ಪವನ ಶಕ್ತಿಯಲ್ಲಿ ಕರ್ನಾಟಕ ಫಸ್ಟ್‌, 1331.48 ಮೆಗಾವ್ಯಾಟ್ ವಿದ್ಯುತ್‌ ಸಾಮರ್ಥ್ಯ

Date:

ಪವನ ವಿದ್ಯುತ್‌ ಉತ್ಪಾದನೆ ನವೀಕರಿಸಬಹುದಾದ ಇಂಧನ ವಲಯದ ಕೇಂದ್ರಬಿಂದುವಾಗಿದೆ. 1331.48 ಮೆಗಾವ್ಯಾಟ್ ಪವನ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಸಾಧಿಸಿದ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

- Advertisement -

ಬೆಂಗಳೂರಿನಲ್ಲಿ ನಡೆದ ʼಗ್ಲೋಬಲ್‌ ವಿಂಡ್‌ ಡೇʼ ಸಮ್ಮೇಳನ ಉದ್ದೇಶಿಸಿ ಮಾತನಾಡಿ, “ಪವನ ವಿದ್ಯುತ್‌ ಉತ್ಪಾದನೆಯಲ್ಲಿ ತಮಿಳುನಾಡು 1136.37 ಮೆಗಾವ್ಯಾಟ್ ಉತ್ಪಾದಿಸಿ ದ್ವಿತೀಯ ಮತ್ತು ಗುಜರಾತ್ 954.76 ಮೆಗಾವ್ಯಾಟ್ ಉತ್ಪಾದಿಸಿ ತೃತೀಯ ಸ್ಥಾನದಲ್ಲಿದ್ದು, ಭಾರತದ ನವೀಕರಿಸಬಹುದಾದ ಇಂಧನ ವಲಯದ ಕಾರ್ಯತಂತ್ರದ ಕೇಂದ್ರಬಿಂದುವಾಗಿವೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

“ಕೇಂದ್ರ ಸರ್ಕಾರ ನವೀಕರಿಸಬಹುದಾದ ಇಂಧನ ವಲಯಕ್ಕೆ ಪ್ರಮುಖ ಆದ್ಯತೆ ನೀಡಿದೆ. ಪ್ರಸಕ್ತ ವರ್ಷ ನವೀಕರಿಸಬಹುದಾದ ಇಂಧನ ಬಜೆಟ್ ಅನ್ನು ಶೇ.53ರಷ್ಟು ಹೆಚ್ಚಿಸಿದೆ. ₹26,549 ಕೋಟಿ ಬಜೆಟ್‌ಗೆ ಏರಿದೆ. ಇದರಲ್ಲಿ ಹೆಚ್ಚಿನ ಪಾಲು ಪವನ ವಿದ್ಯುತ್‌ ಉತ್ಪಾದನೆಗೆ ಮೀಸಲಿರಿಸಲಾಗಿದೆ” ಎಂದರು.

“ಭಾರತದ ಪವನ ವಿದ್ಯುತ್ ಸಾಮರ್ಥ್ಯ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಶೇ.10.5ಕ್ಕಿಂತ ಹೆಚ್ಚಾಗಿದ್ದು, 51.5 ಗಿಗಾವ್ಯಾಟ್‌ಗೆ ತಲುಪಿದೆ. ಇದರೊಂದಿಗೆ ದೇಶದ ನವೀಕರಿಸಬಹುದಾದ ಇಂಧನ ವಲಯ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ದೇಶದ ಸುಸ್ಥಿರ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಪ್ರತಿ ವರ್ಷ ಶೇ.17.13 ರಷ್ಟು ಹೆಚ್ಚಾಗುತ್ತಿದೆ. ಸದ್ಯ 226.74 ಗಿಗಾವ್ಯಾಟ್‌ ತಲುಪಿದೆ” ಎಂದು ಹೇಳಿದರು.‌

ಪವನ ವಿದ್ಯುತ್

“ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಅಗಾಧ ಸಾಧನೆಗೈಯ್ಯುತ್ತಿದೆ. ಜಾಗತಿಕವಾಗಿ 4ನೇ ಅತಿ ದೊಡ್ಡ ಪವನ ವಿದ್ಯುತ್ ಸ್ಥಾಪಿತ ಹಾಗೂ 3ನೇ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಪವನ ವಿದ್ಯುತ್‌ ಉತ್ಪಾದನೆ ಯೋಜನೆಯನ್ನು ಮಧ್ಯಪ್ರದೇಶ, ತೆಲಂಗಾಣ ಮತ್ತು ಒಡಿಶಾದಂತಹ ಹೊಸ ರಾಜ್ಯಗಳಿಗೂ ವಿಸ್ತರಿಸಲಾಗುವುದು. ಗುಜರಾತ್ ಮತ್ತು ತಮಿಳುನಾಡಿನಲ್ಲಿ 4GW ಉತ್ಪಾದನೆಗೆ ಸ್ಥಳ ಗುರುತಿಸಿ ಟೆಂಡರ್‌ ಸಿದ್ಧಪಡಿಸಲಾಗುತ್ತಿದೆ. ಪವನ ವಿದ್ಯುತ್‌ ಮತ್ತು ಹಸಿರು ವಿದ್ಯುತ್ ತಂತ್ರಗಳಲ್ಲಿ 24 ತಾಸೂ ಸಂಯೋಜಿಸಲಾಗಯತ್ತದೆ. ಗ್ರಿಡ್ ಆಧುನೀಕರಣ, ಸ್ಥಳೀಯವಾಗಿ ಪವನ ವಿದ್ಯುತ್‌ ಉತ್ಪಾದನೆ ಉತ್ತೇಜಿಸಲು ಪ್ರಮುಖ ಆದ್ಯತೆ ನೀಡಲಾಗುತ್ತಿದೆ” ಎಂದು ವಿವರಿಸಿದರು.

ಜಾಗತಿಕ ಉತ್ಪಾದನಾ ಹಬ್‌ ಆಗಲಿದೆ ಭಾರತ

“ಭಾರತದ ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಉತ್ಪಾದನಾ ಹಬ್‌ ಆಗುವಲ್ಲಿ ನವೀಕರಿಸಬಹುದಾದ ಇಂಧನ ವಲಯವೂ ಮಹತ್ತರ ಕೊಡುಗೆ ನೀಡಲಿದೆ. ದೇಶದ ಉತ್ಪಾದನಾ ವಲಯಕ್ಕೆ ಅಗತ್ಯ ಇಂಧನ ಬೇಡಿಕೆ ಪೂರೈಸುವಲ್ಲಿ ಸೌರ ಶಕ್ತಿ, ಪವನ ಶಕ್ತಿ, ಹಸಿರು ಇಂಧನ ಮೂಲಗಳಿಂದ ಸಾಧ್ಯವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ: ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗೆ ಅಧಿಕೃತ ಆಹ್ವಾನ

ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗೆ...

SIR ಎಂಬ ತಾಂತ್ರಿಕ ರೋಗ ಮತದಾರರಿಗೆ ಶಾಪವಾಗಿದೆಯೇ?

ಎಸ್‌ಐಆರ್‌ ಪ್ರಕ್ರಿಯೆಯು ಯಶಸ್ವಿಯಾಗಿ ಮುಕ್ತಾಯಗೊಳ್ಳಲು ಸಾರ್ವಜನಿಕ ಜಾಗೃತಿ, ಅಧಿಕೃತ ಮಾಹಿತಿಯ ಸುಲಭ...

‘ಗೃಹಲಕ್ಷ್ಮಿ’ಗೆ 17 ಪ್ರಶ್ನೆಗಳ ಪರೀಕ್ಷೆ: ₹2 ಸಾವಿರದ ಯೋಜನೆಗೆ ಇಷ್ಟೆಲ್ಲಾ ದಾಖಲೆ ಬೇಕೇ?

ಮರುಪರಿಶೀಲನೆ ಹೆಸರಿನಲ್ಲಿ ಫಲಾನುಭವಿಗಳ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗಬಾರದು; ನೈಜ ಅನರ್ಹರನ್ನು ಕೈಬಿಡುವ ಕ್ರಮದ...