ಮಲೆನಾಡಿನ ಉಳಿವಿಗೆ ಬಂದೂಕು ಹಿಡಿದವರಿಗೆ ನಕ್ಸಲ್ ಎಂದರು! ಎಸ್ಟೇಟ್ ಮಾಲೀಕನ ಕೃತ್ಯಕ್ಕೆ ಏನೇಳಬೇಕು?

Date:

ಚಿಕ್ಕಮಗಳೂರು ತಾಲೂಕಿನ ಬಸಗೂಡು ಗ್ರಾಮದ ಬಸಗೋಡು ವ್ಯಾಪ್ತಿಯ ಬ್ರಹ್ಮಗಿರಿ ಕಾಫಿ ಎಸ್ಟೇಟ್ ನಲ್ಲಿ ಶುಕ್ರವಾರ ಎಸ್ಟೇಟ್ ಮಾಲೀಕನಿಂದ ಮಹಿಳೆ, ಕಾರ್ಮಿಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ ಖಂಡಿಸಿ ಕರ್ನಾಟಕ ಜನಶಕ್ತಿ ಹಾಗೂ ಪ್ರಗತಿಪರ ಸಂಘಟನೆಯ ಒಕ್ಕೂಟದಿಂದ ನಗರದ ಅಝದ್ ಪಾರ್ಕ್ ಬಳಿ ಪ್ರತಿಭಟನೆ ನಡೆಸಲಾಯಿತು.

- Advertisement -
Screenshot 2026 11 29 15 57 45 65 99c04817c0de5652397fc8b56c3b3817 1

ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ. ಎಲ್ ಅಶೋಕ್ ಮಾತನಾಡಿ,”ಜೀತ ಪದ್ಧತಿ ರೀತಿಯಲ್ಲಿ ಕಾರ್ಮಿಕರಿಗೆ ಹಾಗೂ ಮಹಿಳೆಯರಿಗೆ ಅವಾಚ್ಯ ಶಬ್ದ, ಜಾತಿ ನಿಂದಿಸಿ, ಹಲ್ಲೆ, ಜೀವ ಬೆದರಿಕೆ ಹಾಕಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಈ ಕೃತ್ಯ ಪಿಕ್ಚರ್ ನಲ್ಲಿ ನಡೆಸುವ ಹಾಗೆ ನಡೆಸಿಕೊಂಡಿದ್ದಾನೆ ಆರೋಪಿ ಭಾರತ್ ಗೌಡ, ಮಹಿಳೆಗೆ ತುಂಬ ಕೆಟ್ಟ ಪದಗಳಿಂದ ಬೈದಿದ್ದಾನೆ. ಕಾರ್ಮಿಕರನ್ನು ಗುಲಾಮರಂತೆ ವರ್ತಿಸಿದ್ದಾನೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಬರಿ ಪೇಪರ್ ಅಲ್ಲಿ ದಾಖಲಿಸುವುದಲ್ಲ ಆರೋಪಿಗಳನ್ನು ಬಂಧಿಸಿ ಗಡಿ ಪಾರು ಮಾಡಬೇಕು. ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಎಸ್. ಪಿ ಕಛೇರಿ ಎದುರು ಧರಣಿ ನಡೆಸುತ್ತೇವೆಂದು ಎಚ್ಚರಿಕೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷೇತ್ರ ಮರುವಿಂಗಡಣೆಯ ಹಿಂದಿರುವ ಬಲಪಂಥೀಯ ರಾಜಕಾರಣದ ಗುಪ್ತ ಕಾರ್ಯಸೂಚಿ

ಕ್ಷೇತ್ರ ಮರುವಿಂಗಡಣೆ ಕೇವಲ ಲೋಕಸಭಾ ಸ್ಥಾನಗಳ ಹೆಚ್ಚಳವಲ್ಲ; ಅದು ದೇಶದ ರಾಜಕೀಯ ಅಧಿಕಾರದ ಹಂಚಿಕೆ, ಒಕ್ಕೂಟ ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯದ ಭವಿಷ್ಯವನ್ನು ನಿರ್ಧರಿಸುವ ಪ್ರಕ್ರಿಯೆ. ಕ್ಷೇತ್ರಗಳ ಗಡಿ ಬದಲಾವಣೆಯಿಂದ ಅಹಿಂದ, ದಲಿತ,...

ಗುಳೇದಗುಡ್ಡ | ತಾಲೂಕಾಗಿ ಹತ್ತು ವರ್ಷ ಕಳೆದರೂ ಭೂ...

ಗುಳೇದಗುಡ್ಡ ತಾಲೂಕು ರಚೆನೆಯಾಗಿ ಹತ್ತು ವರ್ಷ ಕಳೆದಿದೆ. ತಾಲೂಕು ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳಿಗೆ ಸಂಬಂಧಿಸಿದ ಭೂದಾಖಲೆಗಳು ಬಾದಾಮಿ ತಹಸೀಲ್ದಾರ್ ಕಚೇರಿ ಮತ್ತು ಗದಗ ರಸ್ತೆಯ ಎಪಿಎಂಸಿ ಸಮೀಪದ ಕಚೇರಿಯಲ್ಲಿ ಸಂಗ್ರಹವಾಗಿವೆ....

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...
Screenshot 2026 11 29 16 00 05 59 99c04817c0de5652397fc8b56c3b3817 1

ತುಮಕೂರು ಜಿಲ್ಲೆಯಿಂದ ಎದ್ದೇಳು ಕರ್ನಾಟಕ ಸಂಘಟನೆಯ ಮುಖಂಡರಾದ ಇಂದಿರಮ್ಮ ಅವರು ಮಾತನಾಡಿ, “ಕೂಲಿ ಕೆಲಸಕ್ಕಾಗಿ ಬಂದಂತಹ ಮಹಿಳೆಯನ್ನು ಆ ಎಸ್ಟೇಟ್ ಮಾಲೀಕ ಹೀನಮಾನವಾಗಿ ನಡೆದುಕೊಂಡಿದ್ದಾನೆ. ನನ್ನ ಪಕ್ಕದಲ್ಲಿ ಮಲಗು ಎಂದು ಕೇಳಿದಕ್ಕೆ ಮಹಿಳೆಗೆ ಕೇಳಿದಾಗ ಚಪ್ಪಲಿ ತೋರಿಸಿದ್ದಾರೆ ಅದಕ್ಕೆ ಕೋವಿಯಿಂದ ಆ ದಲಿತ ಹೆಣ್ಣು ಮಗಳಿಗೆ ತಿವಿದಿದ್ದಾನೆ. ಅವನು ಅನ್ನ ತಿನ್ನುತ್ತಾನೋ ಅಥವಾ ಬೇರೆ ಏನೋ ತಿನ್ನುತ್ತಾನೋ ಗೊತ್ತಿಲ್ಲ. ಆ ಹೆಣ್ಣು ಮಗಳ ನೋವಿಗೆ ನಾವಿದ್ದೇವೆ ಸರಿಯಾಗಿ ಪೊಲೀಸ್ ಅಧಿಕಾರಿಗಳು ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

Screenshot 2026 11 29 16 57 55 62 7352322957d4404136654ef4adb64504

ಹಿರಿಯ ನಾಗರೀಕ ಕಾರ್ಮಿಕರ ಸಂಘದ ಭೀಮಯ್ಯ ಮಾತನಾಡಿ, ಈ ಘಟನೆ ನಡೆದದ್ದು ಎರಡು ದಿನ ಹಿಂದೆ ಆದರೇ ಅಧಿಕಾರಿಗಳು ಕೇಸನ್ನು ದಾಖಲಿಸಿರುವುದು ನೆನ್ನೆ ಎಂತಹ ವಿಪರ್ಯಾಸ, ಶಾಂತಿ ಪ್ರಿಯವಾಗಿರುವ ನಮ್ಮ ಜಿಲ್ಲೆಯಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಭರತ್ ಗೌಡ ಕೋವಿ ಹಿಡಿದುದನ್ನು ಯಾರು ಪ್ರಶ್ನೆ ಮಾಡಲಿಲ್ಲ, ಮಲೆನಾಡಿನ ಉಳಿವಿಗಾಗಿ ಬಂದೂಕು ಹಿಡಿದವರನ್ನು ನಕ್ಸಲರು ಎಂದರು, ಈ ಮಹಾನುಭಾವನಿಗೆ ಏನೂ ಹೇಳುತ್ತೀರಾ? ಕಾನೂನು ಪ್ರಕಾರ ಕಠಿಣ ಶಿಕ್ಷೆ ಆಗಬೇಕು ಇದಕ್ಕೆ ಸರಿಯಾದ ಸೆಕ್ಷನ್ ದಾಖಲಿಸಬೇಕು. ಯಾವುದೇ ಕಾರಣಕ್ಕೂ ಆರೋಪಿಗೆ ಜಾಮೀನು ಕೊಡಬಾರದು ಎಂದು ಹೇಳಿದರು. 

Screenshot 2026 11 29 17 30 12 78 99c04817c0de5652397fc8b56c3b3817

ಹಿಂದೂ ಮಹಿಳೆಗೆ ಆಗಿದ್ದರೆ ಎಷ್ಟೋತ್ತು ಸಂಘ ಪರಿವಾರ ಹಾಗೂ ಜನರು ಸುಮ್ನೆ ಇರ್ತಿದ್ರ, ದಲಿತ ಹೆಣ್ಣಿಗೆ ಅನ್ಯಾವಾಗಿದ್ದರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಆಡಳಿತ ಅಧಿಕಾರಿಗಳು ಎಷ್ಟರ ಮಟ್ಟಿಗೆ ಈ ದೌರ್ಜನ್ಯ ಹಾಗೂ ಕಿರುಕುಳಕ್ಕೆ ನ್ಯಾಯ ಕೊಡುತ್ತಾರೆ ನೋಡಬೇಕಿದೆ ಎಂದು SDPI ಮಹಿಳಾ ಮುಖಂಡರಾದ ಆಶಾ ಈದಿನ.ಕಾಮ್ ಗೆ ತಿಳಿಸಿದರು.

Screenshot 2026 11 29 17 33 20 62 99c04817c0de5652397fc8b56c3b3817

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಬಂದೂಕು ಹಿಡಿದು ಕಾರ್ಮಿಕರಿಗೆ ಜೀವ ಬೆದರಿಕೆ:ಆರೋಪಿಗಳನ್ನು ಗಡಿಪಾರು ಮಾಡಿ; ಕೆ.ಎಲ್ ಅಶೋಕ್ 

ಈ ಪ್ರತಿಭಟನೆಯಲ್ಲಿ ತರೀಕೆರೆ ರಾಜು, ತುಮಕೂರು ಜಿಲ್ಲೆಯ ಇಂದಿರಮ್ಮ, ಮುನ್ನ, ಗೌಸ್ ಮೋಹಿಯುದ್ದಿನ್, ಖಾಲಿದ್, ಸಂದೀಪ್, ಭೀಮಯ್ಯ, ದಿವಾಕರ್, ಚಂದ್ರು, ಪುಟ್ಟಸ್ವಾಮಿ, ಅಶೋಕ್, ಮಂಜು,ನದೀಮ್ ಪಾಷ, ಸುರೇಶ್ ಗಡಿಕಲ್ ಹಾಗೂ ಸಂಘಟನೆಯ ಮಹಿಳೆಯರು, ಪ್ರಗತಿಪರ ಸಂಘಟನೆ ಒಕ್ಕೂಟ ಉಪಸ್ಥಿತರಿದ್ದರು.

WhatsApp Image 2024 10 24 at 12.02.30
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರಿನಲ್ಲಿ ಮೂರು ಹೊಸ ಕನ್ನಡ ಕಿರುಚಿತ್ರಗಳಿಗೆ ಮುಹೂರ್ತ

ರೋಲಿಂಗ್ ಮೀಡಿಯಾ ಹೌಸ್, ಮೈಸೂರು ಫಿಲ್ಮ್ ಇನ್ಸ್ಟಿಟ್ಯೂಟ್ ಹಾಗೂ ಎಂ.ಟಿ.ಜಿ ಪ್ರೊಡಕ್ಷನ್ಸ್...

ಹಾವೇರಿ |ಕಬ್ಬಿನ ರಿಕವರಿಯಲ್ಲಿ ಮೋಸ ತಡೆಗಟ್ಟಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆಗೆ ಆಗ್ರಹ

ಹಾವೇರಿ ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳು ಸಕ್ಕರೆ ಪ್ರಮಾಣದ ಪರೀಕ್ಷೆ ಮಾಡುವ...

“ಮಂಡ್ಯ ಜಿಲ್ಲೆ । ಮದ್ದೂರಿನ ಕೊಲ್ಲಿ ವೃತ್ತದ ಬಳಿ ಹರಿಯುವ ಶಿಂಷಾ ನದಿ ಇಂದು ತನ್ನ ಅಸ್ತಿತ್ವಕ್ಕಾಗಿಯೇ ಹೋರಾಡುತ್ತಿದೆ.”

ಮಂಡ್ಯ ಜಿಲ್ಲೆ, ಮದ್ದೂರಿನ ಕೊಲ್ಲಿ ವೃತ್ತದ ಬಳಿ ಹರಿಯುವ, ಜೀವನದಿಯೆಂದೇ ಕರೆಯಿಸಿಕೊಳ್ಳುವ...

ಗುಳೇದಗುಡ್ಡ | ತಾಲೂಕಾಗಿ ಹತ್ತು ವರ್ಷ ಕಳೆದರೂ ಭೂ ದಾಖಲೆಗೆ ಬದಾಮಿಗೆ ಎಡತಾಕುತ್ತಿರುವ ರೈತರು!

ಗುಳೇದಗುಡ್ಡ ತಾಲೂಕು ರಚೆನೆಯಾಗಿ ಹತ್ತು ವರ್ಷ ಕಳೆದಿದೆ. ತಾಲೂಕು ವ್ಯಾಪ್ತಿಯ...