ಒಳಮೀಸಲಾತಿ | ಬರಿಗೈಯಲ್ಲಿ ಮನೆಗೆ ಮರಳುವ ಮಾತೇ ಇಲ್ಲ: ಸಿಎಂ ಸಭೆ ಮುನ್ನವೇ ಅಲೆಮಾರಿಗಳ ಪ್ರತಿಜ್ಞೆ

Date:

ಶುಕ್ರವಾರ (ಅ.31) 5.22 ಲಕ್ಷ ಅಸ್ಪೃಷ್ಯ ಅಲೆಮಾರಿ ಸಮುದಾಯಗಳ ಭವಿಷ್ಯ ನಿರ್ಧಾರವಾಗಲಿದೆ. 12 ಗಂಟೆಗೆ ಮುಖ್ಯಮಂತ್ರಿಗಳು ಮತ್ತು ಮಂತ್ರಿಮಂಡಲದ ಜೊತೆ ಅಲೆಮಾರಿ ಸಮುದಾಯದ ಮಾತುಕತೆ ಸಭೆ ನಡೆಯಲಿದ್ದು, ಸರ್ಕಾರ ಏನು ತೀರ್ಮಾನ ಕೈಗೊಳ್ಳಲಿದೆ ಎಂಬುದರ ಸುತ್ತ ಕುತೂಹಲ ಮೂಡಿದೆ.

- Advertisement -

ಬೆಳಿಗ್ಗೆ 9 ಗಂಟೆಯಿಂದ ಫ್ರೀಡಂ ಪಾರ್ಕಿನಲ್ಲಿ ಅಲೆಮಾರಿ ಸಮುದಾಯಗಳಿಂದ ‘ನಿರ್ಣಾಯಕ ಸತ್ಯಾಗ್ರಹ’ ಹಮ್ಮಿಕೊಳ್ಳಲಾಗಿದೆ. “ನಮಗೆ ಭಿಕ್ಷೆ ಬೇಡ – ನಮ್ಮ ಹಕ್ಕು ಬೇಕು” ಎಂದು ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ ಈಗಾಗಲೇ ಸ್ಪಷ್ಟಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

“ಬರಿಗೈಯಲ್ಲಿ ಮನೆಗೆ ಮರಳುವ ಮಾತೇ ಇಲ್ಲ. ನಾಳೆ ಸಂತಸ ಅಥವಾ ಸಂಘರ್ಷ. ಎರಡಕ್ಕೂ ನಾವು ಸಿದ್ಧ”ಒಕ್ಕೂಟದ ಸ್ಪಷ್ಟ ನಿಲುವು ತಾಳಿದೆ. ಹೀಗಾಗಿ ಶುಕ್ರವಾರ ಸಭೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ ಹೇಳುವುದೇನು?

ಒಳ ಮೀಸಲಾತಿ ಹಂಚಿಕೆಯ ವಿಚಾರದಲ್ಲಿ ಆಗಸ್ಟ್ 19, 2025 ರಂದು ನಡೆದ ಕ್ಯಾಬಿನೆಟ್ ಸಭೆ, ಅಲೆಮಾರಿಗಳಿಗೆ ಮಾಡಿದ ಘೋರ ಅನ್ಯಾಯದ ಬಗ್ಗೆ ಇಂದು ಇಡೀ ರಾಜ್ಯಕ್ಕೆ ಗೊತ್ತಿದೆ. ಸ್ವಯಂ ಮುಖ್ಯಮಂತ್ರಿಗಳೇ ಅದನ್ನು ಒಪ್ಪಿಕೊಂಡಿದ್ದಾರೆ. ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಕನಿಷ್ಟ ಮಟ್ಟದ ಉದ್ಯೋಗ, ಶಿಕ್ಷಣದ ಮಾತಿರಲಿ, ಸುರಕ್ಷಿತವಾಗಿ ಬಾಳುವಂತಹ ನೆಲೆಯೂ ಇಲ್ಲದೆ ಬದುಕುತ್ತಿರುವ ಸಮುದಾಯ ನಮ್ಮದಾಗಿದೆ. ಡಾ. ನಾಗಮೋಹನ್ ದಾಸ್ ಅವರು ʼಅತ್ಯಂತ ಹಿಂದುಳಿದ ಜಾತಿಗಳುʼ ಎಂದು ವರ್ಗೀಕರಿಸಿರುವ ನಮ್ಮನ್ನು ಪರಿಶಿಷ್ಟ ಜಾತಿಗಳ ಪೈಕಿಯೇ ಸಾಪೇಕ್ಷವಾಗಿ ಮುಂದುವರೆದಿರುವ ಸಮುದಾಯಗಳ ಗುಂಪಿನಲ್ಲಿ ಸೇರಿಸುವ ಮೂಲಕ ನಮಗೆ ಅನ್ಯಾಯವೆಸಗಲಾಗಿದೆ. ಓಟು ರಾಜಕೀಯದ ಲೆಕ್ಕಾಚಾರ ಸಾಮಾಜಿಕ ನ್ಯಾಯವನ್ನು ಹಾಡುಹಗಲು ಕೊಲೆ ಮಾಡಿದೆ.

ಈ ಅನ್ಯಾಯವನ್ನು ಪ್ರತಿಭಟಿಸಿ ಆಗಸ್ಟ್ 20 ರಿಂದಲೇ ಅಲೆಮಾರಿ ಸಮುದಾಯಗಳೆಲ್ಲವೂ ಕೂಡಿ ಸತತ ಹೋರಾಟ ನಡೆಸುತ್ತಾ ಬಂದಿದ್ದೇವೆ. ಸೆಪ್ಟೆಂಬರ್ 3 ರಂದು ಫ್ರೀಡಂ ಪಾರ್ಕಿನಲ್ಲಿ 15 ಸಾವಿರ ಅಲೆಮಾರಿಗಳ “ಸಂಕಲ್ಪ ಸಮಾವೇಶ” ಮಾಡಿದೆವು. ಆದರೆ ನಮ್ಮ ಬಳಿ ಮನವಿ ಪತ್ರ ಸ್ವೀಕರಿಸಲೂ ಯಾರನ್ನೂ ಕಳಿಸದೆ ಕರ್ನಾಟಕ ಸರ್ಕಾರ ನಮ್ಮನ್ನು ಉಪೇಕ್ಷಿಸಿತು, ಅವಮಾನಿಸಿತು. ಈ ಸ್ಥಿತಿಯಲ್ಲಿ ಹೈಕಮಾಂಡ್ ಬಾಗಿಲು ತಟ್ಟುವ ಗುರಿಯೊಂದಿಗೆ ಅಕ್ಟೋಬರ್ 2ಕ್ಕೆ 600 ಜನ ಪ್ರತಿನಿಧಿಗಳು ದೆಹಲಿಗೆ ಹೋದೆವು. ಜಂತರ್ ಮಂತರಿನಲ್ಲಿ ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ಪ್ರತಿಭಟಿಸಿದೆವು. ಎಐಸಿಸಿ ಕಛೇರಿಗೂ ಮೆರವಣಿಗೆ ಹೋದೆವು. ರಾಹುಲ್ ಗಾಂಧಿ ಬಂದೊಡನೆ ಸಮಸ್ಯೆ ಬಗೆಹರಿಸುತ್ತೇವೆ ಎಂಬ ಉತ್ತರ ಬಂದಿದ್ದರಿಂದ, ವಾಪಾಸ್ ಬರದೆ ಅಕ್ಟೋಬರ್ 15ರ ತನಕ ದೆಹಲಿಯಲ್ಲೇ ಉಳಿದು ಎಐಸಿಸಿ ಕಛೇರಿಯಲ್ಲಿ ನಿರಂತರ ಧರಣಿ ನಡೆಸಿದೆವು. ಅಕ್ಟೋಬರ್ 15 ರಂದು ಬಿ.ಕೆ. ಹರಿಪ್ರಸಾದ್ ಅವರ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದು ಕರ್ನಾಟಕದಿಂದ ಕರೆಮಾಡಿದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪನವರು “ದಯವಿಟ್ಟು ವಾಪಾಸ್ ಬನ್ನಿ. ಇಲ್ಲೇ ಕೂತು ಬಗೆಹರಿಸಿಕೊಳ್ಳೋಣ” ಎಂದು ಕೋರಿದರು. ಹೈಕಮಾಂಡಿನ ಹಾಗೂ ಕರ್ನಾಟಕ ಸರ್ಕಾರದ ಮಾತಿನ ಮೇಲೆ ಮತ್ತೊಮ್ಮೆ ವಿಶ್ವಾಸವಿಟ್ಟು ನಾವು ವಾಪಾಸ್ ಬಂದು ಫ್ರೀಡಂ ಪಾರ್ಕಿನಲ್ಲಿ ಧರಣಿ ಮುಂದುವರಿಸಿದ್ದೇವೆ. ಈಗ ಮುಖ್ಯಮಂತ್ರಿಗಳು ಸಮಸ್ಯೆಯ ಪರಿಹಾರಕ್ಕಾಗಿ ಸಭೆ ಕರೆದಿದ್ದಾರೆ.

ಈ ಆಹ್ವಾನಕ್ಕಾಗಿ ಮುಖ್ಯಮಂತ್ರಿಗಳಿಗೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ ಮತ್ತು ನಾಳೆ ಉತ್ತವ ಫಲಿತಾಂಶ ಹೊರಬರಬಹುದು ಎಂಬ ಆಶಾಭಾವನೆ ಇಟ್ಟುಕೊಂಡಿದ್ದೇವೆ. ಆದರೆ ಮನದೊಳಗಿನ ಆತಂಕ ಇದ್ದೇ ಇದೆ. ಸರ್ಕಾರ ಪ್ಯಾಕೇಜಿನ ಮಾತನಾಡಿ ಶೇ. 1 ಮೀಸಲಾತಿಯ ಕುರಿತು ಖಚಿತ ತೀರ್ಮಾನ ತೆಗೆದುಕೊಳ್ಳದೇಹೋಗಬಹುದು ಎಂಬ ಆತಂಕ ಇದ್ದೇ ಇದೆ. ಹಾಗಾಗಿ ಈ ಮಾಧ್ಯಮ ಹೇಳಿಕೆಯ ಮೂಲಕ ಸರ್ಕಾರಕ್ಕೆ ಒಂದು ಮಾತನ್ನು ಸ್ಪಷ್ಟಪಡಿಸಬಯುಸುತ್ತೇವೆ. ಶೇ. 1 ಪ್ರತ್ಯೇಕ ಮೀಸಲಾತಿಯನ್ನು ಎ ಕೆಟಗರಿಯಲ್ಲಿ ನೀವು ಕಲ್ಪಿಸಿ, ಅದರ ಜೊತೆ ಪ್ಯಾಕೇಜ್ ನೀಡಿದಲ್ಲಿ ಅದು ನಮಗೆ ಸಿಗುವ ನ್ಯಾಯ ಮತ್ತು ಮನ್ನಣೆಯಾಗುತ್ತದೆ. ಆದರೆ ಶೇ. 1 ರ ಪ್ರತ್ಯೇಕ ಮೀಸಲಾತಿಗೆ ಒಪ್ಪದೆ ಕೇವಲ ಪ್ಯಾಕೇಜ್ ಕೊಡಲು ಮುಂದೆ ಬಂದರೆ ಅದು ನಮ್ಮ ಪಾಲಿಗೆ ಬಿಕ್ಷೆಯಾಗಿರುತ್ತದೆ. ನಮ್ಮ ಸಮುದಾಯ ಶತಮಾನಗಟ್ಟಲೆ ಬಿಕ್ಷೆ ಬೇಡಿ ಬದುಕಿದೆ ನಿಜ. ಆದರೆ ನಾವಿಂದು ಯಾವುದೇ ರೀತಿಯ ಬಿಕ್ಷೆ ಪಡೆಯಲು ಸಿದ್ದರಿಲ್ಲ. ನಮಗೆ ನಮ್ಮ ನ್ಯಾಯಸಮ್ಮತ ಹಕ್ಕಾದ ಶೇ. 1 ರ ಮೀಸಲಾತಿ ಬೇಕೇಬೇಕು. ಈ ವಿಚಾರದಲ್ಲಿ ನಾವು ಪ್ರಾಣಹೋದರೂ ರಾಜಿ ಮಾಡಿಕೊಳ್ಳುವುದಿಲ್ಲ.

ನಾಳೆ ಸರ್ಕಾರ ಈ ವಿಚಾರದಲ್ಲಿ ಖಚಿತ ತೀರ್ಮಾನ ಘೋಷಿಸಿದರೆ ಸರ್ಕಾರದ ತೀರ್ಮಾನವನ್ನು ಮನದಾಳದಿಂದ ಸ್ವಾಗತಿಸುತ್ತೇವೆ. ಸರ್ಕಾರವನ್ನು ಹಾರೈಸುತ್ತೇವೆ. ಫ್ರೀಡಂ ಪಾರ್ಕಿನ ಸತ್ಯಾಗ್ರಹವನ್ನು ಕೊನೆಗೊಳಿಸುತ್ತೇವೆ ಮತ್ತು ಹೈಕೋರ್ಟಿನಲ್ಲಿ ಹೂಡಿರುವ ದಾವೆಯನ್ನು ಹಿಂಪಡಿಯುತ್ತೇವೆ. ಒಂದು ವೇಳೆ ಸರ್ಕಾರ ನಮಗೆ ನಮ್ಮ 1% ಮೀಸಲಾತಿ ನೀಡಲು ಮುಂದಾಗದಿದ್ದಲ್ಲಿ ನಾಳೆಯೇ ತೀಕ್ಷ್ಣ ಸ್ವರೂಪದ ಹೋರಾಟಕ್ಕೆ ಇಳಿಯುತ್ತೇವೆ. ಆ ತೀಕ್ಷ್ಣ ಸ್ವರೂಪ ಏನಾಗಿರುತ್ತದೆ ಎಂಬುದನ್ನು ಮಾತುಕತೆಯ ನಂತರವೇ ಘೋಷಿಸಬೇಕು ಎಂದುಕೊಂಡಿದ್ದೇವೆ. ನಮ್ಮ ಈ ತೀಕ್ಷ್ಣ ನಿಲುವಿನಿಂದ ಸರ್ಕಾರ ಮುಜುಗರಕ್ಕೆ ಗುರಿಯಾದರೆ ನಮ್ಮನ್ನು ದೂಷಿಸಬಾರದೆಂದು ಈಗಲೇ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಿದ್ದೇವೆ.

ಆತಂಕ ಇರುವುದರಿಂದ ಈ ತೀರ್ಮಾನ ತೆಗೆದುಕೊಂಡಿದ್ದರೂ, ಆಶಾ ಭಾವನೆ ಜೊತೆ, ಶುದ್ಧ ಮನಸ್ಸಿನ ಜೊತೆ ನಾಳೆಯ ಮಾತುಕತೆಯಲ್ಲಿ ಭಾಗವಹಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಅಲೆಮಾರಿಗಳ ಭವಿಷ್ಯವನ್ನು ತೀರ್ಮಾನಿಸಲಿರುವ ಈ ಗಳಿಗೆಯಲ್ಲಿ ಕರ್ನಾಟಕದ ಮಾನವೀಯ ಮನಸ್ಸುಗಳ ಬೆಂಬಲ ನಮ್ಮೊಡನೆ ಇರಲಿ ಎಂದು ಕೈ ಒಕ್ಕೂಟ ಕೋರಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಮನುಷ್ಯಕೇಂದ್ರಿತ ವೈಜ್ಞಾನಿಕ ಚಿಂತನೆ ಅತ್ಯಗತ್ಯ: ಡಾ. ರಾಜಪ್ಪ ದಳವಾಯಿ

ಮನುಷ್ಯನಿಗಿಂತ ಧರ್ಮ, ದೇವರು, ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಮುಖ್ಯವಾಗುವ ಪರಿಸ್ಥಿತಿ...

ಹಾಸನ | ಭಗತ್ ಸಿಂಗ್ ಕೇವಲ ಕ್ರಾಂತಿಕಾರಿಯಲ್ಲದೆ ವೈಜ್ಞಾನಿಕ ಮನೋಭಾವ ಉಳ್ಳವರಾಗಿದ್ದರು: ಡಾ. ಎಚ್ ಆರ್ ಸ್ವಾಮಿ

ಭಗತ್ ಸಿಂಗ್ ಅವರನ್ನು ಕೇವಲ ಒಬ್ಬ ಕ್ರಾಂತಿಕಾರಿ ಅಥವಾ ಸ್ವಾತಂತ್ರ್ಯ ಹೋರಾಟಗಾರನಾಗಿ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...

‘ಕೊಂದವರು ಯಾರು?’ – ಧರ್ಮಸ್ಥಳದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅ.2ರಂದು ಬೃಹತ್ ವಿಚಾರ ಸಂಕಿರಣ

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ದಶಕಗಳಿಂದ ನಡೆದಿದೆ...