಸಚಿವರ ಕಾರಿಗೆ ಅಡ್ಡಬಂದು ದಿಕ್ಕಾರ ಕೂಗಿ ಸಾರ್ವಜನಿಕ ಶಾಂತಿಭಂಗ ಉಂಟುಮಾಡಿದ್ದಾರೆ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯ ಎಎಸ್‌ಐ ಸೈಯದ್ ಇಮ್ರಾನ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಹೆಸರಿಗಷ್ಟೇ; ಇಂದಿಗೂ ಅಧಿಕಾರ...

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿಯ ಮೂಲಕ ಅನೇಕ ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ. ಆದರೂ ಕೆಲವು ಕಡೆ ಮಹಿಳಾ ಪ್ರತಿನಿಧಿಗಳ ಬದಲಿಗೆ ಅವರ ಪತಿ, ತಂದೆ, ಸಹೋದರ ಅಥವಾ ಕುಟುಂಬದ ಇತರ ಪುರುಷರು ಆಡಳಿತದಲ್ಲಿ ಹಸ್ತಕ್ಷೇಪ...

ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ

ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ. ಅಕ್ಟೋಬರ್ 10ರಂದು ದೆಹಲಿಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

ಜೊತೆಗೆ, ಗಣ್ಯ ವ್ಯಕ್ತಿಗಳ ಭೇಟಿಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಯಾವುದೇ ಮುನ್ಸೂಚನೆ ನೀಡದೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಪಾರೇಖಾ ವಿನಾಯಕ ಮಾಲ್‌ನ ಬಟ್ಟೆ ಅಂಗಡಿಯ ವ್ಯವಸ್ಥಾಪಕರ (ಮ್ಯಾನೇಜರ್) ವಿರುದ್ಧವೂ ದೂರಿನಲ್ಲಿ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ: ಗಾಂಧಿನಗರದಲ್ಲಿ ಬಿಜೆಪಿಗೆ ಜಯ, ಕಾಂಗ್ರೆಸ್‌ ಚೇತರಿಕೆ

ಗುಜರಾತ್‌ನ ಪ್ರತಿಷ್ಠಿತ ಗಾಂಧಿನಗರ ಮಹಾನಗರ ಪಾಲಿಕೆ (ಜಿಎಂಸಿ) ಸೇರಿದಂತೆ ವಿವಿಧ ನಗರ...

ಮಸ್ಕ್‌ ಸ್ಟಾರ್‌ಲಿಂಕ್‌ ವಿವಾದ | ಭಾರತದಲ್ಲಿ ಅನುಮತಿ ನೀಡದಂತೆ ಕೇಂದ್ರಕ್ಕೆ RSS ನಂಟಿನ SJM ಒತ್ತಾಯ

ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಭಾರತದಲ್ಲಿ...

ನಿಖಿಲ್ ಕುಮಾರಸ್ವಾಮಿ ವೈಯಕ್ತಿಕ ಸಾಧನೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಿ: ಎಂ.ಎಸ್ ಶಿವಕುಮಾರ್

ಭಾರತ್ ಜೋಡೋ ಯಾತ್ರೆ, ಪಾದಯಾತ್ರೆ ಹಾಗೂ ಚುನಾಯಿತ ಪ್ರತಿನಿಧಿಗಳ ಕುರಿತು ಹೇಳಿಕೆ...